ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್ ಬಿಡುಗಡೆ

ರೆನಾಲ್ಟ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾದ ಕ್ವಿಡ್ ಆವೃತ್ತಿಯಲ್ಲಿ ನಿಯೊಟೆಕ್ ಎನ್ನುವ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಮಾದರಿಯು ಸೀಮಿತ ಅವಧಿಗೆ ಮಾತ್ರವೇ ಖರೀದಿಗೆ ಲಭ್ಯವಿರಲಿದೆ.

ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್ ಬಿಡುಗಡೆ

ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್ ಕಾರು ಮಾದರಿಯು ಎರಡು ಮಾದರಿಯ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.4.24 ಲಕ್ಷ ಮತ್ತು ಹೈ ಎಂಡ್ ಮಾದರಿಯು ರೂ. 4.83 ಲಕ್ಷ ಬೆಲೆ ಹೊಂದಿದೆ. ವಿಶೇಷ ವಿನ್ಯಾಸ ಹೊಂದಿರುವ ಹೊಸ ನಿಯೊಟೆಕ್ ಮಾದರಿಯು ಸ್ಟ್ಯಾಂಡರ್ಡ್ ಕ್ವಿಡ್ ಮಾದರಿಗಿಂತಲೂ ರೂ.30 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಒಳಗೊಂಡಿದೆ.

ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್ ಬಿಡುಗಡೆ

ಸ್ಪೆಷಲ್ ಎಡಿಷನ್ ಮಾದರಿಯು ಬೆಲೆಗೆ ತಕ್ಕಂತೆ ಹಲವಾರು ಆಕರ್ಷಕ ಫೀಚರ್ಸ್ ಪಡೆದುಕೊಂಡಿದ್ದು, ಫಸ್ಟ್ ಇನ್ ಸೆಗ್ಮೆಂಟ್ ಫೀಚರ್ಸ್ ಜೊತೆ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿದೆ.

ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್ ಬಿಡುಗಡೆ

ನಿಯೊಟೆಕ್ ಬ್ಯಾಡ್ಜ್ ಹೊಂದಿರುವ ಮಾದರಿಯಲ್ಲಿ ಜಾನ್‌ಸ್ಕರ್ ಬ್ಲ್ಯೂ ಬಾಡಿ ಜೊತೆ ಸಿಲ್ವರ್ ರೂಫ್ ಮತ್ತು ಸಿಲ್ವರ್ ಬಾಡಿ ಜೊತೆ ಜಾನಸ್ಕರ್ ಬ್ಲ್ಯೂ ಬಣ್ಣಗಳ ಆಯ್ಕೆ ಹೊಂದಿದ್ದು, ಸಿ ಪಿಪ್ಲರ್ ಮೇಲೆ ಬ್ಲ್ಯೂ ಆಕ್ಸೆಂಟ್ ಮತ್ತು ಬ್ಲ್ಯಾಕ್ಡ್ ಔಟ್ ಪಿ ಪಿಲ್ಲರ್ ಜೋಡಣೆ ಮಾಡಿದೆ.

ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್ ಬಿಡುಗಡೆ

ಇನ್ನುಳಿದಂತೆ ಸ್ಪೆಷಲ್ ಎಡಿಷನ್ ಕಾರಿನಲ್ಲಿ ಫ್ಲೆಕ್ಸ್ ವೀಲ್ಹ್, 3ಡಿ ಡಿಕಾಲ್ಸ್, ಗ್ರಾಫೈಟ್ ಗ್ರಿಲ್ ಮತ್ತು ಕ್ರೋಮ್ ಇನ್ಸರ್ಟ್ ಸೌಲಭ್ಯಗಳೊಂದಿಗೆ ಕಾರಿನ ಹೊರವಿನ್ಯಾಸವನ್ನು ಆಕರ್ಷಕಗೊಳಿಸಲಾಗಿದ್ದು, ಒಳಭಾಗದ ವಿನ್ಯಾಸವು ಕೂಡಾ ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯಲಿವೆ.

ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್ ಬಿಡುಗಡೆ

ನಿಯೊಟೆಕ್ ಎಡಿಷನ್ ಒಳಭಾಗದಲ್ಲಿ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ಡ್ ಸೌಲಭ್ಯಕ್ಕೆ ಸರ್ಪೋಟ್ ಮಾಡುವ 8-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಯುಎಸ್‌ಬಿ ಸಾಕೆಟ್, ಔಕ್ಸ್ ಸಾಕೆಟ್, ಕ್ರೋಮ್ ಎಟಿಎಂ ಡಯಲ್, ಬ್ಲ್ಯೂ ಇನ್‌ಸರ್ಟ್ ಹೊಂದಿರುವ ಫ್ಯಾಬ್ರಿಕ್ ಸೀಟುಗಳು ಗಮನಸೆಳೆಯುತ್ತವೆ.

ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್ ಬಿಡುಗಡೆ

ಪ್ರೀಮಿಯಂ ಫೀಚರ್ಸ್ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಎಂಜಿನ್ ಆಯ್ಕೆ ಹೊಂದಿರುವ ಹೊಸ ನಿಯೊಟೆಕ್ ಮಾದರಿಯು ಸಾಮಾನ್ಯ ಕಾರಿನಂತೆಯೇ ಎಲ್ಇಡಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಫ್ಲೋರ್ ಕನ್ಸೊಲ್ ಮೌಂಟೆಡ್ ಎಎಂಟಿ ಡಯಲ್, ಒನ್ ಟಚ್ ಲೈನ್ ಚೆಂಜ್ ಇಂಡಿಕೇಟರ್, ಸ್ಪೀಡ್ ಕಂಟ್ರೋಲರ್ ಮತ್ತು 279-ಲೀಟರ್ ಸಾಮರ್ಥ್ಯದ ಬೂಟ್‌ಸ್ಪೆಸ್ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್ ಬಿಡುಗಡೆ

ಇನ್ನು ಕ್ವಿಡ್ ನಿಯೊಟೆಕ್ ಮಾದರಿಯು ಸಾಮಾನ್ಯ ಮಾದರಿಯೆಂತೆಯೇ 0.8-ಲೀಟರ್ ಮತ್ತು 1.0-ಲೀಟರ್ ಪೆಟ್ರೋಲ್ ಮಾದರಿಯೊಂದಿಗೆ ಖರೀದಿಗೆ ಲಭ್ಯವಿದ್ದು, 0.8-ಲೀಟರ್ ಮಾದರಿಯು 53.5-ಬಿಎಚ್‌ಪಿ, 72-ಎನ್ಎಂ ಟಾರ್ಕ್ ಮತ್ತು 1.0-ಲೀಟರ್ ಮಾದರಿಯು 67-ಬಿಎಚ್‌ಪಿ, 91-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್ ಬಿಡುಗಡೆ

ಎರಡು ಮಾದರಿಯಲ್ಲೂ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದಾಗಿದ್ದು, ನಿಯೊಟೆಕ್ ಮಾದರಿಗಳು ಹೈ ಎಂಡ್ ಮಾದರಿಗಳಲ್ಲಿ ಮಾರಾಟಗೊಳ್ಳಲಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ರೆನಾಲ್ಟ್ ಕ್ವಿಡ್ ನಿಯೊಟೆಕ್ ಸ್ಪೆಷಲ್ ಎಡಿಷನ್ ಬಿಡುಗಡೆ

ಇನ್ನು ಹ್ಯಾಚ್‌ಬ್ಯಾಕ್ ಮಾದರಿಗಳಲ್ಲೇ ಬೆಸ್ಟ್ ಇನ್ ಕ್ಲಾಸ್ ಫೀಚರ್ಸ್ ಹೊಂದಿರುವ ಕ್ವಿಡ್ ಕಾರು ಹಲವಾರು ವಿಶೇಷತೆಗಳೊಂದಿಗೆ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಶೇ.98ರಷ್ಟು ಸ್ಥಳೀಯ ಬಿಡಿಭಾಗಗಳೊಂದಿಗೆ ಉತ್ಪಾದನೆಯಾಗುತ್ತಿರುವ ಕೆಲವೇ ಕೆಲವು ಮಾದರಿಗಳಲ್ಲಿ ಕ್ವಿಡ್ ಕೂಡಾ ಒಂದಾಗಿದೆ.

More from DriveSpark

Article Published On: Thursday, October 1, 2020, 19:16 [IST]
English summary
Renault Kwid Neotech Edition Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+