ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ರೆನಾಲ್ಟ್

ಕರೋನಾ ವೈರಸ್‌ನಿಂದಾಗಿ ಕಾರು ಮಾರಾಟದಲ್ಲಿ ಭಾರೀ ಹಿನ್ನಡೆ ಅನುಭವಿಸಿದ್ದ ಆಟೋ ಕಂಪನಿಗಳು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ವಾಹನ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಆಫರ್‌ಗಳು ಮತ್ತು ಸರಳ ಸಾಲ ಸೌಲಭ್ಯಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ.

ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ರೆನಾಲ್ಟ್

ಲಾಕ್‌ಡೌನ್‌ನಿಂದಾಗಿ ಏಪ್ರಿಲ್, ಮೇ ಮತ್ತು ಜೂನ್ ಅವಧಿಯಲ್ಲಿ ಭಾರೀ ಪ್ರಮಾಣದ ಮಾರಾಟ ಕುಸಿತ ಕಂಡಿದ್ದ ಆಟೋ ಕಂಪನಿಗಳು ಜುಲೈ ಮತ್ತು ಅಗಸ್ಟ್ ಅವಧಿಯಲ್ಲಿನ ವಾಹನ ಮಾರಾಟದಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಸೆಪ್ಟೆಂಬರ್ ಅವಧಿಯಲ್ಲಿ ಮಾರಾಟದಲ್ಲಿ ಇನ್ನಷ್ಟು ಹೆಚ್ಚಳವಾಗುವ ನೀರಿಕ್ಷೆಯಿಟ್ಟುಕೊಂಡಿವೆ. ಈ ನಿಟ್ಟಿನಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಆಟೋ ಕಂಪನಿಗಳು ಹಲವಾರು ಆಫರ್‌ಗಳನ್ನು ನೀಡುತ್ತಿದ್ದು, ರೆನಾಲ್ಟ್ ಕೂಡಾ ಗರಿಷ್ಠ ಆಫರ್ ನೀಡುತ್ತಿದೆ.

ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ರೆನಾಲ್ಟ್

ರೆನಾಲ್ಟ್ ವಿವಿಧ ಕಾರುಗಳ ಖರೀದಿ ಮೇಲೆ ಗರಿಷ್ಠ ರೂ. 70 ಸಾವಿರದಷ್ಟು ಆಫರ್ ಲಭ್ಯವಿರಲಿದ್ದು, ಹೊಸ ಆಫರ್‌ಗಳಲ್ಲಿ ಇಎಂಐ ಪಾವತಿ ಪ್ರಮಾಣದಲ್ಲಿ ವಿನಾಯ್ತಿ, ಎಕ್ಸ್‌ಚೆಂಜ್, ಲೊಯಾಲಿಟಿ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಆಕ್ಸೆಸರಿಸ್‌ಗಳ ಮೇಲೆ ಆಫರ್ ಪಡೆದುಕೊಳ್ಳಬಹುದು.

ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ರೆನಾಲ್ಟ್

ರೆನಾಲ್ಟ್ ಕಂಪನಿಯು ಸದ್ಯ ಮಾರಾಟ ಮಾಡುತ್ತಿರುವ ಕ್ವಿಡ್, ಟ್ರೈಬರ್ ಮತ್ತು ಡಸ್ಟರ್ ಕಾರುಗಳ ಮೇಲೆ ಹೊಸ ಆಫರ್‌ಗಳು ಲಭ್ಯವಿದ್ದು, ಹೊಸ ಆಫರ್‌ಗಳನ್ನು ಸೆಪ್ಟೆಂಬರ್ 30ರ ತನಕ ಪಡೆದುಕೊಳ್ಳಬಹುದಾಗಿದೆ.

ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ರೆನಾಲ್ಟ್

ಕ್ವಿಡ್ ಹ್ಯಾಚ್‌ಬ್ಯಾಕ್

ಎಂಟ್ರಿ ಲೆವಲ್ ಕಾರು ಮಾದರಿಯಾದ ಕ್ವಿಡ್ ಕಾರಿನ ಮೇಲೆ ರೂ. 35 ಸಾವಿರದಷ್ಟು ಆಫರ್ ಲಭ್ಯವಿದ್ದು, ರೂ.35 ಸಾವಿರದಲ್ಲಿ ರೂ.10 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.15 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.10 ಸಾವಿರ ಲೊಯಾಲಿಟಿ ಆಫರ್ ನೀಡಲಾಗುತ್ತಿದೆ.

