ರೆನಾಲ್ಟ್ ಕಂಪನಿಯಿಂದ ಭರ್ಜರಿ ಆಫರ್

ರೆನಾಲ್ಟ್ ಕಂಪನಿಯು ಗ್ರಾಹಕರನ್ನು ಆಕರ್ಷಿಸಲು ಹಲವು ಆಫರ್‍‍ಗಳನ್ನು ನೀಡುತ್ತಿದೆ. ಈ ಆಫರ್‍‍ಗಳನ್ನು ಬಿ‍ಎಸ್ 4 ಎಂಜಿನ್ ಹೊಂದಿರುವ ಕಾರುಗಳ ಮೇಲೆ ಘೋಷಿಸಲಾಗಿದೆ. ಯಾವ ಕಾರುಗಳ ಮೇಲೆ ಎಷ್ಟು ಪ್ರಮಾಣದ ಆಫರ್ ನೀಡಲಾಗುತ್ತಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ರೆನಾಲ್ಟ್ ಕಂಪನಿಯಿಂದ ಭರ್ಜರಿ ಆಫರ್

ರೆನಾಲ್ಟ್ ಕ್ವಿಡ್

ಗ್ರಾಹಕರು ರೆನಾಲ್ಟ್ ಕ್ವಿಡ್ ಕಾರುಗಳ ಮೇಲೆ ರೂ.45,000ದವರೆಗಿನ ರಿಯಾಯಿತಿಯನ್ನು ಪಡೆಯಲಿದ್ದಾರೆ. ಇದರ ಜೊತೆಗೆ ರೂ.10,000ಗಳ ಲಾಯಲ್ಟಿ ಬೋನಸ್ ಹಾಗೂ ರೂ.4,000ಗಳ ಕಾರ್ಪೋರೇಟ್ ಬೋನಸ್ ನೀಡಲಾಗುವುದು. ಗ್ರಾಹಕರಿಗೆ ಶೂನ್ಯ ಬಡ್ಡಿದರ ಹಾಗೂ 4 ವರ್ಷ ಅಥವಾ 1,00,000 ಕಿ.ಮೀಗಳ ವಾರಂಟಿಯನ್ನು ನೀಡಲಾಗುವುದು.

ರೆನಾಲ್ಟ್ ಕಂಪನಿಯಿಂದ ಭರ್ಜರಿ ಆಫರ್

ರೆನಾಲ್ಟ್ ಟ್ರೈಬರ್

ಗ್ರಾಹಕರು ರೆನಾಲ್ಟ್ ಟ್ರೈಬರ್ ಮಿನಿ ಎಂಪಿವಿಯ ಮೇಲೆ ರೂ.20,000ಗಳ ಲಾಯಲ್ಟಿ ಬೋನಸ್ ಪಡೆಯಬಹುದು. ಈ ಕಾರಿನ ಬೆಲೆಯು ರೂ.4.95 ಲಕ್ಷಗಳಾಗಿದೆ. ಈ ಕಾರ್ ಅನ್ನು ಖರೀದಿಸಬಯಸುವ ಗ್ರಾಹಕರಿಗೆ ವಿಶೇಷವಾದ ಲಾಯಲ್ಟಿ ಬೋನಸ್ ನೀಡಲಾಗುವುದು.

ರೆನಾಲ್ಟ್ ಕಂಪನಿಯಿಂದ ಭರ್ಜರಿ ಆಫರ್

ರೆನಾಲ್ಟ್ ಡಸ್ಟರ್

ರೆನಾಲ್ಟ್ ಡಸ್ಟರ್ ಎಸ್‍‍ಯುವಿಯ ಮೇಲೆ ರೂ.1.25 ಲಕ್ಷಗಳವರೆಗೆ ಕೊಡುಗೆಗಳನ್ನು ನೀಡಲಾಗುವುದು. ಈ ಕಾರುಗಳನ್ನು ಸಾಲದ ರೂಪದಲ್ಲಿ ಖರೀದಿಸಲು ಬಯಸುವವರಿಗೆ 8.99% ಬಡ್ಡಿದರದಲ್ಲಿ ಸಾಲ ನೀಡಲಾಗುವುದು.

