Just In
- 42 min ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 59 min ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 2 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 2 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- News Bengaluru Heat: ಏ.25 ರಂದು ನಗರದಲ್ಲಿ ಅತ್ಯಧಿಕ ತಾಪಮಾನ: 12 ವರ್ಷಗಳ ದಾಖಲೆ ಉಡೀಸ್
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Movies Shrirasthu Shubhamasthu:ದೀಪಿಕಾಗೆ ಉತ್ತರ ಕೊಡೋಕೆ ಆಗ್ತಿಲ್ಲ; ಇತ್ತ ಹೆಂಡತಿಗೆ ಸಮಾಧಾನ ಮಾಡೋಕೆ ಆಗ್ತಿಲ್ಲ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಹೆಚ್ಬಿಎಕ್ಸ್ ಮಿನಿ ಎಸ್ಯುವಿ
ಟಾಟಾ ಮೋಟಾರ್ಸ್ ಕಂಪನಿಯು ಹೆಚ್ಬಿಎಕ್ಸ್ ಮಿನಿ ಎಸ್ಯುವಿಯನ್ನು ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಮಿನಿ ಎಸ್ಯುವಿಯನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು.
ಹೆಚ್ಬಿಎಕ್ಸ್ ಟಾಟಾ ಮೋಟಾರ್ಸ್ ಕಂಪನಿಯ ಮಿನಿ ಎಸ್ಯುವಿಯಾಗಿದೆ. ಈ ಮಿನಿ ಎಸ್ಯುವಿಯು 2020-21ರ ಆರ್ಥಿಕ ವರ್ಷದ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿದೆ ಎಂದು ಟಾಟಾ ಮೋಟಾರ್ಸ್ ಸ್ಪಷ್ಟ ಪಡಿಸಿದೆ. ಭಾರತದಲ್ಲಿ ಬಿಡುಗಡೆಯಾದ ನಂತರ ಹೆಚ್ಬಿಎಕ್ಸ್ ಟಾಟಾ ಮೋಟಾರ್ಸ್ ಸರಣಿಯಲ್ಲಿ ನೆಕ್ಸಾನ್ ಕಾರಿಗಿಂತ ಕೆಳಗಿನ ಸ್ಥಾನದಲ್ಲಿರಲಿದೆ. ಟಾಟಾ ಹೆಚ್ಬಿಎಕ್ಸ್ ಮಿನಿ ಎಸ್ಯುವಿಯು ಆಲ್ಟ್ರೊಜ್ನಂತೆಯೇ ಬ್ರ್ಯಾಂಡ್ನ ಆಲ್ಫಾ ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ. 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾದ ಹೆಚ್ಬಿಎಕ್ಸ್ ಒಂದು ಕಾನ್ಸೆಪ್ಟ್ ಎಂದು ಹೇಳಲಾಗುತ್ತಿದೆ.
ಹೆಚ್ಬಿಎಕ್ಸ್ ಮಿನಿ ಎಸ್ಯುವಿಯ ಉತ್ಪಾದನಾ ಮಾದರಿಯನ್ನು ಈ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷಿಯಿತ್ತು. ಆದರೆ ಕರೋನಾ ವೈರಸ್ ಭೀತಿಯಿಂದ ಟಾಟಾ ಮೋಟಾರ್ಸ್ ಉತ್ಪಾದನೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಈ ಮಿನಿ ಎಸ್ಯುವಿಯ ಬಿಡುಗಡೆಯನ್ನು ಮುಂದೂಡಲಾಗಿದೆ.
ಟಾಟಾ ಮೋಟಾರ್ಸ್ನ ಮಿನಿ-ಎಸ್ಯುವಿ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಮಿನಿ ಎಸ್ಯುವಿಯ ಮುಂಭಾಗವು ಟಾಟಾ ಹ್ಯಾರಿಯರ್ ಎಸ್ಯುವಿ ಮಾದರಿಯಲ್ಲಿದೆ. ಈ ಮಿನಿ ಎಸ್ಯುವಿಯ ಮುಂಭಾಗ ಡ್ಯುಯಲ್ ಎಲ್ಇಡಿ ಹೆಡ್ಲ್ಯಾಂಪ್ಗಳನ್ನು ಹೊಂದಿದೆ. ಇನ್ನೂ ಡಿಆರ್ಎಲ್ ಮತ್ತು ಹೆಡ್ಲ್ಯಾಂಪ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ.
ಹೆಚ್ಬಿಎಕ್ಸ್ ಮಿನಿ-ಎಸ್ಯುವಿಯು ವಿನೂತನ ಸ್ಟೈಲ್ ಅನ್ನು ಹೊಂದಿದೆ. ಅಲ್ಲದೇ ಮಿನಿ ಎಸ್ಯುವಿಯು ದೊಡ್ಡ ಟಯರ್ಗಳು ಮತ್ತು ಫ್ಲೋಟಿಂಗ್ ರೂಪ್ನೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಮಿನಿ ಎಸ್ಯುವಿಯ ಟಯರ್ಗಳು ಪ್ರೀಮಿಯಂ ಬ್ಲ್ಯಾಕ್ಡ್ -ಔಟ್ ಅಲಾಯ್ ರಿಮ್ ವಿನ್ಯಾಸವನ್ನು ಹೊಂದಿದೆ.
ಈ ಮಿನಿ ಎಸ್ಯುವಿಯಲ್ಲಿ ಟಾಟಾ ಆಲ್ಟ್ರೊಜ್ನಂತೆಯೇ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಇದರಲ್ಲಿ 1.2 ಲೀಟರ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ನೊಂದಿಗೆ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗುತ್ತದೆ.
ಹೆಚ್ಬಿಎಕ್ಸ್ ಮಿನಿ ಎಸ್ಯುವಿಯನ್ನು ಎಂಎಂಟಿ ಆವೃತ್ತಿಯನ್ನು ನಂತರದ ಹಂತದಲ್ಲಿ ಪ್ರತ್ಯೇಕವಾಗಿ ಬಿಡುಗಡೆಗೊಳಿಸಬಹುದು. ಇನ್ನೂ ಎಂಜಿನ್ನ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಬದಲಾವಣೆಯಾಗುವುದಿಲ್ಲ ಎಂದು ನಿರೀಕ್ಷಿಸುತ್ತೇವೆ.
ಹೊಸ ಹೆಚ್ಬಿಎಕ್ಸ್ ಮಿನಿ ಎಸ್ಯುವಿಯು ಟಾಟಾ ಆಲ್ಟ್ರೊಜ್ನ ಹೆಚ್ಚಿನ ಫೀಚರ್ಸ್ಗಳನ್ನು ಹಂಚಿಕೊಳ್ಳಬಹುದು. ಇದರಲ್ಲಿ ದೊಡ್ಡ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಂ, ಮಲ್ಟಿಫಂಕ್ಷನ್ ಸ್ಟಿಯರಿಂಗ್ ಮತ್ತು ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ.
ಈ ಹೊಸ ಹೆಚ್ಬಿಎಕ್ಸ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಇಗ್ನಿಸ್ ಮತ್ತು ಮಹೀಂದ್ರಾ ಕೆಯುವಿ 100 ಮಿನಿ ಎಸ್ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.