ಡೀಲರ್‍‍ಶಿಪ್ ತಲುಪಿದ ಟಾಟಾ ಆಲ್ಟ್ರೋಜ್ ಕಾರು

ದೇಶದ ಆಟೋಮೊಬೈಲ್ ಉದ್ಯಮವು ಸುಮಾರು ಒಂದು ವರ್ಷದಿಂದ ಕುಸಿತವನ್ನು ಕಾಣುತ್ತಿದೆ. ಈ ಕುಸಿತದ ಕಾರಣಕ್ಕೆ ಹಲವಾರು ವಾಹನ ತಯಾರಕ ಕಂಪನಿಗಳು ಉದ್ಯೋಗಗಳನ್ನು ಕಡಿತಗೊಳಿಸುತ್ತಿವೆ. ಕೆಲವು ಕಂಪನಿಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಕಂಪನಿಗಳು ಮಾರಾಟದಲ್ಲಿ ಕುಸಿತವನ್ನು ಅನುಭವಿಸುತ್ತಿವೆ.

ಡೀಲರ್‍‍ಶಿಪ್ ತಲುಪಿದ ಟಾಟಾ ಆಲ್ಟ್ರೋಜ್ ಕಾರು

ಆಟೋಮೊಬೈಲ್ ಉದ್ಯಮವು ಸಂಕಷ್ಟವನ್ನು ಅನುಭವಿಸುತ್ತಿದ್ದರೂ, ಹಲವು ಕಂಪನಿಗಳು ಹೊಸ ಹೊಸ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿವೆ. ಭಾರತ ಮೂಲದ ಟಾಟಾ ಮೋಟಾರ್ಸ್ ಸಹ ಹಲವು ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ.

ಡೀಲರ್‍‍ಶಿಪ್ ತಲುಪಿದ ಟಾಟಾ ಆಲ್ಟ್ರೋಜ್ ಕಾರು

ಟಾಟಾ ಆಲ್ಟ್ರೋಜ್ ಕಾರಿನ ಬಿಡುಗಡೆಯೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಸೆಗ್‍‍ಮೆಂಟಿಗೆ ಕಾಲಿಡುತ್ತಿದೆ. ಇದುವರೆಗೂ ಈ ಸೆಗ್‍‍ಮೆಂಟಿನಲ್ಲಿ ಮಾರುತಿ ಸುಜುಕಿ ಕಂಪನಿಯ ಬಲೆನೊ, ಹೋಂಡಾ ಜಾಜ್ ಹಾಗೂ ಹ್ಯುಂಡೈ ಐ20 ಕಾರುಗಳನ್ನು ಪಾರುಪಾತ್ಯವನ್ನು ಸಾಧಿಸಿವೆ.

ಡೀಲರ್‍‍ಶಿಪ್ ತಲುಪಿದ ಟಾಟಾ ಆಲ್ಟ್ರೋಜ್ ಕಾರು

ಬಿಡುಗಡೆಯಾಗಲಿರುವ ಹೊಸ ಆಲ್ಟ್ರೋಜ್ ಕಾರು, ಈ ಕಾರುಗಳಿಗೆ ಪೈಪೋಟಿ ನೀಡಲಿದೆ. ಅಂದ ಹಾಗೆ ಆಲ್ಟ್ರೋಜ್ ಕಾರು ಇದೇ ಜನವರಿ 20ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಆಲ್ಟ್ರೋಜ್ ಕಾರುಗಳು ಡೀಲರ್‍‍ಗಳನ್ನು ತಲುಪಿವೆ. ಇದರ ಚಿತ್ರಗಳನ್ನು ಅಶ್ವಿನ್ ಹಾಗೂ ಅಮಲ್ ರಾಯ್ ಪಾಲ್ ಎಂಬುವವರು ಫೇಸ್‍‍ಬುಕ್‍‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಡೀಲರ್‍‍ಶಿಪ್ ತಲುಪಿದ ಟಾಟಾ ಆಲ್ಟ್ರೋಜ್ ಕಾರು

