ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಗಮನಸೆಳೆದ ಟಾಟಾ ಆಲ್‌ಟ್ರೊಜ್

ದಸರಾ ಸಂಭ್ರಮದಲ್ಲಿ ಟಾಟಾ ಮೋಟಾರ್ಸ್ ಹೊಸ ಕಾರುಗಳ ಮಾರಾಟವು ಭಾರೀ ಏರಿಕೆ ಕಂಡಿದ್ದು, ಕಳೆದ ವರ್ಷಕ್ಕಿಂತಲೂ ಟಾಟಾ ಹೊಸ ಕಾರುಗಳ ಮಾರಾಟ ಪ್ರಮಾಣವು ಶೇ. 27ರಷ್ಟು ಹೆಚ್ಚಳವಾಗಿದೆ. ಕರೋನಾ ವೈರಸ್ ಪರಿಣಾಮ ಕಳೆದ ಕೆಲ ತಿಂಗಳಿನಿಂದ ತೀವ್ರವಾಗಿ ಕುಸಿದಿದ್ದ ವಾಹನ ಮಾರಾಟವು ಇದೀಗಿ ಚೇತರಿಕೆ ಕಂಡಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಗಮನಸೆಳೆದ ಆಲ್‌ಟ್ರೊಜ್

ಟಾಟಾ ಮೋಟಾರ್ಸ್ ಕಂಪನಿಯು ಕಳೆದ ತಿಂಗಳು ಒಟ್ಟು 52,132 ಯುನಿಟ್ ಕಾರು ಮಾರಾಟ ಮಾಡುವ ಮೂಲಕ ಪ್ರಮುಖ ಕಾರು ಮಾದರಿಗಳಿಗೆ ತೀವ್ರ ಪೈಪೋಟಿ ನೀಡಿದ್ದು, ಟಾಟಾ ಹೊಸ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯಾದ ಆಲ್‌ಟ್ರೊಜ್ ಕಾರು ಮಾದರಿಯು ಕೂಡಾ ಬಿಡುಗಡೆಯ ನಂತರ ಇದೇ ಮೊದಲ ಬಾರಿಗೆ ಅತ್ಯಧಿಕ ಬೇಡಿಕೆ ಪಡೆದುಕೊಂಡಿದ್ದು, ಪ್ರಮುಖ ಕಾರು ಮಾದರಿಗಳಿಗೆ ತೀವ್ರ ಪೈಪೋಟಿ ನೀಡಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಗಮನಸೆಳೆದ ಆಲ್‌ಟ್ರೊಜ್

ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಆಲ್‌ಟ್ರೊಜ್ ಕಾರು ಮಾದರಿಯು ಅಕ್ಟೋಬರ್ ಅವಧಿಯಲ್ಲಿ 6,730 ಯುನಿಟ್ ಮೂಲಕ ಅತ್ಯುತ್ತಮ ಬೇಡಿಕೆ ಪಡೆದುಕೊಂಡಿದ್ದು, ಕಳೆದ ತಿಂಗಳ ಮಾರಾಟಕ್ಕಿಂತಲೂ ಶೇ.13.45 ರಷ್ಟು ಬೆಳವಣಿಗೆ ಸಾಧಿಸಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಗಮನಸೆಳೆದ ಆಲ್‌ಟ್ರೊಜ್

ಟಾಟಾ ಮೋಟಾರ್ಸ್ ಕಂಪನಿಯು ಹೊಸ ಆಲ್‌ಟ್ರೊಜ್ ಕಾರು ಮಾದರಿಯನ್ನು ಈ ವರ್ಷದ ಫೆಬ್ರುವರಿಯಲ್ಲಿ ಮಾರಾಟ ಆರಂಭಿಸಿದ್ದು, ಪ್ರತಿ ತಿಂಗಳು ಸರಾಸರಿಯಾಗಿ 4 ರಿಂದ 5 ಸಾವಿರ ಯುನಿಟ್ ಮಾರಾಟ ಹೊಂದಿದ್ದ ಹೊಸ ಕಾರು ಇದೇ ಮೊದಲ ಬಾರಿಗೆ ಅಧಿಕ ಮಟ್ಟದ ಬೇಡಿಕೆ ಪಡೆದುಕೊಂಡಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಗಮನಸೆಳೆದ ಆಲ್‌ಟ್ರೊಜ್

