2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿರುವ ಸ್ಕೋಡಾ ಕಾರುಗಳಿವು

2020ರ ಆಟೋ ಎಕ್ಸ್‌ಪೋದಲ್ಲಿ ಸ್ಕೋಡಾ ಕಂಪನಿಯು ತನ್ನ ಹೊಸ ಐದು ಕಾರುಗಳನ್ನು ಪ್ರದರ್ಶಿಸಲಿದೆ. ಇವುಗಳು ಭಾರತದಲ್ಲಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಕಾರುಗಳಾಗಿವೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿರುವ ಸ್ಕೋಡಾ ಕಾರುಗಳಿವು

ಸ್ಕೋಡಾ ಇಂಡಿಯಾದ ಸೆಲ್ಸ್, ಸರ್ವಿಸ್ ಮತ್ತು ಮಾರ್ಕೆಟಿಂಗ್ ನಿರ್ದೇಶಕರಾದ ಝಾಕ್ ಹೋಲಿಸ್ ಅವರು ತಮ್ಮ 2.0 ಕಾರ್ಪೊರೇಟ್ ಕಾರ್ಯತಂತ್ರದ ಭಾಗವಾಗಿ ಕಂಪನಿಯು ಅನೇಕ ಮಾದರಿಗಳ ಉತ್ಪಾದನೆಯನ್ನು ಪ್ರಾರಂಭಿಸುದಾಗಿ ಈ ಹಿಂದೆ ಹೇಳಿದ್ದರು. ಇದೀಗ 2020ರ ಆಟೋ ಎಕ್ಸ್‌ಪೋದಲ್ಲಿ ಸ್ಕೋಡಾ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಐದು ಕಾರುಗಳನ್ನು ಪ್ರದರ್ಶಿಸಲಿದೆ ಎಂದು ನಿರೀಕ್ಷಿಸಬಹುದು.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿರುವ ಸ್ಕೋಡಾ ಕಾರುಗಳಿವು

ವಿಷನ್ ಇನ್ ಕಾನ್ಸೆಪ್ಟ್

ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ತಮ್ಮ ವಿಷನ್ ಇನ್ ಕಾನ್ಸೆಪ್ಟ್ ಅನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಈ ವಾಹನವನ್ನು ಎಂ‍‍ಕ್ಯೂಬಿ ಎಒ ಇನ್ ಎಸ್‍‍ಯುವಿ ಎಂದು ಕೋಡ್ ಹೆಸರನ್ನು ಇಡಲಾಗಿತ್ತು. ನಂತರ ಇದನ್ನು ಅಧಿಕೃತವಾಗಿ ವಿಷನ್ ಇನ್ ಎಂದು ಹೆಸರು ಇಡಲಾಗಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿರುವ ಸ್ಕೋಡಾ ಕಾರುಗಳಿವು

ಸ್ಕೋಡಾ ಕರೋಕ್

ಆಟೋ ಎಕ್ಸ್‌ಪೋ 2020 ನಲ್ಲಿ ಸ್ಕೋಡಾ ಪ್ರದರ್ಶಿಸುವ ಎರಡನೇ ವಾಹನವೆಂದರೆ ಕರೋಕ್ ಎಸ್‌ಯುವಿಯಾಗಿದೆ. ಕರೋಕ್ ಸಿಬಿಯು ಮಾರ್ಗದ ಮೂಲಕ ಈ ಕಾರನ್ನು ಭಾರತದಲ್ಲಿ ವಿತರಿಸಲಾಗುತ್ತದೆ. ಸ್ಕೋಡಾ ಕರೋಕ್ ಎಸ್‍‍ಯುವಿಯು ಜೀಪ್ ಕಂಪಾಸ್‍‍ಗೆ ಪೈಪೋಟಿಯನ್ನು ನೀಡಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿರುವ ಸ್ಕೋಡಾ ಕಾರುಗಳಿವು

ಕರೋಕ್ ಎಸ್‍‍ಯುವಿಯು 1.5 ಲೀಟರ್ ಪೆಟ್ರೋಲ್ ಎಂಜಿನ್‍‍ನೊಂದಿಗೆ ಬಿಡುಗಡೆಯಾಗಲಿದೆ. ಈ ಎಂಜಿನ್ 146 ಬಿ‍‍ಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು 7 ಸ್ಪೀಡ್ ಡಿಸಿ‍ಟಿ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗುತ್ತದೆ. ಕರೋಕ್ ಎಸ್‍ಯುವಿಯು ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂಬ ನಿರೀಕ್ಷೆಗಳಿವೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿರುವ ಸ್ಕೋಡಾ ಕಾರುಗಳಿವು

ರ‍್ಯಾಪಿಡ್ ಫೇಸ್‍ಲಿಫ್ಟ್

ಇದರೊಂದಿಗೆ 2020ರ ಆಟೋ ಎಕ್ಸ್‌ಪೋದಲ್ಲಿ ರ‍್ಯಾಪಿಡ್ ಫೇಸ್‍ಲಿಫ್ಟ್ ಕಾರ್ ಅನ್ನು ಪ್ರದರ್ಶಿಸಲಿದೆ. ರ‍್ಯಾಪಿಡ್ ಫೇಸ್‍‍ಲಿಫ್ಟ್ ಸ್ಥಳೀಯವಾಗಿ ತಯಾರಿಸಿದ ಹೊಸ 1.0 ಲೀಟರ್ ಟಿಎಸ್‍ಐ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿರುವ ಸ್ಕೋಡಾ ಕಾರುಗಳಿವು

