ಅನಾವರಣವಾಯ್ತು ಬಹುನಿರೀಕ್ಷಿತ 2021ರ ನಿಸ್ಸಾನ್ ನವರ ಫೇಸ್‌ಲಿಫ್ಟ್ ಪಿಕ್ ಅಪ್ ಟ್ರಕ್
ಜನಪ್ರಿಯ ವಾಹನ ತಯಾರಕ ಕಂಪನಿಯಾದ ನಿಸ್ಸಾನ್ ತನ್ನ 2021ರ ನವರ ಫೇಸ್‌ಲಿಫ್ಟ್ ಪಿಕ್ ಅಪ್ ಟ್ರಕ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವಣಗೊಳಿಸಿದೆ. ನಿಸ್ಸಾನ್ ತನ್ನ ನವರ ಅಪ್ ಟ್ರಕ್ ಅನ್ನು ಹಲವು ನವೀಕರಣಗಳನ್ನು ನಡೆಸಿ ಅನಾವರಣಗೊಳಿಸಿದೆ.

ಪ್ರಸಕ್ತ ಪೀಳಿಗೆಯ ಮಾದರಿಯು 2015ರಲ್ಲಿ ಮಾರಾಟವಾದ ನಂತರ ಇದು ನವಾರಾಗೆ ನೀಡಿದ ಮೊದಲ ಪ್ರಮುಖ ಅಪ್‌ಡೇಟ್ ಇದಾಗಿದೆ. ದಕ್ಷಿಣ ಅಮೆರಿಕಾ ಮತ್ತು ಮೆಕ್ಸಿಕೊದಲ್ಲಿ ಫ್ರಾಂಟಿಯರ್ ಎಂದೂ ಮಾರಾಟವಾಗುವ ಪಿಕಪ್ ಟ್ರಕ್, ಬೆರಳೆಣಿಕೆಯಷ್ಟು ಫೀಚರ್ ಗಳನ್ನು ಮತ್ತು ಹಲವಾರು ಕಾಸ್ಮೆಟಿಕ್ ಅಪ್ಡೇಟ್ ಗಳನ್ನು ಪಡೆದುಕೊಂಡಿದೆ. ಹೊಸ ನವರ ಫೇಸ್‌ಲಿಫ್ಟ್ ಪಿಕ್ ಅಪ್ ಟ್ರಕ್ ಮುಂಭಾಗ ಮತ್ತು ಹಿಂಭಾಗದಲ್ಲಿ ಕಾರ್ನರಿಂಗ್ ಅನ್ನು ನವೀಕರಿಸಿದೆ.

2021ರ ನವರ ಫೇಸ್‌ಲಿಫ್ಟ್ ಪಿಕ್ ಅಪ್ ಟ್ರಕ್ ಮುಂಭಾಗ ಗ್ರಿಲ್ ಅನ್ನು ಹೊಂದಿದೆ. ನಿಸ್ಸಾನ್ ಟೈಟಾನ್‌ನಿಂದ ಎರವಲು ಪಡೆದ ಬೈ-ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ, ಈ ಹೊಸ ಪಿಕ್ ಅಪ್ ಟ್ರಕ್ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಇನ್ನು ಈ ಹೊಸ ಪಿಕ್ ಅಪ್ ಟ್ರಕ್ ನಲ್ಲಿ ಸಿ-ಆಕಾರದ ಎಲ್ಇಡಿ ಡಿಆರ್ಎಲ್ ಅನ್ನು ಹೊಂದಿದೆ. ವಿಂಡ್‌ಶೀಲ್ಡ್ ಮತ್ತು ಮರುವಿನ್ಯಾಸಗೊಳಿಸಲಾದ ವ್ಹೀಲ್ ಅರ್ಚಾರ್, ಟೈಲ್‌ಗೇಟ್ ಮತ್ತು ಟ್ರೇ ಫೆಂಡರ್‌ಗಳನ್ನು ಹೊಂದಿದೆ.

