ವರ್ಷಾಂತ್ಯಕ್ಕೆ ಭಾರತಕ್ಕೆ ಕಾಲಿಡಲಿದೆ ಪೋರ್ಷೆ ಎಲೆಕ್ಟ್ರಿಕ್ ಸೆಡಾನ್ ಕಾರು

ಪೋರ್ಷೆ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಪವನ್ ಶೆಟ್ಟಿರವರು ಈ ವರ್ಷದ ಅಂತ್ಯಕ್ಕೆ ಪೋರ್ಷೆ ಕಂಪನಿಯ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ವರ್ಷಾಂತ್ಯಕ್ಕೆ ಭಾರತಕ್ಕೆ ಕಾಲಿಡಲಿದೆ ಪೋರ್ಷೆ ಎಲೆಕ್ಟ್ರಿಕ್ ಸೆಡಾನ್ ಕಾರು

ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಪೋರ್ಷೆಯ ಮೊದಲ ಎಲೆಕ್ಟ್ರಿಕ್ ಸೆಡಾನ್ ಕಾರ್ ಆದ ಟೇಕಾನ್ ಅನ್ನು ಮೊದಲ ಬಾರಿಗೆ 2019ರಲ್ಲಿ ಜರ್ಮನಿಯಲ್ಲಿ ನಡೆದಿದ್ದ ಫ್ರಾಂಕ್‍‍ಫರ್ಟ್ ಮೋಟಾರ್ ಶೋದಲ್ಲಿ ಪ್ರದರ್ಶಿಸಲಾಗಿತ್ತು.

ವರ್ಷಾಂತ್ಯಕ್ಕೆ ಭಾರತಕ್ಕೆ ಕಾಲಿಡಲಿದೆ ಪೋರ್ಷೆ ಎಲೆಕ್ಟ್ರಿಕ್ ಸೆಡಾನ್ ಕಾರು

ಈ ಎಲೆಕ್ಟ್ರಿಕ್ ಸೆಡಾನ್ ಅನ್ನು 2015ರಲ್ಲಿ ಮಿಷನ್ ಇ ಕಾನ್ಸೆಪ್ಟ್ ಕಾರಿನ ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಪೋರ್ಷೆ ಕಂಪನಿಯ ಇ-ಡಿವಿಷನ್ ಪರಿಣಿತರ ಪ್ರಕಾರ ಈ ಕಾರಿನಲ್ಲಿ ಟೆಕ್ನಾಲಜಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗಿದೆ.

ವರ್ಷಾಂತ್ಯಕ್ಕೆ ಭಾರತಕ್ಕೆ ಕಾಲಿಡಲಿದೆ ಪೋರ್ಷೆ ಎಲೆಕ್ಟ್ರಿಕ್ ಸೆಡಾನ್ ಕಾರು

ಈ ಎಲೆಕ್ಟ್ರಿಕ್ ಕಾರಿನಲ್ಲಿ ಹೈ ವೋಲ್ಟೆಜಿನ ಲಿಥಿಯಂ ಐಯಾನ್ ಬ್ಯಾಟರಿಗಳ ಜೊತೆಗೆ ಹೊರತೆಗೆಯಬಲ್ಲ ಎರಡು ಎಲೆಕ್ಟ್ರಿಕ್ ಮೋಟರ್‍‍ಗಳನ್ನು ನೀಡಲಾಗುವುದು. ಈ ಎಲೆಕ್ಟ್ರಿಕ್ ಮೋಟರ್ 600 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ.

ವರ್ಷಾಂತ್ಯಕ್ಕೆ ಭಾರತಕ್ಕೆ ಕಾಲಿಡಲಿದೆ ಪೋರ್ಷೆ ಎಲೆಕ್ಟ್ರಿಕ್ ಸೆಡಾನ್ ಕಾರು

ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ ಈ ಕಾರು 500 ಕಿ.ಮೀವರೆಗೂ ಚಲಿಸುತ್ತದೆ. ಬ್ಯಾಟರಿಯನ್ನು ಚಾರ್ಜ್ ಮಾಡಲು 800 ವೋಲ್ಟ್ ನ ಫಾಸ್ಟ್ ಚಾರ್ಜರ್‍‍ಗಳನ್ನು ನೀಡಲಾಗಿದೆ. ಈ ಚಾರ್ಜರ್‍‍ನಿಂದ 15 ನಿಮಿಷಗಳಲ್ಲಿ 400 ಕಿ.ಮೀ ಚಲಿಸುವಷ್ಟು ಚಾರ್ಜ್ ಮಾಡಬಹುದು.

