ಪೋರ್ಷೆ ಇಂಡಿಯಾ ನಿರ್ದೇಶಕ ಸ್ಥಾನಕ್ಕೆ ಪವನ್ ಶೆಟ್ಟಿ ರಾಜೀನಾಮೆ

ಪೋರ್ಷೆ ಇಂಡಿಯಾ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಪವನ್ ಶೆಟ್ಟಿ ಅವರು ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆಯನ್ನು ಸಲ್ಲಿಸಿದ್ದೇನೆ ಎಂದು ಪವನ್ ಶೆಟ್ಟಿ ಅವರು ಹೇಳಿದ್ದಾರೆ.

ಪೋರ್ಷೆ ಇಂಡಿಯಾ ನಿರ್ದೇಶಕ ಸ್ಥಾನಕ್ಕೆ ಪವನ್ ಶೆಟ್ಟಿ ರಾಜೀನಾಮೆ

ಪವನ್ ಶೆಟ್ಟೆ ಅವರು ಪೋರ್ಷೆ ಇಂಡಿಯಾದ ನಿರ್ದೇಶಕರಾಗಿ ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ರಾಜೀನಾಮೆ ನೀಡಿದ ಸ್ಥಾನಕ್ಕೆ ಖಾಯಂ ನಿರ್ದೇಶಕರನ್ನು ನಿಯೋಜಿಸುವವರೆಗೆ ಪೋರ್ಷೆ ಇಂಡಿಯಾದ ಸೇಲ್ಸ್ ವಿಭಾಗದ ಮುಖ್ಯಸ್ಥ ಆಶಿಶ್ ಕೌಲ್ ಅವರು ಈ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಪವನ್ ಶೆಟ್ಟಿ ಅವರು 2016ರ ಜನವರಿ ತಿಂಗಳಲ್ಲಿ ಪೋರ್ಷೆ ಇಂಡಿಯಾದ ನಿರ್ದೇಶಕರಾಗಿನೇಮಕಗೊಂಡಿದ್ದರು. ಅಂದಿನಿಂದ ಪೊರ್ಷೆ ಬ್ರ್ಯಾಂಡ್ ಅನ್ನು ಭಾರತದಲ್ಲಿ ಇವರು ಮುನ್ನಡೆಸಿದರು.

ಪೋರ್ಷೆ ಇಂಡಿಯಾ ನಿರ್ದೇಶಕ ಸ್ಥಾನಕ್ಕೆ ಪವನ್ ಶೆಟ್ಟಿ ರಾಜೀನಾಮೆ

ಈ ಹಿಂದೆ ಪವನ್ ಶೆಟ್ಟಿ ಅವರು ಲ್ಯಾಂಬೂರ್ಗಿನಿ ಇಂಡಿಯಾ ಕಾರ್ಯಾಚರಣೆಗಳ ಮುಖ್ಯಸ್ಥರಾಗಿದ್ದರು. ಅಲ್ಲದೇ ಫೋರ್ಡ್ ಇಂಡಿಯಾ ಮತ್ತು ಟಾಟಾ ಮೋಟಾರ್ಸ್‌ನಲ್ಲಿಯು ಕೂಡ ಸೇವೆ ಸಲ್ಲಿಸಿದ್ದಾರೆ.

MOST READ: ಹೊಸ ಪೋರ್ಷೆ ಸೂಪರ್ ಕಾರಿನ ಬೆಲೆ ಮಾಹಿತಿ ಬಹಿರಂಗ

ಪೋರ್ಷೆ ಇಂಡಿಯಾ ನಿರ್ದೇಶಕ ಸ್ಥಾನಕ್ಕೆ ಪವನ್ ಶೆಟ್ಟಿ ರಾಜೀನಾಮೆ

ಇವರೊಬ್ಬ ಸಾಮಾನ್ಯ ಸೇಲ್ಸ್ ಮ್ಯಾನ್ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿ ಪ್ರತಿಷ್ಠಿತ ಪೋರ್ಷೆ ಇಂಡಿಯಾ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಏರಿರುವುದು ಸ್ಪೋರ್ತಿದಾಯಕ ಕಥೆಯಾಗಿದೆ. ಆದರೆ ಇವರು ವ್ಯಯಕ್ತಿಕ ಕಾರಣ ತಿಳಿಸಿ ಪೋರ್ಷೆ ಕಂಪನಿಯಿಂದ ಹೊರನಡೆದಿದ್ದಾರೆ.