2021ರ ನವರ ಫೇಸ್‌ಲಿಫ್ಟ್ ಪಿಕ್ ಅಪ್ ಟ್ರಕ್ ಕ್ಯಾಬಿನ್‌ನೊಳಗೆ ನವೀಕರಿಸಿದ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಹೊಸ ಸ್ಟೀಯರಿಂಗ್ ವ್ಹೀಲ್ ಮತ್ತು ಡ್ಯಾಶ್‌ಬೋರ್ಡ್‌ಗೆ ಕೆಲವು ಟ್ವೀಕ್‌ಗಳನ್ನು ಒಳಗೊಂಡಂತೆ ಸೂಕ್ಷ್ಮ ವ್ಯತ್ಯಾಸಗಳನ್ನು ಗಮನಿಸಬಹುದು.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇದರೊಂದಿಗೆ ನವೀಕರಿಸಿದ ಯುಎಸ್‌ಬಿ ಟೈಪ್-ಸಿ ಫಾಸ್ಟ್ ಚಾರ್ಜಿಂಗ್ ಔಟ್ ಲೆಟ್ ಅನ್ನು ಸೇರಿಸುವುದಕ್ಕಿಂತ ಮೊದಲಿಗಿಂತ ಹೆಚ್ಚು ಯುಎಸ್‌ಬಿ ಪಾಯಿಂಟ್‌ಗಳನ್ನು ಇದು ಪಡೆಯುತ್ತದೆ. ನವೀಕರಿಸಿದ 8 ಇಂಚಿನ ಟಚ್‌ಸ್ಕ್ರೀನ್ ಸಿಸ್ಟಂನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳಿವೆ. ಇದು ಅನಲಾಗ್ ಇನ್ಸ್ ಟ್ರೂಮೆಂಟ್ ಡಯಲ್‌ಗಳ ನಡುವೆ ದೊಡ್ಡ ಡಿಜಿಟಲ್ ಎಂಐಡಿಯನ್ನು ಸಹ ಪಡೆಯುತ್ತದೆ.

ಪಿಕ್ ಅಪ್ ಟ್ರಕ್ ಯಾಂತ್ರಿಕವಾಘಿ ಪ್ರಮುಖ ಬದಲಾವಣೆಗಳನ್ನು ಸಹ ಸೇರಿಸಲಾಗಿದೆ. ನವೀಕರಿಸಿದ ಟ್ರಕ್ ಅದೇ ಕಾಯಿಲ್-ಆಧಾರಿತ ಸಸ್ಪೆಂಕ್ಷನ್ ಸೆಟಪ್ ಅನ್ನು ಪಡೆದರೆ, ಇನ್ನು ಈ ಪಿಕ್ ಅಪ್ ಟ್ರಕ್ 1.2 ಟನ್ ಗಳಷ್ಟು ಭಾರವನ್ನು ಸಾಗಿಸಲು ಅನುವು ಮಾಡಿಕೊಡುತ್ತದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

2021ರ ನವರ ಫೇಸ್‌ಲಿಫ್ಟ್ ಪಿಕ್ ಅಪ್ ಟ್ರಕ್ ನಲ್ಲಿ 2021ರ ನವರ ಫೇಸ್‌ಲಿಫ್ಟ್ ಪಿಕ್ ಅಪ್ ಟ್ರಕ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 188 ಬಿಹೆಚ್‌ಪಿ ಪವರ್ ಮತ್ತು 450 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಬಹುದು.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
2021ರ ನವರ ಫೇಸ್‌ಲಿಫ್ಟ್ ಪಿಕ್ ಅಪ್ ಟ್ರಕ್ ನಲ್ಲಿ ಅಡ್ವೆಂಚರ್ ಪ್ರಿಯರನ್ನು ಗುರಿಯಾಗಿರಿಸಿಕೊಂಡು ಸ್ಟೈಲ್ ಪ್ಯಾಕೇಜ್ ಅನ್ನು ಒಳಗೊಂಡಿರುತ್ತದೆ ಮತ್ತು ಸ್ಪೋರ್ಟ್ಸ್ ಬಾರ್ ಅನ್ನು ಸಹ ಒಳಗೊಂಡಿದೆ. 2021ರ ನವರ ಫೇಸ್‌ಲಿಫ್ಟ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟೊಯೊಟಾ ಹಿಲಕ್ಸ್, ಫೋರ್ಡ್ ರೇಂಜರ್ ಮತ್ತು ಇಸುಝು ವಿ-ಕ್ರಾಸ್ ಪಿಕ್ ಅಪ್ ಟ್ರಕ್ ಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications