ಲಾಕ್‌ಡೌನ್ ಅವಧಿಯಲ್ಲೇ 17 ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ ರೆನಾಲ್ಟ್

ಕರೋನಾ ವೈರಸ್ ಪರಿಣಾಮ ನೆಲಕಚ್ಚಿದ್ದ ಹೊಸ ವಾಹನಗಳ ಮಾರಾಟವು ಇದೀಗ ಚೇತರಿಸಿಕೊಳ್ಳುತ್ತಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ವಾಹನ ಮಾರಾಟವು ಮೊದಲಿನ ಸ್ಥಿತಿಗೆ ಮರುಳುವ ವಿಶ್ವಾಸ ಆಟೋ ಕಂಪನಿಗಳಲ್ಲಿ ಬಲವಾಗಿದೆ. ಹೀಗಾಗಿ ಹೊಸ ವಾಹನ ಬಿಡುಗಡೆ ಪ್ರಕ್ರಿಯೆ ಜೋರಾಗುತ್ತಿದ್ದು, ಜೊತೆಗೆ ವಾಹನ ಮಾರಾಟ ಮಳಿಗೆಗಳ ಸಂಖ್ಯೆಯು ಹೆಚ್ಚುತ್ತಿದೆ.

17 ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ ರೆನಾಲ್ಟ್

ಹೌದು, ಕರೋನಾ ವೈರಸ್ ಪರಿಣಾಮ ಸಂಪೂರ್ಣವಾಗಿ ಕುಸಿತ ಕಂಡಿದ್ದ ವಾಹನ ಮಾರಾಟವು ಇದೀಗ ಚೇತರಿಕೆ ಕಂಡಿರುವುದಲ್ಲದೆ ವೈರಸ್ ಭೀತಿಯಿಂದಾಗಿ ಮತ್ತಷ್ಟು ವಾಹನಗಳು ಮಾರಾಟವಾಗಬಹುದಾದ ಲೆಕ್ಕಾಚಾರಗಳು ಶುರುವಾಗಿದ್ದು, ಸ್ವಂತ ವಾಹನ ಬಳಕೆಯು ಹೆಚ್ಚುತ್ತಿರುವುದು ಹೊಸ ವಾಹನ ಬಿಡುಗಡೆ ಪ್ರಕ್ರಿಯೆಗೆ ಮರುಜೀವ ಸಿಕ್ಕಂತಾಗಿದೆ. ಈ ಹಿನ್ನಲೆಯಲ್ಲಿ ಬಜೆಟ್ ಬೆಲೆಯ ಕಾರು ಮಾರಾಟ ಕಂಪನಿಯಾದ ರೆನಾಲ್ಟ್ ಕೂಡಾ ಹೊಸ ಯೋಜನೆಗಳನ್ನು ರೂಪಿಸಿದ್ದು, ಕಾರು ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದೆ.

17 ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ ರೆನಾಲ್ಟ್

ಭಾರತದಲ್ಲಿ 4 ತಿಂಗಳಲ್ಲಿನಲ್ಲಿ ಬರೋಬ್ಬರಿ 17 ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರು ಮಾದರಿಗಳ ಜೊತೆಗೆ ಮತ್ತಷ್ಟು ಹೊಸ ಬಜೆಟ್ ಕಾರುಗಳ ಬಿಡುಗಡೆಗೆ ಸಿದ್ದವಾಗಿದೆ.

17 ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ ರೆನಾಲ್ಟ್

ಎಂಟ್ರಿ ಲೆವಲ್ ಕಾರುಗಳ ಮೂಲಕ ಜನಪ್ರಿಯಗೊಂಡಿರುವ ಮಾರುತಿ ಸುಜುಕಿ ಕಂಪನಿಗೆ ಪೈಪೋಟಿ ನೀಡಲು ಮುಂದಾಗಿರುವ ರೆನಾಲ್ಟ್ ಕಂಪನಿಯು ಭಾರತದಲ್ಲಿ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗೆ ಯೋಜನೆ ರೂಪಿಸಿದ್ದು, ಗ್ರಾಮೀಣ ವಿಭಾಗದ ಗ್ರಾಹಕರನ್ನು ಗುರಿಯಾಗಿಸಿ ಹೊಸ ಎಂಟ್ರಿ ಲೆವಲ್ ಕಾರುಗಳನ್ನು ರಸ್ತೆಗಿಳಿಸಲು ಮುಂದಾಗಿದೆ.

