OMEGA ತಂತ್ರಜ್ಞಾನದಡಿ ನಿರ್ಮಾಣಗೊಳ್ಳುತ್ತಿದೆ ಟಾಟಾ ಗ್ರಾವಿಟಾಸ್ ಎಸ್‌ಯುವಿ

ಟಾಟಾ ಮೋಟಾರ್ಸ್ ಕಂಪನಿಯು ಈಗಾಗಲೇ ಹೊಸ ಕಾರು ಅಭಿವೃದ್ದಿ ಮತ್ತು ಮಾರಾಟದಲ್ಲಿ ಗ್ರಾಹಕರ ಮೆಚ್ಚುಗೆ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಗಾಗಿ ಸಿದ್ದವಾಗಿರುವ ಮತ್ತಷ್ಟು ಹೊಸ ಕಾರುಗಳು ಟಾಟಾ ಕಂಪನಿಯ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿವೆ.

OMEGA ತಂತ್ರಜ್ಞಾನದಡಿ ನಿರ್ಮಾಣಗೊಳ್ಳುತ್ತಿದೆ ಟಾಟಾ ಗ್ರಾವಿಟಾಸ್ ಎಸ್‌ಯುವಿ

ಕಳೆದ ತಿಂಗಳು ಫೆಬ್ರುವರಿಯಲ್ಲಿ ಅನಾವರಣಗೊಂಡಿದ್ದ ಗ್ರಾವಿಟಾಸ್ ಕಾರು ಟಾಟಾ ಉತ್ಪಾದನೆಯ ವಿಶೇಷ ವಿನ್ಯಾಸದ ಎಸ್‌ಯುವಿ ಆವೃತ್ತಿಯಾಗಿದ್ದು, ಹ್ಯಾರಿಯರ್ ಉತ್ಪಾದನೆಗಾಗಿ ಉತ್ಪಾದನೆಗೆ ಬಳಕೆ ಮಾಡಲಾಗಿದ್ದ OMEGA ಪ್ಲ್ಯಾಟ್‌ಫಾರ್ಮ್‌ನಡಿಯಲ್ಲೇ ಹೊಸ ಗ್ರಾವಿಟಾಸ್ ಕೂಡಾ ಅಭಿವೃದ್ದಿಗೊಳ್ಳುತ್ತಿದೆ. OMEGA ಕಾರು ಉತ್ಪಾದನಾ ತಂತ್ರಜ್ಞಾನವು ಟಾಟಾ ಹೊಸ ಕಾರುಗಳ ಅಭಿವೃದ್ದಿಯಲ್ಲಿ ಮಹತ್ವದ ಬದಲಾಣೆಗೆ ಕಾರಣವಾಗುತ್ತಿದ್ದು, ಗ್ರಾವಿಟಾಸ್ ಕಾರು ಕೂಡಾ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

OMEGA ತಂತ್ರಜ್ಞಾನದಡಿ ನಿರ್ಮಾಣಗೊಳ್ಳುತ್ತಿದೆ ಟಾಟಾ ಗ್ರಾವಿಟಾಸ್ ಎಸ್‌ಯುವಿ

OMEGA(ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್‍ಫಾರ್ಮ್)ತಂತ್ರಜ್ಞಾನವನ್ನು ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡಾ ಕಾಣಬಹುದಾಗಿದ್ದು, ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯಲಿದೆ.

OMEGA ತಂತ್ರಜ್ಞಾನದಡಿ ನಿರ್ಮಾಣಗೊಳ್ಳುತ್ತಿದೆ ಟಾಟಾ ಗ್ರಾವಿಟಾಸ್ ಎಸ್‌ಯುವಿ

ಇನ್ನು 7 ಸೀಟರ್ ಆಸನ ಸೌಲಭ್ಯದೊಂದಿಗೆ ಎಸ್‌ಯುವಿ ಆವೃತ್ತಿಗಳಲ್ಲಿ ಮುಂಚೂಣಿಯಲ್ಲಿರುವ ಫೋರ್ಡ್ ಎಂಡೀವರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಟೊಯೊಟಾ ಫಾರ್ಚೂನರ್‌ ಕಾರಿಗೂ ಗ್ರಾವಿಟಾಸ್ ಪ್ರಬಲ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