ಟಾಟಾ ಮೋಟಾರ್ಸ್ ಆಲ್ಟ್ರೋಜ್ ಕಾರ್ ಅನ್ನು ಹೊಸ ಆಲ್ಫಾ ಪ್ಲಾಟ್‍‍ಫಾರಂನಲ್ಲಿ ಅಭಿವೃದ್ಧಿಪಡಿಸಿದೆ. ಹೊಸ ಆಲ್ಟ್ರೋಜ್ ಕಾರ್ ಅನ್ನು ಎಕ್ಸ್ ಇ, ಎಕ್ಸ್ ಎಂ ಹಾಗೂ ಎಕ್ಸ್ ಟಿ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಡೀಲರ್‍‍ಶಿಪ್ ತಲುಪಿದ ಟಾಟಾ ಆಲ್ಟ್ರೋಜ್ ಕಾರು

ಆಲ್ಟ್ರೋಜ್ ಕಾರಿನ ಗಾತ್ರದ ಬಗ್ಗೆ ಹೇಳುವುದಾದರೆ, ಈ ಕಾರು 3,990 ಎಂಎಂ ಉದ್ದ, 1,755 ಎಂಎಂ ಅಗಲ, 1,523 ಎಂಎಂ ಎತ್ತರ ಹಾಗೂ 2,501 ಎಂಎಂ ವ್ಹೀಲ್‍‍ಬೇಸ್, 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಈ ಕಾರು 1036ರಿಂದ 1150 ಕೆ.ಜಿ ತೂಕವನ್ನು ಹೊಂದಿದೆ.

ಡೀಲರ್‍‍ಶಿಪ್ ತಲುಪಿದ ಟಾಟಾ ಆಲ್ಟ್ರೋಜ್ ಕಾರು

ಇದರ ಜೊತೆಗೆ 345ರಿಂದ 665 ಲೀಟರ್ ಬೂಟ್‍‍ಸ್ಪೇಸ್ ಹಾಗೂ 37 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿದೆ. ಹೊಸ ಆಲ್ಟ್ರೋಜ್ ಕಾರಿನ ಎಕ್ಸ್ ಟಿರಿಯರ್ ಹೆಚ್ಚಿನ ಪ್ರಮಾಣದ ಲೇಸರ್‍ ಅಂಶಗಳನ್ನು ಹೊಂದಿದೆ. ಇವುಗಳು ಕಾರಿಗೆ ಶಾರ್ಪ್ ಡಿಸೈನ್ ನೀಡುವುದರ ಜೊತೆಗೆ ಪರ್ಫಾಮೆನ್ಸ್ ಅನ್ನು ಸುಧಾರಿಸುತ್ತವೆ.

ಡೀಲರ್‍‍ಶಿಪ್ ತಲುಪಿದ ಟಾಟಾ ಆಲ್ಟ್ರೋಜ್ ಕಾರು

ಆಲ್ಟ್ರೋಜ್ ಕಾರಿನ ಮುಂಭಾಗದ ತುದಿಯು ನಯವಾಗಿದ್ದು, ಡ್ಯುಯಲ್ ಚೇಂಬರ್ ಹೊಂದಿರುವ ಹೆಡ್‌ಲ್ಯಾಂಪ್‌ಗಳು ಕಠಿಣ ರಸ್ತೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳಕನ್ನು ನೀಡುತ್ತವೆ. ಆಲ್ಟ್ರೋಜ್‍ ಕಾರಿನ ಇಂಟಿರಿಯರ್ ಅನ್ನು ಪಿಕಾಸಾ ಮಾನದಂಡಗಳಂತೆ ನಿರ್ಮಿಸಲಾಗಿದೆ.

ಡೀಲರ್‍‍ಶಿಪ್ ತಲುಪಿದ ಟಾಟಾ ಆಲ್ಟ್ರೋಜ್ ಕಾರು

ಈ ಸೆಗ್‍‍ಮೆಂಟಿನಲ್ಲಿರುವ ಅಗಲವಾದ ಕಾರ್ ಆದ ಆಲ್ಟ್ರೋಜ್ ಕಾರಿನಲ್ಲಿ, ಡ್ಯಾಶ್‍‍ಬೋರ್ಡ್ ಸುತ್ತಲೂ ಬ್ಲೂ ಆಂಬಿಯಂಟ್ ಲೈಟಿಂಗ್ ಹೊಂದಿರುವ ಫ್ಲೋಟಿಂಗ್ ಲೇ‍ಔಟ್‍‍ಗಳನ್ನು ಅಳವಡಿಸಲಾಗಿದೆ. ಡ್ಯುಯಲ್ ಟೋನ್ ಬ್ಲಾಕ್ ಹಾಗೂ ಗ್ರೇ ಬಣ್ಣದ ಡ್ಯಾಶ್‌ಬೋರ್ಡ್ ಕ್ರೋಮ್ ಅಸೆಂಟ್‍‍ನೊಂದಿಗೆ ಮೆಟಾಲಿಕ್ ಫಿನಿಶಿಂಗ್ ಹೊಂದಿದೆ.