ಈ ಎಂಜಿನ್ 113 ಬಿ‍‍ಹೆಚ್‍‍ಪಿ ಪವರ್ ಮತ್ತು 200 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು 7 ಸ್ಪೀಡ್ ಡಿ‍ಎಸ್‍ಜಿ ಆಟೋ‍‍ಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಸ್ಕೋಡಾ ಎಂಕ್ಯೂಬಿ ಎಒ ಐಎನ್ ಪ್ಲಾಟ್‍‍ಫಾರಂ ಅನ್ನು ಆಧರಿಸಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿರುವ ಸ್ಕೋಡಾ ಕಾರುಗಳಿವು

2020ರ ಸೂಪರ್ಬ್ ಎಕ್ಸಿಕ್ಯೂಟಿವ್ ಸೆಡಾನ್

ಸ್ಕೋಡಾ 2020ರ ಆಟೋ ಎಕ್ಸ್‌ಪೋದಲ್ಲಿ 2020ರ ಸೂಪರ್ಬ್ ಎಕ್ಸಿಕ್ಯೂಟಿವ್ ಸೆಡಾನ್ ಅನ್ನು ಪ್ರದರ್ಶಿಸಲಿದೆ. ಶೀಘ್ರದಲ್ಲೇ ಭಾರತದಲ್ಲಿ 2020ರ ಸೂಪರ್ಬ್ ಎಕ್ಸಿಕ್ಯೂಟಿವ್ ಸೆಡಾನ್ ಅನ್ನು ಬಿಡುಗಡೆಯಾಗಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿರುವ ಸ್ಕೋಡಾ ಕಾರುಗಳಿವು

ಹೊಸ ಸೂಪರ್ಬ್ ಸೆಡಾನ್ ಮೂರು ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಯಾಗಲಿದೆ. ಇದರಲ್ಲಿ 1.4 ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರ್ ಜೊತೆಗೆ ಮೈಲ್ಡ್ ಹೈಬ್ರಿಡ್ ಮತ್ತು 2.0 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಿವೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿರುವ ಸ್ಕೋಡಾ ಕಾರುಗಳಿವು

ಆಕ್ಟೀವಿಯಾ ಆರ್‍ಎಸ್

2020ರ ಆಟೋ ಎಕ್ಸ್‌ಪೋದಲ್ಲಿ ಆಕ್ಟೀವಿಯಾ ಆರ್‍ಎಸ್ 245 ಮಾದರಿಯನ್ನು ಪ್ರದರ್ಶಿಸಲಿದೆ ಮತ್ತು ಮರು ಬಿಡುಗಡೆ ಮಾಡಲಿದೆ. ಈ ಮಾದರಿ ಎಷ್ಟು ಜನಪ್ರಿಯವಾಗಿದೆ ಎಂದರೆ ಕಳೆದ ಬಾರಿ ಅದನ್ನು ಬಿಡುಗಡೆಗೊಳಿಸಿದಾಗ ವಾರದೊಳಗೆ ಮಾರಾಟವಾಗಿತ್ತು.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿರುವ ಸ್ಕೋಡಾ ಕಾರುಗಳಿವು

ಆಕ್ಟೀವಿಯಾ ಆರ್‍ಎಸ್ 245 ಕಾರಿನಲ್ಲಿ 2.0 ಲೀಟರ್ ಟರ್ಬೋ-ಚಾಜ್ಡ್ ಟಿಎಸ್ಐ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 245 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಸ್ಕೋಡಾ ಕಾರುಗಳ ಸರಣಿಯಲ್ಲಿ ದುಬಾರಿ ಕಾರುಗಳಲ್ಲಿ ಒಂದಾಗಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿರುವ ಸ್ಕೋಡಾ ಕಾರುಗಳಿವು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ವಾಹನ ತಯಾರಕರು ಸಾಮಾನ್ಯವಾಗಿ ಯಾವುದೇ ಆಟೋ ಎಕ್ಸ್ ಪೋದಲ್ಲಿ ಕೇವಲ ಒಂದಕ್ಕಿಂತ ಹೆಚ್ಚು ಮಾದರಿಗಳನ್ನು ಪ್ರದರ್ಶಿಸುತ್ತಾರೆ. ಕಂಪನಿಯು ಶೀಘ್ರದಲ್ಲೇ ಬಿಡುಗಡೆ ಮಾಡಲಿರುವ ಕಾರುಗಳ ಬಗ್ಗೆ ಗ್ರಾಹಕರಲ್ಲಿ ಕುತೂಹಲವನ್ನು ಮೂಡಿಸುವ ಉದ್ದೇಶವಾಗಿದೆ. 2020ರ ಆಟೋ ಎಕ್ಸ್‌ಪೋದಲ್ಲಿ ಹಲವು ಜನಪ್ರಿಯ ಕಂಪನಿಗಳು ಹೊಸ ಕಾರುಗಳನ್ನು ಪ್ರದರ್ಶಿಸುತ್ತಾರೆ.

Most Read Articles

Kannada
Read more on ಸ್ಕೋಡಾ skoda
English summary
Five New Skoda Cars Could Be Showcased At Delhi Auto Expo 2020: Details - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X