ಸ್ಕೋಡಾ ವಿವಿಧ ಕಾರು ಮಾದರಿಗಳ ಮೇಲೆ 'ಸೂಪರ್ ಕೇರ್' ಸರ್ವಿಸ್ ಪ್ಯಾಕೇಜ್ ಘೋಷಣೆ

ಸ್ಕೋಡಾ ಇಂಡಿಯಾ ಕಂಪನಿಯು ಹೊಸ ಕಾರು ಖರೀದಿದಾರರು ಸೇರಿದಂತೆ ವಾರಂಟಿ ಅವಧಿಯ ಮುಕ್ತಾಯವಾದ ಕಾರು ಮಾಲೀಕರಿಗೂ ಅನ್ವಯವಾಗುವಂತೆ ವಿವಿಧ ಕಾರು ಮಾದರಿಗಳ ಮೇಲೆ ವಿಸ್ತರಿತ ಸೇವಾ ನಿರ್ವಹಣಾ ಪ್ಯಾಕೇಜ್ ಘೋಷಣೆ ಮಾಡಿದ್ದು, ಗರಿಷ್ಠ ನಾಲ್ಕು ವರ್ಷಗಳ ಅವಧಿಗೆ ಹೊಸ ವಾರಂಟಿ ಪ್ಯಾಕೇಜ್ ವಿಸ್ತರಿಸುತ್ತಿದೆ.

ಸ್ಕೋಡಾ ವಿವಿಧ ಕಾರು ಮಾದರಿಗಳ ಮೇಲೆ 'ಸೂಪರ್ ಕೇರ್' ಸರ್ವಿಸ್

ಹೊಸ ಮತ್ತು ವಾರಂಟಿ ಅವಧಿ ಮುಗಿದ ವಿವಿಧ ಕಾರು ಮಾದರಿಗಳ ಬಿಡಿಭಾಗಗಳ ಮೇಲೆ ಗರಿಷ್ಠ ಸುರಕ್ಷತೆ ಮುಂದುವರಿಸುವುದಕ್ಕಾಗಿ ಸೂಪರ್ ಕೇರ್ ವಾರಂಟಿ ಯೋಜನೆಯು ಸಾಕಷ್ಟು ಸಹಕಾರಿಯಾಗಿದ್ದು, ಹೊಸ ವಾರಂಟಿ ಯೋಜನೆ ಅಡಿ ಕಾರಿನ ಪ್ರಮುಖ ಆಕ್ಸೆಸರಿಸ್‌ಗಳ ಮೇಲೆ ಗುಣಮಟ್ಟದ ಖಾತ್ರಿ ನೀಡುತ್ತದೆ. ಹಾಗೆಯೇ ಸೂಪರ್ ಕೇರ್ ವಾರಂಟಿ ಸರ್ವಿಸ್ ಅಡಿಯಲ್ಲಿ ಸರ್ಟಿಫೈಡ್ ಮೆಕ್ಯಾನಿಕ್‌ಗಳ ಮೂಲಕವೇ ಸೇವೆಗಳನ್ನು ಒದಗಿಸಲಿದ್ದು, ಸೇವಾ ಶುಲ್ಕಗಳು ಸಾಕಷ್ಟು ವಿನಾಯ್ತಿಗೆ ಒಳಪಟ್ಟಿರುತ್ತವೆ.

ಸ್ಕೋಡಾ ವಿವಿಧ ಕಾರು ಮಾದರಿಗಳ ಮೇಲೆ 'ಸೂಪರ್ ಕೇರ್' ಸರ್ವಿಸ್

ಸೂಪರ್ ಕೇರ್ ಖರೀದಿಸುವ ಗ್ರಾಹಕರು ದೇಶದ ಯಾವುದೇ ಸ್ಕೋಡಾ ಸರ್ವಿಸ್ ಸೆಂಟರ್‌ಗಳಲ್ಲಿ ಕ್ಯಾಶ್ ಲೆಸ್ ಸೇವೆಗಳನ್ನು ಪಡೆಯಬಹುದುದಾಗಿದ್ದು, ಆಯ್ದ ಬಿಡಿಭಾಗಗಳು ಮತ್ತು ಲೆಬರ್ ಶುಲ್ಕಗಳಲ್ಲಿ ವಿನಾಯ್ತಿ ಲಭ್ಯವಿರಲಿದೆ.

ಸ್ಕೋಡಾ ವಿವಿಧ ಕಾರು ಮಾದರಿಗಳ ಮೇಲೆ 'ಸೂಪರ್ ಕೇರ್' ಸರ್ವಿಸ್

ಸೂಪರ್ ಕೇರ್ ವಿಸ್ತರಿತ ವಾರಂಟಿ ಯೋಜನೆಯು ಕಾರು ಮಾದರಿಗಳಿಗೆ ಅನುಗುಣವಾಗಿ ಆಯ್ಕೆ ಮಾಡಬಹುದಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 2 ವರ್ಷದ ಪ್ಯಾಕೇಜ್ ಮತ್ತು 4 ವರ್ಷದ ಪ್ಯಾಕೇಜ್ ಖರೀದಿ ಮಾಡಬಹುದಾಗಿದೆ.

ಸ್ಕೋಡಾ ವಿವಿಧ ಕಾರು ಮಾದರಿಗಳ ಮೇಲೆ 'ಸೂಪರ್ ಕೇರ್' ಸರ್ವಿಸ್

2 ವರ್ಷದ ಸೂಪರ್ ಕೇರ್ ಪ್ಯಾಕೇಜ್ ರೂ.15,777ರಿಂದ ಆರಂಭವಾಗಲಿದ್ದರೆ 4 ವರ್ಷದ ಸೂಪರ್ ಕೇರ್ ಪ್ಯಾಕೇಜ್ 29,999ರಿಂದ ಆರಂಭವಾಗುತ್ತದೆ. ಸೇವಾ ಶುಲ್ಕಗಳು ವಾರ್ಷಿಕವಾಗಿ ಅನ್ವಯವಾಗಲಿದ್ದು, ಇದು ಸಾಮಾನ್ಯ ಮಾದರಿಯ ವಾರಂಟಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ.

