ಮಾನ್ಸೂನ್ ಸರ್ವೀಸ್ ಚೆಕ್ಅಪ್ ಆರಂಭಿಸಿದ ಸ್ಕೋಡಾ ಇಂಡಿಯಾ

ಮಾನ್ಸೂನ್ ಆರಂಭದ ಹಿನ್ನಲೆಯಲ್ಲಿ ಸ್ಕೋಡಾ ಇಂಡಿಯಾ ಕಂಪನಿಯು ತನ್ನ ನೆಚ್ಚಿನ ಗ್ರಾಹಕರಿಗಾಗಿ ಮನೆಬಾಗಿಗೆ ಮಾನ್ಸೂನ್ ಸರ್ವೀಸ್ ಚೆಕ್ಅಪ್ ಅಭಿಯಾನಕ್ಕೆ ಚಾಲನೆ ನೀಡಿದ್ದು, ಜುಲೈ 20ರಿಂದ ಅಗಸ್ಟ್ 20ರ ತನಕ ಮಾನ್ಸೂನ್ ಸರ್ವೀಸ್ ಚೆಕ್ಅಪ್ ಲಭ್ಯವಿರಲಿದೆ.

ಮಾನ್ಸೂನ್ ಸರ್ವೀಸ್ ಚೆಕ್ಅಪ್ ಆರಂಭಿಸಿದ ಸ್ಕೋಡಾ ಇಂಡಿಯಾ

ದೇಶಾದ್ಯಂತ ಸದ್ಯ ಕರೋನಾ ವೈರಸ್ ಹೆಚ್ಚುತ್ತಿರುವುದರಿಂದ ಹಲವು ರಾಜ್ಯಗಳಲ್ಲಿ ಎರಡನೇ ಹಂತದ ಲಾಕ್‌ಡೌನ್ ವಿಧಿಸಲಾಗಿದ್ದು, ಲಾಕ್‌ಡೌನ್‌ನಿಂದಾಗಿ ವಾಹನಗಳನ್ನು ಒಂದೇ ಬದಿ ಧೀರ್ಘಾವಧಿಯ ತನಕ ಪಾರ್ಕ್ ಮಾಡುವುದರಿಂದ ತಾಂತ್ರಿಕ ತೊಂದರೆಗಳು ಉಂಟಾಗುವುದು ಸಾಮಾನ್ಯ. ಅದರಲ್ಲೂ ಇದು ಮಾನ್ಸೂನ್ ಅವಧಿಯಾಗಿರುವುದರಿಂದ ಮಳೆ ನೀರಿನ ಪರಿಣಾಮ ಎಂಜಿನ್ ತುಕ್ಕು ಹಿಡಿಯುವ ಸಾಧ್ಯತೆಗಳು ಹೆಚ್ಚಿದ್ದು, ಈ ಕಾರಣಕ್ಕೆ ಹೊಸ ಸುರಕ್ಷಾ ಮಾರ್ಗಸೂಚಿಗಳೊಂದಿಗೆ ಸ್ಕೋಡಾ ಕಂಪನಿಯು ಸರ್ವೀಸ್ ಚೆಕ್‌ಅಪ್ ಅಭಿಯಾನವನ್ನು ಆರಂಭಿಸಿದೆ.

ಮಾನ್ಸೂನ್ ಸರ್ವೀಸ್ ಚೆಕ್ಅಪ್ ಆರಂಭಿಸಿದ ಸ್ಕೋಡಾ ಇಂಡಿಯಾ

ಜುಲೈ 20ರಿಂದ ಅಗಸ್ಟ್ 20ರ ತನಕ ಲಭ್ಯವಿರುವ ಸ್ಕೋಡಾ ಮಾನ್ಸೂನ್ ಸರ್ವೀಸ್ ಚೆಕ್ಅಪ್‌ನಲ್ಲಿ ಕೆಲವು ತಾಂತ್ರಿಕ ಅಂಶಗಳ ಸೇವೆಗಳನ್ನು ಉಚಿತವಾಗಿ ನೀಡಿದ್ದು, ಇನ್ನುಳಿದ ತಾಂತ್ರಿಕ ಸೇವೆಗಳ ಮೇಲೆ ಶೇ.15ರಿಂದ ಶೇ.20 ಸರ್ವೀಸ್ ಚಾರ್ಜ್ ವಿನಾಯ್ತಿ ನೀಡಲಾಗಿದೆ.

ಮಾನ್ಸೂನ್ ಸರ್ವೀಸ್ ಚೆಕ್ಅಪ್ ಆರಂಭಿಸಿದ ಸ್ಕೋಡಾ ಇಂಡಿಯಾ

ಮಾನ್ಸೂನ್ ಸರ್ವೀಸ್ ಚೆಕ್ಅಪ್‌ನಲ್ಲಿ ಕಾರ್ ಸ್ಯಾನಿಟೈಜ್ ಕೂಡಾ ಲಭ್ಯವಿದ್ದು, ಕರೋನಾ ವೈರಸ್ ಹೆಚ್ಚುತ್ತಿರುವ ಪರಿಣಾಮ ಗ್ರಾಹಕರ ಬೇಡಿಕೆಯ ಆದ್ಯತೆ ಮೇರೆಗೆ ಮನೆ ಬಾಗಿಲಿಗೆಯೇ ಸೇವೆಗಳನ್ನು ಒದಗಿಸಲಾಗುತ್ತಿದೆ.

