ರೆನಾಲ್ಟ್ ಕಿಗರ್ ಮತ್ತು ಟ್ರೈಬರ್ ಟರ್ಬೋ ವರ್ಷನ್ ಎಂಜಿನ್ ಮಾಹಿತಿ ಬಹಿರಂಗ

ರೆನಾಲ್ಟ್ ಇಂಡಿಯಾ ಕಂಪನಿಯು ಟ್ರೈಬರ್ ಮಿನಿ ಎಂಪಿವಿ ಬಿಡುಗಡೆಯ ಯಶಸ್ವಿ ನಂತರ ಮತ್ತೊಂದು ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರಿನ ಆಕರ್ಷಕ ಎಂಜಿನ್ ಆಯ್ಕೆಯೊಂದಿಗೆ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಕಿಗರ್ ಮತ್ತು ಟ್ರೈಬರ್ ಟರ್ಬೋ ವರ್ಷನ್ ಎಂಜಿನ್ ಮಾಹಿತಿ ಬಹಿರಂಗ

ಟ್ರೈಬರ್ ಮಿನಿ ಎಂಪಿವಿಯಲ್ಲಿ ಸದ್ಯ 1 ಲೀಟರ್ ಸಾಮಾನ್ಯ ಪೆಟ್ರೋಲ್ ಎಂಜಿನ್ ಮಾರಾಟ ಹೊಂದಿರುವ ರೆನಾಲ್ಟ್ ಕಂಪನಿಯು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಕಿಗರ್ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಟರ್ಬೋ ಪೆಟ್ರೋಲ್ ಮಾದರಿಯ ಜೊತೆಗೆ ಸಾಮಾನ್ಯ ಪೆಟ್ರೋಲ್ ಮಾದರಿಯನ್ನು ಸಹ ಜೋಡಣೆ ಮಾಡಲಿದ್ದು, ಇದೇ ವೇಳೆ ಟ್ರೈಬರ್ ಕಾರಿನಲ್ಲೂ ಕೂಡಾ ಟರ್ಬೋ ಪೆಟ್ರೋಲ್ ಮಾದರಿಯನ್ನು ಸಹ ಜೋಡಣೆ ಮಾಡುವ ಯೋಜನೆಯಲ್ಲಿದೆ.

ಕಿಗರ್ ಮತ್ತು ಟ್ರೈಬರ್ ಟರ್ಬೋ ವರ್ಷನ್ ಎಂಜಿನ್ ಮಾಹಿತಿ ಬಹಿರಂಗ

ಈ ಮೂಲಕ ಟ್ರೈಬರ್ ಮತ್ತು ಕಿಗರ್ ಎರಡು ಮಾದರಿಗಳಲ್ಲೂ ಎರಡು ಮಾದರಿಯ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಿರುವ ರೆನಾಲ್ಟ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಆರಂಭಿಕ ಆವೃತ್ತಿಗಳಲ್ಲಿ ಸಾಮಾನ್ಯ ಪೆಟ್ರೋಲ್ ಮತ್ತು ಟಾಪ್ ಎಂಡ್ ಮಾದರಿಗಳಲ್ಲಿ ಟರ್ಬೋ ಪೆಟ್ರೋಲ್ ವರ್ಷನ್ ಜೋಡಣೆ ಮಾಡಲಿದೆ.

ಕಿಗರ್ ಮತ್ತು ಟ್ರೈಬರ್ ಟರ್ಬೋ ವರ್ಷನ್ ಎಂಜಿನ್ ಮಾಹಿತಿ ಬಹಿರಂಗ

ಸದ್ಯ ಟ್ರೈಬರ್ ಕಾರು ಮಾದರಿಯಲ್ಲಿರುವ 1.0-ಲೀಟರ್ ಪೆಟ್ರೋಲ್ ಎಂಜಿನ್ ಆವೃತ್ತಿಯು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಆವೃತ್ತಿಯೊಂದಿಗೆ 71-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಬಿಡುಗಡೆಯಾಗಲಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯ ಪರ್ಫಾಮೆನ್ಸ್ ಮಾದರಿಯಾಗಿರಲಿದೆ.

