ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‍‍ಯುವಿ

ಟಾಟಾ ಮೋಟಾರ್ಸ್ ಕಂಪನಿಯು ಹೆಚ್‍‍ಬಿಎಕ್ಸ್ ಮಿನಿ ಎಸ್‍‍ಯುವಿಯನ್ನು ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಮಿನಿ ಎಸ್‍‍ಯುವಿಯನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‍‍ಯುವಿ

ಹೆಚ್‍‍ಬಿಎಕ್ಸ್ ಟಾಟಾ ಮೋಟಾರ್ಸ್ ಕಂಪನಿಯ ಮಿನಿ ಎಸ್‍‍ಯುವಿಯಾಗಿದೆ. ಭಾರತದಲ್ಲಿ ಬಿಡುಗಡೆಯಾದ ನಂತರ ಹೆಚ್‍‍ಬಿಎಕ್ಸ್ ಟಾಟಾ ಮೋಟಾರ್ಸ್ ಸರಣಿಯಲ್ಲಿ ನೆಕ್ಸಾನ್‍ ಕಾರಿ‍ಗಿಂತ ಕೆಳಗಿನ ಸ್ಥಾನದಲ್ಲಿರಲಿದೆ. ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‍ಯುವಿಯು ಆಲ್‍‍ಟ್ರೊಜ್‍‍ನಂತೆಯೇ ಬ್ರ್ಯಾಂಡ್‍‍ನ ಆಲ್ಫಾ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದೆ. 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾದ ಹೆಚ್‍‍ಬಿ‍ಎಕ್ಸ್ ಒಂದು ಕಾನ್ಸೆಪ್ಟ್ ಎಂದು ಹೇಳಲಾಗುತ್ತಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‍‍ಯುವಿ

ಈ ಟಾಟಾ ಕಂಪನಿಯು ಹೆಚ್‍‍ಬಿಎಕ್ಸ್ ಮಿನಿ ಎಸ್‍‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಮೊದಲು ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಈ ಮಿನಿ ಎಸ್‍‍ಯುವಿಯನ್ನು ಸಂಪೂರ್ಣವಾಗಿ ಮರೆಮಾಚಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‍‍ಯುವಿ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ಗಾಡಿವಾಡಿ ಬಹಿರಂಗಪಡಿಸಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‍‍ಯುವಿ

ಟಾಟಾ ಮೋಟಾರ್ಸ್‍‍ನ ಮಿ‍‍ನಿ-ಎಸ್‍‍ಯುವಿ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಮಿನಿ ಎಸ್‍‍ಯುವಿಯ ಮುಂಭಾಗವು ಟಾಟಾ ಹ್ಯಾರಿಯರ್ ಎಸ್‍ಯುವಿ ಮಾದರಿಯಲ್ಲಿದೆ. ಈ ಮಿನಿ ಎಸ್‍‍ಯುವಿಯ ಮುಂಭಾಗ ಡ್ಯುಯಲ್ ಎಲ್‍ಇಡಿ ಹೆಡ್‍ಲ್ಯಾಂ‍ಪ್‍ಗಳನ್ನು ಹೊಂದಿದೆ. ಇನ್ನೂ ಡಿ‍ಆರ್‍ಎಲ್‍ ಮತ್ತು ಹೆಡ್‍‍ಲ್ಯಾಂಪ್‍ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‍‍ಯುವಿ

ಹೆಚ್‍ಬಿಎಕ್ಸ್ ಮಿನಿ-ಎಸ್‍ಯುವಿಯು ವಿನೂತನ ಸ್ಟೈಲ್ ಅನ್ನು ಹೊಂದಿದೆ. ಅಲ್ಲದೇ ಮಿನಿ ಎಸ್‍‍ಯುವಿಯು ದೊಡ್ಡ ಟಯರ್‍‍ಗಳು ಮತ್ತು ಫ್ಲೋಟಿಂಗ್ ರೂಪ್‍‍ನೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಮಿನಿ ಎಸ್‍‍ಯುವಿಯ ಟಯರ್‍‍ಗಳು ಪ್ರೀಮಿಯಂ ಬ್ಲ್ಯಾಕ್ಡ್ -ಔಟ್ ಅಲಾಯ್ ರಿಮ್ ವಿನ್ಯಾಸವನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‍‍ಯುವಿ

ಈ ಮಿನಿ ಎಸ್‍‍ಯುವಿಯಲ್ಲಿ ಟಾಟಾ ಆಲ್‍ಟ್ರೊಜ್‍‍ನಂತೆಯೇ ಎಂಜಿನ್ ಆಯ್ಕೆಗಳನ್ನು ಹೊಂದಿರಲಿದೆ. ಇದರಲ್ಲಿ 1.2 ಲೀಟರ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್‍‍‍ನೊಂದಿಗೆ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗುತ್ತದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‍‍ಯುವಿ

ಹೆಚ್‍‍ಬಿಎಕ್ಸ್ ಮಿನಿ ಎಸ್‍‍ಯುವಿಯನ್ನು ಎಂಎಂಟಿ ಆವೃತ್ತಿಯನ್ನು ನಂತರದ ಹಂತದಲ್ಲಿ ಪ್ರತ್ಯೇಕವಾಗಿ ಬಿಡುಗಡೆಗೊಳಿಸಬಹುದು. ಇನ್ನೂ ಎಂಜಿನ್‍‍ನ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಬದಲಾವಣೆಯಾಗುವುದಿಲ್ಲ ಎಂದು ನಿರೀಕ್ಷಿಸುತ್ತೇವೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‍‍ಯುವಿ

ಹೊಸ ಹೆಚ್‍ಬಿಎಕ್ಸ್ ಮಿನಿ ಎಸ್‍‍ಯುವಿಯು ಟಾಟಾ ಆಲ್‍‍ಟ್ರೊಜ್‍‍ನ ಹೆಚ್ಚಿನ ಫೀಚರ್ಸ್‍‍ಗಳನ್ನು ಹಂಚಿಕೊಳ್ಳಬಹುದು. ಇದರಲ್ಲಿ ದೊಡ್ಡ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಮಲ್ಟಿಫಂಕ್ಷನ್ ಸ್ಟಿಯರಿಂಗ್ ಮತ್ತು ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‍‍ಯುವಿ

ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‍‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಹಬ್ಬಗಳ ಸೀಸನ್‍‍ನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ . ಈ ಹೊಸ ಹೆಚ್‍‍ಬಿಎಕ್ಸ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಇಗ್ನಿಸ್ ಮತ್ತು ಮಹೀಂದ್ರಾ ಕೆಯುವಿ 100 ಮಿನಿ ಎಸ್‍‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

Article Published On: Thursday, March 12, 2020, 16:37 [IST]
English summary
Production-Spec Tata HBX Mini-SUV Spotted Testing Again In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+