ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲಿದೆ ರೆನಾಲ್ಟ್

ರೆನಾಲ್ಟ್ ಕಂಪನಿಯು ತನ್ನ ಹೊಸ ಜೋಯಿ ಎಲೆಕ್ಟ್ರಿಕ್ ಹ್ಯಾಚ್‍‍ಬ್ಯಾಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಚಿಂತಿಸಿದೆ. ವರದಿಗಳ ಪ್ರಕಾರ ರೆನಾಲ್ಟ್ ಕಂಪನಿಯು ಹೊಸ ಜೋಯಿ ಎಲೆಕ್ಟ್ರಿಕ್ ಹ್ಯಾಚ್‍‍ಬ್ಯಾಕ್‍ ಅನ್ನು 2020ರ ಕೊನೆಯಲ್ಲಿ ಅಥವಾ 2021ರ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ.

ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲಿದೆ ರೆನಾಲ್ಟ್

ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ 2020ರ ಆಟೋ ಎಕ್ಸ್‌ಪೋದಲ್ಲಿ ರೆನಾಲ್ಟ್ ಭಾರತದಲ್ಲಿ ಜೋಯಿ ಎಲೆಕ್ಟ್ರಿಕ್ ಅನ್ನು ಪ್ರದರ್ಶಿಸುತ್ತದೆ ಎಂದು ವರದಿಯಾಗಿದೆ. ಮುಂಬರುವ ಎಕ್ಸ್‌ಪೋದಲ್ಲಿ ರೆನಾಲ್ಟ್ ಕಂಪನಿಯು ತನ್ನ ಜೋಯಿ ಎಲೆಕ್ಟ್ರಿಕ್ ಹ್ಯಾಚ್‍‍ಬ್ಯಾಕ್‍ ಅನ್ನು ಪ್ರದರ್ಶಸಿ ದೇಶಿಯ ಮಾರುಕಟ್ಟೆಯಲ್ಲಿನ ಗ್ರಾಹಕರ ಆಸಕ್ತಿಯನ್ನು ಸೆಳೆಯುವ ತಂತ್ರವಾಗಿದೆ.

ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲಿದೆ ರೆನಾಲ್ಟ್

ಜೋಯಿ ಎಲೆಕ್ಟ್ರಿಕ್ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ರೆನಾಲ್ಟ್ ನಿರ್ಧರಿಸಿದೆ ಎಂದು ಕಾರ್‍‍ಟಾಕ್ ವರದಿ ಮಾಡಿದೆ. ಆದರೆ ಹಲವಾರು ಬದಲಾವಣೆಗಳೊಂದಿಗೆ ಜೋಯಿ ಹ್ಯಾಚ್‍‍ಬ್ಯಾಕ್ ಅನ್ನು ಬಿಡುಗಡೆಗೊಳಿಸಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವಾಗ ಭಾರತದ ರಸ್ತೆಗಳಿಗೆ ಅನುಗುಣವಾಗಿ ಇದನ್ನು ಬದಲಾವಣೆಗೊಳಿಸಿ ಬಿಡುಗಡೆಗೊಳಿಸಲಾಗುತ್ತದೆ.

ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲಿದೆ ರೆನಾಲ್ಟ್

ಇದರಲ್ಲಿ ಪ್ರಮುಖವಾಗಿ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೆಚ್ಚಿಸಲಿದೆ. ಭಾರತದ ರಸ್ತೆಗಳಲ್ಲಿ ಚಾಲನೆ ಮಾಡುವಾಗ ಕಾರಿನ ಬ್ಯಾಟರಿಗಳು ಹಾನಿಯಾಗದಂತೆ ಇದು ಸಹಾಯ ಮಾಡುತ್ತದೆ. ರೆನಾಲ್ಟ್ ಜೋಯಿ ಎಲೆಕ್ಟ್ರಿಕ್ ಮೋಟಾರ್ 90 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲಿದೆ ರೆನಾಲ್ಟ್

