ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಾರಿನ ಟರ್ಬೋ ಪೆಟ್ರೋಲ್ ಮಾಹಿತಿ ಬಹಿರಂಗ

ನಿಸ್ಸಾನ್ ಕಂಪನಿಯು ಇದೇ ವರ್ಷಾಂತ್ಯಕ್ಕೆ ಹೊಸ ಕಾರು ಮಾದರಿಯಾದ ಮ್ಯಾಗ್ನೈಟ್ ಕಾರು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಟರ್ಬೋ ಎಂಜಿನ್ ಮಾದರಿಯ ಪರ್ಫಾಮೆನ್ಸ್ ಕುರಿತಾದ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಾರಿನ ಟರ್ಬೋ ಪೆಟ್ರೋಲ್ ಮಾಹಿತಿ ಬಹಿರಂಗ

ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗುತ್ತಿದ್ದು, 1.0-ಲೀಟರ್ ಬಿ4ಡಿ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗಿರುವ ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಾರಿನ ಟರ್ಬೋ ಪೆಟ್ರೋಲ್ ಮಾಹಿತಿ ಬಹಿರಂಗ

1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು 70-ಬಿಎಚ್‌ಪಿ, 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 100-ಬಿಎಚ್‌ಪಿ, 160-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಾರಿನ ಟರ್ಬೋ ಪೆಟ್ರೋಲ್ ಮಾಹಿತಿ ಬಹಿರಂಗ

ಈ ಮೂಲಕ ಹೊಸ ಕಾರಿನಲ್ಲಿ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್‌‌ಗೆ ಗರಿಷ್ಠ 18.75 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದರೆ ಟರ್ಬೋ ಪೆಟ್ರೋಲ್ ಮಾದರಿಯು ಅತ್ಯುತ್ತಮ ಪರ್ಫಾಮೆನ್ಸ್‌ನೊಂದಿಗೆ ಪ್ರತಿ ಲೀಟರ್‍‌ಗೆ 17.7 ಕಿ.ಮೀ ನಿಂದ 20 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, 40 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಅನ್ನು ಒಂದು ಬಾರಿ ಪೂರ್ತಿಯಾಗಿ ತುಂಬಿಸಿದರೆ ಗರಿಷ್ಠ 800 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಾರಿನ ಟರ್ಬೋ ಪೆಟ್ರೋಲ್ ಮಾಹಿತಿ ಬಹಿರಂಗ

ಇನ್ನು ಹೊಸ ಕಾರು ಸ್ಪೋರ್ಟಿ ಲುಕ್‌ನೊಂದಿಗೆ ಕಟಿಂಗ್ ಎಡ್ಜ್ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಎಂಬ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಹೊಸ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಆಕರ್ಷಕವಾದ ಗ್ರಿಲ್, ಕ್ರೋಮ್ ಸ್ಟ್ರೀಪ್, ಎಲ್ಇಡಿ ಬಿ-ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ ವಿನ್ಯಾಸದ ಎಲ್ಇಡಿ ಡಿಆರ್‌ಎಲ್‌ಗಳು, ಫ್ರಂಟ್ ಬಂಪರ್, ಫಾಗ್ ಲ್ಯಾಂಪ್, ಸೆಂಟ್ರಲ್ ಏರ್ ಇನ್‌ಟೆಕ್, ಸ್ಕೀಡ್ ಪ್ಲೇಟ್, ರೂಫ್ ರೈಲ್ಸ್ ಸೌಲಭ್ಯಗಳಿವೆ.

ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಾರಿನ ಟರ್ಬೋ ಪೆಟ್ರೋಲ್ ಮಾಹಿತಿ ಬಹಿರಂಗ

ಹಾಗೆಯೇ ಹೊಸ ಕಾರಿನ ಸೈಡ್ ಪ್ರೋಫೈಲ್ ಕೂಡಾ ಆಕರ್ಷಕವಾಗಿದ್ದು, 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, ಟೈಲ್‌ಲೈಟ್ ಸೌಲಭ್ಯದೊಂದಿಗೆ ಕಾರಿನ ಡೋರ್ ತಳಭಾಗದಲ್ಲಿ ಮತ್ತು ರಿಯರ್ ಬಂಪರ್ ಬಳಿ ಸಿಲ್ವರ್ ಕೊಟಿಂಗ್ ಹೊಂದಿರುವ ಆಕ್ಸೆಂಟ್ ನೀಡಲಾಗಿದೆ.

ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಾರಿನ ಟರ್ಬೋ ಪೆಟ್ರೋಲ್ ಮಾಹಿತಿ ಬಹಿರಂಗ

ಮ್ಯಾಗ್ನೈಟ್ ಕಾರಿನಲ್ಲಿ ಕಪ್ಪು ಬಣ್ಣದ ವೀಲ್ಹ್ ಆರ್ಚ್, ವೀಲ್ಹ್ ಆರ್ಚ್‌ಗೆ ಹೊಂದಿಕೊಂಡಿರುವ ಬ್ಲ್ಯಾಕ್ ಕ್ಲಾಡಿಂಗ್, ಬೂಟ್ ಲಿಡ್, ಕಾರಿನ ಹಿಂಭಾಗದ ಮಧ್ಯದಲ್ಲಿ ನಿಸ್ಸಾನ್ ಲೊಗೊ ಜೊತೆಗೆ ಮ್ಯಾಗ್ನೈಟ್ ಲೊಗೊ ನೀಡಲಾಗಿದ್ದು, ಕಾರಿನ ಹೊರ ನೋಟಕ್ಕೆ ಮತ್ತಷ್ಟು ಆಕರ್ಷಣೆ ನೀಡಲಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಾರಿನ ಟರ್ಬೋ ಪೆಟ್ರೋಲ್ ಮಾಹಿತಿ ಬಹಿರಂಗ

ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಕಾರಿನಲ್ಲಿ ಹೊರಭಾಗದಂತೆ ಒಳಭಾಗದಲ್ಲೂ ಆಕರ್ಷಕ ವಿನ್ಯಾಸವನ್ನು ನೀಡಿದ್ದು, ಸಂಪೂರ್ಣವಾಗಿ ಕಪ್ಪು ಬಣ್ಣದ ಕ್ಯಾಬಿನ್ ಪ್ರೀಮಿಯಂ ಅನುಭವ ನೀಡುತ್ತದೆ. ಆಸನಗಳಲ್ಲಿ ಮಾತ್ರ ಗ್ರೇ ಬಣ್ಣವನ್ನು ಬಣ್ಣವನ್ನು ಬಳಕೆ ಮಾಡಲಾಗಿದ್ದು, ಫ್ಲ್ಯಾಟ್ ಬಾಟಮ್ ಸ್ಪೀರಿಂಗ್ ವೀಲ್ಹ್, ಮೌಂಟೆಡ್ ಕಂಟ್ರೋಲ್ಸ್, 7-ಇಂಚಿನ ಫುಲ್ ಡಿಜಿಟಲ್ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಕ್ಲಸ್ಟರ್, ಕ್ರೂಸ್ ಕಂಟ್ರೊಲ್, 360 ಡಿಗ್ರಿ ವ್ಯೂವ್ ಕ್ಯಾಮೆರಾ, ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ ಹೊಂದಿದೆ.

ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಾರಿನ ಟರ್ಬೋ ಪೆಟ್ರೋಲ್ ಮಾಹಿತಿ ಬಹಿರಂಗ

ಹಿಂಬದಿಯಲ್ಲಿ ಆರಾಮದಾಯಕ ಆಸನಗಳೊಂದಿಗೆ ಸೆಂಟರ್ ಆರ್ಮ್ ರೆಸ್ಟ್, ರಿಯರ್ ಎಸಿ ವೆಂಟ್ಸ್, 60:40 ಅನುಪಾತದಲ್ಲಿ ಮಡಿಕೆ ಮಾಡಬಹುದಾದ ಆಸನಗಳು, 334-ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ನೀಡಲಾಗಿದ್ದು, ಹೆಚ್ಚುವರಿ ಬೂಟ್ ಸ್ಪೆಸ್ ಅವಶ್ಯವಿದ್ದಲ್ಲಿ ಹಿಂಬದಿಯ ಆಸನಗಳನ್ನು ಮಡಿಕೆ ಮಾಡಿಕೊಳ್ಳಬಹುದಾಗಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ನಿಸ್ಸಾನ್ ಹೊಸ ಮ್ಯಾಗ್ನೈಟ್ ಕಾರಿನ ಟರ್ಬೋ ಪೆಟ್ರೋಲ್ ಮಾಹಿತಿ ಬಹಿರಂಗ

ಮೊದಲ ಎರಡು ವೆರಿಯೆಂಟ್‌ಗಳಿಂತ ಟಾಪ್ ಎಂಡ್ ವೆರಿಯೆಂಟ್‌ಗಳು ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರಲಿದ್ದು, ಟಾಪ್ ಎಂಡ್ ವೆರಿಯೆಂಟ್‌ಗಳಲ್ಲಿ ಹೆಚ್ಚುವರಿಯಾಗಿ ವೈರ್‌ಲೆಸ್ ಚಾರ್ಜರ್, ಪೆಡಲ್ ಲ್ಯಾಂಪ್ಸ್, ಏರ್ ಪ್ಯೂರಿಫೈರ್, ಜೆಬಿಎಲ್ ಸೌಂಡ್ ಸಿಸ್ಟಂ, ಆ್ಯಂಬಿಯೆಂಟ್ ಲೈಟಿಂಗ್ಸ್ ಸೌಲಭ್ಯ ಹೊಂದಿರಲಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.50 ಲಕ್ಷ ಬೆಲೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

Most Read Articles

Kannada
English summary
Nissan Magnite Will Get A HRA0 1.0 Litre Turbo Engine. Read in Kannada.
Story first published: Friday, November 6, 2020, 20:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X