ಆಲ್‌ಟ್ರೊಜ್ ಸೇರಿದಂತೆ ಮೂರು ಫೇಸ್‌ಲಿಫ್ಟ್ ಕಾರುಗಳ ಬಿಡುಗಡೆಗೆ ಟಾಟಾ ಭರ್ಜರಿ ಸಿದ್ದತೆ

ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಬಿಡುಗಡೆಗೆ ಸಜ್ಜಾಗಿದ್ದು, ಹೊಸ ಕಾರಿನ ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟಿಗೋರ್, ಟಿಯಾಗೋ ಮತ್ತು ನೆಕ್ಸಾನ್ ಕಾರುಗಳ ಫೇಸ್‌ಲಿಫ್ಟ್ ಆವೃತ್ತಿಗಳನ್ನು ಸಹ ಬಿಡುಗಡೆಗೊಳಿಸಲಿದೆ.

ಆಲ್‌ಟ್ರೊಜ್ ಸೇರಿದಂತೆ ಮೂರು ಫೇಸ್‌ಲಿಫ್ಟ್ ಕಾರುಗಳ ಬಿಡುಗಡೆಗೆ ಟಾಟಾ ಭರ್ಜರಿ ಸಿದ್ದತೆ

ಟಾಟಾ ಸದ್ಯ ಹೊಸ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಹೊಚ್ಚ ಹೊಸ ಕಾರು ಮಾದರಿಗಳಾದ ಆಲ್‌ಟ್ರೊಜ್, ನೆಕ್ಸಾನ್ ಎಲೆಕ್ಟ್ರಿಕ್, ಗ್ರಾವಿಟಾಸ್ ಜೊತೆಗೆ ಬಿಎಸ್-6 ಮಾದರಿಗಳಾದ ನೆಕ್ಸಾನ್, ಹ್ಯಾರಿಯರ್, ಟಿಗೋರ್, ಟಿಯಾಗೋ ಮತ್ತು ಹೆಕ್ಸಾ ಮಾದರಿಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆವೃತ್ತಿಗಿಂತಲೂ ಹೊಸ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳಿಸಿದೆ.

ಆಲ್‌ಟ್ರೊಜ್ ಸೇರಿದಂತೆ ಮೂರು ಫೇಸ್‌ಲಿಫ್ಟ್ ಕಾರುಗಳ ಬಿಡುಗಡೆಗೆ ಟಾಟಾ ಭರ್ಜರಿ ಸಿದ್ದತೆ

ಹೊಸ ಕಾರುಗಳ ಉತ್ಪಾದನೆಗಾಗಿ ಟಾಟಾ ಸಂಸ್ಥೆಯು ಒಮೆಗಾ ಮತ್ತು ಅಲ್ಫಾ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಬಳಕೆ ಮಾಡುತ್ತಿದ್ದು, ಎಂಜಿನ್ ಮತ್ತು ಪ್ರೀಮಿಯಂ ಸೌಲಭ್ಯಗಳಲ್ಲಿ ಮಾತ್ರವಲ್ಲದೇ ಪ್ರಯಾಣಿಕರ ಸುರಕ್ಷತೆಯಲ್ಲೂ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದೆ.

