ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಟಾಟಾ ಹ್ಯಾರಿಯರ್‍ ಮೇಲೆ ಭಾರೀ ಕೊಡುಗೆ

ಟಾಟಾ ಮೋಟಾರ್ಸ್ ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಹ್ಯಾರಿಯರ್ ಎಸ್‍‍ಯುವಿಯನ್ನು ಬಿಡುಗಡೆಗೊಳಿಸಿತ್ತು. ಹ್ಯಾರಿಯರ್ ಎಸ್‍‍ಯುವಿ ಬಿಡುಗಡೆಯಾಗಿ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ ಹೊಸ ಯೋಜನೆಯನ್ನು ಘೋಷಿಸಿದೆ.

ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಟಾಟಾ ಹ್ಯಾರಿಯರ್‍ ಮೇಲೆ ಭಾರೀ ಕೊಡುಗೆ

ಟಾಟಾ ಮೋಟಾರ್ಸ್ ಜನವರಿ 9ರಿಂದ 19ರವರೆಗೆ #ಒನ್‍‍ವಿಥ್‍‍ಮೈ‍‍ಹ್ಯಾರಿಯರ್ ಎಂಬ ಅಭಿಯಾನವನ್ನು ಘೋಷಿಸಿದೆ. ಈ ಅಭಿಯಾನದಡಿಯಲ್ಲಿ ಟಾಟಾ ಮೋಟಾರ್ಸ್ ಹಲವು ಕೊಡುಗೆ ಹಾಗೂ ಸೌಲಭ್ಯಗಳನ್ನು ತನ್ನ ಗ್ರಾಹಕರಿಗೆ ನೀಡಲಿದೆ.

ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಟಾಟಾ ಹ್ಯಾರಿಯರ್‍ ಮೇಲೆ ಭಾರೀ ಕೊಡುಗೆ

ಇದರ ಜೊತೆಗೆ ಟಾಟಾ ಮೋಟಾರ್ಸ್ ಕಂಪನಿಯು ಹಲವಾರು ವೈಯಕ್ತಿಕ ಹಾಗೂ ವಿಶೇಷ ಸೇವೆಗಳನ್ನು ಸಹ ನೀಡಲಿದೆ. ಟಾಟಾ ಹ್ಯಾರಿಯರ್‌ನ ಗ್ರಾಹಕರಿಗಾಗಿ ದೇಶದಲ್ಲಿರುವ ಎಲ್ಲಾ ಅಧಿಕೃತ ಮಾರಾಟಗಾರರು 40 ಪಾಯಿಂಟ್‍‍ಗಳ ಫ್ರೀ ಚೆಕ್‍ಅಪ್ ನೀಡಲಿದ್ದಾರೆ. ಇದರಲ್ಲಿ ಉಚಿತ ಕಾರ್ ವಾಶ್ ಹಾಗೂ ವ್ಯಾಕ್ಯೂಮ್‍‍ಗಳೂ ಸಹ ಸೇರಿವೆ.

ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಟಾಟಾ ಹ್ಯಾರಿಯರ್‍ ಮೇಲೆ ಭಾರೀ ಕೊಡುಗೆ

ಗ್ರಾಹಕರು ಹ್ಯಾರಿಯರ್ ಸರ್ವಿಸ್ ಗೋಲ್ಡ್ ಕ್ಲಬ್‍‍ಗೆ ನೋಂದಾಯಿಸಿಕೊಳ್ಳುವ ಅವಕಾಶವನ್ನೂ ಪಡೆಯಲಿದ್ದಾರೆ. ಇದರಿಂದಾಗಿ ಮುಂದಿನ ಎರಡು ವರ್ಷಗಳವರೆಗೆ ಗ್ರಾಹಕರು ತಮ್ಮ ಹ್ಯಾರಿಯರ್ ಎಸ್‍‍ಯುವಿಗಾಗಿ ರೂ.8,400ಗಳವರೆಗಿನ ಸೌಲಭ್ಯಗಳನ್ನು ಪಡೆಯಲಿದ್ದಾರೆ.

ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಟಾಟಾ ಹ್ಯಾರಿಯರ್‍ ಮೇಲೆ ಭಾರೀ ಕೊಡುಗೆ

ಟಾಟಾ ಮೋಟಾರ್ಸ್, ಹ್ಯಾರಿಯರ್‌ ಹೊಂದಿರುವವರಿಗಾಗಿ ವೈಯಕ್ತಿಕವಾದ ಬ್ಯಾಡ್ಜ್‌ಗಳನ್ನು ನೀಡಲಿದೆ. ಇದರ ಜೊತೆಗೆ ವಿಭಿನ್ನವಾದ ಸ್ಕಫ್ ಪ್ಲೇಟ್‌ಗಳನ್ನು ಸಹ ನೀಡಲಾಗುತ್ತದೆ. ಈ ಎಸ್‍‍ಯುವಿಯನ್ನು ಬೇರೆಯವರಿಗೆ ಸೂಚಿಸುವ ಗ್ರಾಹಕರಿಗೆ ಅಮೇಜಾನ್‍‍ನ ರೂ.5,000ಗಳ ಗಿಫ್ಟ್ ವೋಚರ್ ನೀಡಲಾಗುವುದು.

ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಟಾಟಾ ಹ್ಯಾರಿಯರ್‍ ಮೇಲೆ ಭಾರೀ ಕೊಡುಗೆ

ಇದಕ್ಕಾಗಿ ಹ್ಯಾರಿಯರ್ ಎಸ್‍‍ಯುವಿಯನ್ನು ಜನವರಿಯ ಒಳಗೆ ಬೇರೆಯವರಿಗೆ ಸೂಚಿಸಬೇಕಾಗುತ್ತದೆ. ಟಾಟಾ ಹ್ಯಾರಿಯರ್ ಎಸ್‍‍ಯುವಿಯನ್ನು ಮೊದಲ ಬಾರಿಗೆ ಹೆಚ್ 5 ಎಕ್ಸ್ ಕಾನ್ಸೆಪ್ಟ್ ನಲ್ಲಿ 2018ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಗಿತ್ತು. ಕಳೆದ ವರ್ಷದ ಆರಂಭದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಟಾಟಾ ಹ್ಯಾರಿಯರ್‍ ಮೇಲೆ ಭಾರೀ ಕೊಡುಗೆ

ಹ್ಯಾರಿಯರ್ ಎಸ್‍‍ಯುವಿಯನ್ನು ಲ್ಯಾಂಡ್ ರೋವರ್‌ನ ಡಿ 8 ಪ್ಲಾಟ್‌ಫಾರಂನ ಮಾಡಿಫೈಗೊಳಿಸಲಾದ ಆವೃತ್ತಿಯ ಮೇಲೆ ತಯಾರಿಸಲಾಗಿದೆ. ಈ ಪ್ಲಾಟ್‍‍ಫಾರಂ ಅನ್ನು ಒಮೆಗಾ ಆರ್ಕಿಟೆಕ್ಚರ್ ಎಂದು ಕರೆಯಲಾಗುತ್ತದೆ. ಹ್ಯಾರಿಯರ್ ಟಾಟಾ ಮೋಟಾರ್ಸ್‌ನ ಹೊಸ ಇಂಪ್ಯಾಕ್ಟ್ 2.0 ಡಿಸೈನ್ ಲ್ಯಾಂಗ್ವೇಜ್ ಹೊಂದಿರುವ ಟಾಟಾ ಮೋಟಾರ್ಸ್‍‍ನ ಮೊದಲ ವಾಹನವಾಗಿದೆ.

ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಟಾಟಾ ಹ್ಯಾರಿಯರ್‍ ಮೇಲೆ ಭಾರೀ ಕೊಡುಗೆ

2019ರ ಮಧ್ಯಭಾಗದಲ್ಲಿ, ಟಾಟಾ ಮೋಟಾರ್ಸ್ ಡಾರ್ಕ್ ಎಡಿಷನ್ ಎಂದು ಕರೆಯಲಾಗುವ ಹ್ಯಾರಿಯರ್ ಎಸ್‌ಯುವಿಯ ಕಪ್ಪು ಬಣ್ಣದ ಆವೃತ್ತಿಯನ್ನು ಬಿಡುಗಡೆಗೊಳಿಸಿತು. ಈ ಆವೃತ್ತಿಯನ್ನು ಎರಡು ಟಾಪ್ ಎಂಡ್ ರೂಪಾಂತರಗಳಲ್ಲಿ ನೀಡಲಾಗುತ್ತದೆ.

ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಟಾಟಾ ಹ್ಯಾರಿಯರ್‍ ಮೇಲೆ ಭಾರೀ ಕೊಡುಗೆ

ಟಾಟಾ ಹ್ಯಾರಿಯರ್‌ನ ಎಲ್ಲಾ ಮಾದರಿಗಳಲ್ಲಿ 2.0-ಲೀಟರಿನ ಕ್ರಯೋಟೆಕ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 140 ಬಿ‍‍ಹೆಚ್‍ಪಿ ಪವರ್ ಹಾಗೂ 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಆರು ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಟಾಟಾ ಹ್ಯಾರಿಯರ್‍ ಮೇಲೆ ಭಾರೀ ಕೊಡುಗೆ

ಟಾಟಾ ಮೋಟಾರ್ಸ್ 2019ರ ಜಿನೀವಾ ಮೋಟಾರ್ ಶೋದಲ್ಲಿ ಗ್ರಾವಿಟಾಸ್ ಹೆಸರಿನ ಹ್ಯಾರಿಯರ್‌ನ 7 ಆಸನಗಳ ಆವೃತ್ತಿಯನ್ನು ಅನಾವರಣಗೊಳಿಸಿತ್ತು. ಈ ಎಸ್‍‍ಯುವಿಯನ್ನು ಅಂತರರಾಷ್ಟ್ರೀಯ ಎಕ್ಸ್‌ಪೋದಲ್ಲಿ ಬಜಾರ್ಡ್ ಹೆಸರಿನಲ್ಲಿ ಅನಾವರಣಗೊಳಿಸಲಾಗಿದೆ.

ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಟಾಟಾ ಹ್ಯಾರಿಯರ್‍ ಮೇಲೆ ಭಾರೀ ಕೊಡುಗೆ

ಈ ಏಳು ಸೀಟರ್‍‍ಗಳ ಎಸ್‍‍ಯುವಿಯನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಇದು ಟಾಟಾ ಮೋಟಾರ್ಸ್‍‍ನ ಪ್ರಮುಖ ವಾಹನವಾಗಲಿದೆ. ಇದರ ಜೊತೆಗೆ, ಟಾಟಾ ಮೋಟಾರ್ಸ್ ಹಲವಾರು ಇತರ ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಟಾಟಾ ಹ್ಯಾರಿಯರ್‍ ಮೇಲೆ ಭಾರೀ ಕೊಡುಗೆ

ಇವುಗಳಲ್ಲಿ ಆಲ್ಟ್ರೊಜ್, ನೆಕ್ಸನ್ ಫೇಸ್‌ಲಿಫ್ಟ್ ಹಾಗೂ ನೆಕ್ಸಾನ್ ಎಲೆಕ್ಟ್ರಿಕ್ ವಾಹನಗಳು ಸೇರಿವೆ. ಆಲ್ಟ್ರೊಜ್ ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದ್ದರೆ, ನೆಕ್ಸನ್ ಫೇಸ್‌ಲಿಫ್ಟ್ ಹಾಗೂ ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳನ್ನು ಗ್ರಾವಿಟಾಸ್ ಜೊತೆಗೆ 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸುವ ಸಾಧ್ಯತೆಗಳಿವೆ.

ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಟಾಟಾ ಹ್ಯಾರಿಯರ್‍ ಮೇಲೆ ಭಾರೀ ಕೊಡುಗೆ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಾಟಾ ಹ್ಯಾರಿಯರ್, ಕಳೆದ ವರ್ಷ ಟಾಟಾ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಬಹುನಿರೀಕ್ಷಿತ ಕಾರುಗಳಲ್ಲಿ ಒಂದಾಗಿದೆ. ಹ್ಯಾರಿಯರ್ ಎಸ್‍‍ಯುವಿಯನ್ನು ಹೆಚ್ಚು ಸ್ಪರ್ಧೆಯಿರುವ ಮಿಡ್ ಗಾತ್ರದ ಎಸ್‍‍ಯುವಿ ಸೆಗ್‍‍ಮೆಂಟಿನಲ್ಲಿ ಮಾರಾಟ ಮಾಡಲಾಗುತ್ತಿದೆ.

ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಟಾಟಾ ಹ್ಯಾರಿಯರ್‍ ಮೇಲೆ ಭಾರೀ ಕೊಡುಗೆ

ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.13 ಲಕ್ಷ ಆರಂಭಿಕ ಬೆಲೆ ಹೊಂದಿರುವ ಟಾಟಾ ಹ್ಯಾರಿಯರ್ ಎಸ್‍‍ಯುವಿ ದೇಶಿಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್, ಹ್ಯುಂಡೈ ಕ್ರೆಟಾ ಹಾಗೂ ಜೀಪ್ ಕಂಪಾಸ್‍‍ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Tata Motors Celebrates One-Year Of Harrier SUV: Existing Customers Receive Personalised Benefits - Read in Kannada
Story first published: Tuesday, January 7, 2020, 14:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X