ರೆನಾಲ್ಟ್ ಕಂಪನಿಯಿಂದ ಭರ್ಜರಿ ಆಫರ್

ರೆನಾಲ್ಟ್ ಡಸ್ಟರ್ ಫೇಸ್‍‍ಲಿಫ್ಟ್

ರೆನಾಲ್ಟ್ ಡಸ್ಟರ್ ಫೇಸ್‍‍ಲಿಫ್ಟ್ ಆರ್‍ಎಕ್ಸ್ ಎಸ್ ಡೀಸೆಲ್ ಮಾದರಿಗಳ ಮೇಲೆ ರೂ.1.5 ಲಕ್ಷದವರೆಗೆ ರಿಯಾಯಿತಿ ನೀಡಲಾಗುವುದು. ಇದರ ಜೊತೆಗೆ ಲಾಯಲ್ಟಿ ಬೋನಸ್ ಆಗಿ ರೂ.20,000 ಹಾಗೂ ಕಾರ್ಪೋರೇಟ್ ಬೋನಸ್ ಆಗಿ ರೂ.10,000 ನೀಡಲಾಗುವುದು.

ರೆನಾಲ್ಟ್ ಕಂಪನಿಯಿಂದ ಭರ್ಜರಿ ಆಫರ್

ರೆನಾಲ್ಟ್ ಲಾಡ್ಜ್

ರೆನಾಲ್ಟ್ ಲಾಡ್ಜ್ ಕಾರುಗಳ ಮೇಲೆ ರೂ.2 ಲಕ್ಷದವರೆಗಿನ ರಿಯಾಯಿತಿ ನೀಡಲಾಗುವುದು. ಜೊತೆಗೆ ರೂ.10,000 ಕಾರ್ಪೋರೇಟ್ ಬೋನಸ್ ನೀಡಲಾಗುವುದು. ಈ ಕಾರಿನ ಬೆಲೆ ರೂ.8.63 ಲಕ್ಷಗಳಾಗಿದೆ. ಈ ಕಾರ್ ಅನ್ನು ಸ್ಥಗಿತಗೊಳಿಸಲಾಗುವುದೆಂದು ಹೇಳಲಾಗಿದೆ.

ರೆನಾಲ್ಟ್ ಕಂಪನಿಯಿಂದ ಭರ್ಜರಿ ಆಫರ್

ರೆನಾಲ್ಟ್ ಕ್ಯಾಪ್ಚರ್

ರೆನಾಲ್ಟ್ ಕ್ಯಾಪ್ಚರ್ ಎಸ್‍‍ಯುವಿಯ ಮೇಲೆ ರೂ.2 ಲಕ್ಷಗಳವರೆಗಿನ ರಿಯಾಯಿತಿ ನೀಡಲಾಗುವುದು. ಇದರ ಜೊತೆಗೆ ರೂ.20,000 ಲಾಯಲ್ಟಿ ಬೋನಸ್ ಹಾಗೂ ರೂ.10,000 ಕಾರ್ಪೊರೇಟ್ ಬೋನಸ್ ನೀಡಲಾಗುವುದು. ಈ ಕಾರಿನ ಆರಂಭಿಕ ಬೆಲೆಯು ರೂ.9.49 ಲಕ್ಷಗಳಾಗಿದೆ.

ರೆನಾಲ್ಟ್ ಕಂಪನಿಯಿಂದ ಭರ್ಜರಿ ಆಫರ್

ಆಫರ್ ಬಗ್ಗೆ

ಈ ಆಫರ್‍‍ಗಳು ಜನವರಿ 31ರವರೆಗೆ ಲಭ್ಯವಿರುತ್ತವೆ. ರೆನಾಲ್ಟ್ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಈ ಆಫರ್ ಅನ್ವಯವಾಗುತ್ತದೆ. ಈ ಆಫರ್‍‍ನಲ್ಲಿ ಹಲವಾರು ಷರತ್ತುಗಳಿವೆ. ಕೆಲವು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಆಫರ್‍‍ಗಳು ಅನ್ವಯಿಸುವುದಿಲ್ಲ. ಈ ಆಫರ್‍‍ಗಳನ್ನು ಬಿ‍ಎಸ್ 4 ಎಂಜಿನ್ ಕಾರುಗಳ ಮೇಲೆ ನೀಡಲಾಗುವುದು. ಈ ಆಫರ್‍‍ಗಳು ಡೀಲರ್‍‍ಗಳಿಂದ ಡೀಲರ್‍‍ಗಳಿಗೆ ಬದಲಾಗುವ ಸಾಧ್ಯತೆಗಳಿವೆ.

Article Published On: Thursday, January 16, 2020, 14:00 [IST]
English summary
Renault announces discount offers. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+