ಬಿಡುಗಡೆಯಾಗಲಿರುವ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವೆರಿಯೆಂಟ್ ಮತ್ತು ಫೀಚರ್ಸ್‌ಗಳು..

ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಬಿಡುಗಡೆಗೂ ಮುನ್ನವೇ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಮುನ್ನವೇ ಹೊಸ ಸಂಚಲನ ಸೃಷ್ಠಿಸುವ ಸುಳಿವು ನೀಡಿದ್ದು, ಹೊಸ ಕಾರು ಖರೀದಿಗೆ ಈಗಾಗಲೇ ಡೀಲರ್ಸ್ ಮಟ್ಟದ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭವಾಗಿದೆ.

ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವೆರಿಯೆಂಟ್ ಮತ್ತು ಫೀಚರ್ಸ್‌ಗಳು..

ಮ್ಯಾಗ್ನೈಟ್ ಕಾರು ಖರೀದಿಗೆ ನಿಸ್ಸಾನ್ ಕಂಪನಿಯು ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಯನ್ನು ಇದುವರೆಗೂ ಆರಂಭಿಸಿಲ್ಲವಾದರೂ ಆಸಕ್ತ ಗ್ರಾಹಕರು ಡೀಲರ್ಸ್ ಮಟ್ಟದಲ್ಲಿ ಬುಕ್ಕಿಂಗ್ ಸಲ್ಲಿಸುತ್ತಿದ್ದು, ಹೊಸ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳಲ್ಲೇ ಅತಿ ಕಡಿಮೆ ಬೆಲೆಯೊಂದಿಗೆ ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಅಭಿವೃದ್ದಿಗೊಳ್ಳುವ ಸುಳಿವು ನೀಡಿದೆ. ಹೊಸ ಕಾರು ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಎಂಬ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಸ್ಪೋರ್ಟಿ ಲುಕ್‌ನೊಂದಿಗೆ ಕಟಿಂಗ್ ಎಡ್ಜ್ ವಿನ್ಯಾಸಗಳನ್ನು ಪಡೆದುಕೊಂಡಿದೆ.

ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವೆರಿಯೆಂಟ್ ಮತ್ತು ಫೀಚರ್ಸ್‌ಗಳು..

ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಕಿಯಾ ಸೊನೊಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಆವೃತ್ತಿಗಳಿಂತಲೂ ಕಡಿಮೆ ಬೆಲೆ ಹೊಂದಿದ್ದು, ಸೆಗ್ಮೆಂಟ್ ಇನ್ ಬೆಸ್ಟ್ ಫೀಚರ್ಸ್‌ಗಳೊಂದಿಗೆ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ. ವೆರಿಯೆಂಟ್ ಅನುಗುಣವಾಗಿ ಹೊಸ ಕಾರಿನಲ್ಲಿ ಹಲವಾರು ಫೀಚರ್ಸ್‌ಗಳನ್ನು ಜೋಡಣೆ ಮಾಡಲಾಗುತ್ತಿದೆ.

ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವೆರಿಯೆಂಟ್ ಮತ್ತು ಫೀಚರ್ಸ್‌ಗಳು..

ಮ್ಯಾಗ್ನೈಟ್ ಎಕ್ಸ್ಇ

ಮ್ಯಾಗ್ನೈಟ್ ಬೆಸ್ ವೆರಿಯೆಂಟ್ ಎಕ್ಸ್ಇ ಮಾದರಿಯಲ್ಲಿ ಹ್ಯಾಲೊಜೆನ್ ಹೆಡ್‌ಲ್ಯಾಂಪ್, 16 ಇಂಚಿನ ಸ್ಟೀಲ್ ವೀಲ್ಹ್, ಬಾಡಿ ಕಲರ್ಡ್ ಡೋಲ್ ಹ್ಯಾಂಡಲ್ಸ್, ಎಲ್ಇಡಿ ಡಿಆರ್‌ಎಲ್‌ಎಸ್‌ನಲ್ಲಿ ಎಲ್ ಶೇಫ್ ಕ್ರೋಮ್ ಟಿಪ್ಸ್, ಫ್ರಂಟ್ ಫೆಂಡರ್‌ನಲ್ಲಿ ಟರ್ನ್ ಇಂಡಿಕೇಟರ್, ಬ್ಲ್ಯಾಕ್ ಫ್ರಾಬಿಕ್ಸ್ ಸೀಟ್, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮೇಲೆ 3.5-ಇಂಚಿನ ಎಂಐಡಿ ಸ್ಕ್ರೀನ್, ಹೊಂದಾಣಿಕೆ ಮಾಡಬಹುದಾದ ರಿಯರ್ ವ್ಯೂ ಮಿರರ್, ಮ್ಯಾನುವಲ್ ಎಸಿ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಆ್ಯಂಟಿ ರೊಲ್ ಬಾರ್, ಸೀಟ್ ಬೆಲ್ಟ್ ಅಲರ್ಟ್, ಇಮ್‌ಮೊಬಿಲೈಸರ್ ಮತ್ತು ರಿಯರ್ ಪಾರ್ಕಿಂಗ್ ಸೌಲಭ್ಯವಿದೆ.

ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವೆರಿಯೆಂಟ್ ಮತ್ತು ಫೀಚರ್ಸ್‌ಗಳು..

ಮ್ಯಾಗ್ನೈಟ್ ಎಕ್ಸ್ಎಲ್

ಮಧ್ಯಮ ಕ್ರಮಾಂಕದ ಆವೃತ್ತಿಯಾಗಿರುವ ಎಕ್ಸ್ಎಲ್ ಮಾದರಿಯಲ್ಲಿ ಬೆಸ್ ವೆರಿಯೆಂಟ್ ಎಕ್ಸ್ಇ ಮಾದರಿಯ ಕೆಲವು ಫೀಚರ್ಸ್ ಒಳಗೊಂಡು ಹೆಚ್ಚುವರಿಯಾಗಿ ಡ್ಯುಯಲ್ ಟೋನ್ ಕವರ್ ಹೊಂದಿರುವ 16 ಇಂಚಿನ ವೀಲ್ಹ್, ರಿಯರ್ ವ್ಯೂ ಮಿರರ್ ಜೊತೆಗೆ ಟರ್ನ್ ಇಂಡಿಕೇಟರ್, ಬಾಡಿ ಕಲರ್ ರಿಯರ್ ವ್ಯೂ ಮಿರರ್, ಎಂಪಿ3 ಸರ್ಪೋಟ್ ಮಾಡುವ ಬೇಸಿಕ್ ಆಡಿಯೋ ಸಿಸ್ಟಂ, ಆಟೋ ಎಸಿ, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ರಿಯರ್ ಆರ್ಮ್ ರೆಸ್ಟ್, ಕ್ರೂಸ್ ಕಂಟ್ರೋಲ್, ಡ್ರೈವರ್ ಸೈಡ್ ಆಟೋ ವಿಂಡೋ ಸ್ವಿಚ್, ಫಾಸ್ಟ್ ಚಾರ್ಜ್ ಯುಎಸ್‌ಬಿ ಫೋರ್ಟ್, ಐಸೋಫಿಕ್ಸ್ ಸೀಟ್, ಸೆಂಟರ್ ಡೋರ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್ ಲಾಕ್, ಹಿಲ್ ಸ್ಟಾರ್ಟ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಬ್ರೇಕ್ ಅಸಿಸ್ಟ್, ರಿಮೋಟ್ ಕೀ ಲೆಸ್ ಎಂಟ್ರಿ ಸೌಲಭ್ಯಗಳಿವೆ.

ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವೆರಿಯೆಂಟ್ ಮತ್ತು ಫೀಚರ್ಸ್‌ಗಳು..

