ದೀಪಾವಳಿ ಆಫರ್: ರೆನಾಲ್ಟ್ ಬಿಎಸ್-6 ಕಾರುಗಳ ಖರೀದಿ ಮೇಲೆ ರೂ.1 ಲಕ್ಷದ ತನಕ ಡಿಸ್ಕೌಂಟ್
ದಸರಾ ಸಂಭ್ರಮದಲ್ಲಿ ನೀರಿಕ್ಷೆಗೂ ಮೀರಿ ಹೊಸ ವಾಹನಗಳನ್ನು ಮಾರಾಟ ಮಾಡಿರುವ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಮುಂಬರುವ ದೀಪಾವಳಿ ಸಂಭ್ರಮದಲ್ಲೂ ಹೆಚ್ಚಿನ ಮಟ್ಟದ ವಾಹನ ಮಾರಾಟ ನೀರಿಕ್ಷೆಯಲ್ಲಿದ್ದು, ಹೊಸ ಕಾರು ಖರೀದಿಯನ್ನು ಆಕರ್ಷಿಸಲು ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿವೆ.

ಲಾಕ್‌ಡೌನ್ ವಿಧಿಸಿದ್ದ ಅವಧಿಯಿಂದಲೂ ಹೊಸ ವಾಹನಗಳ ಮಾರಾಟದಲ್ಲಿ ನಷ್ಟ ಅನುಭವಿಸುತ್ತಲೇ ಬಂದಿದ್ದ ಆಟೋ ಉತ್ಪಾದನಾ ಕಂಪನಿಗಳಿಗೆ ದಸರಾ ಸಂಭ್ರಮವು ನೀರಿಕ್ಷೆಗೂ ಮೀರಿ ಆದಾಯ ತಂದುಕೊಟ್ಟಿದ್ದು, ಕಳೆದ ತಿಂಗಳು ಹೊಸ ವಾಹನಗಳ ಮಾರಾಟವು ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ರೆಲಾಲ್ಟ್ ಕಂಪನಿಯು ಕೂಡಾ ಅಕ್ಟೋಬರ್ ಅವಧಿಯಲ್ಲಿನ ಕಾರು ಮಾರಾಟದಲ್ಲಿ ಭಾರೀ ಪ್ರಮಾಣದ ಬೆಳವಣಿಗೆ ಸಾಧಿಸಿದ್ದು, ದೀಪಾವಳಿ ಸಂಭ್ರಮಕ್ಕಾಗಿ ಮತ್ತಷ್ಟು ಹೊಸ ಕಾರುಗಳನ್ನು ಮಾರಾಟ ಮಾಡುವ ನೀರಿಕ್ಷೆಯಲ್ಲಿದೆ.

ದಸರಾ ಪ್ರಯುಕ್ತ ಘೋಷಣೆ ಮಾಡಲಾಗಿದ್ದ ವಿವಿಧ ಡಿಸ್ಕೌಂಟ್‌ಗಳು ಮತ್ತು ಸರಳ ಸಾಲಸೌಲಭ್ಯಗಳು ಹೊಸ ವಾಹನ ಮಾರಾಟ ಸುಧಾರಣೆಗೆ ಪ್ರಮುಖ ಕಾರಣವಾಗಿದ್ದು, ಇದೀಗ ದೀಪಾವಳಿ ಸಂಭ್ರಮದಲ್ಲೂ ಹೆಚ್ಚಿನ ಮಟ್ಟದ ವಾಹನ ಮಾರಾಟ ನೀರಿಕ್ಷೆಗಳಿವೆ.

ದೀಪಾವಳಿ ವಿಶೇಷತೆಗಾಗಿ ಮತ್ತಷ್ಟು ಹೊಸ ಆಫರ್‌ಗಳನ್ನು ಘೋಷಣೆ ಮಾಡಿರುವ ರೆನಾಲ್ಟ್ ಕಂಪನಿಯು ಪ್ರಮುಖ ಕಾರು ಮಾದರಿಗಳ ಮೇಲೆ ಗರಿಷ್ಠ ಮಟ್ಟದ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್ ಬ್ಯಾಕ್, ಕಾರ್ಪೊರೇಟ್ ಡಿಸ್ಕೌಂಟ್ ನೀಡಲಾಗುತ್ತಿದೆ.

ಹೊಸ ವಾಹನಗಳ ಮಾರಾಟಕ್ಕೆ ಪೂರಕವಾಗಿ ಬಹುತೇಕ ಆಟೋ ಕಂಪನಿಗಳು ಹಲವಾರು ಆಫರ್ ನೀಡುತ್ತಿರುವುದಲ್ಲದೆ ಸರಳ ಸಾಲ ಸೌಲಭ್ಯಗಳನ್ನು ಒದಗಿಸುತ್ತಿರುವುದು ಕಾರು ಖರೀದಿಗೆ ಪ್ರಮುಖ ಆಕರ್ಷಣೆಯಾಗಿದ್ದು, ರೆನಾಲ್ಟ್ ಇಂಡಿಯಾ ಕೂಡಾ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದೆ. ಹೊಸ ಆಫರ್‌ಗಳಲ್ಲಿ ಕ್ವಿಡ್ ಮೇಲೆ ಕನಿಷ್ಠ ಮತ್ತು ಡಸ್ಟರ್ ಕಾರಿನ ಮೇಲೆ ಗರಿಷ್ಠ ಆಫರ್ ಒದಗಿಸಿದ್ದು, ಹೊಸ ಆಫರ್‌ಗಳು ದೀಪಾವಳಿ ಸಂಭ್ರಮದ ತನಕ ಮಾತ್ರ ಅನ್ವಯವಾಗಲಿವೆ.

