ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍2ಎಕ್ಸ್ ಕಾರು

ಟಾಟಾ ಮೋಟಾರ್ಸ್ ಸಂಸ್ಥೆಯು 2019ರ ಜಿನೀವಾ ಮೋಟಾರ್ ಶೋನಲ್ಲಿ ತನ್ನ ಹೆಚ್2‍‍‍‍‍‍ಎಕ್ಸ್ ಕಾನ್ಸೆಪ್ಟ್ ಅನ್ನು ಅನಾವರಣಗೊಳಿಸಿತ್ತು. ಇದೀಗ ಈ ಮೈಕ್ರೋ ಎಸ್‍ಯುವಿಯನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍2ಎಕ್ಸ್ ಕಾರು

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಹೆಚ್‍2ಎಕ್ಸ್ ಮೈಕ್ರೋ ಎಸ್‍‍ಯುವಿಯು ಟಾಟಾ ಆಲ್ಫಾ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದೆ. ಟಾಟಾ ಮೋಟಾರ್ಸ್ ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಸ್ಪೈ ಚಿತ್ರಗಳನ್ನು ಮೋಟಾರ್‍‍ಬೀಮ್ ಬಹಿರಂಗಪಡಿಸಿದೆ. ಸ್ಪೈ ಚಿತ್ರದಲ್ಲಿ ಹೊಸ ಹೆಚ್‍2ಎಕ್ಸ್ ಮೈಕ್ರೋ ಎಸ್‍‍ಯುವಿಯ ಹಲವಾರು ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದೆ. ಈ ಕಾರು ಹಿಂಭಾಗದ ವಿಂಡ್‍‍ಶೀಲ್ಡ್ ವೈಪರ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍2ಎಕ್ಸ್ ಕಾರು

ಕಾರಿನ ಹಿಂಭಾಗದಲ್ಲಿ ಟೇಲ್‍‍ಲೈಟ್ ಅನ್ನು ಅಳವಡಿಸಲಾಗಿದೆ. ಹಿಂಭಾಗದ ಡೋರಿನ ಹ್ಯಾಂಡಲ್‍‍ಗಳ ಸಿ-ಪಿಲ್ಲರ್‍‍‍ನಲ್ಲಿ ಇರಿಸಲಾಗುತ್ತದೆ ಎಂದು ನಿರೀಕ್ಷಿಸಬಹುದು. ಅಲ್ಲದೆ ಕಾನ್ಸೆಪ್ಟ್ ಕಾರಿನಲ್ಲಿ ನೋಡಿದ ಸ್ಪ್ಲಿಟ್ ರೇರ್ ಸ್ಪಾಯ್ಲರ್ ಇದರಲ್ಲಿ ಕಂಡುಬಂದಿಲ್ಲ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍2ಎಕ್ಸ್ ಕಾರು

ಇನ್ನೂ ಈ ಕಾರು 2,840ಎಂಎಂ ಉದ್ದ, 1,822ಎಂಎಂ ಅಗಲ, 1,635ಎಂಎಂ ಎತ್ತರ ಮತ್ತು 2,450ಎಂಎಂ ವ್ಹೀಲ್‍‍ಬೇಸ್ ಅನ್ನು ಹೊಂದಿದೆ. ಹೊಸ ಮೈಕ್ರೊ ಎಸ್‍‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍2ಎಕ್ಸ್ ಕಾರು

ಜಿನೀವಾ ಮೋಟಾರ್ ಶೋನಲ್ಲಿ ಕಾಣಿಸಿಕೊಂಡಿರುವ ಹೆಚ್‍2ಎಕ್ಸ್ ಕಾರು ಸ್ಪ್ಲಿಟ್ ಹೆಡ್‍‍ಲ್ಯಾಂಪ್ ವಿನ್ಯಾಸ, ದೊಡ್ಡ ಅಲಾಯ್ ವ್ಹೀಲ್‍‍ಗಳು ಮತ್ತು ಪನೋರಾಮಿಕ್ ಸನ್‍‍ರೂಫ್ ಅನ್ನು ಹೊಂದಿದೆ. ದೊಡ್ಡ ಅಲಾಯ್ ವ್ಹೀಲ್ ಬಗ್ಗೆ ಮಾಹಿತಿ ಇಲ್ಲವಾದರೂ ಸನ್‍‍ರೂಫ್ ಉತ್ಪಾದನಾ ಮಾದರಿಯಲ್ಲಿ ಹೊಂದಿರಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍2ಎಕ್ಸ್ ಕಾರು

ಶೀಘ್ರದಲ್ಲೇ ಅನಾವರಣಗೊಳ್ಳಲಿರುವ ಹೆಚ್‍2ಎಕ್ಸ್ ಇಂಟಿರಿಯರ್ ಸಣ್ಣ ಮಟ್ಟದಲ್ಲಿರವ ಸಾಧ್ಯತೆಗಳಿದೆ. ಈ ಕಾರು ಇನ್ಪೋಟೇನ್‍‍ಮೆಂಟ್ ಸಿಸ್ಟಂ, ಪೂರ್ಣ ಪ್ರಮಾಣದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇತರ ನೂತನ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍2ಎಕ್ಸ್ ಕಾರು

ಕಾರಿನ ಎಂಜಿನ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಬಹುದು. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿರುವ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಇದೇ ಮಾದರಿಯ ಎಂಜಿನ್ ಪ್ರಸ್ತುತ ಟಾಟಾ ಟಿಯಗೋ ಕಾರಿನಲ್ಲಿ ಕಾಣಿಸಿಕೊಂಡಿದೆ. ಈ ಎಂಜಿನ್ 84 ಬಿ‍ಹೆಚ್‍ಪಿ ಪವರ್ ಮತ್ತು 114 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍2ಎಕ್ಸ್ ಕಾರು

ಮುಂಬರುವ ಟಾಟಾ ಹೆಚ್‍2ಎಕ್ಸ್ ಅಥವಾ ಹಾರ್ನ್‍‍ಬಿಲ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.75 ಲಕ್ಷದಿಂದ ರೂ.5.75 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಎಚ್‍2ಎಕ್ಸ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ರೆನಾಲ್ಟ್ ಕ್ವಿಡ್ ಸುಜುಕಿ ಎಸ್-ಪ್ರೆಸ್ಸೊ ಮತ್ತು ಮಹಿಂದ್ರಾ ಕೆಯುವಿ 100 ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍2ಎಕ್ಸ್ ಕಾರು

ಟಾಟಾ ಮೋಟಾರ್ಸ್ ತನ್ನ ಹೆಚ್‍2ಎಕ್ಸ್ 2020ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸುವ ಸಾಧ್ಯತೆಗಳಿವೆ. ಈ ಹೆಚ್‍2ಎಕ್ಸ್ ಮಾದರಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಟಾಟಾ ಮೋಟಾರ್ಸ್ ಕಂಪನಿಯ ಈ ಕಾರು ವಿಭಿನ್ನವಾದ ವಿನ್ಯಾಸವನ್ನು ಹೊಂದಿದೆ.

Most Read Articles

Kannada
English summary
Tata H2X (Hornbill) Compact-SUV Spied Testing Yet Again In India: Spy Pics & Details - Read in Kannada
Story first published: Thursday, January 9, 2020, 19:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X