ಒಂದೇ ದಿನದಲ್ಲಿ ಹತ್ತು ಕಾರ್ನಿವಾಲ್ ಕಾರುಗಳನ್ನು ವಿತರಣೆ ಮಾಡಿದ ಪಿಪಿಎಸ್ ಮೋಟಾರ್ಸ್

ಕಿಯಾ ಮೋಟಾರ್ಸ್ ಸಂಸ್ಥೆಯು ಬಿಡುಗಡೆ ಮಾಡಿರುವ ಕಾರ್ನಿವಾಲ್ ಐಷಾರಾಮಿ ಎಂಪಿವಿ ಕಾರು ಬಿಡುಗಡೆಯಾದ ಮೊದಲ ತಿಂಗಳಿನಲ್ಲೇ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದುವರೆಗೂ ಹೊಸ ಕಾರು ಖರೀದಿಗಾಗಿ ದೇಶಾದ್ಯಂತ ಸುಮಾರು 5 ಸಾವಿರಕ್ಕೂ ಅಧಿಕ ಗ್ರಾಹಕರು ಬುಕ್ಕಿಂಗ್ ಸಲ್ಲಿಸಿದ್ದಾರೆ.

ಒಂದೇ ದಿನದಲ್ಲಿ ಹತ್ತು ಕಾರ್ನಿವಾಲ್ ಕಾರುಗಳನ್ನು ವಿತರಣೆ ಮಾಡಿದ ಪಿಪಿಎಸ್ ಮೋಟಾರ್ಸ್

ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ ನಂತರ ಹೊಸ ಕಾರ್ನಿವಾಲ್ ಕಾರು ಮಾರಾಟಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ನಮ್ಮ ಬೆಂಗಳೂರಿನಲ್ಲೂ ಇತರೆ ನಗರಗಳಿಂತ ಹೆಚ್ಚು ಕಾರ್ನಿವಾಲ್ ಕಾರು ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಪಿಪಿಎಸ್ ಮೋಟಾರ್ಸ್ ಶೋರೂಂ ಒಂದರಲ್ಲೇ ಒಂದೇ ದಿನಕ್ಕೆ 10 ಯುನಿಟ್ ವಿತರಣೆ ಮಾಡಲಾಗಿದ್ದು, ಬೆಲೆ ದುಬಾರಿಯಾಗಿದ್ದರೂ ಸಹ ಕಾರ್ನಿವಾಲ್ ಕಾರು ಖರೀದಿಗಾಗಿ ಗ್ರಾಹಕರು ಆಸಕ್ತಿ ತೋರಿಸುತ್ತಿದ್ದಾರೆ.

ಒಂದೇ ದಿನದಲ್ಲಿ ಹತ್ತು ಕಾರ್ನಿವಾಲ್ ಕಾರುಗಳನ್ನು ವಿತರಣೆ ಮಾಡಿದ ಪಿಪಿಎಸ್ ಮೋಟಾರ್ಸ್

ಕಾರ್ನಿವಾಲ್ ಕಾರು ಗ್ರಾಹಕರ ಬೇಡಿಕೆಯೆಂತೆ ಪ್ರೀಮಿಯಂ, ಪ್ರೆಸ್ಟಿಜ್ ಮತ್ತು ಲಿಮೋಸಿನ್ ಎನ್ನುವ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 24.95 ಲಕ್ಷ ಬೆಲೆ ಹೊಂದಿದ್ದು, ಹೈ ಎಂಡ್ ಆವೃತ್ತಿಯು ರೂ.33.95 ಲಕ್ಷ ಬೆಲೆ ಪಡೆದುಕೊಂಡಿದೆ.

ಒಂದೇ ದಿನದಲ್ಲಿ ಹತ್ತು ಕಾರ್ನಿವಾಲ್ ಕಾರುಗಳನ್ನು ವಿತರಣೆ ಮಾಡಿದ ಪಿಪಿಎಸ್ ಮೋಟಾರ್ಸ್

ಕಾರ್ನಿವಾಲ್ ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)

