ಮ್ಯಾಗ್ನೈಟ್ ಕಾನ್ಸೆಪ್ಟ್ ಕಾರಿನ ಇಂಟಿರಿಯರ್ ಚಿತ್ರಗಳನ್ನು ಬಹಿರಂಗಪಡಿಸಿದ ನಿಸ್ಸಾನ್

ನಿಸ್ಸಾನ್ ಕಂಪನಿಯು ತನ್ನ ಬಹುನೀರಿಕ್ಷಿತ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಕಳೆದ ವಾರವಷ್ಟೇ ಅನಾವರಣಗೊಳಿಸಿತ್ತು. ಇದೀಗ ಹೊಸ ಕಾರಿನ ಇಂಟಿರಿಯರ್ ಚಿತ್ರಗಳನ್ನು ಬಹಿರಂಗಪಡಿಸಿದ್ದು, ಹೊಸ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ಮ್ಯಾಗ್ನೈಟ್ ಕಾನ್ಸೆಪ್ಟ್ ಕಾರಿನ ಇಂಟಿರಿಯರ್ ಚಿತ್ರಗಳನ್ನು ಬಹಿರಂಗ

ಕಿಕ್ಸ್ ಕಾರಿನ ನಂತರ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆ ಮಾಡುತ್ತಿರುವ ನಿಸ್ಸಾನ್ ಕಂಪನಿಯು ಹೊಸ ಕಾರಿನ ಮೇಲೆ ಭಾರೀ ನೀರಿಕ್ಷೆಯಿಟ್ಟುಕೊಂಡಿದ್ದು, ಪ್ರತಿ ಸ್ಪರ್ಧಿ ಕಾರುಗಳಿಗೆ ಪೈಪೋಟಿಯಾಗಿ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಿದೆ. ಕಾನ್ಸೆಪ್ಟ್ ಮಾದರಿಯು ಹಲವಾರು ಐಷಾರಾಮಿ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಬೆಲೆ ವಿಚಾರದಲ್ಲೂ ಗಮನಸೆಳೆಯಲಿವೆ.

ಮ್ಯಾಗ್ನೈಟ್ ಕಾನ್ಸೆಪ್ಟ್ ಕಾರಿನ ಇಂಟಿರಿಯರ್ ಚಿತ್ರಗಳನ್ನು ಬಹಿರಂಗ

ಹೊಸ ಕಾರಿನಲ್ಲಿ ಫ್ಲ್ಯಾಟ್ ಬಾಟಮ್ ಸ್ಟೀರಿಂಗ್ ಜೊತೆ ಮಲ್ಟಿ ಫಂಕ್ಷನ್ ಕೀ ಹೊಂದಿದ್ದು, ಸೆಂಟರ್ ಆರ್ಮ್ ರೆಸ್ಟ್, ಅರಾಮದಾಯಕವಾದ ಆಸನ ಸೌಲಭ್ಯ, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹಿಂಭಾಗ ಆಸನದಲ್ಲೂ ಸೆಂಟರ್ ಆರ್ಮ್ ರೆಸ್ಟ್, ಕಪ್ ಹೋಲ್ಡರ್, ರಿಯರ್ ಎಸಿ ವೆಂಟ್ಟ್ ಸೌಲಭ್ಯವನ್ನು ಹೊಂದಿದೆ.

ಮ್ಯಾಗ್ನೈಟ್ ಕಾನ್ಸೆಪ್ಟ್ ಕಾರಿನ ಇಂಟಿರಿಯರ್ ಚಿತ್ರಗಳನ್ನು ಬಹಿರಂಗ

ಕಾನ್ಸೆಪ್ಟ್ ಮಾದರಿಯಲ್ಲೇ ಉತ್ಪಾದನಾ ಆವೃತ್ತಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿರುವ ನಿಸ್ಸಾನ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ವೆನ್ಯೂ ಸೇರಿದಂತೆ ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ಭರ್ಜರಿಯಾಗಿ ಪೈಪೋಟಿ ನೀಡುವ ತವಕದಲ್ಲಿದೆ.