ಮಾನ್ಸೂನ್ ಸರ್ವೀಸ್ ಚೆಕ್ಅಪ್ ಆರಂಭಿಸಿದ ಸ್ಕೋಡಾ ಇಂಡಿಯಾ

ಇನ್ನು ಸ್ಕೋಡಾ ಇಂಡಿಯಾ ಕಂಪನಿಯು ಭಾರತದಲ್ಲಿ ಹೊಸ ಕಾರು ಮಾರಾಟದಲ್ಲಿ ಭಾರೀ ಬದಲಾವಣೆಯೊಂದಿಗೆ ಗ್ರಾಹಕರ ಪ್ರಮುಖ ಆಕರ್ಷಣೆಯಾಗುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಬಿಎಸ್-6 ರ‍್ಯಾಪಿಡ್ ಸೆಡಾನ್ ಮಾದರಿಯು ಭರ್ಜರಿ ಬೇಡಿಕೆ ಪಡೆದುಕೊಂಡಿದೆ.

ಮಾನ್ಸೂನ್ ಸರ್ವೀಸ್ ಚೆಕ್ಅಪ್ ಆರಂಭಿಸಿದ ಸ್ಕೋಡಾ ಇಂಡಿಯಾ

ಮಧ್ಯಮ ಕ್ರಮಾಂಕದ ಸೆಡಾನ್ ಕಾರುಗಳಲ್ಲೇ ಅತಿ ಕಡಿಮೆ ಬೆಲೆಯೊಂದಿಗೆ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿರುವ ರ‍್ಯಾಪಿಡ್ ಸೆಡಾನ್ ಕಾರು ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.11.79 ಲಕ್ಷ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಮಾನ್ಸೂನ್ ಸರ್ವೀಸ್ ಚೆಕ್ಅಪ್ ಆರಂಭಿಸಿದ ಸ್ಕೋಡಾ ಇಂಡಿಯಾ

ಬಿಎಸ್-6 ರ‍್ಯಾಪಿಡ್ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ರೈಡರ್, ರೈಡರ್ ಪ್ಲಸ್, ಆ್ಯಂಬಿಯೆಷನ್, ಆನೆಕ್ಸ್, ಸ್ಟೈಲ್ ಮತ್ತು ಮಾಂಟೆ ಕಾರ್ಲೋ ಆವೃತ್ತಿಗಳೊಂದಿಗೆ ಮಾರಾಟವಾಗುತ್ತಿದ್ದು, ಹೊಸ ಕಾರು ಈ ಬಾರಿ 1.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಅತ್ಯುತ್ತಮ ಮೈಲೇಜ್ ಪಡೆದುಕೊಂಡಿದೆ.

ಮಾನ್ಸೂನ್ ಸರ್ವೀಸ್ ಚೆಕ್ಅಪ್ ಆರಂಭಿಸಿದ ಸ್ಕೋಡಾ ಇಂಡಿಯಾ

ಹೊಸ ಕಾರಿನಲ್ಲಿ ಜೋಡಣೆ ಮಾಡಿರುವ 999-ಸಿಸಿ ಟರ್ಬೋ ಚಾರ್ಜ್ಡ್ ತ್ರಿ ಸಿಲಿಂಡರ್ ಪೆಟ್ರೋಲ್ ಮಾದರಿಯು 108-ಬಿಎಚ್‌ಪಿ ಮತ್ತು 175-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಹೊಸ ಕಾರಿನಲ್ಲಿ ಜೋಡಣೆ ಮಾಡಿರುವ 999-ಸಿಸಿ ಟರ್ಬೋ ಚಾರ್ಜ್ಡ್ ತ್ರಿ ಸಿಲಿಂಡರ್ ಪೆಟ್ರೋಲ್ ಮಾದರಿಯು 108-ಬಿಎಚ್‌ಪಿ ಮತ್ತು 175-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್‌

ಮಾನ್ಸೂನ್ ಸರ್ವೀಸ್ ಚೆಕ್ಅಪ್ ಆರಂಭಿಸಿದ ಸ್ಕೋಡಾ ಇಂಡಿಯಾ

ಹೊಸ ಕಾರಿನಲ್ಲಿ ಸದ್ಯಕ್ಕೆ ಮ್ಯಾನುವಲ್ ಆವೃತ್ತಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಆಟೋ ಮ್ಯಾಟಿಕ್ ಆವೃತ್ತಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಹೊಸ ಎಂಜಿನ್ ಮಾದರಿಯನ್ನು ಫೋಕ್ಸ್‌ವ್ಯಾಗನ್ ವೆಂಟೊ ಕಾರಿನಿಂದ ಎರವಲು ಪಡೆದುಕೊಳ್ಳಲಾಗಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Launches Monsoon Service Check-Up Camp. Read in Kannda.
Story first published: Wednesday, July 22, 2020, 14:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X