Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿಸ್ಸಾನ್ ಮ್ಯಾಗ್ನೈಟ್ ಜೊತೆ ಕಾಣಿಸಿಕೊಂಡ ರೆನಾಲ್ಟ್ ಕಿಗರ್
ದೇಶಿಯ ಮಾರುಕಟ್ಟೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟ ಜೋರಾಗಿದ್ದು, ವಿವಿಧ ಕಾರು ಉತ್ಪಾದನಾ ಕಂಪನಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ.

ನಿಸ್ಸಾನ್ ಮತ್ತು ರೆನಾಲ್ಟ್ ಕಂಪನಿಗಳು ಕೂಡಾ ಸಹಭಾಗೀತ್ವದ ಯೋಜನೆ ಅಡಿ ವಿವಿಧ ಮಾದರಿಯ ಹಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಎರಡು ಕಂಪನಿಗಳು ಇದೀಗ ಎರಡು ಹೊಸ ಬಗೆಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳನ್ನು ಬಿಡುಗಡೆಗೊಳಿಸುತ್ತಿವೆ. ನಿಸ್ಸಾನ್ ಕಂಪನಿಯು ಮ್ಯಾಗ್ನೈಟ್ ಎನ್ನುವ ಕಾರು ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದರೆ ರೆನಾಲ್ಟ್ ಕಂಪನಿಯು ಕಿಗರ್ ಎನ್ನುವ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡುತ್ತಿವೆ.

ಮ್ಯಾಗ್ನೈಟ್ ಕಾರು ಕಿಕ್ಸ್ ಕಾರಿಗಿಂತ ಕೆಳದರ್ಜೆಯಲ್ಲಿ ಮಾರಾಟವಾಗಲಿದ್ದರೆ ಕಿಗರ್ ಕಾರು ಡಸ್ಟರ್‌ಗಿಂತ ಕೆಳದರ್ಜೆಯಲ್ಲಿ ಮಾರಾಟವಾಗಲಿದ್ದು, ಮ್ಯಾಗ್ನೈಟ್ ಮತ್ತು ಕಿಗರ್ ಕಾರುಗಳಲ್ಲಿ ಒಂದೇ ಮಾದರಿಯ ಎಂಜಿನ್ ಸೌಲಭ್ಯವನ್ನು ಬಳಕೆ ಮಾಡಲಿದೆ.

ನಿಸ್ಸಾನ್ ಕಂಪನಿಯು ಮಾಗ್ನೈಟ್ ಕಾರಿನ ಕಾನ್ಸೆಪ್ಟ್ ಮಾದರಿಯನ್ನು ಈಗಾಗಲೇ ಭಾರತದಲ್ಲಿ ಅನಾವರಣಗೊಳಿಸಿ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ರೆನಾಲ್ಟ್ ಕಂಪನಿಯು ಶೀಘ್ರದಲ್ಲೇ ಹೊಸ ಕಿಗರ್ ಕಾರಿನ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಿ ಬಿಡುಗಡೆ ಮಾಡಲಿದೆ.

ಹೊಸ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಕುರಿತು ಪ್ರತ್ಯೇಕವಾಗಿಯೇ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿರುವ ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ಒಂದೇ ಮಾದರಿಯ ಎಂಜಿನ್ ಜೋಡಣೆ ಮಾಡಿದ್ದರೂ ವಿಭಿನ್ನವಾದ ವಿನ್ಯಾಸಗಳ ಮೂಲಕ ಗ್ರಾಹಕರನ್ನು ಸೆಳೆಯಲಿವೆ.

ಹೊಸ ಕಾರು ಮಾದರಿಗಳು ಚೆನ್ನೈ ಹೊರವಲಯದಲ್ಲಿರುವ ಒರಗರಂ ಕೈಗಾರಿಕಾ ಪ್ರದೇಶದಲ್ಲಿರುವ ನಿಸ್ಸಾನ್ ಮತ್ತು ರೆನಾಲ್ಟ್ ಕಾರು ಉತ್ಪಾದನಾ ಘಟಕದಲ್ಲಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಾಗಿ ಸಿದ್ದಗೊಳ್ಳುತ್ತಿರುವುದು ಕಂಡುಬಂದಿದ್ದು, ಎರಡು ಕಾರು ಮಾದರಿಗಳು ವಿಭಿನ್ನವಾದ ವಿನ್ಯಾಸಗಳೊಂದಿಗೆ ಸಬ್ ಫೋರ್ ಮೀಟರ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ.

ಸಬ್ ಫೋರ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಸದ್ಯ ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ಟಾಟಾ ನೆಕ್ಸಾನ್ ಮತ್ತು ಫೋರ್ಡ್ ಇಕೋಸ್ಪೋರ್ಟ್ ಕಾರುಗಳು ಉತ್ತಮ ಬೇಡಿಕೆ ಹೊಂದಿದ್ದು, ಇದೀಗ ಹೊಸದಾಗಿ ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾರುಗಳು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ರಸ್ತೆಗಿಳಿಯುತ್ತಿವೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಹೊಸ ಕಿಗರ್ ಕಾರಿನಲ್ಲಿ ರೆನಾಲ್ಟ್ ಕಂಪನಿಯು ಹೊಸದಾಗಿ ಅಭಿವೃದ್ದಿಗೊಳಿಸಲಾಗುತ್ತಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಣೆ ಮಾಡುವ ಸಾಧ್ಯತೆಗಳಿದ್ದು, ಇದೇ ಎಂಜಿನ್ ಅನ್ನು ನಿಸ್ಸಾನ್ ಮ್ಯಾಗ್ನೈಟ್ ಕೂಡಾ ಪಡೆದುಕೊಳ್ಳಲಿದೆ.

ಭಾರತದಲ್ಲಿ ಬಿಎಸ್-6 ಎಮಿಷನ್ ಜಾರಿ ನಂತರ ಡೀಸೆಲ್ ವಾಹನಗಳ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ರೆನಾಲ್ಟ್ ಮತ್ತು ನಿಸ್ಸಾನ್ ಕಂಪನಿಗಳು ಕೇವಲ ಪೆಟ್ರೋಲ್ ಕಾರು ಮಾದರಿಗಳ ಮಾರಾಟದ ಮೇಲೆ ಹೆಚ್ಚು ಗಮನಹರಿಸಿದ್ದು, ಈ ಹಿನ್ನಲೆಯಲ್ಲಿ ನಿಸ್ಸಾನ್ ಮತ್ತು ರೆನಾಲ್ಟ್ ಹೊಸ ಕಾರುಗಳಲ್ಲಿ ಇನ್ಮುಂದೆ ಪೆಟ್ರೋಲ್ ಮಾದರಿಗಳು ಮಾತ್ರ ಮಾರಾಟಗೊಳ್ಳಲಿವೆ ಎನ್ನಬಹುದು.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಇದೀಗ ಬಿಡುಗಡೆಯಾಗಲಿರುವ ಮ್ಯಾಗ್ನೈಟ್ ಮತ್ತು ಕಿಗರ್ ಕಾರುಗಳಲ್ಲೂ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು ಮಾತ್ರ ಮಾರಾಟವಾಗಲಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಲಿರುವ ಹೊಸ ಕಾರುಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.6.50 ಲಕ್ಷದಿಂದ ರೂ.8.50 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿವೆ.