ಇದೇ ತಿಂಗಳು 21ರಂದು ಅನಾವರಣಗೊಳ್ಳಲಿದೆ ನಿಸ್ಸಾನ್ ಮ್ಯಾಗ್ನೈಟ್ ಉತ್ಪಾದನಾ ಆವೃತ್ತಿ

ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಹೊಚ್ಚ ಹೊಸ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದ್ದು, ಹೊಸ ಕಾರು ಇದೇ ತಿಂಗಳಾಂತ್ಯಕ್ಕೆ ಉತ್ಪಾದನಾ ಆವೃತ್ತಿಯನ್ನು ಪಡೆದುಕೊಳ್ಳಲಿದೆ.

ಅ.21ಕ್ಕೆ ಅನಾವರಣಗೊಳ್ಳಲಿದೆ ಮ್ಯಾಗ್ನೈಟ್ ಉತ್ಪಾದನಾ ಆವೃತ್ತಿ

ಕಳೆದ 2 ತಿಂಗಳ ಹಿಂದಷ್ಟೇ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿದ್ದ ನಿಸ್ಸಾನ್ ಕಂಪನಿಯು ಇದೀಗ ಇದೇ ತಿಂಗಳು 21ರಂದು ಹೊಸ ಕಾರಿನ ಉತ್ಪಾದನಾ ಕಾರು ಮಾದರಿಯನ್ನು ಅನಾವರಣಗೊಳಿಸುವುದಾಗಿ ಹೇಳಿಕೊಂಡಿದ್ದು, ಹೊಸ ಕಾರು ಜಪಾನ್‌ನಲ್ಲಿರುವ ನಿಸ್ಸಾನ್ ಮುಖ್ಯ ಕಾರು ಉತ್ಪಾದನಾ ಘಟಕದಲ್ಲಿ ಅಂತಿಮ ಹಂತದ ವಿನ್ಯಾಸದೊಂದಿಗೆ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದೆ.

ಅ.21ಕ್ಕೆ ಅನಾವರಣಗೊಳ್ಳಲಿದೆ ಮ್ಯಾಗ್ನೈಟ್ ಉತ್ಪಾದನಾ ಆವೃತ್ತಿ

ನಿಸ್ಸಾನ್ ಗ್ಲೊಬಲ್ ಕಂಪನಿಯ ತೊಚಿಗಿ ಪ್ರೂವಿಂಗ್ ಟ್ರ್ಯಾಕ್‌ನಲ್ಲಿ ಹೊಸ ಮ್ಯಾಗ್ನೈಟ್ ಕಾರಿನ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದ್ದು, ತೊಚಿಗಿ ಪ್ರೂವಿಂಗ್ ಟ್ರ್ಯಾಕ್ ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟದ ಕಾರ್ ಟೆಸ್ಟಿಂಗ್ ಟ್ರ್ಯಾಕ್ ಸೌಲಭ್ಯವಾಗಿದೆ.

ಅ.21ಕ್ಕೆ ಅನಾವರಣಗೊಳ್ಳಲಿದೆ ಮ್ಯಾಗ್ನೈಟ್ ಉತ್ಪಾದನಾ ಆವೃತ್ತಿ

ತೊಚಿಗಿ ಪ್ರೂವಿಂಗ್ ಟ್ರ್ಯಾಕ್‌ನಲ್ಲಿ ನಿಸ್ಸಾನ್ ನಿರ್ಮಾಣದ ಹೊಸ ಜಿಟಿ-ಆರ್ ಮತ್ತು ಆರಿಯಾ ಎಲೆಕ್ಟ್ರಿಕ್ ಕಾರು ಸಹ ಟೆಸ್ಟಿಂಗ್ ನಡೆಸಿದ್ದು, ಇದೀಗ ಮ್ಯಾಗ್ನೈಟ್ ಕಾರು ಕೂಡಾ ಇದೇ ಟ್ರ್ಯಾಕ್‌ನಲ್ಲಿ ಟೆಸ್ಟಿಂಗ್ ನಡೆಸಿದೆ. ಕಿಕ್ಸ್ ಕಾರಿನ ನಂತರ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆ ಮಾಡುತ್ತಿರುವ ನಿಸ್ಸಾನ್ ಕಂಪನಿಯು ಹೊಸ ಕಾರಿನ ಮೇಲೆ ಭಾರೀ ನೀರಿಕ್ಷೆಯಿಟ್ಟುಕೊಂಡಿದೆ.

