Just In
- 7 hrs ago ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- 8 hrs ago KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- 9 hrs ago ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- 9 hrs ago Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್ರೂಫ್, 35 ಕಿ.ಮೀ ಮೈಲೇಜ್!
Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಆಲ್ಟ್ರೊಜ್ ಹ್ಯಾಚ್ಬ್ಯಾಕ್ ಬಿಡುಗಡೆ
ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಆಲ್ಟ್ರೊಜ್ ಕಾರು ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರು ಹಲವಾರು ಪ್ರೀಮಿಯಂ ಸೌಲಭ್ಯಗಳೊಂದಿಗೆ ಹ್ಯಾಚ್ಗಳಲ್ಲೇ ವಿಶೇಷ ಕಾರು ಮಾದರಿಯಾಗಿ ಹೊರಹೊಮ್ಮಿದೆ.
ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿರುವ ಆಲ್ಟ್ರೊಜ್ ಹ್ಯಾಚ್ಬ್ಯಾಕ್ ಕಾರು ಗ್ರಾಹಕರ ನೀರಿಕ್ಷೆಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ಗಳೊಂದಿಗೆ ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಗೊಂಡಿದ್ದು, ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಿರುವ ಹೊಸ ಕಾರು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.29 ಲಕ್ಷಕ್ಕೆ ಮತ್ತು ಟಾಪ್ ಆವೃತ್ತಿಯು ರೂ.9.29 ಲಕ್ಷ ಬೆಲೆ ಪಡೆದುಕೊಂಡಿದೆ.
ಹ್ಯಾರಿಯರ್ ಕಾರು ಬಿಡುಗಡೆಯ ಯಶಸ್ವಿ ನಂತರ ಕಾರು ಮಾರಾಟದಲ್ಲಿ ಮಹತ್ವದ ಬದಲಾಣೆ ಪರಿಚಯಿಸುತ್ತಿರುವ ಟಾಟಾ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಆಲ್ಫಾ ಪ್ಲ್ಯಾಟ್ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನು ಅಭಿವೃದ್ದಿಗೊಳಿಸಿದ್ದು, ಬಿಎಸ್-6 ಎಂಜಿನ್ ಆಯ್ಕೆಯನ್ನು ಹೊಂದಿದೆ.
ಗ್ರಾಹಕರ ಬೇಡಿಕೆಯೆಂತೆ ಎಕ್ಸ್ಇ, ಎಕ್ಸ್ಎಂ, ಎಕ್ಸ್ಟಿ, ಎಕ್ಸ್ಜೆಡ್ ಮತ್ತು ಎಕ್ಸ್ಜೆಡ್ ಆಪ್ಷನ್ ವೆರಿಯೆಂಟ್ಗಳಲ್ಲಿ ಖರೀದಿಗೆ ಲಭ್ಯವಿರುವ ಆಲ್ಟ್ರೊಜ್ ಕಾರು ಆಕರ್ಷಕ ಬೆಲೆಗಳನ್ನು ಹೊಂದಿದ್ದು, 5 ಡೀಸೆಲ್ ಮಾದರಿಗಳನ್ನು ಮತ್ತು 5 ಪೆಟ್ರೋಲ್ ಮಾದರಿಗಳ ಆಯ್ಕೆಯನ್ನು ಹೊಂದಿದೆ.
ಆಲ್ಟ್ರೊಜ್ ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ ಪ್ರಕಾರ)
ಎಕ್ಸ್ಇ (ಪೆಟ್ರೋಲ್ ಮ್ಯಾನುವಲ್) - ರೂ. 5.29 ಲಕ್ಷ
ಎಕ್ಸ್ಎಂ (ಪೆಟ್ರೋಲ್ ಮ್ಯಾನುವಲ್)- ರೂ. 6.15 ಲಕ್ಷ
ಎಕ್ಸ್ಟಿ (ಪೆಟ್ರೋಲ್ ಮ್ಯಾನುವಲ್)- ರೂ. 6.84 ಲಕ್ಷ
ಎಕ್ಸ್ಜೆಡ್ (ಪೆಟ್ರೋಲ್ ಮ್ಯಾನುವಲ್)- ರೂ. 7.44 ಲಕ್ಷ
ಎಕ್ಸ್ಜೆಡ್ ಆಪ್ಷನ್ (ಪೆಟ್ರೋಲ್ ಮ್ಯಾನುವಲ್)- ರೂ. 7.69 ಲಕ್ಷ
****
ಎಕ್ಸ್ಇ (ಡೀಸೆಲ್ ಮ್ಯಾನುವಲ್) - ರೂ. 6.99 ಲಕ್ಷ
ಎಕ್ಸ್ಎಂ (ಡೀಸೆಲ್ ಮ್ಯಾನುವಲ್)- ರೂ. 7.75 ಲಕ್ಷ
ಎಕ್ಸ್ಟಿ (ಡೀಸೆಲ್ ಮ್ಯಾನುವಲ್)- ರೂ. 8.44 ಲಕ್ಷ
ಎಕ್ಸ್ಜೆಡ್ (ಡೀಸೆಲ್ ಮ್ಯಾನುವಲ್)- ರೂ. 9.04 ಲಕ್ಷ
ಎಕ್ಸ್ಜೆಡ್ ಆಪ್ಷನ್ (ಡೀಸೆಲ್ ಮ್ಯಾನುವಲ್)- ರೂ. 9.29 ಲಕ್ಷ
ಎಂಜಿನ್ ಸಾಮರ್ಥ್ಯ ಮತ್ತು ಪರ್ಫಾಮೆನ್ಸ್
ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಫೋರ್ ಸಿಲಿಂಡರ್ ರಿವೋಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, ಪೆಟ್ರೋಲ್ ಎಂಜಿನ್ ಅನ್ನು ಟಿಯಾಗೋದಿಂದ ಮತ್ತು ಡೀಸೆಲ್ ಎಂಜಿನ್ ಅನ್ನು ನೆಕ್ಸಾನ್ ಕಾರಿನಿಂದ ಎರವಲು ಪಡೆಯಲಾಗಿದೆ.
