ಇನ್ನಷ್ಟು ತಡವಾಗಲಿದೆ ಜನಪ್ರಿಯ ಸುಜುಕಿ ಜಿಮ್ನಿ ಎಸ್‍ಯುವಿ ವಿತರಣೆ

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಎಸ್‍‍ಯುವಿಗಳಲ್ಲಿ ಮಾರುತಿ ಸುಜುಕಿ ಜಿಮ್ನಿ ಒಂದಾಗಿದೆ. ಅಂತರರಾಷ್ಟೀಯ ಮಾರುಕಟ್ಟೆಯಲ್ಲಿ ಮೆಚ್ಚುಗೆಯನ್ನು ಪಡೆದುಕೊಂಡ ಮಾರುತಿ ಸುಜುಕಿ ಸಂಸ್ಥೆಯ ಜಿಮ್ನಿ ಮಿನಿ-ಎಸ್‌ಯುವಿಯನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಇನ್ನಷ್ಟು ತಡವಾಗಲಿದೆ ಜನಪ್ರಿಯ ಸುಜುಕಿ ಜಿಮ್ನಿ ಎಸ್‍ಯುವಿ ವಿತರಣೆ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಕಂಪನಿಯ ಜಿಮ್ನಿ ಮಿನಿ ಎಸ್‍‍‍ಯುವಿಯು ಬಿಡುಗಡೆಗೊಳಿಸುವ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಾರುತಿ ಸುಜುಕಿ ಕಂಪನಿಯು ಗುರಗಾಂವ್ ಮೂಲದ ಘಟಕದಲ್ಲಿ ಜಿಮ್ನಿ ಎಸ್‍‍ಯುವಿಯ ಉತ್ಪಾದನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಹರ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಬ್ರೆಝಾ, ಎಸ್-ಕ್ರಾಸ್, ಇಕೋ ಮತ್ತು ಕ್ಯಾರಿಯಂತಹ ಇತರ ಎಸ್‍‍ಯುವಿಗಳ ಜೊತೆಗೆ ಜಿಮ್ನಿ ಎಸ್‍‍ಯುವಿಯನ್ನು ಕೂಡ ತಯಾರಿಸಲಾಗುವುದು. ಭಾರತೀಯ ಮಾರುಕಟ್ಟೆಗಾಗಿ ಐದು ಡೋರಿನಜಿಮ್ನಿ ಎಸ್‍ಯುವಿಯನ್ನು ಅಭಿವೃದ್ದಿಪಡಿಸಲಾಗುತ್ತಿದೆ.

ಇನ್ನಷ್ಟು ತಡವಾಗಲಿದೆ ಜನಪ್ರಿಯ ಸುಜುಕಿ ಜಿಮ್ನಿ ಎಸ್‍ಯುವಿ ವಿತರಣೆ

ಇದರ ನಡುವೆ ಜಪಾನ್‌ನಲ್ಲಿ ಈ ಜಿಮ್ನಿ ಎಸ್‍ಯುವಿಯ ಕಾಯುವಿಕೆಯ ಅವಧಿಯನ್ನು 1.5 ವರ್ಷಗಳವರೆಗೆ ವಿಸ್ತರಿಸಿದೆ. ಜಿಮ್ನಿ ತಾಯಿನಾಡು ಜಪಾನ್‌ನಲ್ಲಿ ಸಿಯೆರಾ ಮತ್ತು ಸ್ಟ್ಯಾಂಡರ್ಡ್ ಎಂಬ ಎರಡು ರೂಪಾಂತರಗಳಲ್ಲಿ ಹೊಸ ಜಿಮ್ನಿ ಲಭ್ಯವಿದೆ. ಜಪಾನ್ ನಲ್ಲಿ ಜಿಮ್ನಿ ಎಸ್‍ಯುವಿಯ ಬೇಡಿಕೆಯು ಹೆಚ್ಚಾಗಿದೆ. ಕರೋನಾ ವೈರಸ್ ಪಾರಿಣಾಮದಿಂದ ಸುಜುಕಿ ಜಿಮ್ನಿ ಕಾಯುವಿಕೆಯ ಅವಧಿಯನ್ನು ಹೆಚ್ಚಿಸಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಇನ್ನಷ್ಟು ತಡವಾಗಲಿದೆ ಜನಪ್ರಿಯ ಸುಜುಕಿ ಜಿಮ್ನಿ ಎಸ್‍ಯುವಿ ವಿತರಣೆ

ಇದರಿಂದ ಭಾರತದಲ್ಲಿರುವ ಜಿಮ್ನಿ ಅಭಿಮಾನಿಗಳಿಗೂ ನಿರಾಸೆ ಮೂಡಿಸಿದೆ. ಭಾರತದಲ್ಲಿ ಶೀಘ್ರದಲ್ಲೇ ಈ ಜಿಮ್ನಿ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ. ಭಾರತದಲ್ಲಿ ವಿತರಣೆಯನ್ನು ಮಾಡಲು ಎಷ್ಟು ಸಮಯವಕಾಶವನ್ನು ತೆಗೆದುಕೊಳ್ಳುತ್ತಾರೆ ಎಂಬುದು ಮಾಹಿತಿ ಇಲ್ಲ.