ಡೀಲರ್‍‍ಶಿಪ್ ತಲುಪಿದ ಟಾಟಾ ಆಲ್ಟ್ರೋಜ್ ಕಾರು

ಸ್ಟೀಯರಿಂಗ್ ಮೌಂಟೆಡ್ ಬಟನ್‍‍ಗಳ ಮೂಲಕ ನಿಯಂತ್ರಿಸಲಾಗುವ 17.78 ಸೆಂ.ಮೀನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ ಅಳವಡಿಸಲಾಗಿದೆ. ಇದರ ಜೊತೆಗೆ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಎಸಿ, ಸಿಟಿ ಹಾಗೂ ಇಕೊದ ಮಲ್ಟಿ ಡ್ರೈವ್ ಮೋಡ್‌ ಹಾಗೂ ಪುಶ್ ಬಟನ್ ಸ್ಟಾರ್ಟ್ / ಸ್ಟಾಪ್ ಫೀಚರ್‍‍ಗಳಿವೆ.

ಡೀಲರ್‍‍ಶಿಪ್ ತಲುಪಿದ ಟಾಟಾ ಆಲ್ಟ್ರೋಜ್ ಕಾರು

ಟಾಟಾ ಆಲ್ಟ್ರೋಜ್ ಕಾರ್ ಅನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಲಾಗುವುದು. ಇವುಗಳಲ್ಲಿ 1.2 ಲೀಟರಿನ 3 ಸಿಲಿಂಡರ್ ಹೊಂದಿರುವ ಪೆಟ್ರೋಲ್ ಎಂಜಿನ್ 6,000 ಆರ್‍‍ಪಿ‍ಎಂನಲ್ಲಿ 86 ಬಿ‍‍ಹೆಚ್‍‍ಪಿ ಪವರ್ ಹಾಗೂ 3,300 ಆರ್‍‍ಪಿ‍ಎಂನಲ್ಲಿ 113 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಡೀಲರ್‍‍ಶಿಪ್ ತಲುಪಿದ ಟಾಟಾ ಆಲ್ಟ್ರೋಜ್ ಕಾರು

ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಇನ್ನು 1.5 ಲೀಟರಿನ 4 ಸಿಲಿಂಡರ್ ಹೊಂದಿರುವ ಟರ್ಬೊ ಡೀಸೆಲ್ ಎಂಜಿನ್ 4,000 ಆರ್‍‍ಪಿ‍ಎಂನಲ್ಲಿ 90 ಬಿ‍‍ಹೆಚ್‍‍ಪಿ ಪವರ್ ಹಾಗೂ 3,000 ಆರ್‍‍ಪಿ‍ಎಂನಲ್ಲಿ 200 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಡೀಲರ್‍‍ಶಿಪ್ ತಲುಪಿದ ಟಾಟಾ ಆಲ್ಟ್ರೋಜ್ ಕಾರು

ಈ ಕಾರಿನಲ್ಲಿ ಸಸ್ಪೆಂಷನ್‍‍ಗಳಿಗಾಗಿ ಕಾಯಿಲ್ ಸ್ಪ್ರಿಂಗ್ ಹೊಂದಿರುವ ಮ್ಯಾಕ್‍‍ಫರ್ಸನ್ ಡ್ಯುಯಲ್ ಸ್ಟ್ರಟ್‍‍ಗಳಿದ್ದರೆ, ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಂ ಬ್ರೇಕ್‍‍ಗಳಿವೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.5 ಲಕ್ಷದಿಂದ ರೂ.9 ಲಕ್ಷಗಳವರೆಗೆ ಇರುವ ಸಾಧ್ಯತೆಗಳಿವೆ.

Article Published On: Monday, January 13, 2020, 12:43 [IST]
English summary
Tata Altroz Starts Arriving At Dealerships Ahead Of India-Launch: Will Rival The Maruti Baleno. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+