ಕಿಗರ್ ಮತ್ತು ಟ್ರೈಬರ್ ಟರ್ಬೋ ವರ್ಷನ್ ಎಂಜಿನ್ ಮಾಹಿತಿ ಬಹಿರಂಗ

ಟರ್ಬೋ ಪೆಟ್ರೋಲ್ ಮಾದರಿಯು 1.0-ಲೀಟರ್ ಎಂಜಿನ್‌ನೊಂದಿಗೆ 100-ಬಿಎಚ್‌ಪಿ ಮತ್ತು 160-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದ್ದು, ಟರ್ಬೋ ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯು ಲಭ್ಯವಿರಲಿದೆ.

ಕಿಗರ್ ಮತ್ತು ಟ್ರೈಬರ್ ಟರ್ಬೋ ವರ್ಷನ್ ಎಂಜಿನ್ ಮಾಹಿತಿ ಬಹಿರಂಗ

ಹೊಸ ಟರ್ಬೋ ಪೆಟ್ರೋಲ್ ಮಾದರಿಯನ್ನು ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ಮರ್ಸಿಡಿಸ್ ಬೆಂಝ್ ಮಾತೃಸಂಸ್ಥೆಯಾದ ಡೈಮ್ಲರ್ ಜೊತೆಗೂಡಿ ಅಭಿವೃದ್ದಿಗೊಳಿಸಿದ್ದು, ಹೊಸ ಎಂಜಿನ್ ಅನ್ನು ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ವಿವಿಧ ಕಾರು ಮಾದರಿಗಳಲ್ಲಿ ಬಳಕೆ ಮಾಡಿಕೊಳ್ಳಲಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕಿಗರ್ ಮತ್ತು ಟ್ರೈಬರ್ ಟರ್ಬೋ ವರ್ಷನ್ ಎಂಜಿನ್ ಮಾಹಿತಿ ಬಹಿರಂಗ

ರೆನಾಲ್ಟ್ ಕಂಪನಿಯು ಹೊಸ ಟರ್ಬೋ ಎಂಜಿನ್ ಮಾದರಿಯನ್ನು ಟ್ರೈಬರ್ ಮತ್ತು ಕಿಗರ್ ಕಾರುಗಳಲ್ಲಿ ಬಳಕೆ ಮಾಡಿಕೊಳ್ಳಲಿದ್ದರೆ ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಬಳಕೆ ಮಾಡಲಿದ್ದು, ಹೊಸ ಎಂಜಿನ್ ಮಾದರಿಯು ಅತ್ಯತ್ತಮ ಪರ್ಫಾಮೆನ್ಸ್‌ನೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿವೆ.

ಕಿಗರ್ ಮತ್ತು ಟ್ರೈಬರ್ ಟರ್ಬೋ ವರ್ಷನ್ ಎಂಜಿನ್ ಮಾಹಿತಿ ಬಹಿರಂಗ

ಇನ್ನು ಹೊಸ ಟರ್ಬೋ ಎಂಜಿನ್ ಪ್ರೇರಿತ ರೆನಾಲ್ಟ್ ಕಿಗರ್ ಮಾದರಿಯು ನಿಸ್ಸಾನ್ ಮ್ಯಾಗ್ನೈಟ್ ಕಾರು ಬಿಡುಗಡೆಯ ನಂತರವಷ್ಟೇ ಬಿಡುಗಡೆಯಾಗಲಿದ್ದು, ಹೊಸ ಕಾರು 2021ರ ಆರಂಭದಲ್ಲಿ ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಕಿಗರ್ ಮತ್ತು ಟ್ರೈಬರ್ ಟರ್ಬೋ ವರ್ಷನ್ ಎಂಜಿನ್ ಮಾಹಿತಿ ಬಹಿರಂಗ

ವಿಭಿನ್ನವಾದ ವಿನ್ಯಾಸ ಮತ್ತು ಒಂದೇ ಮಾದರಿಯ ಎಂಜಿನ್ ಆಯ್ಕೆ ಹೊಂದಲಿರುವ ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5.50 ಲಕ್ಷದಿಂದ ರೂ.9 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿವೆ.

Most Read Articles

Kannada
English summary
Kiger, Triber Get Turbo-Petrol Engine, Renault Revealed Specifications. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X