ಹೆಕ್ಸಾ ಕಾರಿಗೆ ಗುಡ್ ಬೈ ಹೇಳಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೆಕ್ಸಾ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಟಾಟಾ ಹೆಕ್ಸಾ ಕಾರಿನ ಒಂದು ಯುನಿಟ್ ಕೂಡ ಮಾರಾಟವಾಗಿರಲಿಲ್ಲ.

ಹೆಕ್ಸಾ ಕಾರಿಗೆ ಗುಡ್ ಬೈ ಹೇಳಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ಕಳೆದ ತಿಂಗಳಲ್ಲಿ ಹೆಕ್ಸಾ ಕಾರಿನ ಉತ್ಪಾದನೆಯು ಸ್ಥಗಿತಗೊಳಿಸಿದೆ. ಯಾವುದೇ ಹೆಕ್ಸಾ ಕಾರಿನ ಮಾದರಿಯನ್ನು ರಾವನೆ ಮಾಡವುದನ್ನು ನಿಲ್ಲಿಸಲಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಟಾಟಾ ಹೆಕ್ಸಾ ಕಾರಿನ ಯಾವುದೇ ಒಂದು ಯುನಿಟ್ ಕೂಡ ಮಾರಾಟವಾಗಿಲ್ಲ. ಟಾಟಾ ಹೆಕ್ಸಾ ಕಾರಿನಲ್ಲಿ 2.2-ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ-ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಎಂಟ್ರಿ ಲೆವೆಲ್ ಹೆಕ್ಸಾ ಕಾರು 148 ಬಿಹೆಚ್‌ಪಿ ಮತ್ತು 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹೆಕ್ಸಾ ಕಾರಿಗೆ ಗುಡ್ ಬೈ ಹೇಳಿದ ಟಾಟಾ

ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ.ಎಂಟ್ರಿ ಲೆವೆಲ್ ಹೆಕ್ಸಾ ಕಾರಿನಲ್ಲಿ ವೆರಿಕಾರ್ 320 ಎಂಜಿನ್ ಅನ್ನು ಹೊಂದಿದ್ದರೆ, ಉಳಿದ ಮಾದರಿಯಲ್ಲಿ ವೆರಿಕಾರ್ 400 ಎಂಜಿನ್ ಅನ್ನು ಹೊಂದಿದೆ.

ಹೆಕ್ಸಾ ಕಾರಿಗೆ ಗುಡ್ ಬೈ ಹೇಳಿದ ಟಾಟಾ

ಇನ್ನು ಹೈ ಸ್ಪೆಕ್‍ ನಲ್ಲಿರುವ 2.2-ಲೀಟರ್ ಎಂಜಿನ್ 154 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಆರು-ಸ್ಪೀಡ್ ಮ್ಯಾನುವಲ್ ಮತ್ತು ಆರು-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕರ್ನವಾಟರ್ ಆಯ್ಕೆಯನ್ನು ನೀಡಲಾಗಿದೆ. ಟಾಪ್ ಸ್ಪೆಕ್ ನಲ್ಲಿ ಫೋರ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಹೊಂದಿದೆ.

ಹೆಕ್ಸಾ ಕಾರಿಗೆ ಗುಡ್ ಬೈ ಹೇಳಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ಒಂದು ಯುನಿಟ್ ಕೂಡ ಮಾರಾಟವಾಗದೇ ಇರುವುದರಿಂದ ಈ ಕಾರನ್ನು ಸ್ಥಗಿತಗೊಳಿಸಲಾಗಿದೆ. ಇದರ ಬದಲಾಗಿ ಟಾಟಾ ಕಂಪನಿಯು ಹೆಕ್ಸಾ ಸಫಾರಿ ಎಡಿಷನ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಹೆಕ್ಸಾ ಕಾರಿಗೆ ಗುಡ್ ಬೈ ಹೇಳಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ಹೆಕ್ಸಾ ಸಫಾರಿ ಎಡಿಷನ್ ಕಾರ್ ಅನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿತ್ತು. ಈ ಕಾರಿನಲ್ಲಿ ಬಿ‍ಎಸ್ 6 ಎಂಜಿನ್ ಅಳವಡಿಸಲಾಗಿದೆ.