ಮ್ಯಾಗ್ನೈಟ್ ಎಕ್ಸ್‌ವಿ

ಎಕ್ಸ್ಎಲ್ ಮಾದರಿಯಲ್ಲಿನ ಪ್ರಮುಖ ಫೀಚರ್ಸ್‌ಗಳನ್ನು ಒಳಗೊಂಡು ಹೆಚ್ಚುವರಿಯಾಗಿ ಎಕ್ಸ್‌ವಿ ಮಾದರಿಯಲ್ಲಿ ಎಲ್ಇಡಿ ಡಿಆರ್‌ಎಲ್ಎಸ್, ಎಲ್‌ಇಡಿ ಫಾಗ್ ಲ್ಯಾಂಪ್, 16-ಇಂಚಿನ ಅಲಾಯ್ ವೀಲ್ಹ್, ಕ್ರೋಮ್ ಹೊಂದಿರುವ ಡೋರ್ ಹ್ಯಾಂಡಲ್, ಸಿಲ್ವರ್ ಕೋಟಿಂಗ್ ಹೊಂದಿರುವ ಸ್ಕ್ರೀಡ್ ಪ್ಲೇಟ್, ಡ್ಯುಯಲ್ ಟೋನ್ ಕಲರ್, ಆಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ ಗೆ ಸರ್ಪೋಟ್ ಮಾಡುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ವೈರ್‌ಲೆಸ್ ಚಾರ್ಜರ್, ಏರ್ ಫಿಲ್ಟರ್, ಎಲ್ಇಡಿ ಸ್ಕಫ್ ಪ್ಲೇಟ್ಸ್, ಆ್ಯಂಬಿಯೆಂಟ್ ಲೈಟಿಂಗ್ಸ್, ಪೆಡಲ್ ಲ್ಯಾಂಪ್ಸ್, ಜೆಬಿಎಲ್ ಸೌಂಡ್ ಸಿಸ್ಟಂ, ರಿಯರ್ ಪಾರ್ಕಿಂಗ್ ಕ್ಯಾಮೆರಾ, ವೆಹಿಕಲ್ ಡೈನಾಮಿಕ್ ಕಂಟ್ರೋಲ್ ಮತ್ತು ಐ-ಕೀ ಸಿಸ್ಟಂ ಹೊಂದಿದೆ.

ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವೆರಿಯೆಂಟ್ ಮತ್ತು ಫೀಚರ್ಸ್‌ಗಳು..

ಮ್ಯಾಗ್ನೈಟ್ ಎಕ್ಸ್‌ವಿ ಪ್ರೀಮಿಯಂ

ಟಾಪ್ ಎಂಡ್ ಮಾದರಿಯಾಗಿರುವ ಎಕ್ಸ್‌ವಿ ಪ್ರೀಮಿಯಂನಲ್ಲಿ ಎಕ್ಸ್‌ವಿ ಮಾದರಿಯ ಪ್ರಮುಖ ಫೀಚರ್ಸ್‌ಗಳನ್ನು ಒಳಗೊಂಡು ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್, ವೀಂಡೋ ಲೈನ್ ಮೇಲೆ ಕ್ರೋಮ್ ಬೆಲ್ಟ್, ಆಲ್ ಬ್ಲ್ಯಾಕ್ ಕ್ಯಾಬಿನ್, 360 ಡಿಗ್ರಿ ಕ್ಯಾಮೆರಾ, ಲೆದರ್ ವ್ಯಾರ್ಪ್ ಹೊಂದಿರುವ ಸ್ಟ್ರೀರಿಂಗ್ ವೀಲ್ಹ್, ಟೈರ್ ಪ್ರೆಷರ್ ಮಾನಿಟರಿಂಗ್ ಮತ್ತು ಬ್ರಾಂಡ್‌ನ ಕನೆಕ್ಟ್ ಫೀಚರ್ಸ್ ಸೌಲಭ್ಯವಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವೆರಿಯೆಂಟ್ ಮತ್ತು ಫೀಚರ್ಸ್‌ಗಳು..

ಇನ್ನು ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗುತ್ತಿದ್ದು, 1.0-ಲೀಟರ್ ಬಿ4ಡಿ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗಿರುವ ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವೆರಿಯೆಂಟ್ ಮತ್ತು ಫೀಚರ್ಸ್‌ಗಳು..

1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು 70-ಬಿಎಚ್‌ಪಿ, 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 100-ಬಿಎಚ್‌ಪಿ, 160-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ನಿಸ್ಸಾನ್ ಮ್ಯಾಗ್ನೈಟ್ ಕಾರಿನ ವೆರಿಯೆಂಟ್ ಮತ್ತು ಫೀಚರ್ಸ್‌ಗಳು..

ಮಾಹಿತಿಗಳ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ.5.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.9.55 ಲಕ್ಷ ಬೆಲೆಯೊಂದಿಗೆ ಇದೇ ತಿಂಗಳು 26ಕ್ಕೆ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಹೊಸ ಕಾರಿನ ಬಿಡುಗಡೆ ದಿನಾಂಕ ಮತ್ತು ಬೆಲೆ ಮಾಹಿತಿ ಬಗೆಗೆ ಇನ್ನು ಯಾವುದೇ ನಿಖರ ಮಾಹಿತಿಗಳಿಲ್ಲ.

Most Read Articles

Kannada
English summary
Nissan Magnite Variants In Details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X