ಹೆಕ್ಸಾ ಬಿಎಸ್ 4 ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಭಾರತದಲ್ಲಿ ಹೆಕ್ಸಾ ಬಿಎಸ್ 4 ಕಾರ್ ಅನ್ನು ಸ್ಥಗಿತಗೊಳಿಸಿದೆ. ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಟಾಟಾ ಹೆಕ್ಸಾ ಕಾರಿನ ಬುಕ್ಕಿಂಗ್‌ಗಳನ್ನು ನಿಲ್ಲಿಸಿದೆ. ಟಾಟಾ ಹೆಕ್ಸಾ ಬಿಎಸ್ 6 ಆವೃತ್ತಿಯನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸಲಾಗುವುದು.

ಹೆಕ್ಸಾ ಬಿಎಸ್ 4 ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಟಾಟಾ ಹೆಕ್ಸಾ ಬಿಎಸ್ 6 ಕಾರಿನ ಬಿಡುಗಡೆಯನ್ನು ಮುಂದೂಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಹೊಸ ಕಾರಿನ ಬಿಡುಗಡೆಯು ಅನಿಶ್ಚಿತವಾಗಿದೆ ಎಂದು ಕಂಪನಿ ಹೇಳಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಕಂಪನಿಯು ಯಾವುದೇ ಕಾರುಗಳನ್ನು ಬಿಡುಗಡೆಗೊಳಿಸುವುದಿಲ್ಲ.

ಹೆಕ್ಸಾ ಬಿಎಸ್ 4 ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಹೊಸ ಟಾಟಾ ಹೆಕ್ಸಾ ಕಾರಿನಲ್ಲಿ 2.2 ಲೀಟರ್ ವಾರಿಕೋರ್ ಬಿಎಸ್ 6 ಡೀಸೆಲ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ ಎರಡು ಟ್ಯೂನ್‌ಗಳಲ್ಲಿ ಲಭ್ಯವಿರಲಿದ್ದು 150 ಬಿಹೆಚ್‌ಪಿ ಪವರ್, 320 ಎನ್‌ಎಂ ಟಾರ್ಕ್ ಹಾಗೂ 154 ಬಿಹೆಚ್‌ಪಿ ಪವರ್, 400 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಹೆಕ್ಸಾ ಬಿಎಸ್ 4 ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಹೆಕ್ಸಾ ಬಿಎಸ್ 6 ಕಾರಿನಲ್ಲಿ 5-ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್‌ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಲಾಗುವುದು. ಹೆಕ್ಸಾ ಆಲ್ ವ್ಹೀಲ್ ಡ್ರೈವ್ ಅನ್ನು ಹೆಕ್ಸಾ ಸಫಾರಿ ಆವೃತ್ತಿಯಲ್ಲಿ ನೀಡಲಾಗುವುದು.

ಹೆಕ್ಸಾ ಬಿಎಸ್ 4 ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಹೆಕ್ಸಾ ಸಫಾರಿ ಆವೃತ್ತಿಯನ್ನು ದೆಹಲಿಯಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು. ಹೆಕ್ಸಾ ಸಫಾರಿ ಆವೃತ್ತಿಯಲ್ಲಿ ಸಣ್ಣ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಮಾರುಕಟ್ಟೆಯಲ್ಲಿರುವ ಟಾಟಾ ಹೆಕ್ಸಾ ಬಿಎಸ್ 4 ಕಾರು ಮ್ಯಾನುಯಲ್ ಗೇರ್‌ಬಾಕ್ಸ್‌ನ 7 ಮಾದರಿಗಳನ್ನು ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಎರಡು ಮಾದರಿಗಳನ್ನು ಹೊಂದಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಹೆಕ್ಸಾ ಬಿಎಸ್ 4 ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಹೆಕ್ಸಾ ಬಿಎಸ್ 4 ಕಾರಿನ ಆರಂಭಿಕ ಬೆಲೆ ಎಕ್ಸ್ ಶೋ ರೂಂ ದರದಂತೆ ರೂ.13.25 ಲಕ್ಷಗಳಾಗಿದೆ. ಹೆಕ್ಸಾ ಬಿಎಸ್ 6 ಮಾದರಿಯ ಬೆಲೆ ರೂ.50,000ಗಳಷ್ಟು ಹೆಚ್ಚಾಗಿರಲಿದೆ. ಲಾಕ್‌ಡೌನ್‌ ವಿನಾಯಿತಿ ನಂತರ ಟಾಟಾ ಮೋಟಾರ್ಸ್ ಗ್ರೀನ್ ಹಾಗೂ ಆರೇಂಜ್ ಝೋನ್‌ಗಳಲ್ಲಿರುವ ತನ್ನ ಶೋ ರೂಂಗಳನ್ನು ತೆರೆಯುತ್ತಿದೆ.

ಹೆಕ್ಸಾ ಬಿಎಸ್ 4 ಸ್ಥಗಿತಗೊಳಿಸಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಪಂತ್‌ನಗರ ಹಾಗೂ ಸನಂದ್ ಉತ್ಪಾದನಾ ಘಟಕಗಳನ್ನು ಪುನರಾರಂಭಿಸಿದೆ. ಆದರೆ ಲಖನೌ ಹಾಗೂ ಜಮ್‌ಶೆಡ್‌ಪುರ ಘಟಕಗಳನ್ನು ಆರಂಭಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

Most Read Articles

Kannada
English summary
Tata Hexa BS4 discontinued in India. Read in Kannada.
Story first published: Wednesday, May 20, 2020, 18:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X