ವೈರಸ್ ಭೀತಿ: ವಿವಿಧ ಕಾರು ಮಾದರಿಗಳಿಗಾಗಿ ಟಾಟಾ ಸೇಫ್ಟಿ ಆಕ್ಸೆಸರಿಸ್ ಬಿಡುಗಡೆ
ಇಡೀ ವಿಶ್ವವೇ ಕರೋನಾ ವೈರಸ್ ಅಬ್ಬರಕ್ಕೆ ನಲುಗಿ ಹೋಗಿದ್ದು, ವೈರಸ್ ತಡೆಗಾಗಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವೈರಸ್‌ಗೆ ಸೂಕ್ತವಾದ ಲಸಿಕೆ ಇಲ್ಲದಿರುವುದು ಸಾಕಷ್ಟು ಸಾವು-ನೋವಿಗೆ ಕಾರಣವಾಗಿದ್ದು, ವೈರಸ್ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಅಂತರವೇ ಇದೀಗ ಪ್ರಮುಖ ಮುಂಜಾಗ್ರತಾ ಕ್ರಮವಾಗಿದೆ.

ಕರೋನಾ ವೈರಸ್ ಹರಡುವಿಕೆಯನ್ನ ತಡೆಯಲು ಸಾಮಾಜಿಕ ಅಂತರವು ಪ್ರಮುಖ ಮುನ್ನೆಚ್ಚರಿಕೆ ಕ್ರಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನದಟ್ಟಣೆಯಾಗುವ ಪ್ರತಿ ಸ್ಥಳದಲ್ಲೂ ಇದೀಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಪ್ರಮುಖ ಸವಾಲಾಗಿದೆ. ಹೀಗಾಗಿ ತರಕಾರಿ ಖರೀದಿಯಿಂದ ಹಿಡಿದು ಸಾರಿಗೆ ವ್ಯವಸ್ಥೆಯ ಬಳಕೆಯ ತನಕವು ಇದೀಗ ಸಾಮಾಜಿಕ ಅಂತರ ಕಾಯ್ದಕೊಳ್ಳುವುದರ ಬಗೆಗೆ ಹೆಚ್ಚು ಗಮನಹರಿಸಲಾಗುತ್ತಿದೆ.

ವೈರಸ್ ಹರಡಲು ಸಾಧ್ಯವಿರುವಂತಹ ಎಲ್ಲ ಕಡೆಗಳಲ್ಲೂ ಹಲವು ಕಟ್ಟುನಿಟ್ಟಿನ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಸುರಕ್ಷಾ ಕ್ರಮಗಳಾದ ಹ್ಯಾಂಡ್ ಸ್ಯಾನಿಟೈಜರ್, ಫೇಸ್ ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಗ್ಲೌಸ್ ಸಾಧನಗಳನ್ನು ಹೆಚ್ಚು ಬಳಕೆ ಮಾಡಲಾಗುತ್ತಿದೆ.

ಹಾಗೆಯೇ ಪ್ರಯಾಣದ ಸಂದರ್ಭದಲ್ಲಿ ವ್ಯಯಕ್ತಿಕ ವಾಹನಗಳ ಜೊತೆಗೆ ಕ್ಯಾಬ್ ಸೇವೆಗಳನ್ನು ಬಳಕೆ ಮಾಡುವಾಗ ಹೆಚ್ಚು ಸುರಕ್ಷತೆ ವಹಿಸಬೇಕಾದ ಅನಿವಾರ್ಯತೆಗಳಿದ್ದು, ಇದಕ್ಕಾಗಿ ವಿವಿಧ ಕಾರು ಉತ್ಪಾದನಾ ಕಂಪನಿಗಳು ಗ್ರಾಹಕರಿಗೆ ಸುರಕ್ಷಿತ ಪ್ರಯಾಣ ಒದಗಿಸುವುದಕ್ಕಾಗಿ ಗುಣಮಟ್ಟದ ಸೇಫ್ಟಿ ಆಕ್ಸೆಸರಿಸ್ ಸಿದ್ದಪಡಿಸಿ ಮಾರಾಟ ಮಾಡುತ್ತಿವೆ.

