ಮ್ಯಾಗ್ನೈಟ್ ಉತ್ಪಾದನಾ ಆವೃತ್ತಿಯ ಟೀಸರ್ ಬಿಡುಗಡೆ ಮಾಡಿದ ನಿಸ್ಸಾನ್ ಇಂಡಿಯಾ

ನಿಸ್ಸಾನ್ ಇಂಡಿಯಾ ಕಂಪನಿಯು ಇದೇ ತಿಂಗಳು 21ರಂದು ತನ್ನ ಹೊಚ್ಚ ಹೊಸ ಕಾರು ಮಾದರಿಯಾದ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸಲು ಸಜ್ಜಾಗುತ್ತಿದ್ದು, ಅನಾವರಣಕ್ಕೂ ಮುನ್ನ ಟೀಸರ್ ವಿಡಿಯೋ ಹಂಚಿಕೊಂಡಿದೆ.

ಮ್ಯಾಗ್ನೈಟ್ ಆವೃತ್ತಿಯ ಟೀಸರ್ ಬಿಡುಗಡೆ ಮಾಡಿದ ನಿಸ್ಸಾನ್

ಹೊಸ ಮ್ಯಾಗ್ನೈಟ್ ಕಾರು ಮಾದರಿಯನ್ನು ಭಾರತದಲ್ಲಿ ಮಾತ್ರ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆ ಮಾಡುತ್ತಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಆಧುನಿಕ ಡಿಸೈನ್ ವಿನ್ಯಾಸ ಹೊಂದಿದೆ. ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆ ಮಾಡುತ್ತಿರುವ ನಿಸ್ಸಾನ್ ಕಂಪನಿಯು ಹೊಸ ಕಾರಿನ ಮೇಲೆ ಭಾರೀ ನೀರಿಕ್ಷೆಯಿಟ್ಟುಕೊಂಡಿದ್ದು, ಹೊಸ ಆವೃತ್ತಿಯು ಬಿ ಸೆಗ್ಮೆಂಟ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಮ್ಯಾಗ್ನೈಟ್ ಆವೃತ್ತಿಯ ಟೀಸರ್ ಬಿಡುಗಡೆ ಮಾಡಿದ ನಿಸ್ಸಾನ್

ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಮಾದರಿಯೊಂದನ್ನು ಸಿದ್ದಪಡಿಸಲು ಯತ್ನಿಸಿರುವ ನಿಸ್ಸಾನ್ ಕಂಪನಿಯು ಹೊಸ ಟೀಸರ್ ಮೂಲಕ ಮ್ಯಾಗ್ನೈಟ್ ಕಾರಿನಲ್ಲಿ ಸ್ಲಿಕ್ ಹೆಡ್‌ಲ್ಯಾಂಪ್ ಮತ್ತು ಎಲ್ ಆಕಾರದ ಟೈಲ್‌ಲೈಟ್ ಸೌಲಭ್ಯಗಳನ್ನು ನೀಡಿರುವುದನ್ನು ಖಚಿತಪಡಿಸಿದೆ.

ಹಾಗೆಯೇ ಹೊಸ ಕಾರಿನಲ್ಲಿ ಫ್ಲ್ಯಾಟ್ ಬಾಟಮ್ ಸ್ಟೀರಿಂಗ್ ಜೊತೆ ಮಲ್ಟಿ ಫಂಕ್ಷನ್ ಕೀ ಹೊಂದಿದ್ದು, ಸೆಂಟರ್ ಆರ್ಮ್ ರೆಸ್ಟ್, ಅರಾಮದಾಯಕವಾದ ಆಸನ ಸೌಲಭ್ಯ, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹಿಂಭಾಗದ ಆಸನದಲ್ಲೂ ಸೆಂಟರ್ ಆರ್ಮ್ ರೆಸ್ಟ್, ಕಪ್ ಹೋಲ್ಡರ್, ರಿಯರ್ ಎಸಿ ವೆಂಟ್ಟ್, ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯವನ್ನು ಹೊಂದಿದೆ.

ಮ್ಯಾಗ್ನೈಟ್ ಉತ್ಪಾದನಾ ಆವೃತ್ತಿಯ ಟೀಸರ್ ಬಿಡುಗಡೆ ಮಾಡಿದ ನಿಸ್ಸಾನ್

ಕಾನ್ಸೆಪ್ಟ್ ಮಾದರಿಯಲ್ಲೇ ಉತ್ಪಾದನಾ ಆವೃತ್ತಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿರುವ ನಿಸ್ಸಾನ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್ ಸೇರಿದಂತೆ ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ಭರ್ಜರಿಯಾಗಿ ಪೈಪೋಟಿ ನೀಡುವ ತವಕದಲ್ಲಿದೆ.

