ಬಹುನೀರಿಕ್ಷಿತ ರೆನಾಲ್ಟ್ ಕಿಗರ್ ಕಾರು ಬಿಡುಗಡೆ ಮಾಹಿತಿ ಬಹಿರಂಗ
ರೆನಾಲ್ಟ್ ಇಂಡಿಯಾ ಕಂಪನಿಯು ಟ್ರೈಬರ್ ಯಶಸ್ವಿ ನಂತರ ಮತ್ತೊಂದು ಬಜೆಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಾದ ಕಿಗರ್ ಕಾರು ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರು ಮುಂಬರುವ ಅಕ್ಟೋಬರ್ ಹೊತ್ತಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಇದೇ ತಿಂಗಳು ಜೂನ್ ಅಥವಾ ಜುಲೈನಲ್ಲಿ ಬಿಡುಗಡೆಯಾಗಬೇಕಿದ್ದ ಕಿಗರ್ ಕಾರಿನ ಬಿಡುಗಡೆಯನ್ನು ಕರೋನಾ ವೈರಸ್ ಪರಿಣಾಮ ಮುಂದೂಡಿಕೆ ಮಾಡಿರುವ ರೆನಾಲ್ಟ್ ಕಂಪನಿಯು ಮುಂಬರುವ ಅಕ್ಟೋಬರ್ ಹೊತ್ತಿಗೆ ಬಿಡುಗಡೆ ಮಾಡಲಿದ್ದು, ಹೊಸ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಲ್ಲೇ ವಿಶೇಷ ತಂತ್ರಜ್ಞಾನ ಪ್ರೇರಣೆಯೊಂದಿಗೆ ಆಕರ್ಷಕ ಬೆಲೆಯೊಂದಿಗೆ ಬಿಡುಗಡೆ ಮಾಡಲಿದೆ.

ಸದ್ಯ ಹೊಸ ಕಾರನ್ನು ಹೆಚ್‌ಬಿಸಿ ಕೋಡ್‌ನೆಮ್ ಆಧಾರದ ಮೇಲೆ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದ್ದು, ಕಿಗರ್ ಹೆಸರನ್ನೇ ಅಧಿಕೃತವಾಗಿ ಕರೆಯುವುದು ಬಹುತೇಕ ಖಚಿತವಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡಸ್ಟರ್ ಕಾರಿಗಿಂತಲೂ ತುಸು ಸಣ್ಣ ಗಾತ್ರವನ್ನು ಹೊಂದಲಿರುವ ಕಿಗರ್ ಕಾರು ನಗರ ಪ್ರದೇಶದಲ್ಲಿನ ಸಂಚಾರಕ್ಕೆ ಸೂಕ್ತ ಆಯ್ಕೆಯಾಗಲಿದ್ದು, ಕೈಗೆಟುಕುವ ಬೆಲೆಯೊಂದಿಗೆ ಮಧ್ಯಮ ವರ್ಗದ ಗ್ರಾಹಕರ ಗಮನಸೆಳೆಯಲಿದೆ.

ಇತರೆ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಂತಲೂ ಕಿಗರ್ ಕಾರು ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದ್ದು, ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ನಿಸ್ಸಾನ್ ಕಿಕ್ಸ್ ಕಾರುಗಳಿಗೆ ಪೈಪೋಟಿ ನೀಡಲಿರುವ ಹೊಸ ಕಾರ ಐದು ಆಸನ ಮಾದರಿಯಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಹೊಸ ಕಾರಿನ ಎಂಜಿನ್ ಆಯ್ಕೆ ಆಕರ್ಷಕವಾಗಿದ್ದು, ಪರ್ಫಾಮೆನ್ಸ್ ಜೊತೆಗೆ ಇಂಧನ ದಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹೊಸ ಕಿಗರ್ ಕಾರಿನಲ್ಲಿ ರೆನಾಲ್ಟ್ ಸಂಸ್ಥೆಯು ಹೊಸದಾಗಿ ಅಭಿವೃದ್ದಿಗೊಳಿಸಲಾಗುತ್ತಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಣೆ ಮಾಡುವ ಸಾಧ್ಯತೆಗಳಿದ್ದು, ಇದೇ ಎಂಜಿನ್ ಅನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿರುವ ಟ್ರೈಬರ್ ಟರ್ಬೋ ಆವೃತ್ತಿಯಲ್ಲೂ ಜೋಡಣೆ ಮಾಡಲು ನಿರ್ಧರಿಸಲಾಗಿದೆ.

ಹೀಗಾಗಿ ಕಿಗರ್ ಕಾರು ಪೆಟ್ರೋಲ್ ಮಾದರಿಯಲ್ಲಿ ಮಾತ್ರವೇ ಮಾರಾಟವಾಗಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹಲವು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿರಲಿದೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಹೊಸ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.80 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8 ಲಕ್ಷ ಬೆಲೆಯೊಂದಿಗೆ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿದ್ದು, ಕಿಗರ್ ಮತ್ತು ನಿಸ್ಸಾನ್ ಹೊಸ ಮ್ಯಾಗ್ನೆಟ್ ಕಾರು ಕೂಡಾ ಒಂದೇ ಮಾದರಿಯ ಎಂಜಿನ್ ಪಡೆದುಕೊಳ್ಳಲಿವೆ.


Click it and Unblock the Notifications