ಸ್ಕೋಡಾ ಬಿಡುಗಡೆ ಮಾಡಲಿರುವ ಹೊಸ ಎಸ್‍ಯುವಿಗಳಿವು

ದೇಶಿಯ ಮಾರುಕಟ್ಟೆಯಲ್ಲಿ ಒಂದು ಕಾಲದಲ್ಲಿ ಪ್ರಾಬಲ್ಯ ಮೆರೆಯುತ್ತಿದ್ದ ಸ್ಕೋಡಾ ನಿಧಾನವಾಗಿ ತನ್ನ ಬೇಡಿಕೆಯನ್ನು ಕಳೆದುಕೊಂಡಿದೆ. ಇದರಿಂದ ಮತ್ತೆ ಭಾರತದ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ಸಜ್ಜಾಗುತ್ತಿದೆ. ಸ್ಕೋಡಾ ಕಂಪನಿಯು ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸಲಿರುವ ಎಸ್‍ಯುವಿಯ ಮಾಹಿತಿ ಇಲ್ಲಿದೆ.

ಸ್ಕೋಡಾ ಬಿಡುಗಡೆ ಮಾಡಲಿರುವ ಎಸ್‍ಯುವಿಗಳಿವು

ಸ್ಕೋಡಾ ಕರೋಕ್

ಸ್ಕೋಡಾ ಆಟೋ ಇಂಡಿಯಾ ಕಂಪನಿಯು ತನ್ನ ಹೊಸ ಕರೋಕ್ ಎಸ್‍‍‍ಯುವಿಯನ್ನು ಇತ್ತೀಚಿಗೆ ದೆಹಲಿಯಲ್ಲಿ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಈ ಹೊಸ ಕರೋಕ್ ಎಸ್‍‍‍ಯುವಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಸ್ಕೋಡಾ ಕಂಪನಿಯು ತನ್ನ ಹೊಸ ಕರೋಕ್ ಎಸ್‍‍‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಕೂಡ ಪ್ರಾರಂಭಿಸಿದೆ.

ಸ್ಕೋಡಾ ಬಿಡುಗಡೆ ಮಾಡಲಿರುವ ಎಸ್‍ಯುವಿಗಳಿವು

ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿಗಾಗಿ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಹೊಸ ಸ್ಕೋಡಾ ಕರೋಕ್ ಆರಂಭದಲ್ಲಿ (ಸಿಬಿ‍ಯು) ಕಂಪ್ಲೀಟ್ ಬಿಲ್ಟ್ ಯುನಿಟ್ ಆಗಿ ಲಭ್ಯವಿರುತ್ತದೆ. ಹೊಸ ಸ್ಕೋಡಾ ಕರೋಕ್ ಎಸ್‍ಯುವಿಯನ್ನು ಕೇವಲ ಪೆಟ್ರೋಲ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ.

ಸ್ಕೋಡಾ ಬಿಡುಗಡೆ ಮಾಡಲಿರುವ ಎಸ್‍ಯುವಿಗಳಿವು

ಈ ಎಸ್‍ಯುವಿಯು 1.5 ಲೀಟರ್ ಟಿ‍ಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 150 ಬಿ‍‍ಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಡಿಎಸ್‍‍ಜಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಸ್ಕೋಡಾ ಬಿಡುಗಡೆ ಮಾಡಲಿರುವ ಎಸ್‍ಯುವಿಗಳಿವು

ವಿಷನ್ ಇನ್ ಕಾನ್ಸೆಪ್ಟ್ ಎಸ್‍ಯುವಿ

ಸ್ಕೋಡಾ ಆಟೋ ಕಂಪನಿಯು ಹೊಸ ವಿಷನ್ ಇನ್ ಕಾನ್ಸೆಪ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ವಿಷನ್ ಇನ್ ಕಾನ್ಸೆಪ್ಟ್ ಎಸ್‍‍‍ಯುವಿಯನ್ನು ಭಾರತದಲ್ಲಿ ಇದೇ ವರ್ಷದಲ್ಲಿ ಅಥವಾ ಮುಂದಿನ ವರ್ಷದ ಪ್ರಾರಂಭದಲ್ಲಿ ಬಿಡುಗಡೆಗೊಳಿಸಲಿದೆ.