ಮ್ಯಾಗ್ನೈಟ್ ಉತ್ಪಾದನಾ ಆವೃತ್ತಿಯ ಟೀಸರ್ ಬಿಡುಗಡೆ ಮಾಡಿದ ನಿಸ್ಸಾನ್

ಹೊಸ ಕಾರು 'ಮ್ಯಾಗ್ನೈಟ್' ಹೆಸರಿಗೆ ತಕ್ಕಂತೆ ಬಲಿಷ್ಠ ಹೊರ ನೋಟದೊಂದಿಗೆ ಕಟಿಂಗ್ಎಡ್ಜ್ ವಿನ್ಯಾಸವನ್ನು ಪಡೆದುಕೊಂಡಿದ್ದು, ಡ್ಯುಯಲ್ ಅಲಾಯ್ ವೀಲ್ಹ್, ಫ್ಲಕ್ಸ್ ಸ್ಕೀಡ್ ಪ್ಲೇಟ್ಸ್, ರೂಫ್ ರೈಲ್ಸ್, ಸಿಲ್ವರ್ ಆಕ್ಸೆಂಟ್, ಬಾಡಿ ಕ್ಲಾಡಿಂಗ್ ಸೌಲಭ್ಯವು ಕಿಕ್ಸ್ ಮಾದರಿಯಲ್ಲಿ ಆಕರ್ಷಕವಾಗಿವೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಮ್ಯಾಗ್ನೈಟ್ ಉತ್ಪಾದನಾ ಆವೃತ್ತಿಯ ಟೀಸರ್ ಬಿಡುಗಡೆ ಮಾಡಿದ ನಿಸ್ಸಾನ್

ಹೊಸ ಕಾರು ಕಿಕ್ಸ್ ಎಸ್‌ಯುವಿ ಮಾದರಿಗಿಂತಲೂ ಕೆಳದರ್ಜೆಯ ಕಾರು ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಹೊಸ ಕಾರಿನಲ್ಲಿ ರೆನಾಲ್ಟ್ ಜೊತೆಗೂಡಿ ಅಭಿವೃದ್ದಿಗೊಳಿಸಲಾಗಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಬಳಕೆ ಮಾಡಲಾಗುತ್ತಿದೆ.

ಮ್ಯಾಗ್ನೈಟ್ ಉತ್ಪಾದನಾ ಆವೃತ್ತಿಯ ಟೀಸರ್ ಬಿಡುಗಡೆ ಮಾಡಿದ ನಿಸ್ಸಾನ್

ಹೊಸದಾಗಿ ಅಭಿವೃದ್ದಿಗೊಳಿಸಲಾಗಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯು ನಿಸ್ಸಾನ್ ಮ್ಯಾಗ್ನೆೈಟ್ ಕಾರಿನಲ್ಲಿ ಮಾತ್ರವಲ್ಲದೇ ರೆನಾಲ್ಟ್ ಟ್ರೈಬರ್ ಟರ್ಬೋ ವರ್ಷನ್ ಮತ್ತು ಕಿಗರ್ ಕಾರಿನಲ್ಲೂ ಬಳಕೆಯಾಗಲಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಕಾರುಗಳಿಂತಲೂ ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಮ್ಯಾಗ್ನೈಟ್ ಉತ್ಪಾದನಾ ಆವೃತ್ತಿಯ ಟೀಸರ್ ಬಿಡುಗಡೆ ಮಾಡಿದ ನಿಸ್ಸಾನ್

ಅನಾವರಣಗೊಂಡ ನಂತರ ಹೊಸ ಕಾರನ್ನು ಇದೇ ವರ್ಷಾಂತ್ಯದೊಳಗೆ ಬಿಡುಗಡೆಗೊಳಿಸಲು ಯತ್ನಿಸುತ್ತಿರುವ ನಿಸ್ಸಾನ್ ಕಂಪನಿಯು ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ತೀವ್ರಗೊಳಿಸಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 6.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9 ಲಕ್ಷದೊಳಗೆ ಬೆಲೆ ಹೊಂದುವ ಸಾಧ್ಯತೆಗಳಿವೆ.

Article Published On: Monday, October 19, 2020, 18:39 [IST]
English summary
Nissan Magnite Teased Ahead Of Official Unveil On October 21. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+