ಮೊದಲ ಬಾರಿಗೆ ಹೊಸ ಬ್ರೇಕಿಂಗ್ ಸಿಸ್ಟಂ ಪಡೆಯಲಿದೆ ಕಿಯಾ ಕಂಪನಿಯ ಈ ಎಸ್‍ಯುವಿ

ಕಿಯಾ ಮೋಟಾರ್ಸ್ ಕಂಪನಿಯು ತನ್ನ ಸೊರೆಂಟೊ ಎಸ್‍ಯುವಿಯನ್ನು 2020ರ ಮಾರ್ಚ್ ತಿಂಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಜನಪ್ರಿಯ ಕಿಯಾ ಸೊರೆಂಟೊ ಎಸ್‍ಯುವಿ ಮಲ್ಟಿ-ಕೊಲಿಷನ್ ಬ್ರೇಕ್ ಸಿಸ್ಟಂ ಫೀಚರ್ ಅನ್ನು ಮೊದಲ ಬಾರಿಗೆ ಪಡೆದುಕೊಳ್ಳಲಿದೆ.

ಮೊದಲ ಬಾರಿಗೆ ಹೊಸ ಬ್ರೇಕಿಂಗ್ ಸಿಸ್ಟಂ ಪಡೆಯಲಿದೆ ಕಿಯಾ ಕಂಪನಿಯ ಈ ಎಸ್‍ಯುವಿ

ಕಿಯಾ ಮೋಟಾರ್ಸ್ ಕಂಪನಿಯ ಕಾರುಗಳ ಸರಣಿಯಲ್ಲಿ ಈ ಫೀಚರ್ ಅನ್ನು ಮೊದಲ ಬಾರಿಗೆ ಸೊರೆಂಟೊ ಎಸ್‌ಯುವಿಯು ಪಡೆಯಲಿದೆ. ಅಪಘಾತ ಸಂಭವಿಸಿದಾಗ ಆರಂಭಿಕ ಪರಿಣಾಮದ ನಂತರ ಪ್ರಯಾಣಿಕರು ಎರಡನೇ ಬಾರಿ ಘರ್ಷಣೆಗಳಲ್ಲಿ ಸಿಲುಕದಂತೆ ತಡೆಯಲು ಈ ಹೊಸ ತಂತ್ರಜ್ಞಾನವು ಸಹಾಯ ಮಾಡುತ್ತದೆ. ಮಲ್ಟಿ-ಕೊಲಿಷನ್ ಬ್ರೇಕ್ ಸಿಸ್ಟಂ ಅನ್ನು ಎರಡನೇ ಬಾರಿ ಘರ್ಷಣೆಯ ತೀವ್ರತೆಯನ್ನು ತಗ್ಗಿಸಲು ವಿನ್ಯಾಸಗೊಳಿಸಲಾಗಿದೆ.

ಮೊದಲ ಬಾರಿಗೆ ಹೊಸ ಬ್ರೇಕಿಂಗ್ ಸಿಸ್ಟಂ ಪಡೆಯಲಿದೆ ಕಿಯಾ ಕಂಪನಿಯ ಈ ಎಸ್‍ಯುವಿ

ಅಪಘಾತ ಸಂಭವಿಸಿದ ವೇಳೆ ವಾಹನದ ಏರ್‌ಬ್ಯಾಗ್‌ಗಳ ಮೂಲಕ ಈ ಸಿಸ್ಟಂ ಸಕ್ರಿಯವಾಗುತ್ತದೆ, ಇದು ಅಪಘಾತದ ತೀವ್ರತೆಯನ್ನು ಸೂಚಿಸುತ್ತದೆ. ಒಮ್ಮೆ ಸಕ್ರಿಯಗೊಂಡ ಬಳಿಕ ಈ ಸಿಸ್ಟಂ ಕಾರನ್ನು ನಿಯಂತ್ರಿತ ನಿಲುಗಡೆಗೆ ತರಲು ಸೂಕ್ತ ಮಟ್ಟದ ಬ್ರೇಕಿಂಗ್ ಫೋರ್ಸ್ ಅನ್ನು ನೀಡುತ್ತದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಮೊದಲ ಬಾರಿಗೆ ಹೊಸ ಬ್ರೇಕಿಂಗ್ ಸಿಸ್ಟಂ ಪಡೆಯಲಿದೆ ಕಿಯಾ ಕಂಪನಿಯ ಈ ಎಸ್‍ಯುವಿ

ಚಾಲಕ ವೇಗವನ್ನು ಹೆಚ್ಚಿಸಲು ಅಥವಾ ಬ್ರೇಕ್ ಮಾಡಲು ಪ್ರಯತ್ನಿಸುತ್ತಿದ್ದಾರೆಯೇ ಎಂದು ಪರಿಶೀಲಿಸಲು ಪೆಡಲ್‌ಗಳ ಸ್ಥಾನವನ್ನು ಈ ಸಿಸ್ಟಂ ಗ್ರಹಿಸುತ್ತದೆ. 180 ಕಿ.ಮೀ ವೇಗವನ್ನು ಮೀರಿದ ವೇಗದಲ್ಲಿ ಸಿಸ್ಟಮ್ ಸಕ್ರಿಯವಾಗುವುದಿಲ್ಲ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮೊದಲ ಬಾರಿಗೆ ಹೊಸ ಬ್ರೇಕಿಂಗ್ ಸಿಸ್ಟಂ ಪಡೆಯಲಿದೆ ಕಿಯಾ ಕಂಪನಿಯ ಈ ಎಸ್‍ಯುವಿ