ಇನ್ನಷ್ಟು ತಡವಾಗಲಿದೆ ಜನಪ್ರಿಯ ಸುಜುಕಿ ಜಿಮ್ನಿ ಎಸ್‍ಯುವಿ ವಿತರಣೆ

ಮಾರುತಿಯ ಗುರಗಾಂವ್ ಮೂಲದ ಘಟಕದಿಂದ ಜಿಮ್ನಿ ಎಸ್‍ಯುವಿಯ ರಫ್ತನ್ನು ಮೇ ಅಥವಾ ಜೂನ್ ಆರಂಭದಲ್ಲಿ ಪ್ರಾರಂಭಿಸಬಹುದು. ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ಮತ್ತು ಭಾರತೀಯ ಗ್ರಾಹಕರನ್ನು ಸೆಳೆಯುವ ರೀತಿಯಲ್ಲಿ ಈ ಜಿಮ್ನಿ ಎಸ್‍ಯುವಿಯನ್ನು ಅಭಿವೃದ್ದಿಪಡಿಸಲಾಗುತ್ತದೆ. ಈ ಜಿಮ್ನಿ ಎಸ್‍ಯುವಿಯು ಹೊಸ ಮಹೀಂದ್ರಾ ಥಾರ್ ಗ್ರಾಹಕರನ್ನು ತನ್ನತ ಸೆಳೆಯುವ ಸಾಧ್ಯತೆಗಳಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಇನ್ನಷ್ಟು ತಡವಾಗಲಿದೆ ಜನಪ್ರಿಯ ಸುಜುಕಿ ಜಿಮ್ನಿ ಎಸ್‍ಯುವಿ ವಿತರಣೆ

ಈ ಮಿನಿ ಎಸ್‍ಯುವಿಯನ್ನು 2018ರಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಜಿಮ್ನಿ ಮಿನಿ ಎಸ್‍ಯುವಿಯು ಜಾಗತಿಕವಾಗಿ ಅನಾವರಣಗೊಂಡು 1.5 ವರ್ಷಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಇನ್ನಷ್ಟು ತಡವಾಗಲಿದೆ ಜನಪ್ರಿಯ ಸುಜುಕಿ ಜಿಮ್ನಿ ಎಸ್‍ಯುವಿ ವಿತರಣೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಮೆಚ್ಚುಗೆ ಪಡೆಯುವಲ್ಲಿ ಮಾರುತಿ ಸುಜುಕಿ ಜಿಮ್ನಿ ಯಶಸ್ವಿಯಾಗಿದೆ. ಅಲ್ಲದೇ 2020ರ ಆಟೋ ಎಕ್ಸ್ ಪೋದಲ್ಲಿ ಹೆಚ್ಚಿನ ಜನರ ಗಮನಸೆಳೆಯುವಲ್ಲಿ ಮಾರುತಿ ಸುಜುಕಿ ಜಿಮ್ನಿ ಯಶ್ವಸಿಯಾಗಿದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಇನ್ನಷ್ಟು ತಡವಾಗಲಿದೆ ಜನಪ್ರಿಯ ಸುಜುಕಿ ಜಿಮ್ನಿ ಎಸ್‍ಯುವಿ ವಿತರಣೆ

ಈ ಮಿನಿ ಎಸ್‍ಯುವಿಯಲ್ಲಿ 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ

ಇನ್ನಷ್ಟು ತಡವಾಗಲಿದೆ ಜನಪ್ರಿಯ ಸುಜುಕಿ ಜಿಮ್ನಿ ಎಸ್‍ಯುವಿ ವಿತರಣೆ

ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಅಥವಾ 4 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಮಿನಿ ಎಸ್‍‍ಯುವಿಯನ್ನು ಡೀಸೆಲ್ ಅಥವಾ ಹೈಬ್ರಿಡ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸುವುದಿಲ್ಲ. ಈ ಜಿಮ್ನಿ ಎಸ್‍‍ಯುವಿ 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಎಸ್‍‍ಯುವಿಯ ಉತ್ತರಾಧಿಕಾರಿಯಾಗಲಿದೆ.

ಇನ್ನಷ್ಟು ತಡವಾಗಲಿದೆ ಜನಪ್ರಿಯ ಸುಜುಕಿ ಜಿಮ್ನಿ ಎಸ್‍ಯುವಿ ವಿತರಣೆ

ಭಾರತದಲ್ಲಿ ತಯಾರಾಗುತ್ತಿರುವ ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸಬಹುದು ಮತ್ತು ಇದು ಎಸ್‍ಯುವಿ ವಿಭಾಗದಲ್ಲಿ ಅತ್ಯಂತ ಆಕರ್ಷಕ ಕೊಡುಗೆಯಾಗಿ ಹೊರಹೊಮ್ಮಲಿದೆ. ಭಾರತದ ಆಫ್ ರೋಡ್ ಪ್ರಿಯರು ಈ ಜಿಮ್ನಿ ಎಸ್‍ಯುವಿಗಾಗಿ ಬಹುನಿರೀಕ್ಷಿಯಿಂದ ಕಾಯುತ್ತಿದ್ದಾರೆ.

Article Published On: Thursday, May 14, 2020, 12:35 [IST]
English summary
Suzuki Jimny SUV demand grows – Waiting period hits 18 months in Japan. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+