ದಟ್ಸನ್ ರೆಡಿ ಗೋ ಫೇಸ್‍ಲಿಫ್ಟ್ ಕಾರಿನ ಟೀಸರ್ ಬಿಡುಗಡೆ
ದಟ್ಸನ್ ಕಂಪನಿಯು ತನ್ನ ಎಂಟ್ರಿ ಲೆವೆಲ್ ರೆಡಿ ಗೋ ಫೇಸ್‍ಲಿಫ್ಟ್ ಮಾದರಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿದೆ. ಹೊಸ ರೆಡಿ ಗೋ ಫೇಸ್‍ಲಿಫ್ಟ್ ಕಾರಿನ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ.

ದಟ್ಸನ್ ಕಂಪನಿಯು ಬಿಡುಗಡೆಗೊಳಿಸಿದ ರೆಡಿ ಗೋ ಫೇಸ್‍ಲಿಫ್ಟ್ ಕಾರಿನ ಟೀಸರ್ ಚಿತ್ರದಲ್ಲಿ ಕೆಲವು ಮಾಹಿತಿಗಳು ಬಹಿರಂಗವಾಗಿದೆ. ರೆಡಿ ಗೋ ಫೇಸ್‍ಲಿಫ್ಟ್ ಕಾರು ಟೀಸರ್ ಚಿತ್ರದಲ್ಲಿ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ರೆಡಿ ಗೋ ಫೇಸ್‍ಲಿಫ್ಟ್ ಕಾರು ಸ್ಲೀಮರ್ ಹೆಡ್ ಲ್ಯಾಂಪ್ ಸೇರಿದಂತೆ ಕಾರಿನ ಮುಂಭಾಗವನ್ನು ಟೀಸರ್ ಚಿತ್ರದಲ್ಲಿ ಪ್ರದರ್ಶಿಸಿದ್ದಾರೆ. ಹೊಸ ರೆಡಿ ಗೋ ಫೇಸ್‍ಲಿಫ್ಟ್ ಕಾರಿನ ಮುಂಭಾಗದಲ್ಲಿ ದೊಡ್ಡ ಗ್ರಿಲ್ ಅನ್ನು ಹೊಂದಿದೆ. ಈ ಕಾರಿನ ಮುಂಭಾಗದಲ್ಲಿ ಕ್ರೋಮ್ ಸರೌಂಡ್ ನೊಂದಿಗೆ ದಟ್ಸನ್ ಲೋಗೊವನ್ನು ಅಳವಡಿಸಿದ್ದಾರೆ.

ಹೊಸ ದಟ್ಸನ್ ರೆಡಿ ಗೋ ಫೇಸ್‍ಲಿಫ್ಟ್ ಕಾರಿನಲ್ಲಿ ದೊಡ್ಡ ಎಲ್ ಆಕಾರದ ಡಿಆರ್‌ಎಲ್‌ಗಳು ಹೊಂದಿದೆ. ಹೊಸ ರೆಡಿ ಗೋ ಫೇಸ್‍ಲಿಫ್ಟ್ ಕಾರಿನಲ್ಲಿ ನವೀಕರಿಸಿದ ಅಲಾಯ್ ವ್ಹೀಲ್ ಅನ್ನು ಅಳವಡಿಸಿದ್ದಾರೆ.
MOST READ: ಸ್ಥಗಿತವಾಯ್ತು ಜನಪ್ರಿಯ ಮಾರುತಿ ಆಲ್ಟೋ ಕೆ10 ಕಾರು

ದಟ್ಸನ್ ಕಂಪನಿಯು ರೆಡಿ ಗೋ ಫೇಸ್‍ಲಿಫ್ಟ್ ಕಾರನ್ನು ಇತ್ತೀಚೆಗೆ ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿತ್ತು. ಹೊಸ ರೆಡಿ ಗೋ ಫೇಸ್‍ಲಿಫ್ಟ್ ಕಾರು ಅಗ್ರೆಸಿವ್ ಲುಕ್ ಅನ್ನು ಹೊಂದಿದೆ ಎಂದು ನಿರೀಕ್ಷಿಸುತ್ತೇವೆ.

