ಭರ್ಜರಿಯಾಗಿ ಮಾರಾಟವಾಯ್ತು ಸ್ಕೊಡಾದ ಈ ಕಾರು

ಸ್ಕೋಡಾ ಆಕ್ಟೀವಿಯಾ ಆರ್ಎಸ್ 245 ಕಾರು ಉತ್ತಮವಾಗಿ ಮಾರಾಟವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಆಕ್ಟೀವಿಯಾ ಆರ್‍ಎಸ್ 245 ಕಾರನ್ನು ಕೇವಲ 200 ಯುನಿ‍‍ಟ್‍‍ಗಳಿಗೆ ಸೀಮಿತಗೊಳಿಸಿ ಬಿಡುಗಡೆಗೊಳಿಸಿತ್ತು. ಸ್ಕೋಡಾ ಇಂಡಿಯಾ ಕಂಪನಿಯು ಆಕ್ಟೀವಿಯಾ ಆರ್‍ಎಸ್ 245 ಕಾರಿನ ಬುಕ್ಕಿಂಗ್ ಅನ್ನು ಕ್ಲೋಸ್ ಮಾಡಿದೆ.

ಭರ್ಜರಿಯಾಗಿ ಮಾರಾಟವಾಯ್ತು ಸ್ಕೊಡಾದ ಈ ಕಾರು

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.36 ಲಕ್ಷಗಳಾಗಿದೆ. ಈ ಹೊಸ ಕಾರಿಗಾಗಿ ಇತ್ತೀಚೆಗೆ ಸ್ಕೋಡಾ ಕಂಪನಿಯು ಅಧಿಕೃತ ಬುಕ್ಕಿಂಗ್ ಅನ್ನು ಪ್ರಾರಂಭಿಸಿದರು. ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಆಕ್ಟೀವಿಯಾ ಆರ್‍ಎಸ್ 245 ಕಾರನ್ನು ಕೇವಲ 200 ಯುನಿ‍‍ಟ್‍‍ಗಳಿಗೆ ಸೀಮಿತಗೊಳಿಸಿ ಬಿಡುಗಡೆಗೊಳಿಸಿತ್ತು. ಸ್ಕೋಡಾ ಆಕ್ಟೇವಿಯಾ ಆರ್ಎಸ್ 245 ಕಾರು ಡೀಲರ್ ಬಳಿ ತಲುಪಿದೆ. ಲಾಕ್‌ಡೌನ್ ಮುಗಿದ ಬಳಿಕ ಗ್ರಾಹಕರಿಗೆ ಈ ಕಾರಿನ್ನು ವಿತರಿಸಲಿದೆ.

ಭರ್ಜರಿಯಾಗಿ ಮಾರಾಟವಾಯ್ತು ಸ್ಕೊಡಾದ ಈ ಕಾರು

ಆಕ್ಟೀವಿಯಾ ಆರ್‍ಎಸ್ 245 ಕಾರು ರ್ಯಾಲಿ ಗ್ರೀನ್, ರೇಸ್ ಬ್ಲೂ, ಕೊರಿಡಾ ರೆಡ್, ಮ್ಯಾಜಿಕ್ ಬ್ಲ್ಯಾಕ್ ಮತ್ತು ಕ್ಯಾಂಡಿ ವೈಟ್ ಎಂಬ 5 ಬಣ್ಣಗಳನ್ನು ಹೊಂದಿದೆ. ಆರ್‍ಎಸ್ ಮಾದರಿಯು ಪ್ರಸ್ತುತ ತಲೆಮಾರಿನ ಸ್ಕೋಡಾ ಆಕ್ಟೀವಿಯಾವನ್ನು ಆಧರಿಸಿದೆ.

MOST READ: ಬಿಡುಗಡೆಯಾಯ್ತು ಬಿಎಸ್-6 ಮಹೀಂದ್ರಾ ಅಲ್ಟುರಾಸ್ ಜಿ4 ಎಸ್‍ಯುವಿ

ಭರ್ಜರಿಯಾಗಿ ಮಾರಾಟವಾಯ್ತು ಸ್ಕೊಡಾದ ಈ ಕಾರು

ಸ್ಕೋಡಾ ಅಕ್ಟೀವಿಯಾ ಆರ್‍ಎಸ್ ಕಾರ್ ಅನ್ನು ಮೊದಲ ಬಾರಿಗೆ 2017ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಆಕ್ಟೀವಿಯಾ ಆರ್‍ಎಸ್ ಮಾದರಿಯು ಬಿಡುಗಡೆಯಾದ ಮೊದಲ ವಾರದಲ್ಲಿ 250 ಯು‍‍ನಿ‍‍ಟ್‍ಗಳು ಮಾರಾಟವಾಗಿದ್ದವು. ಸ್ಕೋಡಾ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಕಾರುಗಳಲ್ಲಿ ಆಕ್ಟೀವಿಯಾ ಆರ್‍ಎಸ್ ಒಂದಾಗಿದೆ.

ಭರ್ಜರಿಯಾಗಿ ಮಾರಾಟವಾಯ್ತು ಸ್ಕೊಡಾದ ಈ ಕಾರು

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಸೆಡಾನ್ ಇಂಟಿಗ್ರೇಟೆಡ್ ಡೇಟೈಮ್ ರನ್ನಿಂಗ್ ಲೈಟ್, ಟ್ರೆಪೆಜ್ ಆಕರಾದ ಎಕ್ಸಾಸ್ಟ್ ಟಿಪ್ಸ್ ಮತ್ತು ಮುಂಭಾಗದಲ್ಲಿ ಬ್ಲ್ಯಾಕ್ ಗ್ರಿಲ್‍‍ನಲ್ಲಿ ಆರ್‍ಎಸ್ ಬ್ಯಾಡ್ಜ್ ಹೊಂದಿರುವ ಡ್ಯುಯಲ್ ಸ್ಪ್ಲಿಟ್ ಹೆಡ್‍‍ಲ್ಯಾಂಪ್‍‍ಗಳನ್ನು ಒಳಗೊಂಡಿದೆ. ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಬ್ಲ್ಯಾಕ್ ಗ್ರಿಲ್, ಮ್ಯಾಚಿಂಗ್ ಒಆ‍‍ರ್‍‍ವಿಎಂ‍ಗಳು ದೊಡ್ಡದಾದ 19 ಇಂಚಿನ ಅಲಾಯ್ ವ್ಹೀಲ್‍‍ಗಳು, ವೈಡರ್ ಏ‍‍ರ್ ಡ್ಯಾಮ್‍‍ಗಳು ಮತ್ತು ಫ್ರಂಟ್ ಬಂಪರ್‍‍ಗಳನ್ನು ಹೊಂದಿವೆ.

MOST READ: ದಟ್ಸನ್ ರೆಡಿ ಗೋ ಫೇಸ್‍‍ಲಿಫ್ಟ್ ಕಾರಿನ ಟೀಸರ್ ಬಿಡುಗಡೆ

ಭರ್ಜರಿಯಾಗಿ ಮಾರಾಟವಾಯ್ತು ಸ್ಕೊಡಾದ ಈ ಕಾರು

ವಾಹನವು ಬೂಟ್ ಲಿಡ್ ಸ್ಪಾಯ್ಲರ್ ಮತ್ತು ಹಿಂಭಾಗದಲ್ಲಿ ಸಿ - ಆಕಾರಾದ ಟೇಲ್‍‍ಲ್ಯಾಂಪ್‍‍ಗಳನ್ನು ಒಳಗೊಂಡಿದೆ. ಇನ್ನೂ ಇಂಟಿರಿಯರ್‍‍ನಲ್ಲಿ ಎಲೆಕ್ಟ್ರಾನಿಕಾನಿಕಲ್ ಅಡ್ಜಂಟಬಲ್ ಫ್ರಂಟ್ ಸೀಟ್ ಮುಂಭಾಗದ ಸೀಟ್‍ ಅಲ್ಕಾಂಟರ್ ಲೆದರ್, ಸ್ಟ್ಯಾಂಡರ್ಡ್ ಲ್ಯಾಪ್ ಟೈಮರ್ ಮತ್ತು ಇಂಟರ್‍‍ನೆಟ್ ಕನೆಕ್ಟಿವಿಟಿ ಫೀಚರ್ಸ್‍‍ಗಳೊಂದಿಗೆ ಎಂಟು ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍ಮೆಂಟ್‍ ಸಿಸ್ಟಂ ಅನ್ನು ಅಳವಡಿಸಿದೆ.

ಭರ್ಜರಿಯಾಗಿ ಮಾರಾಟವಾಯ್ತು ಸ್ಕೊಡಾದ ಈ ಕಾರು

ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್ 245 ಸೆಡಾನ್ 2.0 ಲೀಟರ್ ಟಿ‍ಎಸ್‍‍ಐ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 242 ಬಿ‍‍ಹೆಚ್‍‍ಪಿ ಪವರ್ ಮತ್ತು 370 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಭರ್ಜರಿಯಾಗಿ ಮಾರಾಟವಾಯ್ತು ಸ್ಕೊಡಾದ ಈ ಕಾರು

ಈ ಎಂಜಿನ್‍‍ನೊಂದಿಗೆ 7 ಸ್ಪೀಡ್ ಡಿ‍ಎಸ್‍‍ಜಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಹೊಸ ಸ್ಕೋಡಾ ಆಕ್ಟೀವಿಯಾ ಆರ್‍ಎಸ್245 ಸೆಡಾನ್ ಕೇವಲ 6.6 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಭರ್ಜರಿಯಾಗಿ ಮಾರಾಟವಾಯ್ತು ಸ್ಕೊಡಾದ ಈ ಕಾರು

ಸ್ಕೋಡಾ ಕಂಪನಿಯ ಸರಣಿಯಲ್ಲಿರುವ ಜನಪ್ರಿಯ ಕಾರುಗಳಲ್ಲಿ ಇದು ಕೂಡ ಒಂದಾಗಿದೆ. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಸಿ-ಕ್ಲಾಸ್, ಬಿ‍ಎಂಡಬ್ಲ್ಯೂ 3 ಸೀರಿಸ್ ಮತ್ತು ಜಾಗ್ವಾರ್ ಎಕ್ಸ್‌ಇ ಕಾರುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Wednesday, April 29, 2020, 11:15 [IST]
English summary
Skoda Octavia RS 245 sold out in India. Read in Kannada.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+