ಹೊಸ ಸ್ಕೋಡಾ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಸ್ಕೋಡಾ ಇಂಡಿಯಾ ಕಂಪನಿಯು ತನ್ನ ರ‍್ಯಾಪಿಡ್ 1.0-ಲೀಟರ್ ಟಿಎಸ್ಐ, ಕರೋಕ್ ಎಸ್‌ಯುವಿ ಮತ್ತು ಸೂಪರ್ಬ್ ಫೇಸ್‌ಲಿಫ್ಟ್ ಮಾದರಿಗಳ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಈ ಮೂರು ಮಾದರಿಗಳು ಇದೇ ತಿಂಗಳ 26ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಹೊಸ ಸ್ಕೋಡಾ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಕರೋನಾ ಭೀತಿಯಿಂದಾಗಿ ಸ್ಕೋಡಾ ಕಂಪನಿಯು ರ‍್ಯಾಪಿಡ್ 1.0-ಲೀಟರ್ ಟಿಎಸ್ಐ, ಕರೋಕ್ ಎಸ್‌ಯುವಿ ಮತ್ತು ಸೂಪರ್ಬ್ ಫೇಸ್‌ಲಿಫ್ಟ್ ಮಾದರಿಗಳನ್ನು ಆನ್‌ಲೈನ್‌ ಮೂಲಕ ಬಿಡುಗಡೆಗೊಳಿಸಲಿದೆ. ಕಂಪನಿಯು ಈಗಾಗಲೇ ಎಲ್ಲಾ ಮೂರು ಮಾದರಿಗಳಿಗೆ ಆನ್‌ಲೈನ್ ಬುಕಿಂಗ್ ಸ್ವೀಕರಿಸಲು ಪ್ರಾರಂಭಿಸಿತ್ತು. ಈ ಕರೋಕ್ ಎಸ್‌ಯುವಿ ಮತ್ತು ಸೂಪರ್ಬ್ ಫೇಸ್‌ಲಿಫ್ಟ್ ಮಾದರಿಗಳಿಗಾಗಿ ಟೋಕನ್ ಮೊತ್ತ ರೂ.50,000 ಪಾವತಿಸಿ ಕಾಯ್ದಿರಿಸಬಹುದಾಗಿದೆ. ಇನ್ನು ಹೊಸ ರ‍್ಯಾಪಿಡ್ 1.0-ಲೀಟರ್ ಟಿಎಸ್ಐ ಕಾರಿಗಾಗಿ ರೂ.25,000 ಪಾವತಿಸಿ ಬುಕ್ಕಿಂಗ್ ಅನ್ನು ಮಾಡಿಕೊಳ್ಳಬಹುದಾಗಿದೆ.

ಹೊಸ ಸ್ಕೋಡಾ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಈ ಮೂರು ಮಾದರಿಗಳಲ್ಲಿ ರ‍್ಯಾಪಿಡ್ 1.0-ಲೀಟರ್ ಟಿಎಸ್ಐ ಬಗ್ಗೆ ಹೇಳುದಾದರೆ, ಈ 2020ರ ಸ್ಕೋಡಾ ರ‍್ಯಾಪಿಡ್ ಕಾರಿನಲ್ಲಿ ಹೊಸದಾಗಿ 1.0 ಲೀಟರ್ ಟಿ‍ಎಸ್ಐ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 115 ಬಿ‍‍ಹೆಚ್‍‍ಪಿ ಪವರ್ ಮತ್ತು 200 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಈಂಜಿನ್‍‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿರುತ್ತದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಹೊಸ ಸ್ಕೋಡಾ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಹೊಸ ಸ್ಕೋಡಾ ರ‍್ಯಾಪಿಡ್ ಮ್ಯಾಟ್ ಕಾನ್ಸೆಪ್ಟ್ ಮತ್ತು ಮಾಂಟೆ ಕಾರ್ಲೊ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಈ ಎರಡು ರೂಪಾಂತರಗಳು ವಿನ್ಯಾಸ ಬದಲಾವಣೆಗಳಿಂದ ಪ್ರತ್ಯೇಕಿಸಲಾಗಿದೆ. ಈ ರ‍್ಯಾಪಿಡ್ ಮ್ಯಾಟ್ ರೂಪಾಂತರದ ಹೆಸರೇ ಸೂಚಿಸುವಂತೆ ಮ್ಯಾಟ್ ಬ್ಲ್ಯಾಕ್ ಫಿನಿಶ್ ಜೊತೆಗೆ ಕಾಂಟ್ರಾಸ್ಟ್ ರೆಡ್ ಹೈಲೈಟ್‍ಗಳನ್ನು ಹೊಂದಿದೆ.

