ಟಾಟಾ ಹ್ಯಾರಿಯರ್ ಬೆಲೆಯಲ್ಲಿ ಭಾರೀ ಹೆಚ್ಚಳ- ಹೊಸ ದರಗಳು ಇಂದಿನಿಂದಲೇ ಜಾರಿ..!

ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಜನಪ್ರಿಯ ಎಸ್‌ಯುವಿ ಮಾದರಿಯಾದ ಹ್ಯಾರಿಯರ್ ಬಿಡುಗಡೆಗೊಳಿಸಿ ಒಂದು ವರ್ಷದ ಸಂಭ್ರಮಾಚರಣೆಗೆ ಸಿದ್ದವಾಗುತ್ತಿದ್ದು, ಈ ಮಧ್ಯೆ ಹೊಸ ಕಾರಿನ ಬೆಲೆಯಲ್ಲಿ ಭಾರೀ ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.

ಟಾಟಾ ಹ್ಯಾರಿಯರ್ ಬೆಲೆಯಲ್ಲಿ ಭಾರೀ ಹೆಚ್ಚಳ- ಹೊಸ ದರಗಳು ಇಂದಿನಿಂದಲೇ ಜಾರಿ..!

ಹೌದು, 2019ರ ಜನವರಿಯಲ್ಲಿ ಹ್ಯಾರಿಯರ್ ಬಿಡುಗಡೆ ಮಾಡಿದ್ದ ಟಾಟಾ ಮೋಟಾರ್ಸ್ ಸಂಸ್ಥೆಯು ಇದೇ ಮೊದಲ ಬಾರಿಗೆ ಹೊಸ ಕಾರಿನಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಪ್ರೀಮಿಯಂ ಫೀಚರ್ಸ್‌‌ಗಳೊಂದಿಗೆ ಬೆಲೆ ಏರಿಕೆಯ ನಿರ್ಧಾರವನ್ನು ಪ್ರಕಟಿಸಿದೆ. ಹೊಸ ದರ ಪಟ್ಟಿ ಪ್ರಕಾರ ಹ್ಯಾರಿಯರ್ ಬೆಲೆಯಲ್ಲಿ ಆರಂಭಿಕವಾಗಿ ರೂ.43 ಸಾವಿರದಿಂದ ಟಾಪ್ ಎಂಡ್ ಮಾದರಿಯ ಬೆಲೆಯಲ್ಲಿ ರೂ.45 ಸಾವಿರ ಬೆಲೆ ಏರಿಕೆ ಮಾಡಿದೆ.

ಟಾಟಾ ಹ್ಯಾರಿಯರ್ ಬೆಲೆಯಲ್ಲಿ ಭಾರೀ ಹೆಚ್ಚಳ- ಹೊಸ ದರಗಳು ಇಂದಿನಿಂದಲೇ ಜಾರಿ..!

ಹೊಸ ದರ ಪಟ್ಟಿ ನಂತರ ಹ್ಯಾರಿಯರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆಂಭಿಕವಾಗಿ ರೂ.12.99 ಲಕ್ಷದಿಂದ ರೂ.13.43 ಲಕ್ಷಕ್ಕೆ ಏರಿಕೆಯಾಗಿದ್ದಲ್ಲಿ ಟಾಪ್ ಎಂಡ್ ಮಾದರಿಯು ರೂ.16.85 ಲಕ್ಷದಿಂದ ರೂ.17.30 ಲಕ್ಷಕ್ಕೆ ಏರಿಕೆಯಾಗಿದೆ.

ಟಾಟಾ ಹ್ಯಾರಿಯರ್ ಬೆಲೆಯಲ್ಲಿ ಭಾರೀ ಹೆಚ್ಚಳ- ಹೊಸ ದರಗಳು ಇಂದಿನಿಂದಲೇ ಜಾರಿ..!