17 ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ ರೆನಾಲ್ಟ್

ಭಾರತದಲ್ಲಿ ಕಳೆದ ಒಂದು ದಶಕದಲ್ಲಿ ಕಾರು ಮಾರಾಟ ಪ್ರಮಾಣವು ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದ್ದು, ಮಾಹಾನಗರಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ವಿಭಾಗದಲ್ಲೂ ಕೂಡಾ ಕಾರು ಖರೀದಿಯ ಭರಾಟೆ ಜೋರಾಗುತ್ತಿದೆ. ಇದಕ್ಕಾಗಿ ಹೊಸ ಯೋಜನೆಗಳನ್ನು ರೂಪಿಸುತ್ತಿರುವ ಫ್ರೆಂಚ್ ಆಟೋ ಉತ್ಪಾದನಾ ಕಂಪನಿಯಾದ ರೆನಾಲ್ಟ್ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಎಂಟ್ರಿ ಲೆವಲ್ ಕಾರುಗಳ ಬಿಡುಗಡೆಗೆ ಮಾಡುತ್ತಿದೆ.

17 ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ ರೆನಾಲ್ಟ್

ಸದ್ಯ ಮಾರುಕಟ್ಟೆಯಲ್ಲಿ ಕ್ವಿಡ್, ಟ್ರೈಬರ್, ಡಸ್ಟರ್ ಮತ್ತು ಕ್ಯಾಪ್ಚರ್ ಕಾರುಗಳನ್ನು ಮಾರಾಟ ಮಾಡುತ್ತಿರುವ ರೆನಾಲ್ಟ್ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಜೆಟ್ ಬೆಲೆಯಲ್ಲಿಯೇ ಬಿಡುಗಡೆ ಮಾಡುವ ಇರಾದೆಯಲ್ಲಿದೆ.

17 ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ ರೆನಾಲ್ಟ್

ಇದಕ್ಕಾಗಿ ವಿವಿಧ ಹಂತದ ಮಾರುಕಟ್ಟೆ ಅಧ್ಯಯನ ನಡೆಸಿರುವ ರೆನಾಲ್ಟ್ ಕಂಪನಿಯು ಹೊಸ ಕಾರುಗಳ ಉತ್ಪನ್ನಗಳೊಂದಿಗೆ ಹೊಸದಾಗಿ 330 ಹೊಸ ಕಾರು ಮಾರಾಟ ಮಳಿಗೆಗಳನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತೆರೆಯಲು ಸಿದ್ದವಾಗಿವೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

17 ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ ರೆನಾಲ್ಟ್

ಗ್ರಾಮೀಣ ವಿಭಾಗದ ಗ್ರಾಹಕರನ್ನೇ ಗುರಿಯಾಗಿಸಿ ವಿವಿಧ ಮಾದರಿಯ ಬಜೆಟ್ ಕಾರುಗಳನ್ನು ಸಿದ್ದಪಡಿಸುತ್ತಿರುವುದಾಗಿ ಸಂದರ್ಶನದೊಂದರಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಮಾರುತಿ ಸುಜುಕಿ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

17 ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ ರೆನಾಲ್ಟ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟ್ರೈಬರ್ ಮತ್ತು ಕ್ವಿಡ್ ಕಾರು ಮಾದರಿಗಳ ಮಾರಾಟ ಮೂಲಕ ಕಾರು ಮಾರಾಟದಲ್ಲಿ ಟಾಪ್ 6 ಸ್ಥಾನಕ್ಕೇರಿರುವ ರೆನಾಲ್ಟ್ ಕಂಪನಿಯು ಶೀಘ್ರದಲ್ಲೇ ಟ್ರೈಬರ್ ಟರ್ಬೋ ಪೆಟ್ರೋಲ್, ಕಿಗರ್ ಕಂಪ್ಯಾಕ್ಟ್ ಎಸ‌್‌ಯುವಿ, ಡಸ್ಟರ್ ಟರ್ಬೋ ಪೆಟ್ರೋಲ್ ಮತ್ತು ಕ್ಯಾಪ್ಟರ್ ಬಿಎಸ್-6 ಮಾದರಿಯು ಬಿಡುಗಡೆಯಾಗಿ ಸಿದ್ದವಾಗಿವೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

17 ಹೊಸ ಕಾರು ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ ರೆನಾಲ್ಟ್

ಕಿಗರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300 ಮತ್ತು ಟಾಟಾ ನೆಕ್ಸಾನ್ ಕಾರುಗಳಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿದ್ದು, ಡಸ್ಟರ್ ಟರ್ಬೋ ಪೆಟ್ರೋಲ್ ಮಾದರಿಯು ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಗಮನಸೆಳೆಯಲಿದೆ.

More from DriveSpark

Article Published On: Monday, August 10, 2020, 10:32 [IST]
English summary
Renault Adds 17 Dealerships In 4 Months In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+