ಹೊಸ ಕಂಪ್ಯಾಕ್ಟ್ ಎಸ್‌ಯುವಿ ಟೀಸರ್ ಬಿಡುಗಡೆ ಮಾಡಿದ ನಿಸ್ಸಾನ್
ನಿಸ್ಸಾನ್ ಮತ್ತು ರೆನಾಲ್ಟ್ ಸಂಸ್ಥೆಗಳು ಭಾರತದಲ್ಲಿ ಹೊಸ ಮಾದರಿಯ ಕಾರುಗಳ ಉತ್ಪಾದನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ನಿಸ್ಸಾನ್ ಬಿಡುಗಡೆ ಮಾಡಲಿರುವ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಶೀಘ್ರದಲ್ಲೇ ಬಿಡುಗಡೆಯಾಗುವ ಸುಳಿವು ನೀಡಿದೆ.

ಸದ್ಯ ಮಾರುಕಟ್ಟೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟವು ತೀವ್ರಗತಿ ಬೆಳವಣಿಗೆ ಕಾಣುತ್ತಿದ್ದು, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 300 ಮಾದರಿಗಳಿಗೆ ಪೈಪೋಟಿಯಾಗಿ ನಿಸ್ಸಾನ್ ಸಂಸ್ಥೆಯು ಕೂಡಾ ಹೊಸ ವಿನ್ಯಾಸ ಕಂಪ್ಯಾಕ್ಟ್ ಎಸ್‌ಯುವಿ ಆವೃತ್ತಿಯೊಂದನ್ನು ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿದೆ. ಹೊಸ ಕಾರಿನ ಅಧಿಕೃತ ಹೆಸರು ಇದುವರೆಗೂ ಬಹಿರಂಗವಾಗಿಲ್ಲವಾದರೂ EM2 ಕೋಡ್ ನೆಮ್ ಆಧಾರದ ಮೇಲೆ ಹೊಸ ಕಾರಿನ ಟೀಸರ್ ಬಿಡುಗಡೆ ಮಾಡಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಿಕ್ಸ್ ಎಸ್‌ಯುವಿ ಮಾದರಿಗಿಂತಲೂ ಕೆಳದರ್ಜೆಯ ಕಾರು ಮಾದರಿಯಾಗಿ ಮಾರಾಟಗೊಳ್ಳಲಿರುವ ಹೊಸ ಕಾರು ಮಾರುತಿ ಬ್ರೆಝಾ ಮತ್ತು ಹ್ಯುಂಡೈ ವೆನ್ಯೂ ಕಾರಿಗಿಂತಲೂ ಉತ್ತಮ ತಾಂತ್ರಿಕ ಅಂಶಗಳನ್ನು ಪಡೆದುಕೊಳ್ಳುವ ಸುಳಿವು ನೀಡಿದೆ.

ರೆನಾಲ್ಟ್ ಕೂಡಾ ಬ್ರೆಝಾ ಮತ್ತು ವೆನ್ಯೂ ಕಾರಿಗೆ ಪೈಪೋಟಿ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಕಿಗರ್ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಸಿದ್ದಗೊಂಡಿರುವ ನಿಸ್ಸಾನ್ ಹೊಸ ಕಾರು ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ.

ಇತ್ತೀಚೆಗೆ ರೆನಾಲ್ಟ್ ಕಾರು ಉತ್ಪಾದನಾ ಸಂಸ್ಥೆಯು ಭಾರತದಲ್ಲಿ ಡೀಸೆಲ್ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವುದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದು, ಪೆಟ್ರೋಲ್ ಕಾರುಗಳ ಉತ್ಪಾದನೆ ಮೇಲೆ ಹೆಚ್ಚು ಗಮನಹರಿಸಲು ಮುಂದಾಗಿದೆ. ಇದಕ್ಕಾಗಿ ನಿಸ್ಸಾನ್ ಜೊತೆಗೆ ಮತ್ತಷ್ಟು ಹೊಸ ಪೆಟ್ರೋಲ್ ಎಂಜಿನ್‌ಗಳ ಅಭಿವೃದ್ದಿಗೆ ಚಾಲನೆ ನೀಡಿದ್ದು, ಸಹಭಾಗಿತ್ವದ ಯೋಜನೆ ಅಡಿ ನಿರ್ಮಾಣವಾಗುತ್ತಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎರಡು ಸಂಸ್ಥೆಗಳು ಬಳಕೆ ಮಾಡಿಕೊಳ್ಳಲಿವೆ.

ಹೀಗಾಗಿ ರೆನಾಲ್ಟ್ ಕಿಗರ್‌ನಲ್ಲಿ ಮತ್ತು ನಿಸ್ಸಾನ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಒಂದೇ ಮಾದರಿಯ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಗೆ ಲಭ್ಯವಾಗಲಿದ್ದು, ಹೊಸ ಕಾರು ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ.

ಹಾಗೆಯೇ ಹೊಸ ಕಾರಿನಲ್ಲಿ ಫುಲ್ ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಎಲ್ಇಡಿ ಟೈಲ್‌ಲೈಟ್ ಸೇರಿದಂತೆ ಕಾರ್ ಕನೆಕ್ಟ್ ಫೀಚರ್ಸ್‌ಗಳನ್ನು ನೀಡಲಾಗುತ್ತಿದ್ದು, ಕಿಕ್ಸ್ ಮಾದರಿಯಲ್ಲೇ ಹೊಸ ಕಾರು ಹೊರಭಾಗದ ವಿನ್ಯಾಸ ಪಡೆದುಕೊಳ್ಳಲಿದೆ.

ಬಿಡುಗಡೆಯ ಅವಧಿ ಮತ್ತು ಬೆಲೆ(ಅಂದಾಜು)
ಮಾಹಿತಿಗಳ ಪ್ರಕಾರ ನಿಸ್ಸಾನ್ ಹೊಸ ಕಾರು ಮುಂದಿನ ಸೆಪ್ಟೆಂಬರ್ ಹೊತ್ತಿಗೆ ಖರೀದಿಗೆ ಲಭ್ಯವಾಗಲಿದ್ದು, ಹೊಸ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ವಿವಿಧ ಹಂತಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಇದೀಗ ಚಾಲನೆ ನೀಡಲಾಗುತ್ತಿದೆ.

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿರುವ ನಿಸ್ಸಾನ್ ಮತ್ತು ರೆನಾಲ್ಟ್ ಸಂಸ್ಥೆಗಳು ಹೊಸ ಕಾರನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.


Click it and Unblock the Notifications