ಇನ್ನು ಆಲ್‌ಟ್ರೊಜ್ ಕಾರು ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಆಕರ್ಷಕ ಬೆಲೆಗಳನ್ನು ಪಡೆದುಕೊಂಡಿರುವುದು ಗ್ರಾಹಕರ ಆಕರ್ಷಣೆಗೆ ಪ್ರಮುಖ ಕಾರಣವಾಗಿದೆ. ಹೊಸ ಕಾರು ಸದ್ಯ ಎಕ್ಸ್‌ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಆಪ್ಷನ್ ಮತ್ತು ಎಕ್ಸ್‌ಜೆಡ್ ಅರ್ಬನ್ ವೆರಿಯೆಂಟ್‌‌ಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.44 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.9.09 ಲಕ್ಷ ಬೆಲೆ ಹೊಂದಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಗಮನಸೆಳೆದ ಆಲ್‌ಟ್ರೊಜ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪ್ರಮುಖ ಕಾರು ಮಾದಿರಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಎರಡು ತಿಂಗಳಿಗೆ ಒಂದು ಬಾರಿಗೆ ವೆರಿಯೆಂಟ್‌ಗಳ ಉನ್ನತೀಕರಣ ಮತ್ತು ಹೊಸ ವೆರಿಯೆಂಟ್ ಅಭಿವೃದ್ದಿಗೊಳಿಸುವ ಪ್ರಕ್ರಿಯೆ ಕೈಗೊಂಡಿದ್ದು, ಇದೀಗ ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಕಾರು ಮಾದರಿಯ ಮಧ್ಯಮ ಕ್ರಮಾಂಕದ ವೆರಿಯೆಂಟ್‌ನಲ್ಲಿ ಎಕ್ಸ್ಎಂ ಪ್ಲಸ್ ಮಾದರಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಗಮನಸೆಳೆದ ಆಲ್‌ಟ್ರೊಜ್

ಆಲ್‌ಟ್ರೊಜ್ ಹೊಸ ಆವೃತ್ತಿಯು ಎಕ್ಸ್ಎಂ ಮತ್ತು ಎಕ್ಸ್‌ಟಿ ನಡುವಿನ ಸ್ಥಾನ ತುಂಬಲಿದ್ದು, ಹೊಸದಾಗಿ ಬಿಡುಗಡೆ ಮಾಡಲಾಗಿರುವ ಹ್ಯುಂಡೈ ಐ20 ನ್ಯೂ ಜನರೇಷನ್ ಮಾದರಿಗೆ ಭರ್ಜರಿ ಪೈಪೋಟಿಯಾಗಿ ಹೊಸ ವೆರಿಯೆಂಟ್ ಅಭಿವೃದ್ದಿ ಪಡಿಸುತ್ತಿದೆ.

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಗಮನಸೆಳೆದ ಆಲ್‌ಟ್ರೊಜ್

ಹೊಸ ಕಾರಿನಲ್ಲಿ ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಫೋರ್ ಸಿಲಿಂಡರ್ ರಿವೋಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, ಪೆಟ್ರೋಲ್ ಎಂಜಿನ್ ಅನ್ನು ಟಿಯಾಗೋದಿಂದ ಮತ್ತು ಡೀಸೆಲ್ ಎಂಜಿನ್ ಅನ್ನು ನೆಕ್ಸಾನ್ ಕಾರಿನಿಂದ ಎರವಲು ಪಡೆಯಲಾಗಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಗಮನಸೆಳೆದ ಆಲ್‌ಟ್ರೊಜ್

ಸದ್ಯಕ್ಕೆ ಆಲ್‌ಟ್ರೊಜ್ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರವೇ ನೀಡಲಾಗಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಮತ್ತು 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಟರ್ಬೋ ಆವೃತ್ತಿಯು ಹಲವು ವಿಶೇಷತೆಗಳೊಂದಿಗೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದೆ.

Article Published On: Friday, November 6, 2020, 11:20 [IST]
English summary
Tata Altroz Managed To Record An Impressive Sales Growth In October 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+