ನಾಲ್ಕನೇ ತಲೆಮಾರಿನ ಸೊರೆಂಟೊ ಈ ಸುರಕ್ಷತಾ ತಂತ್ರಜ್ಞಾನವನ್ನು ಸೇರಿಸಿದ ಯುರೋಪಿನಲ್ಲಿ ಮಾರಾಟವಾದ ಮೊದಲ ಕಿಯಾ ಎಸ್‍ಯುವಿಯಾಗಲಿದೆ. ಈ ಕಿಯಾ ಸೆರೊಂಟೊ ಎಸ್‍ಯುವಿಯಲ್ಲಿ ಎಫ್‌ಸಿಎ ಸುರಕ್ಷತಾ ತಂತ್ರಜ್ಞಾನವನ್ನು ಒಳಗೊಂಡಿದೆ.

ಮೊದಲ ಬಾರಿಗೆ ಹೊಸ ಬ್ರೇಕಿಂಗ್ ಸಿಸ್ಟಂ ಪಡೆಯಲಿದೆ ಕಿಯಾ ಕಂಪನಿಯ ಈ ಎಸ್‍ಯುವಿ

ಹೊಸ ಕಿಯಾ ಸೊರೆಂಟೊ ಎಸ್‍ಯುವಿಯಲ್ಲಿ ಕ್ರೋಮ್‌ನಲ್ಲಿ ಅಲಂಕರಿಸಲ್ಪಟ್ಟ ಟೈಗರ್ ನೋಸ್ ಫ್ರಂಟ್ ಗ್ರಿಲ್, ಸ್ಲೀಕರ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಆಕರ್ಷಕವಾದ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಅನ್ನು ಹೊಂದಿದೆ.

ಮೊದಲ ಬಾರಿಗೆ ಹೊಸ ಬ್ರೇಕಿಂಗ್ ಸಿಸ್ಟಂ ಪಡೆಯಲಿದೆ ಕಿಯಾ ಕಂಪನಿಯ ಈ ಎಸ್‍ಯುವಿ

ಇದರೊಂದಿಗೆ ಈ ಎಸ್‍ಯುವಿಯಲ್ಲಿ ಫಾಗ್ ಲ್ಯಾಂಪ್‌ಗಳೊಂದಿಗೆ ಸ್ಪೋರ್ಟಿಯರ್ ಫ್ರಂಟ್ ಬಂಪರ್, ಶಾರ್ಟರ್ ಓವರ್‌ಹ್ಯಾಂಗ್ಸ್, ವಿಶಾಲ ಏರ್ ಇನ್ಲೆಟ್, ಲಂಬವಾಗಿರುವ ಎಲ್ಇಡಿ ಟೈಲ್ ಲ್ಯಾಂಪ್‌ಗಳು ಮತ್ತು ಇತರ ಬದಲಾವಣೆಗಳ ನಡುವೆ ಹಿಂಭಾಗದ ಬಂಪರ್ ಅನ್ನು ಮರುವಿನ್ಯಾಸಗೊಳಿಸಲಾಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಮೊದಲ ಬಾರಿಗೆ ಹೊಸ ಬ್ರೇಕಿಂಗ್ ಸಿಸ್ಟಂ ಪಡೆಯಲಿದೆ ಕಿಯಾ ಕಂಪನಿಯ ಈ ಎಸ್‍ಯುವಿ

ಇನ್ನು ಹೊಸ ಕಿಯಾ ಸೊರೆಂಟೊ ಎಸ್‍ಯುವಿಯ ಕ್ಯಾಬಿನ್ ನಲ್ಲಿ ದೊಡ್ಡ 10.12-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಅಪ್‌ಮಾರ್ಕೆಟ್ ಫಿನಿಶ್‌ಗಳೊಂದಿಗೆ ಲೇಯರ್ಡ್ ಡ್ಯಾಶ್‌ಬೋರ್ಡ್, ಎಸಿ ವೆಂಟ್ಸ್ ಗಳೊಂದಿಗೆ ಸೆಂಟ್ರಲ್ ಕನ್ಸೋಲ್ ಮತ್ತು 12.3-ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಮೊದಲ ಬಾರಿಗೆ ಹೊಸ ಬ್ರೇಕಿಂಗ್ ಸಿಸ್ಟಂ ಪಡೆಯಲಿದೆ ಕಿಯಾ ಕಂಪನಿಯ ಈ ಎಸ್‍ಯುವಿ

2020ರ ಕಿಯಾ ಸೊರೆಂಟೊ ಎಸ್‍ಯುವಿಯು 1.49 ಕಿಲೋವ್ಯಾಟ್ ಲಿಥಿಯಂ-ಐಯಾನ್ ಪಾಲಿಮರ್ ಬ್ಯಾಟರಿ ಪ್ಯಾಕ್ ಮತ್ತು 44.2 ಕಿಲೋವ್ಯಾಟ್ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ಇದರೊಂದಿಗೆ 1.6-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

Most Read Articles

Kannada
English summary
This Kia Suv Get New Multi-Collision Brake System. Read In Kannada.
Story first published: Friday, October 23, 2020, 12:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X