ಹೆಕ್ಸಾ ಕಾರಿಗೆ ಗುಡ್ ಬೈ ಹೇಳಿದ ಟಾಟಾ

ಹೆಕ್ಸಾ ಸಫಾರಿ ಎಡಿಶನ್ ಕಾರಿನಲ್ಲಿ 2.2-ಲೀಟರಿನ ಬಿ‍ಎಸ್ 6 ಡೀಸೆಲ್ ಎಂಜಿನ್‌ ಅಳವಡಿಸಲಾಗುತ್ತದೆ. ಈ ಎಂಜಿನ್ 153 ಬಿ‍‍ಹೆಚ್‍‍ಪಿ ಪವರ್ ಹಾಗೂ 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಬಿಎಸ್ 4 ಎಂಜಿನ್ 151 ಬಿ‍‍ಹೆಚ್‍‍ಪಿ ಪವರ್ ಹಾಗೂ 400 ಎನ್ಎಂ ಉತ್ಪಾದಿಸುತ್ತದೆ.

ಹೆಕ್ಸಾ ಕಾರಿಗೆ ಗುಡ್ ಬೈ ಹೇಳಿದ ಟಾಟಾ

ಈ ಎಂಜಿನ್ ಜೊತೆಗೆ 5 ಸ್ಪೀಡಿನ ಮ್ಯಾನುವಲ್, 6-ಸ್ಪೀಡಿನ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಎಂಬ ಮೂರು ಟ್ರಾನ್ಸ್ ಮಿಷನ್ ಆಯ್ಕೆಗಳನ್ನು ನೀಡಲಾಗುತ್ತದೆ.

ಹೆಕ್ಸಾ ಕಾರಿಗೆ ಗುಡ್ ಬೈ ಹೇಳಿದ ಟಾಟಾ

ಹೆಕ್ಸಾ ಸಫಾರಿ ಎಡಿಷನ್, ಸ್ಟಾಂಡರ್ಡ್ ಮಾದರಿಗೆ ಹೋಲಿಸಿದರೆ ಹೆಚ್ಚು ಬೋಲ್ಡ್ ಆದ ಲುಕ್ ಅನ್ನು ಹೊಂದಿದೆ. ಈ ಕಾರು ಸ್ಪೆಷಲ್ ಬ್ಯಾಡ್ಜಿಂಗ್‍ನ ಜೊತೆಗೆ ಬಿಳಿ ಬಣ್ಣದ ಇಂಟಿರಿಯರ್‍‍ಗಳನ್ನು ಹೊಂದಿದೆ. ಈ ಟ್ರಾನ್ಸ್ ಮಿಷನ್‍‍ಗಳನ್ನು ಅಪ್‍‍ಡೇಟ್‍‍ಗೊಳಿಸಲಾಗಿರುವ ಹೆಕ್ಸಾ ಕಾರಿನಲ್ಲಿಯೂ 4x4 ಡ್ರೈವ್‌ಟ್ರೇನ್‌ನೊಂದಿಗೆ ನೀಡಲಾಗುವುದು.

ಹೆಕ್ಸಾ ಕಾರಿಗೆ ಗುಡ್ ಬೈ ಹೇಳಿದ ಟಾಟಾ

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟಾಟಾ ಹೆಕ್ಸಾ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.13.7 ಲಕ್ಷಗಳಿಂದ 19.27 ಲಕ್ಷಗಳಾಗಿದೆ.

Article Published On: Saturday, April 4, 2020, 13:02 [IST]
English summary
Tata Hexa Registers Zero Units Sold In March. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+