ಅ.21ಕ್ಕೆ ಅನಾವರಣಗೊಳ್ಳಲಿದೆ ಮ್ಯಾಗ್ನೈಟ್ ಉತ್ಪಾದನಾ ಆವೃತ್ತಿ

ಹೊಸ ಕಾರಿನಲ್ಲಿ ಪ್ರತಿ ಸ್ಪರ್ಧಿ ಕಾರುಗಳಿಗೆ ಪೈಪೋಟಿಯಾಗಿ ಹಲವು ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಮಾದರಿಯೊಂದನ್ನು ಸಿದ್ದಪಡಿಸುತ್ತಿದೆ.

ಅ.21ಕ್ಕೆ ಅನಾವರಣಗೊಳ್ಳಲಿದೆ ಮ್ಯಾಗ್ನೈಟ್ ಉತ್ಪಾದನಾ ಆವೃತ್ತಿ

ಹೊಸ ಕಾರಿನಲ್ಲಿ ಫ್ಲ್ಯಾಟ್ ಬಾಟಮ್ ಸ್ಟೀರಿಂಗ್ ಜೊತೆ ಮಲ್ಟಿ ಫಂಕ್ಷನ್ ಕೀ ಹೊಂದಿದ್ದು, ಸೆಂಟರ್ ಆರ್ಮ್ ರೆಸ್ಟ್, ಅರಾಮದಾಯಕವಾದ ಆಸನ ಸೌಲಭ್ಯ, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹಿಂಭಾಗದ ಆಸನದಲ್ಲೂ ಸೆಂಟರ್ ಆರ್ಮ್ ರೆಸ್ಟ್, ಕಪ್ ಹೋಲ್ಡರ್, ರಿಯರ್ ಎಸಿ ವೆಂಟ್ಟ್ ಸೌಲಭ್ಯವನ್ನು ಹೊಂದಿದೆ.

ಅ.21ಕ್ಕೆ ಅನಾವರಣಗೊಳ್ಳಲಿದೆ ಮ್ಯಾಗ್ನೈಟ್ ಉತ್ಪಾದನಾ ಆವೃತ್ತಿ

ಕಾನ್ಸೆಪ್ಟ್ ಮಾದರಿಯಲ್ಲೇ ಉತ್ಪಾದನಾ ಆವೃತ್ತಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿರುವ ನಿಸ್ಸಾನ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್ ಸೇರಿದಂತೆ ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ಭರ್ಜರಿಯಾಗಿ ಪೈಪೋಟಿ ನೀಡುವ ತವಕದಲ್ಲಿದೆ.

ಅ.21ಕ್ಕೆ ಅನಾವರಣಗೊಳ್ಳಲಿದೆ ಮ್ಯಾಗ್ನೈಟ್ ಉತ್ಪಾದನಾ ಆವೃತ್ತಿ

ಸದ್ಯಕ್ಕೆ ಹೊಸ ಕಾರನ್ನು ಭಾರತದಲ್ಲಿ EM2 ಕೋಡ್ ನೆಮ್ ಆಧಾರದ ಮೇಲೆ ರೋಡ್ ಟೆಸ್ಟಿಂಗ್ ಮಾಡಲಾಗುತ್ತಿದ್ದು, ಹೊಸ ಕಾರಿನ ಅಧಿಕೃತ ಹೆಸರನ್ನು 'ಮ್ಯಾಗ್ನೈಟ್' ಎಂದು ಕರೆಯಲಾಗಿದೆ. ಹೆಸರಿಗೆ ತಕ್ಕಂತೆ ಬಲಿಷ್ಠ ಹೊರ ನೋಟ ಹೊಂದಿರುವ ಹೊಸ ಕಾರು ಕಟಿಂಗ್ಎಡ್ಜ್ ವಿನ್ಯಾಸವನ್ನು ಹೊಂದಿದೆ.

ಅ.21ಕ್ಕೆ ಅನಾವರಣಗೊಳ್ಳಲಿದೆ ಮ್ಯಾಗ್ನೈಟ್ ಉತ್ಪಾದನಾ ಆವೃತ್ತಿ

ಹೊಸದಾಗಿ ಅಭಿವೃದ್ದಿಗೊಳಿಸಲಾಗಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯು ನಿಸ್ಸಾನ್ ಮ್ಯಾಗ್ನೈಟ್ ಕಾರಿನಲ್ಲಿ ಮಾತ್ರವಲ್ಲದೇ ರೆನಾಲ್ಟ್ ಟ್ರೈಬರ್ ಟರ್ಬೋ ವರ್ಷನ್ ಮತ್ತು ಕಿಗರ್ ಕಾರಿನಲ್ಲೂ ಬಳಕೆಯಾಗಲಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಕಾರುಗಳಿಂತಲೂ ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ.

Article Published On: Saturday, October 10, 2020, 8:45 [IST]
English summary
Nissan Magnite Global Unveil Timeline Revealed. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+