ಇದಲ್ಲದೆ ಕ್ವಿಡ್ ಕಾರು ಖರೀದಿಯ ಮೇಲೆ ರೂ. 9 ಸಾವಿರದಷ್ಟು ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ರೂ. 5 ಸಾವಿರದಷ್ಟು ಗ್ರಾಮೀಣ ಭಾಗದ ಗ್ರಾಹಕರಿಗೆ ಹೆಚ್ಚುವರಿಯಾಗಿ ಆಫರ್ ನೀಡಲಾಗುತ್ತಿದ್ದು, ಹೊಸ ಕಾರು ಖರೀದಿಗಾಗಿ ಆಕರ್ಷಕ ಬಡ್ಡಿದರ (ಶೇ.6.99) ದಲ್ಲಿ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ರೆನಾಲ್ಟ್

ಸದ್ಯ ಮಾರುಕಟ್ಟೆಯಲ್ಲಿ ಕ್ವಿಡ್ ಕಾರು ಮಾದರಿಯು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟವಾಗುತ್ತಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ. 2.94 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 5.07 ಲಕ್ಷ ಬೆಲೆ ಹೊಂದಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ರೆನಾಲ್ಟ್

ಟ್ರೈಬರ್ ಎಂಪಿವಿ

ಬಜೆಟ್ ಬೆಲೆಯ ಎಂಪಿವಿ ಮಾದರಿಯಲ್ಲಿ ಸದ್ಯ ಭಾರೀ ಬೇಡಿಕೆ ಹೊಂದಿರುವ ಟ್ರೈಬರ್ ಕಾರಿನ ಖರೀದಿ ಮೇಲೂ ಆಕರ್ಷಕ ಆಫರ್‌ಗಳು ಲಭ್ಯವಿದ್ದು, ಗರಿಷ್ಠ ರೂ.30 ಸಾವಿರದಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ. ಇದರಲ್ಲಿ ರೂ.20 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.10 ಸಾವಿರದಷ್ಟು ಲೊಯಾಲಿಟಿ ಬೋನಸ್‌ನೊಂದಿಗೆ ರೂ.4 ಸಾವಿರ ಗ್ರಾಮೀಣ ಭಾಗದ ಗ್ರಾಹಕರಿಗೆ ಹೆಚ್ಚುವರಿ ಕ್ಯಾಶ್ ಡಿಸ್ಕೌಂಟ್ ನೀಡುತ್ತಿದೆ.

ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ರೆನಾಲ್ಟ್

ಇದಲ್ಲದೇ ಹೊಸ ಕಾರಿನ ಮೇಲೆ ಶೇ. 6.95 ಬಡ್ಡಿ ದರದಲ್ಲಿ ರೂ.3.82 ಲಕ್ಷ ಸಾಲ ಸೌಲಭ್ಯವನ್ನು 2 ವರ್ಷಗಳ ಅವಧಿಗೆ ಒದಗಿಸಲಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.4.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು 7.29 ಲಕ್ಷ ಬೆಲೆಯೊಂದಿಗೆ 1.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ರೆನಾಲ್ಟ್

ಡಸ್ಟರ್ ಎಸ್‌ಯುವಿ

ರೆನಾಲ್ಟ್ ಕಂಪನಿಯು ಡಸ್ಟರ್ ಕಾರು ಖರೀದಿ ಮೇಲೆ ರೂ. 70 ಸಾವಿರದಷ್ಟು ಡಿಸ್ಕೌಂಟ್ ಘೋಷಣೆ ಮಾಡಿದ್ದು, ಹೊಸ ಆಫರ್‌ನಲ್ಲಿ ಕಾರ್ಪೊರೇಟ್ ಡಿಸ್ಕೌಂಟ್, ಎಕ್ಸ್‌ಚೆಂಜ್, ಲೊಯಾಲಿಟಿ ಆಫರ್‌ಗಳು ಒಳಗೊಂಡಿವೆ. ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ ಡಸ್ಟರ್ ಟರ್ಬೋ ಕಾರಿನ ಮೇಲೆ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಡಿಸ್ಕೌಂಟ್ ದರ ನಿಗದಿಯಾಗುತ್ತದೆ.

ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ರೆನಾಲ್ಟ್

ಡಸ್ಟರ್ ಕಾರು ಮಾದರಿಯು ಸದ್ಯ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಮಾರಾಟವಾಗುತ್ತಿದ್ದು, 1.5-ಲೀಟರ್ ಸಾಮಾನ್ಯ ಪೆಟ್ರೋಲ್ ಮಾದರಿಲ್ಲಿ ಮತ್ತು 1.3-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ಡಸ್ಟರ್ ಕಾರು ಆರಂಭಿಕವಾಗಿ ರೂ. 8.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.59 ಲಕ್ಷ ಬೆಲೆ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದ ರೆನಾಲ್ಟ್

ಇದರಲ್ಲಿ 1.5-ಲೀಟರ್ ಪೆಟ್ರೋಲ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.49 ಲಕ್ಷದಿಂದ ರೂ.9.99 ಲಕ್ಷ ಬೆಲೆ ಹೊಂದಿದ್ದರೆ, 1.3-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10.49 ಲಕ್ಷದಿಂದ ರೂ.13.59 ಲಕ್ಷ ಬೆಲೆ ಹೊಂದಿದೆ. ಬಿಎಸ್-6 ಜಾರಿ ನಂತರ ರೆನಾಲ್ಟ್ ಕಾರುಗಳಲ್ಲಿ ಡೀಸೆಲ್ ಎಂಜಿನ್ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಕೇವಲ ಪೆಟ್ರೋಲ್ ಮಾದರಿಗಳಲ್ಲಿ ಮಾತ್ರ ಮಾರಾಟಮಾಡಲಾಗುತ್ತಿದೆ.

More from DriveSpark

Article Published On: Friday, September 4, 2020, 15:50 [IST]
English summary
Renault Offers Discounts, Exchange Bonuses & Other Benefits In September 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+