ಪೋರ್ಷೆ ಇಂಡಿಯಾ ನಿರ್ದೇಶಕ ಸ್ಥಾನಕ್ಕೆ ಪವನ್ ಶೆಟ್ಟಿ ರಾಜೀನಾಮೆ

ಇನ್ನು ಜರ್ಮನ್ ಸ್ಪೋರ್ಟ್ ಕಾರು ತಯಾರಕ ಕಂಪನಿಯಾದ ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.60 ಕೋಟಿಗಳಾಗಿದೆ.

MOST READ: ಅನಾವರಣವಾಯ್ತು ಹೊಸ ಫೋಕ್ಸ್‌ವ್ಯಾಗನ್ ಟಿಗ್ವಾನ್ ಫೇಸ್‍‍ಲಿಫ್ಟ್ ಎಸ್‍ಯುವಿ

ಪೋರ್ಷೆ ಇಂಡಿಯಾ ನಿರ್ದೇಶಕ ಸ್ಥಾನಕ್ಕೆ ಪವನ್ ಶೆಟ್ಟಿ ರಾಜೀನಾಮೆ

ಐಷಾರಾಮಿ ಪನಾಮೆರಾ ಕಾರಿನ ಹತ್ತನೇ ವರ್ಷದ ಉತ್ಪಾದನೆಯನ್ನು ಪ್ರಾರಂಭಿಸಿದ ಸಂಭ್ರಮದಲ್ಲಿ ಹೊಸ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಪನಾಮೆರಾ 4 ಆಲ್-ವ್ಹೀಲ್-ಡ್ರೈವ್ ಆವೃತ್ತಿಯನ್ನು ಆಧರಿಸಿದೆ. 10 ಇಯರ್ಸ್ ಎಡಿಷನ್ ಕಾರಿನಲ್ಲಿ 21 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಈ ಕಾರಿನ ಮುಂಭಾಗ ವಿಶೇಷವಾದ ‘ಪನಾಮೆರಾ 10' ಬ್ಯಾಡ್ಜಿಂಗ್ ಅನ್ನು ಹೊಂದಿದೆ.

ಪೋರ್ಷೆ ಇಂಡಿಯಾ ನಿರ್ದೇಶಕ ಸ್ಥಾನಕ್ಕೆ ಪವನ್ ಶೆಟ್ಟಿ ರಾಜೀನಾಮೆ

ಈ ಹೊಸ ಐಷಾರಾಮಿ ಕಾರಿನಲ್ಲಿ ಅಡಾಪ್ಟಿವ್ ಏರ್ ಸಂಸ್ಪೆಕ್ಷನ್ ಮತ್ತು ಕಂಪನಿಯ ಪೋರ್ಷೆ ಆಕ್ಟಿವ್ ಸಂಸ್ಪೆಕ್ಷನ್ ಮ್ಯಾನೇಜ್ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಈ ಹೊಸ ಪನಾಮೆರಾ 4 10 ಇಯರ್ಸ್ ಎಡಿಷನ್ ನಲ್ಲಿ 2.8-ಲೀಟರ್, ವಿ6 ಎಂಜಿನ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಪೋರ್ಷೆ ಇಂಡಿಯಾ ನಿರ್ದೇಶಕ ಸ್ಥಾನಕ್ಕೆ ಪವನ್ ಶೆಟ್ಟಿ ರಾಜೀನಾಮೆ

ಈ ಎಂಜಿನ್ 226 ಬಿಹೆಚ್‍ಪಿ ಪವರ್ 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 8-ಸ್ಫೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಪೋರ್ಷೆ ಇಂಡಿಯಾ ನಿರ್ದೇಶಕ ಸ್ಥಾನಕ್ಕೆ ಪವನ್ ಶೆಟ್ಟಿ ರಾಜೀನಾಮೆ

ಪನಾಮೆರಾ 4 10 ಇಯರ್ಸ್ ಎಡಿಷನ್ ಏಳು ರೂಪಾಂತರಗಳು ಮತ್ತು 12 ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಪೋರ್ಷೆ ಪನಾಮೆರಾ 4 10 ಇಯರ್ಸ್ ಎಡಿಷನ್ ಕಾರು ಪನಾಮೆರಾ 4 ಮಾದರಿಯ ಮೇಲಿನ ಸ್ಥಾನದಲ್ಲಿರುತ್ತದೆ.

More from DriveSpark

Article Published On: Thursday, July 2, 2020, 16:12 [IST]
English summary
Porsche India Director Pawan Shetty Quits After Almost Five Years With The Brand. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+