ಪ್ರೀಮಿಯಂ (7 ಸೀಟರ್) - ರೂ. 24.95 ಲಕ್ಷ

ಪ್ರೀಮಿಯಂ (8 ಸೀಟರ್) - ರೂ. 25.15 ಲಕ್ಷ

ಪ್ರೆಸ್ಟಿಜ್ (7 ಸೀಟರ್) - ರೂ. 28.95 ಲಕ್ಷ

ಪ್ರೆಸ್ಟಿಜ್ (9 ಸೀಟರ್) - ರೂ. 29.95 ಲಕ್ಷ

ಲಿಮೋಸಿನ್ (7 ಸೀಟರ್) ರೂ. 33.95 ಲಕ್ಷ

ಒಂದೇ ದಿನದಲ್ಲಿ ಹತ್ತು ಕಾರ್ನಿವಾಲ್ ಕಾರುಗಳನ್ನು ವಿತರಣೆ ಮಾಡಿದ ಪಿಪಿಎಸ್ ಮೋಟಾರ್ಸ್

ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್

ಕಾರ್ನಿವಾಲ್ ಕಾರಿನಲ್ಲಿ ಕೇವಲ ಒಂದೇ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, 2.2-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ ಹೊಂದಿದೆ. ಪ್ರತಿ ವೆರಿಯೆಂಟ್‌ನಲ್ಲೂ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, 200-ಬಿಎಚ್‌ಪಿ, 440-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಈ ಮೂಲಕ ಮೈಲೇಜ್‌ನಲ್ಲೂ ಗಮನಸೆಳೆಯುವ ಕಾರ್ನಿವಾಲ್ ಕಾರು 2,200 ಕೆಜಿ ತೂಕ ಹೊಂದಿದ್ದು, ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸಿದಂತೆ ಪ್ರತಿ ಲೀಟರ್ ಡೀಸೆಲ್‌ಗೆ ಗರಿಷ್ಠ 13.9 ಕಿ.ಮೀ ಮೈಲೇಜ್ ನೀಡಲಿದೆ.

ಒಂದೇ ದಿನದಲ್ಲಿ ಹತ್ತು ಕಾರ್ನಿವಾಲ್ ಕಾರುಗಳನ್ನು ವಿತರಣೆ ಮಾಡಿದ ಪಿಪಿಎಸ್ ಮೋಟಾರ್ಸ್

ಹೊಸ ಕಾರಿನಲ್ಲಿರುವ ಪ್ರೀಮಿಯಂ ತಾಂತ್ರಿಕ ಸೌಲಭ್ಯಗಳು ಮತ್ತು ಐಷಾರಾಮಿ ವಿನ್ಯಾಸದಿಂದಾಗಿ ಕಾರ್ನಿವಾಲ್ ಕಾರು ಆವೃತ್ತಿಯನ್ನು 'ಲಗ್ಷುರಿ ಎಂಪಿವಿ' ವಿಭಾಗದಲ್ಲಿ ಗುರುತಿಸಲಾಗಿದ್ದು, ಸಿಗ್ನೆಚರ್ ಟೈಗರ್ ನೋಸ್ ಗ್ರಿಲ್ ಮತ್ತು ಸ್ವೆಪ್ಟ್ ಆಫ್ ಕ್ರೋಮ್ , ಸ್ವೆಪ್ಟ್‌ಬ್ಯಾಕ್ ಎಲ್‌ಇಡಿ ಪ್ರೋಜೆಕ್ಟರ್, ಬಂಪರ್ ರಕ್ಷಣೆಗಾಗಿ ಸಿಲ್ವರ್ ಸ್ಕಫ್ ಪ್ಲೇಟ್ ಜೋಡಣೆ ಹೊಂದಿರುವುದು ಪ್ರಮುಖ ಆಕರ್ಷಣೆಯಾಗಿದೆ.

ಒಂದೇ ದಿನದಲ್ಲಿ ಹತ್ತು ಕಾರ್ನಿವಾಲ್ ಕಾರುಗಳನ್ನು ವಿತರಣೆ ಮಾಡಿದ ಪಿಪಿಎಸ್ ಮೋಟಾರ್ಸ್

ಫುಲ್ ಸೈಜ್ ಎಂಪಿವಿಯಾಗಿರುವ ಕಾರ್ನಿವಾಲ್ ಕಾರು ಉದ್ದಳತೆಯಲ್ಲಿ ಗಮನಸೆಳೆಯಲಿದ್ದು, ಎಲೆಕ್ಟ್ರಾನಿಕ್ ಸ್ಲೈಡಿಂಗ್ ಡೋರ್ ಸಿಸ್ಟಂ ಹೊಂದಿದೆ. ಹಾಗೆಯೇ ಹೊಸ ಕಾರಿನಲ್ಲಿ 18-ಇಂಚಿನ ಕ್ರೋಮ್ ಲೇಪಿತ ಅಲಾಯ್ ವೀಲ್ಹ್ ಜೋಡಣೆ ಮಾಡಲಾಗಿದ್ದು, ಇದು ಕಾರ್ನಿವಾಲ್ ಕಾರಿನ ಬಲಿಷ್ಠತೆಗೆ ಮತ್ತಷ್ಟು ಪೂರಕವಾಗಿದೆ.