ರೆಡಿ ಗೋ ಹಿಂದಿನ ಮಾದರಿಗೆ ಹೋಲಿಸಿದರೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ ಎಂದು ನಿರೀಕ್ಷಿಸುತ್ತೇವೆ. ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಜಾರಿಗೆ ಬಂದ ಕ್ರ್ಯಾಶ್ ಟೆಸ್ಟ್ ನಿಯಮವನ್ನು ಅನುಸರಿಸಲು ಈ ಕಾರು ಹೊಸ ವಿನ್ಯಾಸವನ್ನು ಹೊಂದಿದೆ. ಈ ರೆಡಿ ಗೋ ಕಾರು ಹೊಸ ಬಿಎಸ್-6 ಮಾಲಿನ್ಯ ನಿಯಮವನ್ನು ಅನುಸರಿಸಲು ಇದು 800ಸಿಸಿ ಮತ್ತು 1.0 ಲೀಟರ್ ಎಂಜಿನ್ ಅನ್ನು ನವೀಕರಿಸಲಾಗಿದೆ.
MOST READ: ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್

ಪ್ರಸ್ತುತ ಮಾರುಕಟ್ಟೆಯಲ್ಲಿ ದಟ್ಸನ್ ರೆಡಿ ಗೋ ಕಾರು 0.8-ಲೀಟರ್ ಅಂದರೆ 799 ಸಿಸಿ ಅಥವಾ 1.0 ಲೀಟರ್ ಪೆಟ್ರೋಲ್ ಎಂಜಿನ್‍ಗಳನ್ನು ಹೊಂದಿದೆ. 799ಸಿಸಿ ಎಂಜಿನ್ 54 ಬಿಹೆಚ್‌ಪಿ ಹಾಗೂ 72 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 1.0 ಲೀಟರ್ ಎಂಜಿನ್ 68 ಬಿಹೆಚ್‌ಪಿ ಹಾಗೂ 91 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎರಡೂ ಎಂಜಿನ್‌ಗಳಲ್ಲಿ ಸ್ಟಾಂಡರ್ಡ್ 5 ಸ್ಪೀಡ್ ಗೇರ್‌ಬಾಕ್ಸ್‌ಗೆ ಅಳವಡಿಸಲಾಗಿದೆ. 1.0ಲೀಟರ್ ಎಂಜಿನ್ ಹೆಚ್ಚುವರಿಯಾಗಿ ಸ್ಮಾರ್ಟ್ ಡ್ರೈವ್ ಆಟೋ ಟ್ರಾನ್ಸ್ ಮಿಷನ್ ಹೊಂದಿರಲಿದೆ. ದಟ್ಸನ್ ರೆಡಿ ಗೋ ಅತ್ಯುತ್ತಮವಾದ ಫ್ಯೂಯಲ್ ಎಫಿಶಿಯನ್ಸಿ ಅಂಕಿಅಂಶಗಳನ್ನು ಹೊಂದಿದೆ.
MOST READ: ಹೊಸ ವಿನ್ಯಾಸದೊಂದಿಗೆ ಬಿಡುಗಡೆಯಾಗಲಿದೆ ಸ್ಕೋಡಾ ಸೂಪರ್ಬ್ ಫೇಸ್ಲಿಫ್ಟ್

ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕವು ಹಳೆಯ ಮಾದರಿಯ ರೀತಿಯಲ್ಲೇ ಪವರ್ ಅನ್ನು ಉತ್ಪಾದಿಸಬಹುದು. ಹೊಸ ರೆಡಿ ಗೋ ಫೇಸ್‍ಲಿಫ್ಟ್ ಏರ್‍ಬ್ಯಾಗ್, ಇಬಿಡಿ ಹೊಂದಿರುವ ಎಬಿಎಸ್, ರೇರ್ ಪಾರ್ಕಿಂಗ್ ಅಸಿಸ್ಟ್ ಸೆನ್ಸಾರ್, ಹೈ ಸ್ಪೀಡ್ ವಾರ್ನಿಂಗ್, ಚಾಲಕ ಹಾಗೂ ಸಹ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ರಿಮ್ಯಾಂಡರ್‍ಗಳನ್ನು ಹೊಂದಿರಲಿದೆ.

ದಟ್ಸನ್ ಕಂಪನಿಯು ರೆಡಿ ಗೋ ಫೇಸ್‍ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ.. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ರೆನಾಲ್ಟ್ ಕ್ವಿಡ್ ಕಾರಿಗೆ ಪೈಪೋಟಿಯನ್ನು ನೀಡುತ್ತದೆ.


Click it and Unblock the Notifications