ಕರೋನಾ ಎಫೆಕ್ಟ್- ಕಾರುಗಳ ಖರೀದಿಗಾಗಿ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ತೆರೆದ ಟಾಟಾ

ಮಾಹಾಮಾರಿ ಕರೋನಾ ವೈರಸ್ ಹರಡುವಿಕೆಯ ತಡೆಗಾಗಿ ಎಲ್ಲಾ ಮಾದರಿಯ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದ್ದು, ವೈರಸ್ ಭೀತಿಯ ನಡುವೆಯೂ ಆರ್ಥಿಕ ಪುನಶ್ಚೇತನಕ್ಕಾಗಿ ವಿವಿಧ ಕ್ಷೇತ್ರಗಳಲ್ಲಿನ ವಾಣಿಜ್ಯ ಚಟುವಟಿಕೆಗೆ ಷರತ್ತುಬದ್ದ ಅವಕಾಶ ನೀಡಲಾಗಿದೆ.

ಟಾಟಾ ಆಲ್‌ಟ್ರೊಜ್ ಕಾರು ಖರೀದಿ ಮೇಲೆ ಮೊದಲ ಬಾರಿಗೆ ಡಿಸ್ಕೌಂಟ್ ಘೋಷಣೆ

ಆಟೋ ಉದ್ಯಮವು ಸಹ ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿದ್ದಲ್ಲದೆ ದಿನಂಪ್ರತಿ ನೂರಾರು ಕೋಟಿ ನಷ್ಟ ಅನುಭವಿಸುತ್ತಿದ್ದು, ಇದೀಗ ಲಾಕ್‌ಡೌನ್ ನಡುವೆಯೂ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಮೇ 4 ರಿಂದ ಬಹುತೇಕ ಆಟೋ ಕಂಪನಿಗಳು ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಚಾಲನೆ ನೀಡಿದ್ದು, ಟಾಟಾ ಮೋಟಾರ್ಸ್ ಸಹ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಮೂಲಕ ಕಾರು ಮಾರಾಟವನ್ನು ಪುನಾರಂಭಿಸಿದೆ.

ಸಂಕಷ್ಟದ ನಡುವೆಯೂ ಕಾರು ಮಾರಾಟದಲ್ಲಿ ಕೆಲವು ಮಹತ್ವದ ಪ್ರಕಟನೆಗಳನ್ನು ಹೊರಡಿಸಿರುವ ಟಾಟಾ ಕಂಪನಿಯು, ಆಲ್‌ಟ್ರೊಜ್ ಹೊರತುಪಡಿಸಿ ಇನ್ನುಳಿದ ಕಾರು ಮಾದರಿಗಳ ಮೇಲೆ ಧೀರ್ಘಾವಧಿಯ ಇಎಂಐ, ಗರಿಷ್ಠ ಆನ್ ರೋಡ್ ಫೈನಾನ್ಸ್ ಸೌಲಭ್ಯಗಳನ್ನು ಘೋಷಣೆ ಮಾಡಿದೆ.

ಟಾಟಾ ಆಲ್‌ಟ್ರೊಜ್ ಕಾರು ಖರೀದಿ ಮೇಲೆ ಮೊದಲ ಬಾರಿಗೆ ಡಿಸ್ಕೌಂಟ್ ಘೋಷಣೆ

ಇನ್ನು ಹೊಸ ಆಲ್‌‌ಟ್ರೊಜ್ ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆಯ ನಂತರ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ಆಲ್‌ಟ್ರೊಜ್ ಆವೃತ್ತಿಯಲ್ಲಿ ಟರ್ಬೋ ಪೆಟ್ರೋಲ್ ಮಾದರಿಯನ್ನು ಕೂಡಾ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಟಾಟಾ ಆಲ್‌ಟ್ರೊಜ್ ಕಾರು ಖರೀದಿ ಮೇಲೆ ಮೊದಲ ಬಾರಿಗೆ ಡಿಸ್ಕೌಂಟ್ ಘೋಷಣೆ

ಲಾಕ್‌ಡೌನ್ ತೆರವುಗೊಂಡ ಕೆಲವೇ ದಿನಗಳಲ್ಲಿ ಹೊಸ ಕಾರು ಬಿಡುಗಡೆಯಾಗಲಿದ್ದು, ಹೊಸ ಕಾರಿನ ಉತ್ಪಾದನೆಯು ಈಗಾಗಲೇ ಶುರುವಾಗಿದೆ. ಸದ್ಯ ಆಲ್‌ಟ್ರೊಜ್ ಕಾರು ಸಾಮಾನ್ಯ ಮಾದರಿಯ 1.2-ಲೀಟರ್ ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ.

ಟಾಟಾ ಆಲ್‌ಟ್ರೊಜ್ ಕಾರು ಖರೀದಿ ಮೇಲೆ ಮೊದಲ ಬಾರಿಗೆ ಡಿಸ್ಕೌಂಟ್ ಘೋಷಣೆ

ಪರ್ಫಾಮೆನ್ಸ್ ಪ್ರಿಯರಿಗಾಗಿ ಶೀಘ್ರದಲ್ಲೇ 1.2-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದುಕೊಳ್ಳುತ್ತಿದೆ. ಹೊಸ ಟರ್ಬೋ ಪೆಟ್ರೋಲ್ ಆವೃತ್ತಿಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಿದ್ದು, ಇದು ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ.