ಒಂದೇ ದಿನದಲ್ಲಿ ಹತ್ತು ಕಾರ್ನಿವಾಲ್ ಕಾರುಗಳನ್ನು ವಿತರಣೆ ಮಾಡಿದ ಪಿಪಿಎಸ್ ಮೋಟಾರ್ಸ್

ಕಾರ್ನಿವಾಲ್ ಒಳವಿನ್ಯಾಸ

ಹೊಸ ಕಾರಿನ ಡ್ಯಾಶ್‌ಬೋರ್ಡ್ ಕೂಡಾ ಗಮನಸೆಳೆಯಲಿದ್ದು, ಸೆಂಟ್ರಲ್ ಇನ್ಪೋಟೈನ್‌ಮೆಂಟ್, 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಇನ್ ಬಿಲ್ಟ್ ನ್ಯಾವಿಗೆಷನ್, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ವೆಹಿಕಲ್ ಟೆಲಿಮ್ಯಾಟಿಕ್, ವೆಂಟಿಲೆಟೆಡ್ ಸೀಟುಗಳ ಸೌಲಭ್ಯವನ್ನು ಹೊಂದಿದ್ದು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸಿಸ್ಟಂ, ಆರ್ಮ್ ರೆಸ್ಟ್‌ನೊಂದಿಗೆ ಚಾಲಕನಿಗೆ ಸರಳವಾಗಿ ಸಿಗಬಹುದಾದ ಗೇರ್ ನಾಬ್, ಲಿಮೋಸಿನ್ ಮಾದರಿಯಲ್ಲಿ ನಪ್ಪಾ ಲೆದರ್ ಆಸನ ಸೌಲಭ್ಯವಿದೆ.

ಒಂದೇ ದಿನದಲ್ಲಿ ಹತ್ತು ಕಾರ್ನಿವಾಲ್ ಕಾರುಗಳನ್ನು ವಿತರಣೆ ಮಾಡಿದ ಪಿಪಿಎಸ್ ಮೋಟಾರ್ಸ್

ಕಾರ್ನಿವಾಲ್ ಉದ್ದಳತೆ

ಕಿಯಾ ಕಾರ್ನಿವಾಲ್ ಕಾರು ಎಂಪಿವಿ ಕಾರುಗಳಲ್ಲೇ ಅತಿ ಹೆಚ್ಚು ಉದ್ದಳತೆ ಹೊಂದಿದ್ದು, 5,115-ಎಂಎಂ ಉದ್ದ, 1,985-ಎಂಎಂ ಅಗಲ, 1,740-ಎಂಎಂ ಎತ್ತರ, 3,060-ಎಂಎಂ ವೀಲ್ಹ್ ಬೆಸ್, 180-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು 540-ಲೀಟರ್‌ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯ ಹೊಂದಿದೆ.

ಒಂದೇ ದಿನದಲ್ಲಿ ಹತ್ತು ಕಾರ್ನಿವಾಲ್ ಕಾರುಗಳನ್ನು ವಿತರಣೆ ಮಾಡಿದ ಪಿಪಿಎಸ್ ಮೋಟಾರ್ಸ್

ಕಾರ್ನಿವಾಲ್ ಪ್ರೀಮಿಯಂ ಫೀಚರ್ಸ್‌ಗಳು

* 8-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ * ಎಂಟು ಸ್ಪೀಕರ್ಸ್(ಹರ್ಮನ್/ಕರ್ಡೋನ್) * 220 ವೊಲ್ಟ್ ಲ್ಯಾಪ್‌ಟಾಪ್ ಚಾರ್ಜರ್ * 10-ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ * ವೆಂಟಿಲೆಟೆಡ್ ಡ್ರೈವರ್ ಸೀಟ್ * ಸ್ಮಾರ್ಟ್ ಕೀ ಜೊತೆ ಪುಶ್ ಬಟನ್ ಸ್ಟಾರ್ಟ್/ಸ್ಟಾಪ್ * ಸೆಂಟ್ರಲ್ ಲಾಕಿಂಗ್ * ಆಟೋ ORVMs * 18-ಇಂಚಿನ ಅಲಾಯ್ ವೀಲ್ಹ್ * ಮೂರನೇ ಸಾಲಿನಲ್ಲೂ 60:40 ಅನುಪಾತದ ಆಸನ * UVO ಕನೆಕ್ಟೆಡ್ ಟೆಕ್ನಾಲಜಿ * ವೈರ್ ಲೆಸ್ ಮೊಬೈಲ್ ಚಾರ್ಜಿಂಗ್

ಒಂದೇ ದಿನದಲ್ಲಿ ಹತ್ತು ಕಾರ್ನಿವಾಲ್ ಕಾರುಗಳನ್ನು ವಿತರಣೆ ಮಾಡಿದ ಪಿಪಿಎಸ್ ಮೋಟಾರ್ಸ್

ಸುರಕ್ಷಾ ಫೀಚರ್ಸ್‌ಗಳು

* ಎಬಿಎಸ್ ಜೊತೆ ಇಬಿಡಿ * ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ * ರೋಲ್ ಓವರ್ ಮಿಟಿಗೆಷನ್ * ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ * 6 ಏರ್‌ಬ್ಯಾಗ್ * ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಕ್ಯಾಮೆರಾ * ಸೀಟ್ ಬೆಲ್ಟ್ ರಿಮೆಂಡರ್ * ಇಮ್‌ಮೊಬಿಲೈಜರ್ * ISOFIX ಚೈಲ್ಡ್ ಸೀಟ್ ಮೌಂಟ್

Article Published On: Saturday, February 22, 2020, 17:41 [IST]
English summary
PPS KIA(Mysore road) DELIVERS 10 CARNIVAL ON A SINGLE DAY.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+