ಶೀಘ್ರದಲ್ಲೇ ಬಿಡುಗಡೆಯಾಗಲಿದೆ ರೆನಾಲ್ಟ್ ಡಸ್ಟರ್ ಟರ್ಬೋ ವರ್ಷನ್

ಫ್ರೆಂಚ್ ಕಾರು ಉತ್ಪಾದನಾ ಕಂಪನಿ ರೆನಾಲ್ಟ್ ಭಾರತದಲ್ಲಿ ಹಲವಾರು ಹೊಸ ಬದಲಾವಣೆಗಳೊಂದಿಗೆ ಕಾರು ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಶೀಘ್ರದಲ್ಲೇ ತನ್ನ ಬಹುನೀರಿಕ್ಷಿತ ಡಸ್ಟರ್ ಟರ್ಬೋ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ರೆನಾಲ್ಟ್ ಡಸ್ಟರ್ ಟರ್ಬೋ ವರ್ಷನ್

2020ರ ಎಪ್ರಿಲ್ 1ರಿಂದ ಜಾರಿಗೆ ಕಡ್ಡಾಯವಾಗಿ ಬಂದಿರುವ ಬಿಎಸ್-6 ಎಮಿಷನ್ ನಿಯಮ ಅನುಸಾರವಾಗಿ ಬಹುತೇಕ ಕಾರು ಉತ್ಪಾದನಾ ಕಂಪನಿಗಳು ಹೊಸ ಮಾದರಿಯ ಎಂಜಿನ್‌ಗಳನ್ನು ಪರಿಚಯಿಸುತ್ತಿದ್ದು, ರೆನಾಲ್ಟ್ ಕೂಡಾ ತನ್ನ ಪ್ರಮುಖ ಕಾರುಗಳ ಎಂಜಿನ್ ಆಯ್ಕೆಯಲ್ಲಿ ಭಾರೀ ಬದಲಾವಣೆ ತಂದಿದೆ. ಜನಪ್ರಿಯ ಕಾರು ಮಾದರಿಗಳಲ್ಲಿನ ಡೀಸೆಲ್ ಕಾರು ಮಾರಾಟವನ್ನು ಸ್ಥಗಿತಗೊಳಿಸಿರವ ರೆನಾಲ್ಟ್ ಕಂಪನಿಯು ಕೇವಲ ಪೆಟ್ರೋಲ್ ಮಾದರಿಗಳನ್ನು ಮಾತ್ರವೇ ಮಾರಾಟ ಮಾಡುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ರೆನಾಲ್ಟ್ ಡಸ್ಟರ್ ಟರ್ಬೋ ವರ್ಷನ್

ರೆನಾಲ್ಟ್ ಕಂಪನಿಯು ಕಂಪನಿಯು ಈಗಾಗಲೇ ಡಸ್ಟರ್ ಮಾದರಿಯಲ್ಲಿ 1.5-ಲೀಟರ್ ಸಾಮಾನ್ಯ ಪೆಟ್ರೋಲ್ ಎಂಜಿನ್ ಮಾರಾಟ ಮಾಡುತ್ತಿದ್ದು, ಜೂನ್ ಮಧ್ಯಂತರದಲ್ಲಿ ಅಥವಾ ಜುಲೈ ಆರಂಭದಲ್ಲಿ 1.3-ಲೀಟರ್ ಟರ್ಬೋ ಎಂಜಿನ್ ಮಾದರಿಯು ಕೂಡಾ ರಸ್ತೆಗಿಳಿಯಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ರೆನಾಲ್ಟ್ ಡಸ್ಟರ್ ಟರ್ಬೋ ವರ್ಷನ್

1.3-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯನ್ನ ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ಸಹಭಾಗೀತ್ವದ ಯೋಜನೆ ಅಡಿ ಅಭಿವೃದ್ದಿಗೊಳಿಸಿದ್ದು, ಹೊಸ ಎಂಜಿನ್ ಈಗಾಗಲೇ ಬಿಎಸ್-6 ಕಿಕ್ಸ್ ಮಾದರಿಯಲ್ಲಿ ಜೋಡಣೆ ಮಾಡಿ ಬಿಡುಗಡೆಗೊಳಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ರೆನಾಲ್ಟ್ ಡಸ್ಟರ್ ಟರ್ಬೋ ವರ್ಷನ್

ಇದೀಗ ಡಸ್ಟರ್ ಟರ್ಬೋ ಮಾದರಿಯು ಕೂಡಾ ಅದೇ 1.3-ಲೀಟರ್ ಎಂಜಿನ್ ಅನ್ನು ಪಡೆದುಕೊಳ್ಳಲಿದ್ದು, 7-ಸ್ಟೇಪ್ ಎಂ-ಮೋಡ್ ಟ್ರಾನ್ಸ್‌ಮಿಷನ್‌ನೊಂದಿಗೆ 156-ಬಿಎಚ್‌ಪಿ ಮತ್ತು 254-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ರೆನಾಲ್ಟ್ ಡಸ್ಟರ್ ಟರ್ಬೋ ವರ್ಷನ್

ಇದು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ಅತಿ ಬಿಎಚ್‌ಪಿ ಉತ್ಪಾದನಾ ಮಾದರಿಯಾಗಿದ್ದು, ಸಾಮಾನ್ಯ ಮಾದರಿಯಾದ 1.5-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 105-ಬಿಎಚ್‌ಪಿ ಮತ್ತು 142-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ರೆನಾಲ್ಟ್ ಡಸ್ಟರ್ ಟರ್ಬೋ ವರ್ಷನ್

ಸಾಮಾನ್ಯ ಮಾದರಿಗಿಂತ ಟರ್ಬೋ ಆವೃತ್ತಿಯು ಹಲವು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಬೆಲೆಯಲ್ಲೂ ತುಸು ದುಬಾರಿಯಾಗಿರಲಿದ್ದು, ಅತ್ಯುತ್ತಮ ಪರ್ಫಾಮೆನ್ಸ್ ಜೊತೆಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ರೆನಾಲ್ಟ್ ಡಸ್ಟರ್ ಟರ್ಬೋ ವರ್ಷನ್

ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಡಸ್ಟರ್ ಬಿಎಸ್-6 ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.8.49 ಲಕ್ಷದಿಂದ ಟಾಪ್ ಎಂಡ್ ಮಾದರಿಯ 9.99 ಲಕ್ಷ ಬೆಲೆ ಹೊಂದಿದ್ದು, ಇದೀಗ ಬಿಡುಗಡೆಯಾಗಲಿರುವ ಟರ್ಬೋ ಮಾದರಿಯು ಆರಂಭಿಕವಾಗಿ ರೂ. 11 ಲಕ್ಷದಿಂದ ರೂ.12.50 ಲಕ್ಷ ಬೆಲೆಯೊಂದಿಗೆ ಖರೀದಿಗೆ ಲಭ್ಯವಾಗಲಿದೆ.

Article Published On: Sunday, May 24, 2020, 13:36 [IST]
English summary
Renault Duster Turbo Launch Expected Soon in India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+