ಸದ್ಯಕ್ಕೆ ಹೊಸ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಆಯ್ಕೆಯನ್ನು ಮಾತ್ರವೇ ನೀಡಲಾಗಿದ್ದು, ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್ಪಿ, 113-ಎನ್ಎಂ ಟಾರ್ಕ್ ಮತ್ತು ಡೀಸೆಲ್ ಆವೃತ್ತಿಯು 90-ಬಿಎಚ್ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
ಡಿಸೈನ್ ಮತ್ತು ಸ್ಟೈಲ್
ಶಾರ್ಕ್ ನೊಸ್ ಡಿಸೈನ್ ಹೊಂದಿರುವ ಆಲ್ಟ್ರೊಜ್ ಕಾರು ಸ್ವೆಪ್ಟ್ ಬ್ಯಾಕ್ ಪ್ರೋಜೆಕ್ಟರ್ ಹೆಡ್ಲ್ಯಾಂಪ್, ಸ್ಟ್ರೀಪ್ ಕ್ರೋಮ್, ಸ್ಪೋರ್ಟಿ ಲುಕ್ ನೀಡುವುದಕ್ಕಾಗಿ ಹೈ ಮೌಂಟೆಡ್ ಫಾಗ್ ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್ಎಲ್ಎಸ್ ಜೋಡಿಸಲಾಗಿದ್ದು, 16-ಇಂಚಿನ ಸ್ಟ್ಯಾಂಡರ್ಡ್ ಡ್ಯುಯಲ್ ಟೋನ್ ಲೇಸರ್ ಕಟ್ ಅಲಾಯ್ ವೀಲ್ಹ್, ಸಿ ಪಿಲ್ಲರ್ ಹೊಂದಿಕೊಂಡಿರುವ ಹಿಂಭಾಗದ ಡೋರ್ ಲಾಕ್, ಸ್ಮೊಕ್ಡ್ ಟೈಲ್ಲೈಟ್ಸ್, ಬೂಟ್ ಲೀಡ್ ಸೌಲಭ್ಯವು ಕಾರಿನ ಅಂದವನ್ನು ಹೆಚ್ಚಿಸಿವೆ.
ಹೊಸ ಕಾರಿನಲ್ಲಿ ಪ್ರೀಮಿಯಂ ಲುಕ್ ಹೆಚ್ಚಿಸುವುದಕ್ಕಾಗಿ ರೂಫ್ ಮೌಂಟೆಡ್ ಸ್ಪಾಯ್ಲರ್, ರಿಯರ್ ವಿಂಡ್ಸ್ಕ್ರೀನ್ನಲ್ಲಿ ಇಂಟ್ರಾಗ್ರೆಟೆಡ್ ಬ್ರೇಕಿಂಗ್ ಲೈಟ್ಸ್ ಜೋಡಿಸಲಾಗಿದ್ದು, ಟಾಟಾ ಲೊಗೋ ಕೆಳಭಾಗದಲ್ಲಿ 'ALTROZ' ಬ್ರಾಂಡ್ ನೆಮ್ ನೀಡಲಾಗಿದೆ.
