ಟಾಟಾ ಬಹುನೀರಿಕ್ಷಿತ ಮೈಕ್ರೊ ಎಸ್‌ಯುವಿ ಬಿಡುಗಡೆಯ ಮಾಹಿತಿ ಬಹಿರಂಗ

ಕಾರು ಮಾರಾಟದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ಹಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ದೆಹಲಿ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಮೈಕ್ರೊ ಎಸ್‌ಯುವಿ ವೈಶಿಷ್ಟ್ಯತೆಯ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರನ್ನು 2021ರ ಆರಂಭದಲ್ಲಿ ಬಿಡುಗಡೆಗೊಳಿಸುವುದಾಗಿ ಸುಳಿವು ನೀಡಿದೆ.

ಟಾಟಾ ಬಹುನೀರಿಕ್ಷಿತ ಮೈಕ್ರೊ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ನಂತರ ಅಲ್ಫಾ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಮೇಲೆ ಉತ್ಪಾದನೆ ಮಾಡಲಾಗುತ್ತಿರುವ ಎರಡನೇ ಆವೃತ್ತಿಯಾಗಿರುವ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು ಶೀಘ್ರದಲ್ಲೇ ಉತ್ಪಾದನಾ ಮಾದರಿಯು ಅನಾವರಣಗೊಳ್ಳಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ನೆಕ್ಸಾನ್‌ಗಿಂತ ಕೆಳದರ್ಜೆಯಲ್ಲಿ ಮಾರಾಟಗೊಳ್ಳಲಿದೆ. ಸಣ್ಣ ಗಾತ್ರದ ಎಸ್‌ಯುವಿ ಮಾದರಿಗಳಲ್ಲೇ ವಿಶೇಷ ಹೊರ ವಿನ್ಯಾಸ ಹೊಂದಿರುವ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು ಸದ್ಯ ರೋಡ್ ಟೆಸ್ಟಿಂಗ್‌ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದು, 2021ರ ಆರ್ಥಿಕ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.

ಟಾಟಾ ಬಹುನೀರಿಕ್ಷಿತ ಮೈಕ್ರೊ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರವೇ ಮಾರಾಟಗೊಳ್ಳಲಿದ್ದು, ಮಾರುತಿ ಸುಜುಕಿ ಎಸ್-ಪ್ರೆಸ್ಸೊ, ಮಹೀಂದ್ರಾ ಕೆಯುವಿ100 ಮತ್ತು ರೆನಾಲ್ಟ್ ಕ್ವಿಡ್ ಕಾರುಗಳಿಗೆ ಇದು ಉತ್ತಮ ಪೈಪೋಟಿಯಾಗಲಿದೆ.

ಟಾಟಾ ಬಹುನೀರಿಕ್ಷಿತ ಮೈಕ್ರೊ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಮೊದಲ ಬಾರಿಗೆ ಜಿನೆವಾ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿದ್ದ ಆವೃತ್ತಿಗಿಂತಲೂ ಇದೀಗ ಮತ್ತಷ್ಟು ಬದಲಾವಣೆ ಹೊಂದಿರುವ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು ಉತ್ಪಾದನಾ ಮಾದರಿಯ ಸಿದ್ದತೆಯ ಹೊತ್ತಿಗೆ ಮತ್ತಷ್ಟು ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

ಟಾಟಾ ಬಹುನೀರಿಕ್ಷಿತ ಮೈಕ್ರೊ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಮೈಕ್ರೊ ಎಸ್‌ಯುವಿ ಕಾರುಗಳಲ್ಲಿ ಗಮನಸೆಳೆಯುವಂತಹ ಉದ್ದಳತೆ ಹೊಂದಿರುವ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು 3,822-ಎಂಎಂ ಉದ್ದ, 1,822-ಎಂಎಂ ಉದ್ದ, 1,635-ಎಂಎಂ ಅಗಲ ಮತ್ತು 2,450-ಎಂಎಂ ವೀಲ್ಹ್‌ಬೆಸ್ ಹೊಂದಿದ್ದು, ಇದು ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಉದ್ದಳತೆಗೆ ಸಮನಾವಾಗಿದೆ. ಇದರೊಂದಿಗೆ ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟದಲ್ಲೂ ಸದ್ದು ಮಾಡಲಿರುವ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು 1.2-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ.