ಹ್ಯಾರಿಯರ್ ವೆರಿಯೆಂಟ್‌ಗಳು ಮತ್ತು ಹೊಸ ದರ ಪಟ್ಟಿ(ಎಕ್ಸ್‌ಶೋರೂಂ ಪ್ರಕಾರ)

ವೆರಿಯೆಂಟ್‌ಗಳು ಹೊಸ ದರ ಹಳೆಯ ದರ
ಎಕ್ಸ್‌ಇ ರೂ. 13.43 ಲಕ್ಷ ರೂ. 12.99 ಲಕ್ಷ
ಎಕ್ಸ್ಎಂ ರೂ. 14.69 ಲಕ್ಷ ರೂ. 14.25 ಲಕ್ಷ
ಎಕ್ಸ್‌ಟಿ ರೂ. 15.89 ಲಕ್ಷ ರೂ. 15.45 ಲಕ್ಷ
ಎಕ್ಸ್‌ಜೆಡ್ ರೂ. 17.19 ಲಕ್ಷ ರೂ. 16.75 ಲಕ್ಷ
ಎಕ್ಸ್‌ಜೆಡ್(ಡಿಟಿ) ರೂ. 17.30 ಲಕ್ಷ ರೂ. 16.95 ಲಕ್ಷ
ಎಕ್ಸ್‌ಟಿ(ಡಾರ್ಕ್) ರೂ. 16.00 ಲಕ್ಷ ರೂ. 15.55 ಲಕ್ಷ
ಎಕ್ಸ್‌ಜೆಡ್ (ಡಾರ್ಕ್) ರೂ. 17.30 ಲಕ್ಷ ರೂ. 16.85 ಲಕ್ಷ
ಟಾಟಾ ಹ್ಯಾರಿಯರ್ ಬೆಲೆಯಲ್ಲಿ ಭಾರೀ ಹೆಚ್ಚಳ- ಹೊಸ ದರಗಳು ಇಂದಿನಿಂದಲೇ ಜಾರಿ..!

ಇನ್ನು ಹ್ಯಾರಿಯರ್ ಕಾರು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೆರಿಯೆಂಟ್‌ಗಳೊಂದಿಗೆ ಮಾರಾಟವಾಗುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಡಾರ್ಕ್ ಎಡಿಷನ್ ಸದ್ಯ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಟಾಟಾ ಹ್ಯಾರಿಯರ್ ಬೆಲೆಯಲ್ಲಿ ಭಾರೀ ಹೆಚ್ಚಳ- ಹೊಸ ದರಗಳು ಇಂದಿನಿಂದಲೇ ಜಾರಿ..!

ಸದ್ಯ ಹ್ಯಾರಿಯರ್‌ನಲ್ಲಿ ಡಿಸೇಲ್ ಮ್ಯಾನುವಲ್ ಆವೃತ್ತಿಗಳನ್ನು ಮಾತ್ರವೇ ಮಾರಾಟ ಮಾಡಲಾಗುತ್ತಿದ್ದು, ಬಹುಬೇಡಿಕೆಯ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯು ಬಿಡುಗಡೆಗೆ ಸಜ್ಜಾಗುತ್ತಿರುವುದು ಹೊಸ ಕಾರಿನ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಟಾಟಾ ಹ್ಯಾರಿಯರ್ ಬೆಲೆಯಲ್ಲಿ ಭಾರೀ ಹೆಚ್ಚಳ- ಹೊಸ ದರಗಳು ಇಂದಿನಿಂದಲೇ ಜಾರಿ..!

ಇದರಲ್ಲಿ ಉನ್ನತೀಕರಿಸಲಾಗುತ್ತಿರುವ 2020ರ ಮಾದರಿಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿರುವ ಟಾಟಾ ಸಂಸ್ಥೆಯು ಪ್ರತಿ ವೆರಿಯೆಂಟ್‌ನಲ್ಲೂ ಸ್ಟ್ಯಾಂಡರ್ಡ್ ಆಗಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಸ್, ಎಲ್ಇಡಿ ಟೈಲ್‌ಲೈಟ್ಸ್ ನೀಡಿದೆ.