ಟಾಟಾ ಆಲ್‌ಟ್ರೊಜ್ ಕಾರು ಖರೀದಿ ಮೇಲೆ ಮೊದಲ ಬಾರಿಗೆ ಡಿಸ್ಕೌಂಟ್ ಘೋಷಣೆ

ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿರುವ ಟಾಟಾ ಆಲ್‌ಟ್ರೊಜ್ ಕಾರು ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಆಕರ್ಷಕ ಬೆಲೆಗಳನ್ನು ಪಡೆದುಕೊಂಡಿರುವುದು ಗ್ರಾಹಕರ ಆಕರ್ಷಣೆಗೆ ಪ್ರಮುಖ ಕಾರಣವಾಗಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಟಾಟಾ ಆಲ್‌ಟ್ರೊಜ್ ಕಾರು ಖರೀದಿ ಮೇಲೆ ಮೊದಲ ಬಾರಿಗೆ ಡಿಸ್ಕೌಂಟ್ ಘೋಷಣೆ

ಗ್ರಾಹಕರ ಬೇಡಿಕೆಯೆಂತೆ ಎಕ್ಸ್‌ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಜೆಡ್ ಮತ್ತು ಎಕ್ಸ್‌ಜೆಡ್ ಆಪ್ಷನ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಆಲ್‌ಟ್ರೊಜ್ ಕಾರು ಆಕರ್ಷಕ ಬೆಲೆಗಳನ್ನು ಹೊಂದಿದ್ದು, 5 ಡೀಸೆಲ್ ಮಾದರಿಗಳನ್ನು ಮತ್ತು 5 ಪೆಟ್ರೋಲ್ ಮಾದರಿಗಳ ಆಯ್ಕೆಯನ್ನು ಹೊಂದಿದೆ.

ಟಾಟಾ ಆಲ್‌ಟ್ರೊಜ್ ಕಾರು ಖರೀದಿ ಮೇಲೆ ಮೊದಲ ಬಾರಿಗೆ ಡಿಸ್ಕೌಂಟ್ ಘೋಷಣೆ

ಆಲ್‌ಟ್ರೊಜ್ ಪೆಟ್ರೋಲ್ ವೆರಿಯೆಂಟ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ 5.29 ಲಕ್ಷ ಮತ್ತು ಹೈ ಎಂಡ್ ಆವೃತ್ತಿಯು ರೂ. 7.69 ಲಕ್ಷ ಬೆಲೆ ಹೊಂದಿದ್ದರೆ ಡೀಸೆಲ್ ಎಂಜಿನ್ ಮಾದರಿಯ ಬೆಲೆಯು ಆರಂಭಿಕವಾಗಿ ರೂ. 6.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.9.29 ಲಕ್ಷ ಬೆಲೆ ಪಡೆದುಕೊಂಡಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಟಾಟಾ ಆಲ್‌ಟ್ರೊಜ್ ಕಾರು ಖರೀದಿ ಮೇಲೆ ಮೊದಲ ಬಾರಿಗೆ ಡಿಸ್ಕೌಂಟ್ ಘೋಷಣೆ

ಹೊಸ ಕಾರಿನಲ್ಲಿ ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಫೋರ್ ಸಿಲಿಂಡರ್ ರಿವೋಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, ಪೆಟ್ರೋಲ್ ಎಂಜಿನ್ ಅನ್ನು ಟಿಯಾಗೋದಿಂದ ಮತ್ತು ಡೀಸೆಲ್ ಎಂಜಿನ್ ಅನ್ನು ನೆಕ್ಸಾನ್ ಕಾರಿನಿಂದ ಎರವಲು ಪಡೆಯಲಾಗಿದೆ.

ಟಾಟಾ ಆಲ್‌ಟ್ರೊಜ್ ಕಾರು ಖರೀದಿ ಮೇಲೆ ಮೊದಲ ಬಾರಿಗೆ ಡಿಸ್ಕೌಂಟ್ ಘೋಷಣೆ

ಸದ್ಯಕ್ಕೆ ಹೊಸ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರವೇ ನೀಡಲಾಗಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಮತ್ತು 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಟಾಟಾ ಆಲ್‌ಟ್ರೊಜ್ ಕಾರು ಖರೀದಿ ಮೇಲೆ ಮೊದಲ ಬಾರಿಗೆ ಡಿಸ್ಕೌಂಟ್ ಘೋಷಣೆ

ಟರ್ಬೋ ಪೆಟ್ರೋಲ್ ಆವೃತ್ತಿಯು 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 99-ಬಿಎಚ್‌ಪಿ ಮತ್ತು 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಇದು ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಪವರ್‌ಪುಲ್ ಕಾರು ಮಾದರಿಯಾಗಿರಲಿದೆ.

Most Read Articles

Kannada
English summary
Tata altroz online booking details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X