ಒಳಭಾಗದ ವಿನ್ಯಾಸ ಮತ್ತು ಸೌಲಭ್ಯಗಳು
ಹ್ಯಾಚ್ಬ್ಯಾಕ್ ಕಾರುಗಳಲ್ಲೇ ವಿಶೇಷ ಸೌಲಭ್ಯಗಳನ್ನು ಹೊತ್ತುಬಂದಿರುವ ಆಲ್ಟ್ರೊಜ್ ಕಾರಿನಲ್ಲಿ 90 ಡಿಗ್ರಿ ಆ್ಯಂಗಲ್ನಲ್ಲಿ ತೆರೆಯಬಹುದಾದ ಬಾಗಿಲುಗಳು ಪ್ರಮುಖ ಆಕರ್ಷಣೆಯಾಗಿದ್ದು, ಸಾಫ್ಟ್-ಟಚ್ ಡ್ಯಾಶ್ಬೋರ್ಡ್, ಸೆಂಟರ್ ಕನ್ಸೋಲ್, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಎತ್ತರವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಆಸನ, ಎರಡು ಬದಿಯಲ್ಲೂ ಸೆಂಟರ್ ಆರ್ಮ್ ರೆಸ್ಟ್, 12 ವೊಲ್ಟ್ ಚಾರ್ಜಿಂಗ್ ಪೋರ್ಟ್ಸ್, ನಾಲ್ಕು ಬಾಗಿಲುಗಳಲ್ಲೂ ಬಾಟಲ್ ಹೋಲ್ಡರ್ಸ್, ಕೀ ಲೆಸ್ ಎಂಟ್ರಿ, ಹಿಂಬದಿಯ ಸವಾರರಿಗೂ ಎಸಿ ವೆಂಟ್ಸ್ ಸೇರಿದಂತೆ ಹಲವಾರು ಹೊಸ ಫೀಚರ್ಸ್ಗಳು ಆಲ್ಟ್ರೊಜ್ ಕಾರಿನಲ್ಲಿವೆ.
ಸುರಕ್ಷಾ ಸೌಲಭ್ಯಗಳು
ಕ್ರ್ಯಾಶ್ ಟೆಸ್ಟಿಂಗ್ನಲ್ಲಿ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿರುವ ಆಲ್ಟ್ರೊಜ್ ಕಾರಿನಲ್ಲಿ ಡ್ಯಯಲ್ ಫ್ರಂಟ್ ಏರ್ಬ್ಯಾಗ್, ಎಬಿಎಸ್ ಮತ್ತು ಇಬಿಡಿ, ಕಾರ್ನರ್ ಸ್ಟ್ಯಾಬಿಲಿಟಿ ಕಂಟ್ರೊಲ್, ಆಟೋ ಹೆಡ್ಲ್ಯಾಂಪ್, ಹೈ ಸ್ಪೀಡ್ ಅಲರ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಐಸೊಫಿಕ್ಸ್ ಚೈಲ್ಡ್ ಮೌಂಟ್ ಸೀಟ್, ಫ್ರಂಟ್ ಫಾಗ್ ಲೈಟ್ ಜೊತೆ ಕಾರ್ನಿಂಗ್ ಫಂಕ್ಷನ್ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.
ಖರೀದಿಗೆ ಲಭ್ಯವಿರುವ ಬಣ್ಣಗಳು
ಆಲ್ಟ್ರೊಜ್ನಲ್ಲಿ ಹೈ-ಸ್ಟ್ರೀಟ್ ಗೋಲ್ಡ್, ಸ್ಕೈಲೈನ್ ಸಿಲ್ವರ್, ಡೌನ್ಟೌನ್ ರೆಡ್, ಮಿಡ್ಟೌನ್ ಗ್ರೇ ಮತ್ತು ಅವೆನ್ಯೂ ವೈಟ್ ಎನ್ನುವ ಐದು ಬಣ್ಣಗಳ ಆಯ್ಕೆ ಹೊಂದಿದ್ದು, ಮುಂಬರುವ ದಿನಗಳಲ್ಲಿ ಡ್ಯುಯಲ್ ಟೋನ್ ಕೂಡಾ ಬಿಡುಗಡೆ ಸಾಧ್ಯತೆಗಳಿವೆ.
ಈ ಮೂಲಕ ಹ್ಯಾಚ್ಬ್ಯಾಕ್ ಆವೃತ್ತಿಗಳಲ್ಲೇ ಅತ್ಯುತ್ತಮ ಕಾರು ಮಾದರಿಯನ್ನಾಗಿ ಅಭಿವೃದ್ದಿಗೊಳಿಸಲು ಪ್ರಯತ್ನಿಸಿರುವ ಟಾಟಾ ಸಂಸ್ಥೆಯು ಆಲ್ಟ್ರೊಜ್ ಮೂಲಕ ಮಾರುಕಟ್ಟೆ ಹೊಸ ಸಂಚಲನ ಮೂಡಿಸುವ ತವಕದಲ್ಲಿದ್ದು, ಹೊಸ ಕಾರು ಮಾರುತಿ ಸುಜುಕಿ ಬಲೆನೊ, ಹ್ಯುಂಡೈ ಎಲೈಟ್ ಐ20, ಟೊಯೊಟಾ ಗ್ಲಾಂಝಾ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.