ಆಲ್‌ಟ್ರೊಜ್ ಸೇರಿದಂತೆ ಮೂರು ಫೇಸ್‌ಲಿಫ್ಟ್ ಕಾರುಗಳ ಬಿಡುಗಡೆಗೆ ಟಾಟಾ ಭರ್ಜರಿ ಸಿದ್ದತೆ

ಇದರಲ್ಲಿ ಮೊದಲ ಹಂತವಾಗಿ ಆಲ್‌ಟ್ರೊಜ್, ಟಿಗೋರ್, ಟಿಯಾಗೋ ಮತ್ತು ನೆಕ್ಸಾನ್ ಫೇಸ್‌ಲಿಫ್ಟ್ ಕಾರುಗಳನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ತದನಂತರ ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಗೊಳ್ಳಲಿದ್ದು, ಮಾರ್ಚ್ ಅಂತ್ಯದಲ್ಲಿ ಹೆಕ್ಸಾ ಮತ್ತು ಹ್ಯಾರಿಯರ್ ಬಿಎಸ್-6 ಕಾರುಗಳು ಬಿಡುಗಡೆಯಾಗಲಿವೆ. ತದನಂತರವಷ್ಟೇ ಜೂನ್ ಆರಂಭದಲ್ಲಿ ಭಾರೀ ನೀರಿಕ್ಷೆಯಲ್ಲಿರುವ 7 ಸೀಟರ್ ಗ್ರಾವಿಟಾಸ್ ಎಸ್‌ಯುವಿ ಕಾರು ಖರೀದಿಗೆ ಲಭ್ಯವಾಗಲಿದೆ ಎನ್ನಲಾಗುತ್ತಿದೆ.

ಆಲ್‌ಟ್ರೊಜ್ ಸೇರಿದಂತೆ ಮೂರು ಫೇಸ್‌ಲಿಫ್ಟ್ ಕಾರುಗಳ ಬಿಡುಗಡೆಗೆ ಟಾಟಾ ಭರ್ಜರಿ ಸಿದ್ದತೆ

ಆಲ್‌ಟ್ರೊಜ್ ಕಾರು ಗ್ರಾಹಕರ ನೀರಿಕ್ಷೆಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬರುವ ಸುಳಿವು ನೀಡಿದ್ದು, ಆಲ್ಬಾಟ್ರೊಸ್ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಸಿದ್ದವಾಗಿರುವ ಹೊಸ ಕಾರು ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಲಿದೆ.

ಆಲ್‌ಟ್ರೊಜ್ ಸೇರಿದಂತೆ ಮೂರು ಫೇಸ್‌ಲಿಫ್ಟ್ ಕಾರುಗಳ ಬಿಡುಗಡೆಗೆ ಟಾಟಾ ಭರ್ಜರಿ ಸಿದ್ದತೆ

ಬಿಡುಗಡೆಯಾಗಲಿರುವ ಆಲ್‌ಟ್ರೊಜ್ ಕಾರು 1.2-ಲೀಟರ್ ಪೆಟ್ರೋಲ್ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.50 ಲಕ್ಷದಿಂದ ಟಾಪ್ ಎಂಡ್ ಕಾರಿನ ಬೆಲೆಯು ರೂ.8 ಲಕ್ಷ ಬೆಲೆ ಅಂದಾಜಿಸಲಾಗಿದೆ.

ಆಲ್‌ಟ್ರೊಜ್ ಸೇರಿದಂತೆ ಮೂರು ಫೇಸ್‌ಲಿಫ್ಟ್ ಕಾರುಗಳ ಬಿಡುಗಡೆಗೆ ಟಾಟಾ ಭರ್ಜರಿ ಸಿದ್ದತೆ

ಹೊಸ ಕಾರಿನಲ್ಲಿ 7-ಇಂಚಿನ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಮಡಿಕೆ ಮಾಡಬಹುದಾದ ಮಲ್ಟಿ ಇನ್‌ಫಾರ್ಮ್‌ಮೆಷನ್ ಡಿಸ್‌‌ಪ್ಲೇ, ಎತ್ತರವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಆಸನ, ಎರಡು ಬದಿಯಲ್ಲೂ ಸೆಂಟರ್ ಆರ್ಮ್ ರೆಸ್ಟ್, 12 ವೊಲ್ಟ್ ಚಾರ್ಜಿಂಗ್ ಪೋರ್ಟ್ಸ್, ನಾಲ್ಕು ಬಾಗಿಲುಗಳಲ್ಲೂ ಬಾಟಲ್ ಹೋಲ್ಡರ್ಸ್, ಕೀ ಲೆಸ್ ಎಂಟ್ರಿ, ಹಿಂಬದಿಯ ಸವಾರರಿಗೂ ಎಸಿ ವೆಂಟ್ಸ್ ಸೇರಿದಂತೆ ಹಲವಾರು ಹೊಸ ಫೀಚರ್ಸ್‌ಗಳು ಆಲ್‌ಟ್ರೊಜ್ ಕಾರಿನಲ್ಲಿವೆ.