ಮ್ಯಾಗ್ನೈಟ್ ಕಾನ್ಸೆಪ್ಟ್ ಕಾರಿನ ಇಂಟಿರಿಯರ್ ಚಿತ್ರಗಳನ್ನು ಬಹಿರಂಗ

ಸದ್ಯಕ್ಕೆ ಹೊಸ ಕಾರನ್ನು ಭಾರತದಲ್ಲಿ EM2 ಕೋಡ್ ನೆಮ್ ಆಧಾರದ ಮೇಲೆ ರೋಡ್ ಟೆಸ್ಟಿಂಗ್ ಮಾಡಲಾಗುತ್ತಿದ್ದು, ಹೊಸ ಕಾರಿನ ಅಧಿಕೃತ ಹೆಸರನ್ನು 'ಮ್ಯಾಗ್ನೈಟ್' ಎಂದು ಕರೆಯಲಾಗಿದೆ. ಹೆಸರಿಗೆ ತಕ್ಕಂತೆ ಬಲಿಷ್ಠ ಹೊರ ನೋಟ ಹೊಂದಿರುವ ಹೊಸ ಕಾರು ಕಟಿಂಗ್ಎಡ್ಜ್ ವಿನ್ಯಾಸ ಹೊಂದಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಮ್ಯಾಗ್ನೈಟ್ ಕಾನ್ಸೆಪ್ಟ್ ಕಾರಿನ ಇಂಟಿರಿಯರ್ ಚಿತ್ರಗಳನ್ನು ಬಹಿರಂಗ

ಹೊಸ ಕಾರು ಕಿಕ್ಸ್ ಎಸ್‌ಯುವಿ ಮಾದರಿಗಿಂತಲೂ ಕೆಳದರ್ಜೆಯ ಕಾರು ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಹೊಸ ಕಾರಿನಲ್ಲಿ ರೆನಾಲ್ಟ್ ಜೊತೆಗೂಡಿ ಅಭಿವೃದ್ದಿಗೊಳಿಸಲಾಗಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಬಳಕೆ ಮಾಡಲಾಗುತ್ತಿದೆ.

ಮ್ಯಾಗ್ನೈಟ್ ಕಾನ್ಸೆಪ್ಟ್ ಕಾರಿನ ಇಂಟಿರಿಯರ್ ಚಿತ್ರಗಳನ್ನು ಬಹಿರಂಗ

ಹೊಸದಾಗಿ ಅಭಿವೃದ್ದಿಗೊಳಿಸಲಾಗಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯು ನಿಸ್ಸಾನ್ ಮ್ಯಾಗ್ನೆೈಟ್ ಕಾರಿನಲ್ಲಿ ಮಾತ್ರವಲ್ಲದೇ ರೆನಾಲ್ಟ್ ಟ್ರೈಬರ್ ಟರ್ಬೋ ವರ್ಷನ್ ಮತ್ತು ಕಿಗರ್ ಕಾರಿನಲ್ಲೂ ಬಳಕೆಯಾಗಲಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಕಾರುಗಳಿಂತಲೂ ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಮ್ಯಾಗ್ನೈಟ್ ಕಾನ್ಸೆಪ್ಟ್ ಕಾರಿನ ಇಂಟಿರಿಯರ್ ಚಿತ್ರಗಳನ್ನು ಬಹಿರಂಗ

ಹೊಸ ಕಾರನ್ನು ಇದೇ ವರ್ಷಾಂತ್ಯದೊಳಗೆ ಬಿಡುಗಡೆಗೊಳಿಸಲು ಯತ್ನಿಸುತ್ತಿರುವ ನಿಸ್ಸಾನ್ ಕಂಪನಿಯು ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ತೀವ್ರಗೊಳಿಸಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 6.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.

Article Published On: Tuesday, August 4, 2020, 15:52 [IST]
English summary
Nissan Magnite Concept Interior Revealed. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+