ಜನಪ್ರಿಯ ಟಾಟಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಸರಣಿಯಲ್ಲಿರುವ ಆಯ್ದ ಜನಪ್ರಿಯ ಮಾದರಿಗಳಿಗೆ ಭರ್ಜರಿ ರಿಯಾಯಿತಿ ಮತ್ತು ವಿಶೇಷ ಆಫರ್ ಗಳನ್ನು ಘೋಷಿಸಿದೆ. ಟಾಟಾ ಕಂಪನಿಯು ಆಯ್ದ ಮಾದರಿಗಳಿಗೆ ನಗದು ರಿಯಾಯಿತಿ, ಕಾರ್ಪೊರೇಟ್ ಬೋನಸ್ ಮತ್ತು ಎಕ್ಸ್‌ಚೆಂಜ್ ಬೋನಸ್ ಗಳನ್ನು ನೀಡಿದೆ.

ಜನಪ್ರಿಯ ಟಾಟಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಡ್

ಟಾಟಾ ಮೋಟಾರ್ಸ್ ಕಂಪನಿಯು ಜುಲೈ ತಿಂಗಳಲ್ಲಿ ಒಟ್ಟು ರೂ.80,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಈ ರಿಯಾಯಿತಿಗಳು ಮಾದರಿಗಳನ್ನು ಅವಲಂಬಿಸಿ ಬದಲಾಗುತ್ತದೆ. ಖರೀದಿದಾರರು ‘ಕ್ಲಿಕ್ ಟು ಡ್ರೈವ್' ಎಂಬ ಬ್ರಾಂಡ್‌ನ ಡಿಜಿಟಲ್ ಆನ್‌ಲೈನ್ ಮಾರಾಟ ವೇದಿಕೆಯ ಮೂಲಕ ರಿಯಾಯಿತಿಗಳನ್ನು ಪಡೆಯಬಹುದು. ಈ ಭರ್ಜರಿ ರಿಯಾಯಿತಿಗಳು ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ. ಈ ಜುಲೈ ತಿಂಗಳ ಮಾದರಿವಾರು ರಿಯಾಯಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಜನಪ್ರಿಯ ಟಾಟಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಡ್

ಟಾಟಾ ಟಿಯಾಗೋ

ಟಾಟಾ ಟಿಯಾಗೋ ಬ್ರ್ಯಾಂಡ್‌ನ ಸರಣಿಯಲ್ಲಿ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಈ ಹೊಸ ಟಾಟಾ ಟಿಯಾಗೋ ಕಾರಿಗೆ ಒಟ್ಟು ರೂ.35,000 ಗಳವರೆಗೆ ಭರ್ಜರಿ ರಿಯಾಯಿತಿಗಳನ್ನು ನೀಡಲಾಗಿದೆ. ಇನ್ನು ನಿಮ್ಮ ಹಳೆಯ ಕಾರನ್ನು ಡೀಲರ್ ಮಾರಾಟ ಮಾಡುವಾಗ ರೂ.15,000 ನಗದು ರಿಯಾಯಿತಿಯನ್ನು ಘೋಷಿಸಲಾಗಿದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಜನಪ್ರಿಯ ಟಾಟಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಡ್

ಇದರೊಂದಿಗೆ ರೂ.10,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ಒಳಗೊಂಡಿದೆ. ಇನ್ನು ಕಂಪನಿಯು ಗ್ರಾಹಕರ ಅರ್ಹತೆಗೆ ಅನುಗುಣವಾಗಿ ರೂ.10,000 ವರಗೆ ಕಾರ್ಪೊರೇಟ್ ಬೋನಸ್ ನೀಡುತ್ತದೆ.

