ಆಟೋ ಎಕ್ಸ್‌ಪೋ 2020: ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‌ಯುವಿ ಅನಾವರಣ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೆಚ್‍‍ಬಿಎಕ್ಸ್ ಮಿನಿ-ಎಸ್‍‍ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಇದು ಟಾಟಾ ಮೋಟಾರ್ಸ್ ಕಂಪನಿಯ ಚಿಕ್ಕ ಎಸ್‍‍ಯುವಿಯಾಗಿದೆ. ಭಾರತದಲ್ಲಿ ಬಿಡುಗಡೆಯಾದ ನಂತರ ಹೆಚ್‍‍ಬಿಎಕ್ಸ್ ಟಾಟಾ ಮೋಟಾರ್ಸ್ ಸರಣಿಯಲ್ಲಿ ನೆಕ್ಸಾನ್‍ ಕಾರಿ‍ಗಿಂತ ಕೆಳಗಿನ ಸ್ಥಾನದಲ್ಲಿರಲಿದೆ.

ಆಟೋ ಎಕ್ಸ್‌ಪೋ 2020: ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‌ಯುವಿ ಅನಾವರಣ

ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‍ಯುವಿಯು ಆಲ್‍‍ಟ್ರೊಜ್‍‍ನಂತೆಯೇ ಬ್ರ್ಯಾಂಡ್‍‍ನ ಆಲ್ಫಾ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದೆ. 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾದ ಹೆಚ್‍‍ಬಿ‍ಎಕ್ಸ್ ಒಂದು ಕಾನ್ಸೆಪ್ಟ್ ಎಂದು ಹೇಳಲಾಗುತ್ತಿದೆ. ಈ ಮಿನಿ-ಎಸ್‍‍ಯುವಿಯು 2020ರ ಅಂತ್ಯದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಟಾಟಾ ಹೆಚ್‍‍ಬಿಎಕ್ಸ್ ಅನ್ನು ಹಿಂದಿನ ಆಟೋ ಎಕ್ಸ್ ಪೋದಲ್ಲಿ ಹೆಚ್‍2 ಎಕ್ಸ್ ಎಂಬ ಕಾನ್ಸೆಪ್ಟ್ ರೂಪದಲ್ಲಿ ಪ್ರದರ್ಶಿಸಲಾಯಿತು.

ಆಟೋ ಎಕ್ಸ್‌ಪೋ 2020: ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‌ಯುವಿ ಅನಾವರಣ

ಟಾಟಾ ಮೋಟಾರ್ಸ್‍‍ನ ಮಿ‍‍ನಿ-ಎಸ್‍‍ಯುವಿ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಮಿನಿ ಎಸ್‍‍ಯುವಿಯ ಮುಂಭಾಗವು ಟಾಟಾ ಹ್ಯಾರಿಯರ್ ಎಸ್‍ಯುವಿ ಮಾದರಿಯಲ್ಲಿದೆ. ಈ ಮಿನಿ ಎಸ್‍‍ಯುವಿಯ ಮುಂಭಾಗ ಡ್ಯುಯಲ್ ಎಲ್‍ಇಡಿ ಹೆಡ್‍ಲ್ಯಾಂ‍ಪ್‍ಗಳನ್ನು ಹೊಂದಿದೆ. ಇನ್ನೂ ಡಿ‍ಆರ್‍ಎಲ್‍ ಮತ್ತು ಹೆಡ್‍‍ಲ್ಯಾಂಪ್‍ ಕ್ಲಸ್ಟರ್ ಅನ್ನು ಅಳವಡಿಸಲಾಗಿತ್ತು.