ಕ್ವಿಡ್ ಹ್ಯಾಚ್‌ಬ್ಯಾಕ್
ಎಂಟ್ರಿ ಲೆವಲ್ ಕಾರು ಮಾದರಿಯಾದ ಕ್ವಿಡ್ ಕಾರಿನ ಮೇಲೆ ರೂ. 49 ಸಾವಿರದಷ್ಟು ಆಫರ್ ಲಭ್ಯವಿದ್ದು, ರೂ.49 ಸಾವಿರದಲ್ಲಿ ರೂ.15 ಸಾವಿರ ಕ್ಯಾಶ್ ಡಿಸ್ಕೌಂಟ್, ರೂ.15 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.10 ಸಾವಿರ ಲೊಯಾಲಿಟಿ ಆಫರ್ ನೀಡಲಾಗುತ್ತಿದೆ.

ಇದಲ್ಲದೆ ಕ್ವಿಡ್ ಕಾರು ಖರೀದಿಯ ಮೇಲೆ ರೂ. 9 ಸಾವಿರದಷ್ಟು ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ರೂ. 5 ಸಾವಿರದಷ್ಟು ಗ್ರಾಮ ಪಂಚಾಯ್ತಿ ಸದಸ್ಯರಿಗೆ ಹೆಚ್ಚುವರಿಯಾಗಿ ಆಫರ್ ನೀಡಲಾಗುತ್ತಿದ್ದು, ಹೊಸ ಕಾರು ಖರೀದಿಗಾಗಿ ಆಕರ್ಷಕ ಶೇ.3.99 ಬಡ್ಡಿದರ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಟ್ರೈಬರ್ ಮಿನಿ ಎಂಪಿವಿ
ಬಜೆಟ್ ಬೆಲೆಯ ಎಂಪಿವಿ ಮಾದರಿಯಲ್ಲಿ ಸದ್ಯ ಭಾರೀ ಬೇಡಿಕೆ ಹೊಂದಿರುವ ಟ್ರೈಬರ್ ಕಾರಿನ ಖರೀದಿ ಮೇಲೂ ಕೂಡಾ ಆಕರ್ಷಕ ಆಫರ್‌ಗಳು ಲಭ್ಯವಿದ್ದು, ಗರಿಷ್ಠ ರೂ.39 ಸಾವಿರದಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ. ಇದರಲ್ಲಿ ರೂ.20 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.10 ಸಾವಿರದಷ್ಟು ಲೊಯಾಲಿಟಿ ಬೋನಸ್‌ನೊಂದಿಗೆ ರೂ.4 ಸಾವಿರ ಪಂಚಾಯ್ತಿ ಸದಸ್ಯರಿಗಾಗಿ ಹೆಚ್ಚುವರಿ ಕ್ಯಾಶ್ ಡಿಸ್ಕೌಂಟ್ ನೀಡುತ್ತಿದೆ.

ಇನ್ನುಳಿದ ರೂ. 9 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಆಗಿ ಪಡೆಯಬಹುದುಗಾಗಿದ್ದು, ಹೊಸ ಕಾರನ್ನು ಖರೀದಿಸಲು ಶೇ.3.99 ಬಡ್ಡಿದರದಲ್ಲಿ ಸಾಲ ಸೌಲಭ್ಯವನ್ನು 2 ವರ್ಷಗಳ ಅವಧಿಗೆ ಒದಗಿಸಲಿದೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಡಸ್ಟರ್ ಎಸ್‌ಯುವಿ
ರೆನಾಲ್ಟ್ ಕಂಪನಿಯು ಡಸ್ಟರ್ ಕಾರು ಖರೀದಿ ಮೇಲೆ ರೂ. 1 ಲಕ್ಷ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಹೊಸ ಆಫರ್‌ನಲ್ಲಿ ರೂ. 30 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್, ರೂ.30 ಸಾವಿರ ಎಕ್ಸ್‌ಚೆಂಜ್ ಆಫರ್, ರೂ.20 ಸಾವಿರ ಕ್ಯಾಶ್ ಡಿಸ್ಕೌಂಟ್(ಆರ್‌ಎಕ್ಸ್ಎಸ್ ಮಾದರಿಯ ಮೇಲೆ ಮಾತ್ರ), ರೂ.20 ಸಾವಿರ ಲೊಯಾಲಿಟಿ ಆಫರ್‌ಗಳನ್ನು ಒಳಗೊಂಡಿವೆ.


Click it and Unblock the Notifications