ಸ್ಕೋಡಾ ವಿವಿಧ ಕಾರು ಮಾದರಿಗಳ ಮೇಲೆ 'ಸೂಪರ್ ಕೇರ್' ಸರ್ವಿಸ್

2 ವರ್ಷದ ಸೂಪರ್ ಕೇರ್‌‌ಗಿಂತಲೂ 4 ವರ್ಷದ ಸೂಪರ್ ಕೇರ್ ವಾರಂಟಿಯಲ್ಲಿ ಕಾರಿನ ಬಿಡಿಭಾಗಗಳ ಮೇಲೆ ಗರಿಷ್ಠ ಭದ್ರತೆ ದೊರಲಿದ್ದು, 4 ವರ್ಷದ ಸೂಪರ್ ಕೇರ್‌ನಲ್ಲಿಯೇ ಮತ್ತೆ ಸ್ಟ್ಯಾಂಡರ್ಡ್, ಎನ್ಹ್ಯಾನ್ಸ್ ಮತ್ತು ಕಾಂಪರೆಸಿವ್ಯೂ ಎನ್ನುವ ಮೂರು ಆಯ್ಕೆ ನೀಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಸ್ಕೋಡಾ ವಿವಿಧ ಕಾರು ಮಾದರಿಗಳ ಮೇಲೆ 'ಸೂಪರ್ ಕೇರ್' ಸರ್ವಿಸ್

ಸ್ಟ್ಯಾಂಡರ್ಡ್ ಪ್ಯಾಕೇಜ್‌ನಲ್ಲಿ ಎಂಜಿನ್ ಆಯಿಲ್, ಆಯಿಲ್ ಫಿಲ್ಟರ್, ಡ್ರೈನ್ ಪ್ಲಗ್, ವಾಷರ್, ಫ್ಯೂಲ್ ಫಿಲ್ಟರ್, ಸ್ಪಾರ್ಕ್ ಪ್ಲಗ್, ಬ್ರೇಕ್ ಫ್ಲೂಡ್, ವಿ ಬೆಲ್ಟ್, ಹಾಲ್‌ಡೆಕ್ಸ್ ಕಪ್ಲಿಂಗ್ ಆಯಿಲ್ ಸೇರಿದಂತೆ ವಿವಿಧ ಬಿಡಿಭಾಗಗಳಿಗೆ ಗರಿಷ್ಠ ಸುರಕ್ಷತೆ ನೀಡುತ್ತದೆ.

ಸ್ಕೋಡಾ ವಿವಿಧ ಕಾರು ಮಾದರಿಗಳ ಮೇಲೆ 'ಸೂಪರ್ ಕೇರ್' ಸರ್ವಿಸ್

ಎನ್ಹ್ಯಾನ್ಸ್ ಮತ್ತು ಕಾಂಪರೆಸಿವ್ಯೂ ಪ್ಯಾಕೇಜ್‌ನಲ್ಲಿ ಸ್ಟ್ಯಾಂಡರ್ಡ್ ಪ್ಯಾಕೇಜ್ ಸೇವೆಗಳ ಸೇರ್ಪಡೆಯೊಂದಿಗೆ ಫ್ರಂಟ್ ವಿಂಡ್‌ಸ್ಕ್ರೀನ್ ವೈಪರ್, ಫ್ರಂಟ್ ಆ್ಯಂಡ್ ರಿಯರ್ ಬ್ರೇಕ್ ಪಾಡ್ಸ್, ಡಿಸ್ಕ್ ಬ್ರೇಕ್, ಬ್ಯಾಟರಿ, ಫ್ಲೈವೀಲ್ಹ್, ಕ್ಲಚ್ ಅಸೆಂಬ್ಲಿ ಮೇಲೆ ಗರಿಷ್ಠ ವಾರಂಟಿ ನೀಡುತ್ತದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಸ್ಕೋಡಾ ವಿವಿಧ ಕಾರು ಮಾದರಿಗಳ ಮೇಲೆ 'ಸೂಪರ್ ಕೇರ್' ಸರ್ವಿಸ್

ಇದರೊಂದಿಗೆ ಕಾರು ಮಾಲೀಕರು ಉತ್ಪಾದನಾ ಕಂಪನಿ ನೀಡುವ ವಾರಂಟಿ ಅವಧಿಯನ್ನು ಕೂಡಾ ಹೆಚ್ಚಿಸಿಕೊಳ್ಳಬಹುದಾಗಿದ್ದು, ಕಂಪನಿಯು ನೀಡುವ ನಾಲ್ಕು ವರ್ಷ ವಾರಂಟಿ ಅವಧಿಯನ್ನು ಹೊರತುಪಡಿಸಿ 5ನೇ ಮತ್ತು 6ನೇ ವರ್ಷದ ವಾರಂಟಿ ಅವಧಿ ವಿಸ್ತರಣೆಗಾಗಿ ರೂ.30,975 ಬೆಲೆ ನಿಗದಿ ಮಾಡಿದೆ.

Most Read Articles

Kannada
Read more on ಸ್ಕೋಡಾ skoda
English summary
Skoda Announces New ‘SuperCare’ Service Maintenance Packages In India. Read in Kannada.
Story first published: Thursday, August 20, 2020, 20:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X