ಸ್ಕೋಡಾ ಬಿಡುಗಡೆ ಮಾಡಲಿರುವ ಎಸ್‍ಯುವಿಗಳಿವು

ಈ ಹೊಸ ಎಸ್‍‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಎಸ್‍‍ಯುವಿಗಳಿಗೆ ನೇರ ಪೈಪೋಟಿಯನ್ನು ನೀಡಲಿದೆ. ಸ್ಕೋಡಾ ಇಂಡಿಯಾ ವಿಡಬ್ಲ್ಯೂ ಎಂಕ್ಯೂಬಿ ಎಒ ಇನ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿ ಈ ಹೊಸ ಎಸ್‍‍‍ಯುವಿಯನ್ನು ಅಭಿವೃದ್ದಿಪಡಿಸಿದೆ.

ಸ್ಕೋಡಾ ಬಿಡುಗಡೆ ಮಾಡಲಿರುವ ಎಸ್‍ಯುವಿಗಳಿವು

ಸ್ಕೋಡಾ ವಿಷನ್ ಇನ್ ಕಾನ್ಸೆಪ್ಟ್ ಎಸ್‍ಯುವಿಯು 1.5 ಲೀಟರ್ ಟಿ‍ಎಸ್ಐ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 150 ಬಿ‍‍ಹೆಚ್‍‍ಪಿ ಪವರ್ ಮತ್ತು 250 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 7 ಸ್ಪೀಡ್ ಡಿ‍ಎಸ್‍‍ಜಿ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಹೊಸ ಐ20 ಕಾರಿನ ವಾಕ್‍ರೌಂಡ್ ವೀಡಿಯೋ ಬಿಡುಗಡೆಗೊಳಿಸಿದ ಹ್ಯುಂಡೈ

ಸ್ಕೋಡಾ ಬಿಡುಗಡೆ ಮಾಡಲಿರುವ ಎಸ್‍ಯುವಿಗಳಿವು

ಸ್ಕೋಡಾ ಕೊಡಿಯಾಕ್ ಎಸ್‍‍ಯುವಿ

ಸ್ಕೋಡಾ ಆಟೋ ಇಂಡಿಯಾ ಕಂಪನಿಯು ತನ್ನ ಹೊಸ ಕೊಡಿಯಾಕ್ ಎಸ್‍‍‍ಯುವಿಯನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಈ ಎಸ್‍ಯುವಿಯು ಆಕರ್ಷಕ ಲುಕ್ ಮತ್ತು ಉನ್ನತ ಫೀಚರ್ಸ್‍‍ಗಳನ್ನು ಹೊಂದಿರುವ ಪ್ರೀಮಿಯಂ ಎಸ್‍ಯುವಿಯಾಗಿದೆ.

MOST READ: ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಮಾರುತಿ ಸುಜುಕಿ ಜಿಮ್ನಿ ಹೀಗಿರಲಿದೆ

ಸ್ಕೋಡಾ ಬಿಡುಗಡೆ ಮಾಡಲಿರುವ ಎಸ್‍ಯುವಿಗಳಿವು

ಈ ಎಸ್‍‍ಯುವಿಯ ಅಳವಡಿಸಿರುವ 2.0 ಲೀಟರ್ ಟಿ‍ಎಸ್‍ಐ ಎಂಜಿನ್ 190 ಬಿ‍‍ಹೆಚ್‍ಪಿ ಪವರ್ ಮತ್ತು 320 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 7 ಸ್ಪೀಡ್ ಡಿ‍‍ಎಸ್‍‍ಜಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಕೊಡಿಯಾಕ್ ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್

ಸ್ಕೋಡಾ ಬಿಡುಗಡೆ ಮಾಡಲಿರುವ ಎಸ್‍ಯುವಿಗಳಿವು

ಕೊಡಿಯಾಕ್ ಎಸ್‍ಯುವಿಯು ಸ್ಕೋಡಾ ಕಂಪನಿಯ ಪ್ರಮುಖ ಎಸ್‍‍ಯು‍ವಿಗಳಲ್ಲಿ ಒಂದಾಗಿದೆ. ಕೊಡಿಯಾಕ್ ಎಸ್‍‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಜಿ4, ಟೊಯೋಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Monday, March 30, 2020, 13:05 [IST]
English summary
New Skoda SUVs for India. Read in Kannada.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+