Just In
Don't Miss!
- Movies
ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು ಬಹುನಿರೀಕ್ಷಿತ 2021ರ ನಿಸ್ಸಾನ್ ಆರ್ಮಡ ಎಸ್‍ಯುವಿ
ಜನಪ್ರಿಯ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ತನ್ನ ಎರಡನೇ ತಲೆಮಾರಿನ ಆರ್ಮಡ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿದೆ. ಈ ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯು ಹಲವರು ಕಾಸ್ಮೆಟಿಕ್ ಅಪ್ಡೇಟ್ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಪಡೆದುಕೊಂಡಿದೆ.

ನಿಸ್ಸಾನ್ ಆರ್ಮಡ ಜಪಾನಿನ ಉತ್ಪಾದಕರ ಎಸ್‍ಯುವಿ ಪೋರ್ಟ್ಫೋಲಿಯೊದ ಅಗ್ರಸ್ಥಾನದಲ್ಲಿದೆ. ಆದ್ದರಿಂದ ಹೊಸ ವಿನ್ಯಾಸದ ವಿವರಗಳನ್ನು ಸೇರಿಸುವಾಗ ಇದು ಅಪಾರ ಗಮನವನ್ನು ಸೆಳೆಯಿತು. ಈ ನಿಸ್ಸಾನ್ ಆರ್ಮಡ ಎಸ್‍ಯುವಿ ಹೊರಭಾಗದಲ್ಲಿ, ಮರುವಿನ್ಯಾಸಗೊಳಿಸಲಾದ ವಿ-ಮೋಷನ್ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ. ಮುಂಭಾಗದ ಬಂಪರ್ ಮತ್ತು ಸಿ-ಆಕಾರದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಸಹ ಹೊಸದಾಗಿವೆ.

ಈ ಎಸ್‍ಯುವಿಯ ಮುಂಭಾಗ ದಪ್ಪ ಕ್ರೋಮ್ ನೊಂದಿಗೆ ಹೊಸ ಬ್ಯಾಡ್ಜ್, ಹಿಂಭಾಗದ ಬಂಪರ್, ಫೆಂಡರ್‌ಗಳು ಮತ್ತು ಮರುನವೀಕರಿಸಲಾದ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಸಹ ಪಡೆಯುತ್ತದೆ. ಇನ್ನು ಈ ನಿಸ್ಸಾನ್ ಆರ್ಮಡ ಎಸ್‍ಯುವಿಯು ಸಂಪೂರ್ಣ ಪ್ಯಾಕೇಜ್‌ಗೆ ರಿಫ್ರೆಶ್ ವೈಬ್ ನೀಡಿವೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇನ್ನು ನಿಸ್ಸಾನ್ ಆರ್ಮಡ ಎಸ್‍ಯುವಿಯು ಎಸ್‌ವಿ, ಎಸ್‌ಎಲ್ ಮತ್ತು ಪ್ಲಾಟಿನಂ ಎಂಬ ಟ್ರೀಮ್ ಗಳನ್ನು ಹೊಂದಿವೆ. 2021ರ ನಿಸ್ಸಾನ್ ಆರ್ಮಡ ಎಸ್‍ಯುವಿ ಮಿಡ್ ನೈಟ್ ಎಡಿಷನ್ ಪ್ಯಾಕೇಜ್‌ನೊಂದಿಗೆ ಲಭ್ಯವಿರುತ್ತದೆ.

ಗ್ರಾಹಕರು 2 ವ್ಹೀಲ್ ಡ್ರೈವ್ ಮತ್ತು 4ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಕೂಡ ಆಯ್ಕೆ ಮಾಡಬಹುದು. ನಿಸ್ಸಾನ್ ಡ್ಯುಯಲ್-ಟೋನ್ ಕ್ಯಾಬಿನ್ ಅನ್ನು ಹೊಂದಿದೆ. ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯ ಇಂಟಿರಿಯರ್ ನಲ್ಲಿ 12.3 ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಅನ್ನು ಹೊಂದಿದೆ. ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ನಿಸ್ಸಾನ್ ಆರ್ಮಡ ಎಸ್‍ಯುವಿಯು ಆಫ್-ರೋಡ್ ಸಾಮಥ್ಯವನ್ನು ಹೊಂದಿದೆ. ಈ ಎಸ್‍ಯುವಿ ಟ್ರೈಲರ್ ಬ್ರೇಕ್ ಕಂಟ್ರೋಲರ್ ಅನ್ನು ಹೊಂದಿದೆ. ಇನ್ನು ನಿಸ್ಸಾನ್ ಆರ್ಮಡ ಎಸ್‍ಯುವಿಯು ಟೋಯಿಂಗ್ ಸಾಮರ್ಥ್ಯ 3,855 ಕಿಲೋಗ್ರಾಂಗಳಷ್ಟಿದೆ.

ಇನ್ನು ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯಲ್ಲಿ ವಿಕೆ56 5.6-ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 400 ಬಿಹೆಚ್‍ಪಿ ಪವರ್ ಮತ್ತು 560 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಈ ಎಂಜಿನ್ ಅನ್ನು 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗುತ್ತದೆ. ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯು 4ವ್ಹೀಲ್ ಡ್ರೈವ್ ಕಾನ್ಫಿಗರೇಶನ್‌ಗಳೊಂದಿಗೆ ಉತ್ತಮ ಆಫ್-ರೋಡ್ ಸಾಮರ್ಥವನ್ನು ಹೊಂದಿರಲಿದೆ.

ಈ ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿ ಸುಧಾರಿತ ಸ್ಮಾರ್ಟ್ ರಿಯರ್‌ವ್ಯೂ ಮಿರರ್ ಕ್ಯಾಮೆರಾ ಸಿಸ್ಟಮ್ ಅನ್ನು ನಾವು 2021ರ ಇನ್ಫಿನಿಟಿ ಕ್ಯೂಎಕ್ಸ್ 80 ಮಾದರಿಯಲ್ಲಿಯು ನೋಡಿದ್ದೇವೆ, ಆದರೆ ಇದು ಆರ್ಮಡ ಎಸ್‍ಯುವಿಗಿಂತ ಪ್ರೀಮಿಯಂ ಮಾದರಿಯಾಗಿರಲಿದೆ.

ಈ ಹೊಸ ನಿಸ್ಸಾನ್ ಆರ್ಮಡ ಎಸ್‍ಯುವಿಯು ಮುಂದಿನ ವರ್ಷದ ಆರಂಭದಲ್ಲಿ ಅಮೆರಿಕಾದಲ್ಲಿ ಬಿಡುಗಡೆಯಾಗಲಿದೆ. ನಂತರದಲ್ಲಿ ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಈ 2021ರ ನಿಸ್ಸಾನ್ ಆರ್ಮಡ ಎಸ್‍ಯುವಿ ಬಿಡುಗಡೆಯಾಗಲಿದೆ.