ಅನಾವರಣವಾಯ್ತು ಸ್ಕೋಡಾ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿ

ಸ್ಕೋಡಾ ಆಟೋ ಕಂಪನಿಯು ಏಳು ಸೀಟಿನ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಸೀಮಿತ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಮಾದರಿಯು ಸ್ಕೋಡಾ ಕಂಪನಿಯ ಪವರ್ ಫುಲ್ ಆರ್ಎಸ್ ಮಾದರಿಯನ್ನು ಆಧರಿಸಿದೆ.

ಅನಾವರಣವಾಯ್ತು ಸ್ಕೋಡಾ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿ

ಏಳು ಸೀಟಿನ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‌ಯುವಿ ಬ್ರಾಂಡ್‌ನ ಅತ್ಯಂತ ಪವರ್ ಫುಲ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ 2.0-ಲೀಟರ್ ನಾಲ್ಕು ಸಿಲಿಂಡರ್ ಬೈ-ಟರ್ಬೊ ಎಂಜಿನ್ ಅನ್ನು ಹೂಂದಿದೆ. ಈ ಎಂಜಿನ್ 240 ಬಿಹೆಚ್‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಏಳು ಸ್ಪೀಡಿನ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಎಡಬ್ಲ್ಯೂಡಿ ಸಿಸ್ಟಂ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

ಅನಾವರಣವಾಯ್ತು ಸ್ಕೋಡಾ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿ

ಹೊಸ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿಯು ಕೇವಲ 6.9 ಸೆಕೆಂಡುಗಳಲ್ಲಿ 0-100 ಕಿ.ಮೀ ಕ್ರಮಿಸುತ್ತದೆ. ಈ ಎಸ್‍ಯುವಿಯು 221 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಅನಾವರಣವಾಯ್ತು ಸ್ಕೋಡಾ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿ

ಕಂಪನಿಯ ಪ್ರಕಾರ, ಸ್ಕೋಡಾ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿಯು ಪ್ರತಿ ಲೀಟರ್ ಗೆ 16 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿಯಲ್ಲಿ ಕೆಲವು ಹೊಸ ಫೀಚರ್‌ಗಳನ್ನು ಅಳವಡಿಸಲಾಗಿದೆ.

ಅನಾವರಣವಾಯ್ತು ಸ್ಕೋಡಾ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿ

ಸ್ಕೋಡಾ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿಯಲ್ಲಿ ಅಸಿಸ್ಟೆಡ್ ರೈಡ್ 2.0 ಪ್ಯಾಕೇಜ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಇದರಲ್ಲಿ ಲೇನ್-ಕೀಪ್ ಅಸಿಸ್ಟ್, ಲೇನ್-ಶಿಫ್ಟ್ ಅಸಿಸ್ಟ್, ಪಾರ್ಕಿಂಗ್ ಅಸಿಸ್ಟ್, ಟ್ರಾಫಿಕ್ ಸಿಗ್ನಲ್ ರೆಕಗ್ನಿಷನ್ ಮುಂತಾದ ಫೀಚರ್‌ಗಳನ್ನು ಒಳಗೊಂಡಿದೆ.

MOST READ: ಬೆಂಗಳೂರಿನಲ್ಲಿ ತುರ್ತು ಸೇವೆ ಆರಂಭಿಸಿದ ಓಲಾ, ಉಬರ್

ಅನಾವರಣವಾಯ್ತು ಸ್ಕೋಡಾ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿ

ಇನ್ನು ಈ ಎಸ್‍ಯುವಿಯಲ್ಲಿ ಒಂಬತ್ತು ಏರ್‌ಬ್ಯಾಗ್‌ಗಳು, ಹೀಟಡ್ ಸ್ಟೀಯರಿಂಗ್ ವ್ಹೀಲ್ ಮತ್ತು ಅತ್ಯುತ್ತಮ ಗುಣಮಟ್ಟದ ಸೀಟುಗಳನ್ನು ಹೊಂದಿದೆ. ಇದರೊಂದಿಗೆ ಎಸ್‍ಯುವಿಯ ಇಂಟಿರಿಯರ್‍ನಲ್ಲಿ 9.2-ಇಂಚಿನ ದೊಡ್ಡ ಕೊಲಂಬಸ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಮುಂಭಾಗದ ಸೀಟುಗಳನ್ನು ಎಲೆಕ್ಟ್ರಾನಿಕ್ ಆಗಿ ಹೋಂದಾಣಿಕೆ ಮಾಡಬಹುದಾಗಿದೆ.

ಅನಾವರಣವಾಯ್ತು ಸ್ಕೋಡಾ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿ

ಇನ್ನು ಮೂರು-ಮಾದರಿಯ ಕ್ಲೈಮೆಂಟ್ ಕಂಟ್ರೋಲ್ ಸಿಸ್ಟಂ ಮತ್ತು ಈ ಎಸ್‍ಯುವಿಯಲ್ಲಿ ಗ್ರಾಫಿಕ್ಸ್ ಒಳಗೊಂಡ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.ಕೊಡಿಯಾಕ್ ಆರ್ಎಸ್ ಚಾಲೆಂಜ್ ಎಸ್‍ಯುವಿಯನ್ನ್ಜು ಕೇವಲ 300 ಯುನಿಟ್ ಗಳನ್ನು ಮಾತ್ರ ಉತ್ಪಾದನೆ ಮಾಡಲಾಗಿದೆ. ಇದರಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಅನುಮಾನವಾಗಿದೆ.

MOST READ: ಹೊಸ ಫೋಕ್ಸ್‌ವ್ಯಾಗನ್ ಪೊಲೊ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಅನಾವರಣವಾಯ್ತು ಸ್ಕೋಡಾ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿ

ಸ್ಕೋಡಾ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿಯ ಬೆಲೆಯು ರೂ.42 ಲಕ್ಷಗಳಾಗಿರಲಿದೆ. ಸ್ಕೋಡಾ ಕಂಪನಿಯು ‘ಆರ್‍ಎಸ್' ಬ್ಯಾಡ್ಜಿಂಗ್ ಹೊಂದಿರುವ ನಿರ್ಧಿಷ್ಟ ಕಾರ್ಯಕ್ಷಮತೆ ಆಧಾರಿತ ಮಾದರಿಯು ಕೂಡ ಇದೆ. ಭಾರತದಲ್ಲಿ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ ಮಾದರಿಯನ್ನು ಮಾತ್ರ ಬಿಡುಗಡೆಗೊಳಿಸಬಹುದು.

ಅನಾವರಣವಾಯ್ತು ಸ್ಕೋಡಾ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿ

ಹೊಸ ಸ್ಕೋಡಾ ಕೊಡಿಯಾಕ್ ಆರ್‍ಎಸ್ ಚಾಲೆಂಜ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂಬ ವದಂತಿಗಳಿವೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಬಹುದು.

Most Read Articles

Kannada
Read more on ಸ್ಕೋಡಾ skoda
English summary
Skoda Kodiaq RS Challenge Unveiled. Read in Kannada.
Story first published: Thursday, April 23, 2020, 21:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X