ವರ್ಷಾಂತ್ಯಕ್ಕೆ ಭಾರತಕ್ಕೆ ಕಾಲಿಡಲಿದೆ ಪೋರ್ಷೆ ಎಲೆಕ್ಟ್ರಿಕ್ ಸೆಡಾನ್ ಕಾರು

ಈ ಎಲೆಕ್ಟ್ರಿಕ್ ಸೆಡಾನ್ 0 - 100 ಕಿ.ಮೀ ವೇಗವನ್ನು 3.5 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಈ ಸೆಡಾನ್ ಕಾರಿನಲ್ಲಿ ಕ್ವಾಡ್ ಎಲ್‍ಇ‍‍ಡಿ ಹೆಡ್‍‍ಲೈಟ್ ಅನ್ನು ಬಾನೆಟ್‍ ಮೇಲೆ ಅಳವಡಿಸಲಾಗಿದೆ. ಮುಂಭಾಗದಲ್ಲಿ ತೆಳುವಾದ ಬಂಪರ್ ನೀಡಲಾಗಿದೆ.

ವರ್ಷಾಂತ್ಯಕ್ಕೆ ಭಾರತಕ್ಕೆ ಕಾಲಿಡಲಿದೆ ಪೋರ್ಷೆ ಎಲೆಕ್ಟ್ರಿಕ್ ಸೆಡಾನ್ ಕಾರು

ಹಿಂಭಾಗದಲ್ಲಿರುವ ಬಂಪರ್ ಮುಂಭಾಗದ ಬಂಪರ್‍‍ಗಿಂತ ಎತ್ತರವಾಗಿದೆ. ಟೇಲ್ ಲ್ಯಾಂಪ್ ತೆಳುವಾಗಿದೆ. ಈ ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟರ್ ದೂರದ ಪ್ರಯಾಣಗಳಲ್ಲಿ ಕಡಿಮೆ ಪವರ್ ಅನ್ನು ಬಳಸುತ್ತದೆ.

ವರ್ಷಾಂತ್ಯಕ್ಕೆ ಭಾರತಕ್ಕೆ ಕಾಲಿಡಲಿದೆ ಪೋರ್ಷೆ ಎಲೆಕ್ಟ್ರಿಕ್ ಸೆಡಾನ್ ಕಾರು

ಈ ಕಾರ್ ಅನ್ನು ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟರ್ಬೊ ಹಾಗೂ ಟರ್ಬೊ ಎಸ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಕಾರಿನಲ್ಲಿ 79.2 ಕಿ.ವ್ಯಾ ಹಾಗೂ 93.4 ಕಿ.ವ್ಯಾನ ಎರಡು ಬ್ಯಾಟರಿಗಳನ್ನು ಅಳವಡಿಸಲಾಗಿದೆ.

ವರ್ಷಾಂತ್ಯಕ್ಕೆ ಭಾರತಕ್ಕೆ ಕಾಲಿಡಲಿದೆ ಪೋರ್ಷೆ ಎಲೆಕ್ಟ್ರಿಕ್ ಸೆಡಾನ್ ಕಾರು

ಟಾಪ್ ಎಂಡ್ ಮಾದರಿಯಾದ ಟರ್ಬೊ ಎಸ್ 750 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ. ಈ ಮಾದರಿಯ ಕಾರು ಕೇವಲ 2.6 ಸೆಕೆಂಡುಗಳಲ್ಲಿ 96 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಟೇಕಾನ್‍‍ನ ಟರ್ಬೊ ಮಾದರಿಯು 2.9 ಸೆಕೆಂಡುಗಳಲ್ಲಿ 96 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ವರ್ಷಾಂತ್ಯಕ್ಕೆ ಭಾರತಕ್ಕೆ ಕಾಲಿಡಲಿದೆ ಪೋರ್ಷೆ ಎಲೆಕ್ಟ್ರಿಕ್ ಸೆಡಾನ್ ಕಾರು

ವಿಶ್ವ ಮಾರುಕಟ್ಟೆಯಲ್ಲಿ ಟೆಸ್ಲಾ ಕಂಪನಿಯ ಎಸ್ ಮಾದರಿಯ ಕಾರು ಈ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡುತ್ತದೆ. ಟೆಸ್ಲಾದ ಈ ಕಾರು 4 ವ್ಹೀಲ್ ಡ್ರೈವ್ ಸ್ಟೀಯರಿಂಗ್ ಹೊಂದಿದೆ. ಟೆಸ್ಲಾದ ಎಸ್ ಮಾದರಿಯ ಕಾರು ಹೆಚ್ಚು ಪವರ್ ಹೊಂದಿದ್ದರೆ, ಪೋರ್ಷೆ ತನ್ನ ಕಾರಿನಲ್ಲಿರುವ ಟೆಕ್ನಾಲಜಿಯನ್ನು ಹೆಚ್ಚಿಸಿದೆ. ಈ ಕಾರಿನ ಬೆಲೆಯು ಅಮೇರಿಕಾ ಮಾರುಕಟ್ಟೆಯಲ್ಲಿ 7.6 ಲಕ್ಷ ಡಾಲರ್‍‍ಗಳಾಗಿದೆ.

More from DriveSpark

Article Published On: Monday, February 10, 2020, 17:20 [IST]
English summary
Porsche electric Sedan Taycan to launch in India by year end. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+