ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಾಟಾ ಗ್ರಾವಿಟಾಸ್ ಎ‍‍ಟಿ

ಟಾಟಾ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಒಂದು ವರ್ಷದ ಹಿಂದೆ ಹ್ಯಾರಿಯರ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಆರಂಭದಲ್ಲಿ ಈ ಎಸ್‍‍ಯುವಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿತ್ತು.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಾಟಾ ಗ್ರಾವಿಟಾಸ್ ಎ‍‍ಟಿ

ಕಿಯಾ ಸೆಲ್ಟೋಸ್ ಹಾಗೂ ಎಂಜಿ ಹೆಕ್ಟರ್ ಎಸ್‍‍ಯುವಿಗಳು ಬಿಡುಗಡೆಯಾದ ನಂತರ ಅವುಗಳಿಂದ ಉಂಟಾದ ತೀವ್ರ ಪೈಪೋಟಿಯ ಹಿನ್ನೆಲೆಯಲ್ಲಿ ಈ ಮಧ್ಯಮ ಗಾತ್ರದ ಎಸ್‍‍ಯುವಿಯ ಮಾರಾಟವು ಕುಸಿತವನ್ನು ಕಂಡಿತು.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಾಟಾ ಗ್ರಾವಿಟಾಸ್ ಎ‍‍ಟಿ

ಭಾರತೀಯ ಮೂಲದ ಟಾಟಾ ಮೋಟಾರ್ಸ್, ಹ್ಯಾರಿಯರ್ ಎಸ್‍‍ಯುವಿಯನ್ನು ಒಮೆಗಾ ಪ್ಲಾಟ್‍‍ಫಾರಂನಲ್ಲಿ ಅಭಿವೃದ್ಧಿಪಡಿಸಿತ್ತು. ಈಗ ಇದೇ ಪ್ಲಾಟ್‍‍ಫಾರಂ ಅನ್ನು ಬಳಸಿ ಬೇರೆ ಕಾರುಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಾಟಾ ಗ್ರಾವಿಟಾಸ್ ಎ‍‍ಟಿ

ಟಾಟಾ ಮೋಟಾರ್ಸ್ ಏಳು ಸೀಟರ್‍‍ನ ಗ್ರಾವಿಟಾಸ್ ಎಸ್‍‍ಯುವಿಯನ್ನು ಅಭಿವೃದ್ಧಿಪಡಿಸಿದ್ದು, ಮಾರಾಟಕ್ಕೂ ಮುಂಚೆ ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ 2020ರ ಆಟೋ ಎಕ್ಸ್ ಪೋದಲ್ಲಿ ಗ್ರಾವಿಟಾಸ್ ಎಸ್‍‍ಯುವಿಯನ್ನು ಪ್ರದರ್ಶಿಸಲಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಾಟಾ ಗ್ರಾವಿಟಾಸ್ ಎ‍‍ಟಿ

ಈ ಎಸ್‍‍ಯುವಿಯ ಬೆಲೆಯು ಟಾಟಾ ಹ್ಯಾರಿಯರ್ ಎಸ್‍‍ಯುವಿಗಿಂತ ಹೆಚ್ಚಾಗಿರಲಿದೆ. ಈ ಪ್ರೀಮಿಯಂ ಎಸ್‍‍ಯುವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.16 ಲಕ್ಷದಿಂದ ರೂ.20 ಲಕ್ಷಗಳಾಗಲಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಾಟಾ ಗ್ರಾವಿಟಾಸ್ ಎ‍‍ಟಿ

ಈ ಹಿಂದೆ ಹೆಚ್ 7 ಎಕ್ಸ್ ಎಂದು ಕರೆಯಲಾಗುತ್ತಿದ್ದ ಗ್ರಾವಿಟಾಸ್ ಎಸ್‍ಯುವಿ ಹ್ಯಾರಿಯರ್‍‍ಗಿಂತ ಉದ್ದವಾದ ರೇರ್ ಒವರ್‍‍ಹ್ಯಾಂಗ್ ಹೊಂದಿರಲಿದೆ. ಈ ಎಸ್‍ಯುವಿಯು ಹ್ಯಾರಿಯರ್‍‍ಗಿಂತ 62 ಎಂಎಂ ಉದ್ದವಾಗಿರಲಿದೆ. ಈ ಬದಲಾವಣೆಗಳನ್ನು ಬಿ ಪಿಲ್ಲರ್‍‍ನಲ್ಲಿ ಕಾಣಬಹುದು.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಾಟಾ ಗ್ರಾವಿಟಾಸ್ ಎ‍‍ಟಿ