ಇನ್ನೂ 41 ಕೆಡಬ್ಲ್ಯೂಹೆಚ್ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ. ಜೋಯಿ ಎಲೆಕ್ಟ್ರಿಕ್ ಕಾರ್ ಅನ್ನು ಒಂದು ಬಾರಿ ಪೂರ್ಣ ಪ್ರಮಾಣದ ಚಾರ್ಚ್‍ ಮಾಡಿದರೆ 300 ರಿಂದ 250 ಕಿ.ಮೀ ರಷ್ಟು ಚಲಿಸುತ್ತದೆ.

ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲಿದೆ ರೆನಾಲ್ಟ್

ರೆನಾಲ್ಟ್ ಜೋಯಿ ಎಲೆಕ್ಟ್ರಿಕ್ ಸ್ಟ್ಯಾಂಡರ್ಡ್ ಮತ್ತು ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರಲಿದೆ. ರೆನಾಲ್ಟ್ ಜೋಯಿ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಪ್ರಕ್ರಿಯೆ ಇನ್ನೂ ಆರಂಭಿಕ ಹಂತದಲ್ಲಿದೆ. ಕಂಪನಿಯು ಮುಂದಿನ ದಿನಗಳಲ್ಲಿ ಜೋಯಿ ಎಲೆಕ್ಟ್ರಿಕ್ ಕಾರ್ ಅನ್ನು ಟೆಸ್ಟ್ ಮಾಡಲಾಗಿದೆ.

ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲಿದೆ ರೆನಾಲ್ಟ್

ಟೆಸ್ಟ್ ಮಾಡಿದ ನಂತರ ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ನವೀಕರಿಸಲಿದೆ. ಟೆಸ್ಟ್ ಮಾಡಿದ ನಂತರ ಕೆಲವು ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಇಂಗ್ಲೇಡ್‍ ದೇಶದಲ್ಲಿರುವ ಜೋಯಿ ಎಲೆಕ್ಟ್ರಿಕ್ ಕಾರು 4,087 ಎಂಎಂ ಉದ್ದ, 1,787 ಎಂಎಂ ಅಗಲ ಮತ್ತು 1,562 ಎಂಎಂ ಎತ್ತರವನ್ನು ಹೊಂದಿದೆ.

ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲಿದೆ ರೆನಾಲ್ಟ್

ಈ ಕಾರಿನ ವ್ಹೀಲ್‍‍ಬೇಸ್ 2,588ಎಂಎಂ ವರೆಗೆ ಇದೆ. ಭಾರತದಲ್ಲಿ ಮಾರಾಟವಾಗ ರೆನಾಲ್ಟ್ ಸರಣಿಯಲ್ಲಿರುವ ಸಾಮಾನ್ಯ ಹ್ಯಾಚ್‍ಬ್ಯಾಕ್‍ನ ಮಾದರಿ ಇಂಟಿರಿಯರ್ ಹಾಗೆ ಹೊಸ ಜೋಯಿ ಎಲೆಕ್ಟ್ರಿಕ್ ಕಾರಿನ ಇಂಟಿರಿಯರ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಹೊಸ ಎಲೆಕ್ಟ್ರಿಕ್ ಕಾರು ಬಿಡುಗಡೆಗೊಳಿಸಲಿದೆ ರೆನಾಲ್ಟ್

ರೆನಾಲ್ಟ್ ಜೋಯಿ ಎಲೆಕ್ಟ್ರಿಕ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್, ಟಾಟಾ ನೆಕ್ಸನ್ ಎಲೆಕ್ಟ್ರಿಕ್ ಮತ್ತು ಮಹೀಂದ್ರಾ ಎಕ್ಸ್‌ಯುವಿ 300 ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Article Published On: Wednesday, January 8, 2020, 19:49 [IST]
English summary
Renault Zoe Electric India Launch Expected In 2021: To Be Showcased At 2020 Auto Expo - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+