ಆಲ್‌ಟ್ರೊಜ್ ಸೇರಿದಂತೆ ಮೂರು ಫೇಸ್‌ಲಿಫ್ಟ್ ಕಾರುಗಳ ಬಿಡುಗಡೆಗೆ ಟಾಟಾ ಭರ್ಜರಿ ಸಿದ್ದತೆ

ಹಾಗೆಯೇ ನೆಕ್ಸಾನ್ ಕಾರು ಸದ್ಯ ಮಾರುಕಟ್ಟೆಯಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಫೇಸ್‌ಲಿಫ್ಟ್ ಆವೃತ್ತಿಯಲ್ಲೂ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಂಜಿನ್ ಆಯ್ಕೆಗಳನ್ನೇ ಬಿಎಸ್-6 ತಂತ್ರಜ್ಞಾನದೊಂದಿಗೆ ಉನ್ನತೀಕರಿಸಲಾಗಿದೆ.

ಆಲ್‌ಟ್ರೊಜ್ ಸೇರಿದಂತೆ ಮೂರು ಫೇಸ್‌ಲಿಫ್ಟ್ ಕಾರುಗಳ ಬಿಡುಗಡೆಗೆ ಟಾಟಾ ಭರ್ಜರಿ ಸಿದ್ದತೆ

ಇದರೊಂದಿಗೆ ಟಿಗೋರ್ ಮತ್ತು ಟಿಯಾಗೋ ಫೇಸ್‌ಲಿಫ್ಟ್ ಕೂಡಾ ಹೊರಭಾಗದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗೊಂಡಿದ್ದು, ಗ್ರಿಲ್, ಬ್ಯಾನೆಟ್ ಮತ್ತು ಬಂಪರ್ ವಿನ್ಯಾಸವನ್ನು ಬದಲಾವಣೆಗೊಳಿಸಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿವೆ.

ಆಲ್‌ಟ್ರೊಜ್ ಸೇರಿದಂತೆ ಮೂರು ಫೇಸ್‌ಲಿಫ್ಟ್ ಕಾರುಗಳ ಬಿಡುಗಡೆಗೆ ಟಾಟಾ ಭರ್ಜರಿ ಸಿದ್ದತೆ

ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಟೈಲ್‌ಲ್ಯಾಂಪ್ ಕ್ಲಸ್ಟರ್ ಡಿಸೈನ್, ಅಲಾಯ್ ವೀಲ್ಹ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊಂದಿದ್ದು, ಟಿಯಾಗೋ ಕಾರಿನಲ್ಲಿ ಈ ಬಾರಿ ಪೆಟ್ರೋಲ್ ಆವೃತ್ತಿ ಮಾತ್ರವೇ ಖರೀದಿಗೆ ಲಭ್ಯವಾಗಲಿದೆ.

ಆಲ್‌ಟ್ರೊಜ್ ಸೇರಿದಂತೆ ಮೂರು ಫೇಸ್‌ಲಿಫ್ಟ್ ಕಾರುಗಳ ಬಿಡುಗಡೆಗೆ ಟಾಟಾ ಭರ್ಜರಿ ಸಿದ್ದತೆ

ಬಿಎಸ್-6 ನಿಯಮ ಜಾರಿಯಿಂದಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೈಬಿಡುತ್ತಿದ್ದು, ಟಾಟಾ ಕೂಡಾ ಪ್ರಸ್ತುತ ಮಾರುಕಟ್ಟೆಯಲ್ಲಿರುವ 1.1-ಲೀಟರ್ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ಮುಂದುವರಿಸಲಿದೆ.

Article Published On: Tuesday, January 21, 2020, 13:47 [IST]
English summary
Tata Altroz to be launched tomorrow along with 3 other facelifted models. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+