ಜನಪ್ರಿಯ ಟಾಟಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಡ್

ಟಾಟಾ ಟಿಗೋರ್

ಟಾಟಾ ಟಿಗೋರ್ ಕಾರಿಗೆ ಒಟ್ಟು ರೂ.50,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರಲ್ಲಿ ರೂ.20,000 ನಗದು ರಿಯಾಯಿತಿ ಮತ್ತು ರೂ.20,000 ಗಳವರೆಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ಸೇರಿದೆ. ಗ್ರಾಹಕರ ಅರ್ಹತೆಗೆ ಅನುಗುಣವಾಗಿ ಹೆಚ್ಚುವರಿ ರೂ.10,000 ವರಗೆ ಕಾರ್ಪೊರೇಟ್ ಬೋನಸ್ ನೀಡುತ್ತದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಜನಪ್ರಿಯ ಟಾಟಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಡ್

ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಬ್ರ್ಯಾಂಡ್‌ನ ಪೋರ್ಟ್ಫೋಲಿಯೊದಲ್ಲಿ ಅತ್ಯಂತ ಯಶಸ್ವಿ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ನೆಕ್ಸಾನ್ ಎಸ್‍ಯುವಿಗೆ ಯಾವುದೇ ನಗದು ರಿಯಾಯಿತಿ ಮತ್ತು ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಿಲ್ಲ. ಆದರೆ ಡೀಲರುಗಳು ಗ್ರಾಹಕರನ್ನು ಅನುಸರಿಸಿ ರೂ.10,000 ಗಳವರೆಗೆ ರಿಯಾಯಿತಿಯನ್ನು ನೀಡಬಹುದು.

ಜನಪ್ರಿಯ ಟಾಟಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಡ್

ಟಾಟಾ ಹ್ಯಾರಿಯರ್

ಜನಪ್ರಿಯ ಟಾಟಾ ಹ್ಯಾರಿಯರ್ ಎಸ್‍ಯುವಿಗೆ ಒಟ್ಟು ರೂ.80,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರಲ್ಲಿ ರೂ.25,000 ಗಳವರೆಗೆ ನಗದು ರಿಯಾಯಿತಿ ಮತ್ತು ರೂ.40,000 ಗಳವರಗೆ ಎಕ್ಸ್‌ಚೆಂಜ್ ಬೋನಸ್ ಅನ್ನು ನೀಡಿದೆ. ಇನ್ನು ಅರ್ಹತೆಗೆ ಅನುಗುಣವಾಗಿ ರೂ.15,000 ಗಳವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುತ್ತದೆ.

MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಜನಪ್ರಿಯ ಟಾಟಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಡ್

ಈ ಮೇಲಿನ ರಿಯಾಯಿತಿಯಲ್ಲಿ ಡಾರ್ಕ್ ಎಡಿಷನ್ ಹ್ಯಾರಿಯರ್ ಎಸ್‍ಯುವಿಯ ಜೊತೆ ಎಕ್ಸ್‌ಝಡ್‌ ಪ್ಲಸ್ ಮತ್ತು ಎಕ್ಸ್‌ಝಡ್‌ಎ ಪ್ಲಸ್ ಮಾದರಿಗಳು ಒಳಗೊಂಡಿಲ್ಲ. ಆದರೆ ಡಾರ್ಕ್ ಎಡಿಷನ್ ಮಾದರಿಗಳಿಗೆ ಪ್ರತ್ಯೇಕವಾಗಿ ರೂ.55,000 ಗಳವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಇದರಲ್ಲಿ ಅದೇ ರೀತಿಯ ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಬೋನಸ್ ಅನ್ನು ಹೊಂದಿದೆ.

ಜನಪ್ರಿಯ ಟಾಟಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಡ್

ಟಾಟಾ ಮೋಟಾರ್ಸ್ ಕಂಪನಿಯು ಮಾರಾಟವನ್ನು ಹೆಚ್ಚಿಸಲು ಆಯ್ದ ಜನಪ್ರಿಯ ಮಾದರಿಗಳಿಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಭರ್ಜರಿ ರಿಯಾಯಿತಿಯನ್ನು ನೀಡಿರುವುದರಿಂದ ಕಾರುಗಳ ಮಾರಾಟವನ್ನು ಹೆಚ್ಚಿಸಲು ಸಹಾಯವಾಗಬಹುದು.

Article Published On: Friday, July 17, 2020, 16:16 [IST]
English summary
Tata Cars Offers Discounts, Exchange Bonuses & Other Benefits In July 2020. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+