OMEGA ತಂತ್ರಜ್ಞಾನದಡಿ ನಿರ್ಮಾಣಗೊಳ್ಳುತ್ತಿದೆ ಟಾಟಾ ಗ್ರಾವಿಟಾಸ್ ಎಸ್‌ಯುವಿ

ಗ್ರಾವಿಟಾಸ್ ಕಾರು 4,661-ಎಂಎಂ ಉದ್ದ, 1786-ಎಂಎಂ ಎತ್ತರ ಮತ್ತು 2,741-ಎಂಎಂ ವೀಲ್ಹ್ ಬೆಸ್‌ನೊಂದಿಗೆ ಹ್ಯಾರಿಯರ್‌ಗಿಂತಲೂ 63-ಎಂಎಂ ಹೆಚ್ಚು ಉದ್ದ, 80-ಎಂಎಂ ಕಡಿಮೆ ಎತ್ತರ ಪಡೆದುಕೊಂಡಿದ್ದು, ಫ್ಲೇರ್ಡ್ ಆರ್ಚೆಸ್, ಮುಂಭಾಗದ ಬಂಪರ್‍‍ಗಳಿಗೆ ಟ್ರೈ ಆರೋ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್‍ಲೈಟ್, ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಮತ್ತು ಸ್ಕಿಡ್ ಪ್ಲೇಟ್‍‍ಗಳಿಂದ ಸಜ್ಜುಗೊಂಡಿದೆ.

OMEGA ತಂತ್ರಜ್ಞಾನದಡಿ ನಿರ್ಮಾಣಗೊಳ್ಳುತ್ತಿದೆ ಟಾಟಾ ಗ್ರಾವಿಟಾಸ್ ಎಸ್‌ಯುವಿ

ಗ್ರಾವಿಟಾಸ್ ಕಾರು ಹ್ಯಾರಿಯರ್‍‍ನಂತೆಯೇ ಎಕ್ಸ್ಇ, ಎಕ್ಸ್ಎಂ, ಎಕ್ಸ್ ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೆರಿಯೆಂಟ್‍‍ಗಳಲ್ಲಿ ಬಿಡುಗಡೆಯಾಗಲಿದ್ದು, 18-ಇಂಚಿನ ಅಲಾಯ್ ವ್ಹೀಲ್ಸ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ವಿಭಿನ್ನವಾದ ಬೂಟ್ ಲಿಡ್ ಮತ್ತು ಟೈಲ್ ಲ್ಯಾಂಪ್ಸ್ ಅನ್ನು ಹೊಂದಿದಿದೆ.

OMEGA ತಂತ್ರಜ್ಞಾನದಡಿ ನಿರ್ಮಾಣಗೊಳ್ಳುತ್ತಿದೆ ಟಾಟಾ ಗ್ರಾವಿಟಾಸ್ ಎಸ್‌ಯುವಿ

ಜೊತೆಗೆ ಸ್ಪೋರ್ಟಿ ಸ್ಪಾಯ್ಲರ್, ಎಲ್ಇಡಿ ಟೈಲ್‍ಲೈಟ್ಸ್ ಅನ್ನು ಪಡೆದುಕೊಂಡಿದ್ದು, ಹ್ಯಾರಿಯರ್ ಕಾರಿನಲ್ಲಿ ಬಳಕೆ ಮಾಡಲಾಗುತ್ತಿರುವ ಬಿಎಸ್-6 ಡೀಸೆಲ್ ಎಂಜಿನ್ ಅನ್ನೇ ಗ್ರಾವಿಟಾಸ್ ಕೂಡಾ ಪಡೆದುಕೊಳ್ಳಲಿದೆ.