ಮೂರನೇ ಸಾಲಿನಲ್ಲಿರುವವರಿಗಾಗಿ ಉತ್ತಮವಾದ ಹೆಡ್‍‍ರೂಂ ನೀಡುವುದಕ್ಕಾಗಿ ಗ್ರಾವಿಟಾಸ್ ರೂಫ್ ಮೇಲೆ ಬಂಪ್ ಹೊಂದಿದೆ. ಇದರ ಜೊತೆಗೆ ಹೊಸ ವಿನ್ಯಾಸದ ಅಲಾಯ್ ವ್ಹೀಲ್‍‍ಗಳನ್ನು ಹೊಂದಿರಲಿದೆ. ಏಳು ಸೀಟರ್‍‍ನ ಗ್ರಾವಿಟಾಸ್‍‍ನ ಅಗಲ ಹಾಗೂ ವ್ಹೀಲ್‍‍ಬೇಸ್ ಐದು ಸೀಟರ್‍‍ನ ಗ್ರಾವಿಟಾಸ್‍‍ನಂತಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಾಟಾ ಗ್ರಾವಿಟಾಸ್ ಎ‍‍ಟಿ

ಹಿಂಭಾಗದಲ್ಲಿರುವ ಎಲ್‍ಇ‍‍ಡಿ ಟೇಲ್‍‍ಲೈಟ್‍‍ಗಳನ್ನು ಮರುವಿನ್ಯಾಸಗೊಳಿಸಲಾಗಿದೆ. ಹೊಸ ಗ್ರಾವಿಟಾಸ್‍‍ನಲ್ಲಿ 2.0 ಲೀಟರಿನ ನಾಲ್ಕು ಸಿಲಿಂಡರ್‍‍ನ ಬಿ‍ಎಸ್ 6 ಕ್ರಯೊಟೆಕ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಾಟಾ ಗ್ರಾವಿಟಾಸ್ ಎ‍‍ಟಿ

ಈ ಎಂಜಿನ್ 167 ಬಿ‍‍ಹೆಚ್‍‍ಪಿ ಪವರ್ ಹಾಗೂ 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಸ್ಪೈ ಚಿತ್ರಗಳಲ್ಲಿ ಕಂಡು ಬಂದಂತೆ ಗ್ರಾವಿಟಾಸ್ ಎಸ್‍‍ಯುವಿಯು ಹ್ಯುಂಡೈ ಕಂಪನಿಯಿಂದ ಪಡೆದಿರುವ 6 ಸ್ಪೀಡ್‍‍ನ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿರಲಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಾಟಾ ಗ್ರಾವಿಟಾಸ್ ಎ‍‍ಟಿ

6 ಸ್ಪೀಡ್‍‍ನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಗ್ರಾವಿಟಾಸ್ ಎಸ್‍‍ಯುವಿಯ ಇಂಟಿರಿಯರ್‍‍ನಲ್ಲಿ ಹಾರಿಜಾಂಟಲ್ ಆದ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಕ್ರೋಮ್‍ ಹೊಂದಿರುವ ಲೇಯರ್ಡ್ ಡ್ಯಾಶ್‍‍ಬೋರ್ಡ್‍ ಹಾಗೂ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍‍ಗಳಿರಲಿವೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಟಾಟಾ ಗ್ರಾವಿಟಾಸ್ ಎ‍‍ಟಿ

ಹ್ಯಾರಿಯರ್ 167 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುವ ಬಿಎಸ್ 6 ಎಂಜಿನ್ ಹೊಂದಲಿದೆ. ಈ ಎಂಜಿನ್ ಅನ್ನು ಎಂಜಿ ಹೆಕ್ಟರ್ ಹಾಗೂ ಜೀಪ್ ಕಂಪಾಸ್‍‍ಗಳಲ್ಲಿಯೂ ಅಳವಡಿಸಲಾಗಿದೆ. ಹ್ಯಾರಿಯರ್‍‍ಗಿಂತ ಹೆಚ್ಚಿನ ಫೀಚರ್‍‍ಗಳನ್ನು ಟಾಟಾ ಮೋಟಾರ್ಸ್ ಗ್ರಾವಿಟಾಸ್‍‍ನಲ್ಲಿ ಅಳವಡಿಸಲಿದೆ.

Source: Gaadiwaadi

Most Read Articles

Kannada
English summary
Tata Gravitas automatic variant spied for the first time - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X