ಟಾಟಾ ಬಹುನೀರಿಕ್ಷಿತ ಮೈಕ್ರೊ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ

1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯು ಈಗಾಗಲೇ ಆಲ್‌ಟ್ರೊಜ್ ಮಾದರಿಯಲ್ಲಿ ಮಾರಾಟಗೊಳ್ಳುತ್ತಿದ್ದು, ಅದೇ ಎಂಜಿನ್ ಇದೀಗ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರಿನಲ್ಲೂ ಬಳಕೆ ಮಾಡಲು ಉದ್ದೇಶಿಸಲಾಗಿದೆ.

ಟಾಟಾ ಬಹುನೀರಿಕ್ಷಿತ ಮೈಕ್ರೊ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ

86-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯ ಹೊಂದಿರುವ 1.2-ಲೀಟರ್ ಪೆಟ್ರೋಲ್ ಮಾದರಿಯು ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರಿಗೆ ಉತ್ತಮ ಆಯ್ಕೆಯಾಗಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.

ಟಾಟಾ ಬಹುನೀರಿಕ್ಷಿತ ಮೈಕ್ರೊ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಇದರೊಂದಿಗೆ ಹೊಸ ಕಾರಿನ ಸ್ಪೋರ್ಟಿ ಖದರ್ ಹೆಚ್ಚಿಸಲು ವಿಶೇಷ ಡಿಸೈನ್‌ಗಳನ್ನು ನೀಡಲಾಗಿದ್ದು, ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟ್‌ಅಪ್, ಆಕರ್ಷಕವಾದ ಬಂಪರ್, ಸ್ಕ್ವಾರ್ಡ್ ಔಟ್ ವೀಲ್ಹ್ ಆರ್ಚ್, ರೂಫ್ ಮೌಂಟೆಡ್ ಕ್ಯಾರಿಯರ್ ಸೌಲಭ್ಯಗಳು ಕಾರಿನ ಬಲಿಷ್ಠತೆ ಮತ್ತಷ್ಟು ಮೆರಗು ನೀಡಿವೆ.

ಟಾಟಾ ಬಹುನೀರಿಕ್ಷಿತ ಮೈಕ್ರೊ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಎಲೆಕ್ಟ್ರಿಕ್ ಆವೃತ್ತಿಯಲ್ಲೂ ಬಿಡುಗಡೆಗೆ ಸಿದ್ದತೆ

ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು ಕೇವಲ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರವಲ್ಲ ಎಲೆಕ್ಟ್ರಿಕ್ ಆವೃತ್ತಿಯಲ್ಲೂ ಬಿಡುಗಡೆಗೆ ಸಿದ್ದತೆ ನಡೆಸಲಾಗುತ್ತಿದ್ದು, ಮೊದಲು ಪೆಟ್ರೋಲ್ ಆವೃತ್ತಿಯ ಬಿಡುಗಡೆಯ ನಂತರವಷ್ಟೇ ಎಲೆಕ್ಟ್ರಿಕ್ ವರ್ಷನ್ ಮಾರುಕಟ್ಟೆ ಪ್ರವೇಶಿಸಲಿದೆ.

ಟಾಟಾ ಬಹುನೀರಿಕ್ಷಿತ ಮೈಕ್ರೊ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ

ಬಿಡುಗಡೆಯ ಅವಧಿಯ ಮತ್ತು ಬೆಲೆ(ಅಂದಾಜು)

ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಪೆಟ್ರೋಲ್ ಆವೃತ್ತಿಯನ್ನು ಇದೇ ವರ್ಷದ ಕೊನೆಯಲ್ಲಿ ಬಿಡುಗೆಡೆಗೊಳ್ಳಬಹುದೆಂದು ನೀರಿಕ್ಷೆ ಮಾಡಲಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಸನ್ನಿವೇಶದ ಆಧಾರದ ಮೇಲೆ ಹೊಸ ಕಾರು ಬಿಡುಗಡೆಯನ್ನ 2021ಕ್ಕೆ ಮುಂದೂಡಲಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ.5 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.50 ಲಕ್ಷ ಬೆಲೆ ಪಡೆದುಕೊಳ್ಳಬಹುದೆಂದು ಅಂದಾಜಿಸಲಾಗಿದೆ.

Article Published On: Saturday, March 21, 2020, 15:26 [IST]
English summary
Tata Motors is planning to launch HBX subcompact SUV in the Indian market in the financial year 2021. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+