ಟಾಟಾ ಮೋಟಾರ್ಸ್ ಕಂಪನಿಯು ಸಹ ವಾಹನ ಉತ್ಪಾದನೆಯೊಂದಿಗೆ ಕರೋನಾ ವೈರಸ್ ತಡೆಗೆ ಬೇಕಾದ ಸುರಕ್ಷಾ ಸಾಧನಗಳನ್ನು ಸಹ ತನ್ನ ಸಹಭಾಗೀತ್ವ ಸಂಸ್ಥೆಗಳೊಂದಿಗೆ ಸೇರಿ ಉತ್ಪಾದನೆಗೆ ಚಾಲನೆ ನೀಡಿದ್ದು, ವೈರಸ್ ಹರಡುವಿಕೆಯನ್ನು ತಡೆಯಲು ಹೊಸ ಸೇಫ್ಟಿ ಆಕ್ಸೆಸರಿಸ್‌ಗಳು ಪ್ರಮುಖ ಪಾತ್ರವಹಿಸಲಿವೆ.

ಕರೋನಾ ವೈರಸ್ ತಡೆಗಾಗಿ ವಿವಿಧ ಕಾರು ಮಾದರಿಗಳಿಗೆ ಅನುಗುಣವಾಗಿ ಸೇಫ್ಟಿ ಆಕ್ಸೆಸರಿಸ್ ಅಭಿವೃದ್ದಿಪಡಿಸಲಾಗಿದ್ದು, ಕಾರ್ ಕ್ಯಾಬಿನ್ ಪ್ರೋಟೆಕ್ಟಿವ್ ಕವರ್, ಸ್ಯಾನಿಟೈಜ್ ಕಿಟ್, ಏರ್ ಪ್ಯೂರಿಫೈಯರ್, ಸ್ಯಾನಿಟೈಜ್ ಪ್ಲೋರ್ ಮ್ಯಾಟ್, ಕ್ಯಾಬಿನ್ ಏರ್ ಫಿಲ್ಟರ್ ಬಿಡುಗಡೆ ಮಾಡಿದೆ.
MOST READ: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಟಿಯಾಗೋ, ನೆಕ್ಸಾನ್ ಮತ್ತು ಹ್ಯಾರಿಯರ್ ಕಾರುಗಳ ವಿನ್ಯಾಸಗಳ ಅನುಗುಣವಾಗಿ ಕಾರ್ ಕ್ಯಾಬಿನ್ ಪ್ರೋಟೆಕ್ಟಿವ್ ಮತ್ತು ಸ್ಯಾನಿಟೈಜ್ ಪ್ಲೋರ್ ಮ್ಯಾಟ್ ಸಿದ್ದಪಡಿಸಿರುವ ಟಾಟಾ ಕಂಪನಿಯು ಹೊಸ ಸುರಕ್ಷಾ ಮಾರ್ಗಸೂಚಿ ಅನ್ವಯ ಸಿದ್ದಪಡಿಸಿದೆ.

ಸ್ಯಾನಿಟೈಜ್ ಕಿಟ್‌ನಲ್ಲಿ ಗುಣಮಟ್ಟದ ಮಾಸ್ಕ್, ಸ್ಟೀರಿಂಗ್, ಗೇರ್ ನಾಬ್ ಮತ್ತು ಬ್ರೇಕ್ ಲೀವರ್ ಕವರ್, ಹ್ಯಾಂಡ್ ಗ್ಲೌಸ್, ಹ್ಯಾಂಡ್ ಸ್ಯಾನಿಟೈಜ್, ನ್ಯಾನೋ ಮಿಸ್ಟ್ ಡಿಪ್ಯೂಸರ್ ಮತ್ತು ಸೇಫ್ಟಿ ಟಚ್ ಕೀ ಬಿಡುಗಡೆ ಮಾಡಿದೆ.
MOST READ: ಕೋವಿಡ್ 19: ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಇನ್ನು ಕೆಲವು ಕಡೆಗಳಲ್ಲಿ ಕ್ಯಾಬ್ ಕಂಪನಿಗಳು ಕಾರಿನ ಒಳಭಾಗದಲ್ಲಿನ ಪ್ರಯಾಣಿಕರು ಮತ್ತು ಚಾಲಕರ ನಡುವಿನ ನೇರ ಸಂಪರ್ಕವನ್ನು ತಪ್ಪಿಸುವುದಕ್ಕೆ ಮಾತ್ರವಲ್ಲದೇ ಪ್ರಯಾಣಿಕರ ಮಧ್ಯಭಾಗದಲ್ಲೂ ಪ್ರೋಟೆಕ್ವಿಟ್ ಕವರ್ ಜೋಡಣೆ ಮಾಡುತ್ತಿದೆ. ಈ ಮೂಲಕ ವೈರಸ್ ಹರಡುವಿಕೆಯನ್ನು ತಪ್ಪಿಸಲು ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಹೊಸ ಸುರಕ್ಷಾ ಸಾಧನಗಳು ಸಾಕಷ್ಟು ಸಹಕಾರಿಯಾಗುತ್ತಿವೆ.


Click it and Unblock the Notifications