ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ ಸ್ಕೋಡಾ ಕೊಡಿಯಾಕ್ ಎಸ್‍ಯುವಿ
ಸ್ಕೋಡಾ ಆಟೋ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಪಾರುಪಾತ್ಯ ಸಾಧಿಸಲು ಸಜ್ಜಾಗುತ್ತಿದೆ. ಭಾರತದಲ್ಲಿ 2.0 ಯೋಜನೆಯಡಿ ಮುಂದಿನ ವರ್ಷದಿಂದ ಹೆಚ್ಚು ಸ್ಥಳೀಯವಾಗಿ ವಾಹನಗಳನ್ನು ಉತ್ಪಾದಿಸಲು ಪ್ರಾಮುಖ್ಯತೆಯನ್ನು ನೀಡುತ್ತದೆ.

ಮುಂಬರುವ ವರ್ಷಗಳಲ್ಲಿ ಫೋಕ್ಸ್ ವ್ಯಾಗನ್ ಕಂಪನಿಯೊಂದಿಗೆ ಜೊತೆಗೂಡಿ ಒಂದು ಬಿಲಿಯನ್ ಯುರೋಗಳಿಗಿಂತ ಹೆಚ್ಚಿನ ಹೂಡಿಕೆಯೊಂದಿಗೆ ತನ್ನ ಮಾರುಕಟ್ಟೆ ಪಾಲನ್ನು ವಿಸ್ತರಿಸಲು ಯೋಜನೆ ರೂಪಿಸಿದೆ. ಇತ್ತೀಚೆ ಸ್ಕೋಡಾ ಕರೋಕ್ ಪ್ರೀಮಿಯಂ ಎಸ್‌ಯುವಿಯನ್ನು ಪರಿಚಯಿಸಿತು ಮತ್ತು ರಾಪಿಡ್ ಸೆಡಾನ್ ಪರಿಚಯಿಸಿದ್ದರು. ಬಿಎಸ್-6 ಮಾಲಿನ್ಯ ನಿಯಮವನ್ನು ಜಾರಿಗೊಳಿಸಿದಾಗ ಅನೇಕ ಕಂಪನಿಗಳು ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿದ್ದರು. ಸ್ಕೋಡಾ ಕಂಪನಿಯು ಕೂಡ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿದರು.

ಇದೀಗ ಸ್ಕೋಡಾ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಡೀಸೆಲ್ ಎಜಿನ್ ಅನ್ನು ಅಭಿವೃದ್ದಿ ಪಡಿಸುತ್ತಿದೆ. ಕೊಡಿಯಾಕ್ ಎಸ್‍ಯುವಿಯನ್ನು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಬಹುದು.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಕೊಡಿಯಾಕ್ ಆಕರ್ಷಕ ಲುಕ್ ಮತ್ತು ನೂತನ ಫೀಚರ್ಸ್‍ಗಳನ್ನು ಬಿಡುಗಡೆಯಾಗಲಿದೆ. ಹೊಸ ಕೊಡಿಯಾಕ್ ಎಸ್‍ಯುವಿಯು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. 2020ರ ಆಟೋ ಎಕ್ಸ್ ಪೋದಲ್ಲಿ ಈ ಹೊಸ ಕೊಡಿಯಾಕ್ ಎಸ್‍ಯುವಿಯನ್ನು ಅನಾವರಣಗೊಳಿಸಲಾಗಿತ್ತು.

ಹೊಸ ಕೊಡಿಯಾಕ್ ಎಸ್‍ಯುವಿಯು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. 2020ರ ಆಟೋ ಎಕ್ಸ್ ಪೋದಲ್ಲಿ ಈ ಹೊಸ ಕೊಡಿಯಾಕ್ ಎಸ್‍ಯುವಿಯನ್ನು ಅನಾವರಣಗೊಳಿಸಲಾಗಿತ್ತು.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷ ಅನ್ನು ನೀಡಲಾಗುತ್ತದೆ. ಕೊಡಿಯಾಕ್ ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಈ ಎಸ್‍ಯುವಿಯಲ್ಲಿ 360 ಡಿಗ್ರಿ ಕ್ಯಾಮರವನ್ನು ಅಳವಡಿಸಲಾಗಿದೆ.

ಕೊಡಿಯಾಕ್ ಆಫ್-ರೋಡ್ ಫೀಚರ್ಸ್‍ಗಳನ್ನು ಹೊಂದಿದೆ. ಹೊಸ ಎಸ್‌ಯುವಿಯು ಸ್ಟೈಲ್ ಎಂಬ ಮೂಲ ಮಾದರಿ ಹಾಗೂ ಲೌರಿನ್ ಅಂಡ್ ಕ್ಲೆಮೆಂಟ್ ಎಂಬ ಟಾಪ್ ಮಾದರಿಗಳಲ್ಲಿ ಲಭ್ಯವಿದೆ. ಕೊಡಿಯಾಕ್ ಸ್ಕೌಟ್ ಈ ಸೆಗ್‍ಮೆಂಟಿನಲ್ಲಿರುವ ಇತರ ಎರಡು ರೂಪಾಂತರಗಳಿಗಿಂತ ಉತ್ತಮವಾದ ಆಫ್-ರೋಡರ್ ಆಗಿರಲಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್

ಈ ಎಸ್‍ಯುವಿನಲ್ಲಿ 18 ಇಂಚಿನ ಅಲಾಯ್ ವ್ಹೀಲ್‍ಗಳು, ಎಲ್‍ಇಡಿ ಹೆಡ್‍ಲ್ಯಾಂಪ್, ಗ್ರಿಲ್, ರೂಫ್ ರೈಲ್ಸ್, ವಿಂಡೋಸ್ ಮತ್ತು ಒಆರ್‍ವಿಎಂ ಹೌಸಿಂಗ್, ಮುಂಭಾಗ ಮತ್ತು ಹಿಂಭಾಗದ ಅಂಡರ್‍ಬಾಡಿ ಪ್ರೊಟೆಕ್ಷನ್ ಸೇರಿದಂತೆ ಹಲವಾರು ಫೀಚರ್‍ಗಳಿವೆ. ಸ್ಕೋಡಾ ಕೊಡಿಯಾಕ್ ಇಂಟಿರಿಯರ್‍ನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

ಇಂಟಿರಿಯರ್ ಪ್ರೀಮಿಯಂ ಲುಕ್ ಅನ್ನು ಹೊಂದಿದೆ. ಇಂಟಿರಿಯರ್‍ನಲ್ಲಿ ಸೀಟ್‍ಗಳು, ಏರ್‍ಬ್ಯಾಗ್‍ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಪವರ್ ಹೊಂದಾಣಿಕೆ ಮಾಡಬಹುದಾದ ಫ್ರಂಟ್ ಡ್ರೈವರ್ ಮತ್ತು ಪ್ರಯಾಣಿಕರ ಸೀಟ್‍ಗಳು ಮತ್ತು ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್‍ಗಳಿವೆ.

ಕೊಡಿಯಾಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಹೀಂದ್ರಾ ಜಿ4, ಟೊಯೋಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಕೊಡಿಯಾಕ್ ಎಸ್‍ಯುವಿಯು ಸ್ಕೋಡಾ ಕಂಪನಿಯ ಪ್ರಮುಖ ಎಸ್‍ಯುವಿಗಳಲ್ಲಿ ಒಂದಾಗಿದೆ.


Click it and Unblock the Notifications