ಟಾಟಾ ಹ್ಯಾರಿಯರ್ ಬೆಲೆಯಲ್ಲಿ ಭಾರೀ ಹೆಚ್ಚಳ- ಹೊಸ ದರಗಳು ಇಂದಿನಿಂದಲೇ ಜಾರಿ..!

ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಚ್‌ ಸ್ಕ್ರೀನ್ ಇನ್ಪೋಟೈನ್‌ಮೆಂಟ್‌ಗಿಂತಲೂ ದೊಡ್ಡದಾದ ಸ್ಕ್ರೀನ್ ನೀಡಲು ನಿರ್ಧರಿಸಿದ್ದು, ಸುಧಾರಿತ ಮಾದರಿಯ ಡ್ಯಾಶ್‌ಬೋರ್ಡ್, ಸಾಫ್ಟ್ ಟಚ್ ಮೆಟಿರಿಯಲ್‌ಗಳು ಎಸ್‌ಯುವಿ ಪ್ರಿಯರ ಗಮನಸೆಳೆಯಲಿವೆ.

ಟಾಟಾ ಹ್ಯಾರಿಯರ್ ಬೆಲೆಯಲ್ಲಿ ಭಾರೀ ಹೆಚ್ಚಳ- ಹೊಸ ದರಗಳು ಇಂದಿನಿಂದಲೇ ಜಾರಿ..!

ಈ ಮೂಲಕ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಮತ್ತು ಎಂಜಿ ಹೆಕ್ಟರ್ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿರುವ ಹ್ಯಾರಿಯರ್ ಕಾರು ಶೀಘ್ರದಲ್ಲೇ ಬಿಎಸ್-6 ಪಡೆದುಕೊಳ್ಳಲಿದೆ. ಫೆಬ್ರುವರಿ 5ರಿಂದ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಹೊಸ ಕಾರು ಪ್ರದರ್ಶನಗೊಳ್ಳಲಿದ್ದು, ಬಿಎಸ್-6 ಎಂಜಿನ್ ನಂತರ ಹೊಸ ಕಾರಿನ ಬೆಲೆಯು ಮತ್ತಷ್ಟು ದುಬಾರಿಯಾಗಲಿದೆ.

ಟಾಟಾ ಹ್ಯಾರಿಯರ್ ಬೆಲೆಯಲ್ಲಿ ಭಾರೀ ಹೆಚ್ಚಳ- ಹೊಸ ದರಗಳು ಇಂದಿನಿಂದಲೇ ಜಾರಿ..!

ಏಪ್ರಿಲ್ 1ರಿಂದ ಬಿಎಸ್-6 ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಟಾಟಾ ಸೇರಿದಂತೆ ಹಲವು ಕಾರು ಉತ್ಪಾದನಾ ಸಂಸ್ಥೆಗಳು ಬಿಎಸ್-6 ವಾಹನ ಮಾರಾಟಕ್ಕೆ ಭರ್ಜರಿ ಸಿದ್ದತೆ ನಡೆಸಿವೆ. ಈಗಾಗಲೇ ಕೆಲವು ಕಾರು ಮಾದರಿಗಳು ಹೊಸ ನಿಯಮದಂತೆ ಉನ್ನತೀಕರಣಗೊಂಡಿದ್ದರೂ ಸಹ ಫೆಬ್ರುವರಿ ನಂತರ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪ್ರತಿ ಕಾರುಗಳು ಹೊಸ ನಿಯಮ ಅನುಸಾರ ರಸ್ತೆಗಿಳಿಯಲಿವೆ.

Most Read Articles

Kannada
English summary
Tata Harrier Prices Increased In India Effective Immediately. Read more in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X