OMEGA ತಂತ್ರಜ್ಞಾನದಡಿ ನಿರ್ಮಾಣಗೊಳ್ಳುತ್ತಿದೆ ಟಾಟಾ ಗ್ರಾವಿಟಾಸ್ ಎಸ್‌ಯುವಿ

ಹೊಸ ಗ್ರಾವಿಟಾಸ್ ಕಾರು ಸದ್ಯಕ್ಕೆ ಹ್ಯಾರಿಯರ್ ಮಾದರಿಯಲ್ಲಿ ಬಳಕೆ ಮಾಡಲಾಗಿರುವ 2.0-ಲೀಟರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾತ್ರ ಬಿಡುಗಡೆಯಾಗಲಿದ್ದು, ತದನಂತರವಷ್ಟೇ ಹ್ಯಾರಿಯರ್ ಮತ್ತು ಗ್ರಾವಿಟಾಸ್ ಕಾರುಗಳಲ್ಲಿ ಪೆಟ್ರೋಲ್ ಮಾದರಿಯು ಬಿಡುಗಡೆಯಾಗಲಿದೆ.

OMEGA ತಂತ್ರಜ್ಞಾನದಡಿ ನಿರ್ಮಾಣಗೊಳ್ಳುತ್ತಿದೆ ಟಾಟಾ ಗ್ರಾವಿಟಾಸ್ ಎಸ್‌ಯುವಿ

2.0-ಲೀಟರ್ ಡೀಸೆಲ್ ಮಾದರಿಯು 173-ಬಿಹೆಚ್‍ಪಿ ಹಾಗೂ 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ಟಿಯನ್ನು ಪಡೆದಿದ್ದು, ಹ್ಯುಂಡೈನಿಂದ ಎರವಲು ಪಡೆಯಲಾಗಿರುವ 6- ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪಿಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸೌಲಭ್ಯ ಪಡೆದುಕೊಳ್ಳಲಿದೆ.

OMEGA ತಂತ್ರಜ್ಞಾನದಡಿ ನಿರ್ಮಾಣಗೊಳ್ಳುತ್ತಿದೆ ಟಾಟಾ ಗ್ರಾವಿಟಾಸ್ ಎಸ್‌ಯುವಿ

ಇದಲ್ಲದೆ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, 4x4 ಡ್ರೈವ್ ಟೆಕ್ನಾಲಜಿ ಜೊತೆಗೆ ಆಫ್ ರೋಡ್ ಎಸ್‌ಯುವಿ ಪ್ರಿಯರ ಆಕರ್ಷಣೆಗೂ ಕಾರಣವಾಗಲಿದೆ.

OMEGA ತಂತ್ರಜ್ಞಾನದಡಿ ನಿರ್ಮಾಣಗೊಳ್ಳುತ್ತಿದೆ ಟಾಟಾ ಗ್ರಾವಿಟಾಸ್ ಎಸ್‌ಯುವಿ

ಬಿಡುಗಡೆಯ ಅವಧಿ ಮತ್ತು ಬೆಲೆ(ಅಂದಾಜು)

ಮಾಹಿತಿಗಳ ಪ್ರಕಾರ, ಹೊಸ ಗ್ರಾವಿಟಾಸ್ ಕಾರು ಇದೇ ವರ್ಷ ಜುಲೈ ಅಥವಾ ಅಗಸ್ಟ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಪ್ರತಿಸ್ಪರ್ಧಿ ಕಾರುಗಳಿಂತಲೂ ಕಡಿಮೆ ಬೆಲೆ ಪಡೆದುಕೊಳ್ಳಲಿರುವ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.20 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.23 ಲಕ್ಷ ಬೆಲೆ ಹೊಂದಿರಬಹುದೆಂದು ನೀರಿಕ್ಷಿಸಲಾಗಿದೆ.

Most Read Articles

Kannada
English summary
Tata Gravitas SUV to Built On OMEGA ARC Platform. Read in Kannada.
Story first published: Monday, March 23, 2020, 18:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X