ಹೊಸ ಸ್ಕೋಡಾ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್ ಕಾರಿನಲ್ಲಿ ಫ್ರಂಟ್ ಗ್ರಿಲ್ ಮತ್ತು ಫ್ರಂಟ್ ಬಂಪರ್‍ನೊಂದಿಗೆ ಕ್ರೋಮ್ ಎಕ್ಸಟ್ ಒಳಗೂಂಡಿದೆ. ಈ ಐಷಾರಾಮಿ ಸೆಡಾನ್‍ನಲ್ಲಿ ಮ್ಯಾಟ್ರಿಕ್ಸ್ ತಂತ್ರಜ್ಞಾನ, ಎಲ್ಇಡಿ ಫಾಗ್ ಲ್ಯಾಂಪ್ ಮತ್ತು ಹೊಸ ಅಲಾಯ್ ವೀಲ್ ವಿನ್ಯಾಸದೊಂದಿಗೆ ಫುಲ್-ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಸಹ ಒಳಗೊಂಡಿದೆ.

MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

ಹೊಸ ಸ್ಕೋಡಾ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್ ಕಾರಿನಲ್ಲಿ 2.0-ಲೀಟರ್ ಟಿಎಸ್‌ಐ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 190 ಬಿ‍‍ಹೆಚ್‍‍ಪಿ ಪವರ್ ಮತ್ತು 320 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೊಸ ಸ್ಕೋಡಾ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್ ಕಾರಿನ ಬೆಲೆಯು ಹಿಂದಿನ ಮಾದರಿಗಿಂತ ಹೆಚ್ಚಾಗಿರಲಿದೆ. ಹೊಸ ಸ್ಕೋಡಾ ಸೂಪರ್ಬ್ ಫೇಸ್‌ಲಿಫ್ಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋಂ ಪ್ರಕಾರ ರೂ.27 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಹೊಸ ಸ್ಕೋಡಾ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಕೊನೆಯ ಮಾದರಿಯಾದ ಸ್ಕೋಡಾ ಕರೋಕ್ ಎಸ್‍‍ಯುವಿಯು ಆಕರ್ಷಕ ವಿನ್ಯಾಸವನ್ನು ಹೊಂದಿರಲಿದೆ. ಈ ಸ್ಕೋಡಾ ಕರೋಕ್ ಎಸ್‍‍ಯುವಿ ಕಂಪನಿಯ ಎಂಕ್ಯೂಬಿ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದೆ. ಈ ಹೊಸ ಕರೋಕ್ ಎಸ್‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.23 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಸ್ಕೋಡಾ ಕಾರುಗಳ ಬಿಡುಗಡೆ ದಿನಾಂಕ ಬಹಿರಂಗ

ಈ ಎಸ್‍ಯುವಿಯು 1.5 ಲೀಟರ್ ಟಿ‍ಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 150 ಬಿ‍‍ಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಡಿಎಸ್‍‍ಜಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

More from DriveSpark

Article Published On: Wednesday, May 20, 2020, 18:10 [IST]
English summary
Skoda Karoq, Rapid 1.0 TSI & Superb Facelift Launch Date Confirmed. Read in Kannada.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+