ಆಟೋ ಎಕ್ಸ್‌ಪೋ 2020: ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‌ಯುವಿ ಅನಾವರಣ

ಹೆಚ್‍ಬಿಎಕ್ಸ್ ಮಿನಿ-ಎಸ್‍ಯುವಿಯು ವಿನೂತನ ಸ್ಟೈಲ್ ಅನ್ನು ಹೊಂದಿದೆ. ಅಲ್ಲದೇ ಮಿನಿ ಎಸ್‍‍ಯುವಿಯು ದೊಡ್ಡ ಟಯರ್‍‍ಗಳು ಮತ್ತು ಫ್ಲೋಟಿಂಗ್ ರೂಪ್‍‍ನೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಮಿನಿ ಎಸ್‍‍ಯುವಿಯ ಟಯರ್‍‍ಗಳು ಪ್ರೀಮಿಯಂ ಬ್ಲ್ಯಾಕ್ಡ್ -ಔಟ್ ಅಲಾಯ್ ರಿಮ್ ವಿನ್ಯಾಸವನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‌ಯುವಿ ಅನಾವರಣ

ಈ ಮಿನಿ ಎಸ್‍‍ಯುವಿಯಲ್ಲಿ ಟಾಟಾ ಆಲ್‍ಟ್ರೊಜ್‍‍ನಂತೆಯೇ ಎಂಜಿನ್ ಆಯ್ಕೆಗಳನ್ನು ಹೊಂದಿದೆ ಎಂದು ನಿರೀಕ್ಷಿಸುತ್ತೇವೆ. ಇದರಲ್ಲಿ 1.2 ಲೀಟರ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್‍‍‍ನೊಂದಿಗೆ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗುತ್ತದೆ.

ಆಟೋ ಎಕ್ಸ್‌ಪೋ 2020: ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‌ಯುವಿ ಅನಾವರಣ

ಹೆಚ್‍‍ಬಿಎಕ್ಸ್ ಮಿನಿ ಎಸ್‍‍ಯುವಿಯನ್ನು ಎಂಎಂಟಿ ಆವೃತ್ತಿಯನ್ನು ನಂತರದ ಹಂತದಲ್ಲಿ ಪ್ರತ್ಯೇಕವಾಗಿ ಬಿಡುಗಡೆಗೊಳಿಸಬಹುದು. ಇನ್ನೂ ಎಂಜಿನ್‍‍ನ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಬದಲಾವಣೆಯಾಗುವುದಿಲ್ಲ ಎಂದು ನಿರೀಕ್ಷಿಸುತ್ತೇವೆ.

ಆಟೋ ಎಕ್ಸ್‌ಪೋ 2020: ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‌ಯುವಿ ಅನಾವರಣ

ಹೊಸ ಹೆಚ್‍ಬಿಎಕ್ಸ್ ಮಿನಿ ಎಸ್‍‍ಯುವಿಯು ಟಾಟಾ ಆಲ್‍‍ಟ್ರೊಜ್‍‍ನ ಹೆಚ್ಚಿನ ಫೀಚರ್ಸ್‍‍ಗಳನ್ನು ಹಂಚಿಕೊಳ್ಳಬಹುದು. ಇದರಲ್ಲಿ ದೊಡ್ಡ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ, ಮಲ್ಟಿಫಂಕ್ಷನ್ ಸ್ಟಿಯರಿಂಗ್ ಮತ್ತು ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ. ಇದರೊಂದಿಗೆ ಇತರ ನೂತನ ಫೀಚರ್ಸ್‍‍ಗಳನ್ನು ಹೊಂದಿರಲಿದೆ.

ಆಟೋ ಎಕ್ಸ್‌ಪೋ 2020: ಟಾಟಾ ಹೆಚ್‍‍ಬಿಎಕ್ಸ್ ಮಿನಿ ಎಸ್‌ಯುವಿ ಅನಾವರಣ

ಟಾಟಾ ಹೆಚ್‍‍ಬಿಎಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಮಾದರಿವಾರು ಫೋರ್ಟ್ಪೋಲಿಯೊದಲ್ಲಿ ಟಾಟಾ ನೆಕ್ಸಾನ್‍‍ಗಿಂತ ಕೆಳಗಿನ ಸ್ಥಾನದಲ್ಲಿರುತ್ತದೆ. ಈ ಹೊಸ ಹೆಚ್‍‍ಬಿಎಕ್ಸ್ ಮಿನಿ ಎಸ್‍‍ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ರೆನಾಲ್ಟ್ ಕ್ವಿಡ್ ಮತ್ತು ಮಾರುತಿ ಸುಜುಕಿ ಎಸ್-ಪೆಸ್ಸೊ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Auto Expo 2020: Tata HBX Mini-SUV Unveiled. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X